ಮಣಿಪುರ | ಜನಾಂಗೀಯ ಕಿಚ್ಚಿಗೆ ದ್ವೇಷ ರಾಜಕಾರಣದ ತುಪ್ಪ; ರಾಜ್ಯವನ್ನು ಪ್ರಪಾತಕ್ಕೆ ತಳ್ಳಿದ ಬಿಜೆಪಿ ಧೋರಣೆ

Date:

ಮಣಿಪುರದಲ್ಲಿ ಕಳೆದ ಮೂರು ವರ್ಷಗಳಿಂದ ಮುಗಿಯದ ಜನಾಂಗೀಯ ರಕ್ತಪಾತಕ್ಕೆ, ಸಮುದಾಯಗಳ ನಡುವಿನ ಹಳೆಯ ವೈರತ್ವವನ್ನು ಮೀರಿ, ಸರ್ಕಾರದ ಪಕ್ಷಪಾತದ ರಾಜಕಾರಣ, ಆಡಳಿತಾತ್ಮಕ ವೈಫಲ್ಯ ಮತ್ತು ವಿಭಜನಾತ್ಮಕ ನೀತಿಗಳೂ ಕಾರಣವಾಗಿವೆ. ಉರಿಯುವ ಬೆಂಕಿಗೆ ತುಪ್ಪ ಸುರಿದು ಹೊಗೆಯ ಉರಿಯಿಂದ ತಪ್ಪಿಸಿಕೊಳ್ಳಲು ಕಣ್ಣು ಮುಚ್ಚಿ ಕೂತಿದೆ ಕೇಂದ್ರ, ರಾಜ್ಯದ ಈ ಬಿಜೆಪಿ ಸರ್ಕಾರ.

ಈಶಾನ್ಯ ಭಾರತದ ಅತಿ ರಮಣೀಯ ರಾಜ್ಯವಾಗಿದ್ದ ಮಣಿಪುರ ಕಳೆದ ಕೆಲವು ವರ್ಷಗಳಿಂದ ಹಿಂಸಾಚಾರದ ಗೂಡಾಗಿದೆ. ಶಾಂತಿಯನ್ನೇ ಕಾಣದ ಈ ರಾಜ್ಯ ಆಗಾಗೇ ರಕ್ತಪಾತಕ್ಕೆ ಸಾಕ್ಷಿಯಾಗುತ್ತಿದೆ. 2023ರಿಂದಲೂ ಭೀಕರ ಹಿಂಸಾಚಾರ ನಡೆಯುತ್ತಿದ್ದರೂ ಬಿಜೆಪಿ ಸರ್ಕಾರ ಮಾತ್ರ ಈ ಬಿಕ್ಕಟ್ಟನ್ನು ಶಮನಗೊಳಿಸುವಲ್ಲಿ ವಿಫಲವಾಗಿದೆ. ಶಾಂತಿ ಕಾಪಾಡಬೇಕಾದ ಬಿಜೆಪಿ ಸರ್ಕಾರದ ಒಡೆದು ಆಳುವ ಧೋರಣೆಯಿಂದಾಗಿಯೇ ದಿನದಿಂದ ದಿನಕ್ಕೆ ರಾಜ್ಯದ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ.

- Advertisement -

ಇತ್ತೀಚಿಗಂತೂ ಜನಾಂಗೀಯ ಹಿಂಸಾಚಾರ ನಿಲ್ಲುವ ಲಕ್ಷಣಗಳೇ ಕಂಡುಬರುತ್ತಿಲ್ಲ. ಇಲ್ಲಿ ಬರೀ ರಾಜ್ಯ ಸರ್ಕಾರದ ಧೋರಣೆ ಮಾತ್ರವಲ್ಲ, ಕೇಂದ್ರದ ಬಿಜೆಪಿ ಸರ್ಕಾರದ ವಿಭಜನಾತ್ಮಕ ರಾಜಕಾರಣವೂ ಹಿಂಸಾಚಾರಕ್ಕೆ ಮತ್ತಷ್ಟು ಕುಮ್ಮಕ್ಕು ನೀಡುತ್ತಿದೆ. ಆರಂಭದಲ್ಲಿ ಮೈತೇಯಿ, ಕುಕಿ ಜನಾಂಗಗಳ ನಡುವೆ ಭುಗಿಲೆದ್ದಿದ್ದ ಹಿಂಸಾಚಾರವು ಇದೀಗ ಕುಕಿ, ನಾಗಾ ಸಮುದಾಯದ ನಡುವೆ ವಿಸ್ತರಿಸಿದೆ. ಇದರಿಂದಾಗಿ ರಾಜ್ಯದ ಸ್ಥಿತಿ ಇನ್ನಷ್ಟು ಗಂಭೀರ ರೂಪಕ್ಕೆ ತಿರುಗುತ್ತಿದೆ. ಮಣಿಪುರದ ಮೈದಾನ ಮತ್ತು ಗುಡ್ಡಗಾಡು ಪ್ರದೇಶಗಳ ನಡುವಿನ ಈ ದ್ವೇಷದ ಬೆಂಕಿ ದಿನದಿಂದ ದಿನಕ್ಕೆ ಆರಿಹೋಗುವ ಬದಲಿಗೆ ಇಡೀ ಈಶಾನ್ಯ ರಾಜ್ಯವನ್ನೇ ಬೂದಿ ಮಾಡುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

2026ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯ ಹಿಂದಿನ ತಿರುಳು

ಅಮೆರಿಕದ ಇಬ್ಬರು ವಿದ್ವಾಂಸರಾದ ರಾಬರ್ಟ್ ಇ. ಹಾಲ್ ಮತ್ತು ಮೈಕಲ್ ವುಡ್‌ಫೋರ್ಡ್ ರೂಪಿಸಿದ 'ನವ-ಕೇನ್ಸಿಯನ್ ಮಾದರಿ'ಗಳು ಇಂದು ಜಗತ್ತಿನ ಬಹುತೇಕ ಕೇಂದ್ರ ಬ್ಯಾಂಕುಗಳ ಮತ್ತು ಹಣಕಾಸು ಇಲಾಖೆಗಳ ದೈನಂದಿನ ದಿಕ್ಸೂಚಿಯಾಗಿವೆ. ಆ ಕಾರಣಕ್ಕೆ...

ಕಡಲು ದಾಟಿದ ಅಸ್ಪೃಶ್ಯತೆ: ವಿದೇಶಿ ವಿವಿಗಳಲ್ಲಿಯೂ ದಲಿತ ವಿದ್ಯಾರ್ಥಿಗಳಿಗೆ...

​"ಭಾರತೀಯರು ವಿಶ್ವದ ಯಾವ ಮೂಲೆಗೆ ವಲಸೆ ಹೋದರೂ, ಜಾತಿ ವ್ಯವಸ್ಥೆ ಎಂಬುದು ಜಾಗತಿಕ ಸಮಸ್ಯೆಯಾಗಿ ಪರಿಣಮಿಸುತ್ತದೆ" ಎಂದು ಡಾ. ಬಿ.ಆರ್. ಅಂಬೇಡ್ಕರ್ ಶತಮಾನದ ಹಿಂದೆಯೇ ಎಚ್ಚರಿಸಿದ್ದರು. ಅವರ ಮಾತುಗಳು ಇಂದು ಆಕ್ಸ್‌ಫರ್ಡ್, ಸ್ಟ್ಯಾನ್‌ಫರ್ಡ್‌ನಂತಹ...

₹2,000 ಕೋಟಿ ಆಸ್ತಿ, 3 ಕೋಟಿಗೆ ಡೀಲ್: ಸಾಲದಾತರಿಗೆ...

ಮುಂಬೈನ BKCಯಲ್ಲಿ ₹2,000 ಕೋಟಿ ಬೆಲೆಬಾಳುವ ಪ್ರಾಜೆಕ್ಟ್ ಕೇವಲ ₹3 ಕೋಟಿಗೆ ಅದಾನಿ ಪಾಲು! ಆಸ್ತಿಯ ಮೌಲ್ಯವನ್ನು ‘ಶೂನ್ಯ’ ಎಂದು ಬಿಂಬಿಸಿದ್ದು ಹೇಗೆ? ಕೊರ್ಬಾ ವೆಸ್ಟ್‌ನಲ್ಲಿ ತನ್ನದೇ ಕಂಪನಿಗೆ ತಾನೇ ಮತ ಹಾಕಿಕೊಂಡ...

ಇದನ್ನೂ ಓದಿ: ಮಣಿಪುರ ಹಿಂಸಾಚಾರ | 12 ಗಂಟೆಗಳಲ್ಲಿ 9 ಸಾವು; ಶಾಂತಿ ಕಾಪಾಡಲು ಸಿಎಂ ಮನವಿ

2023ರಿಂದ ಈವರೆಗಿನ ಹಿಂಸಾಚಾರ

ಮಣಿಪುರ ಹಲವು ವರ್ಷಗಳಿಂದ ಬೂದಿ ಮುಚ್ಚಿದ ಕೆಂಡದಂತೆ. ಜನಾಂಗೀಯ ಹಿಂಸಾಚಾರ, ದ್ವೇಷ ಮಣಿಪುರಕ್ಕೆ ಹೊಸತಲ್ಲ. ಆದರೆ 2023ರಲ್ಲಿ ಅತಿ ಭೀಕರ ಹಂತಕ್ಕೆ ಹಿಂಸಾಚಾರ ತಿರುಗಿತು. ಇಂಫಾಲ್ ಕಣಿವೆಯಲ್ಲಿ ಬಹುಸಂಖ್ಯಾತರಾಗಿರುವ ಮೈತೇಯಿ ಸಮುದಾಯಕ್ಕೆ ‘ಪರಿಶಿಷ್ಟ ಪಂಗಡ’ (ST) ದರ್ಜೆ ನೀಡುವ ಹೈಕೋರ್ಟ್ ಶಿಫಾರಸಿನ ವಿರುದ್ಧ ಗುಡ್ಡಗಾಡು ಪ್ರದೇಶದ ಬುಡಕಟ್ಟು ಜನರಾದ ಕುಕಿ ಸಮುದಾಯ ನಡೆಸಿದ ‘ಬುಡಕಟ್ಟು ಐಕ್ಯತಾ ಮೆರವಣಿಗೆ’ಯ ನಂತರ ಮೊದಲ ಬಾರಿಗೆ ದೊಡ್ಡ ಮಟ್ಟದ ಹಿಂಸಾಚಾರ ಆರಂಭವಾಯಿತು.

ಕಣಿವೆ ಪ್ರದೇಶದಲ್ಲಿದ್ದ ಕುಕಿ ಸಮುದಾಯದ ಮನೆಗಳು, ಚರ್ಚ್‌ಗಳು ಧ್ವಂಸಗೊಂಡರೆ, ಗುಡ್ಡಗಾಡು ಪ್ರದೇಶಗಳಲ್ಲಿದ್ದ ಮೈತೇಯಿ ಜನರ ಮೇಲೆಯೂ ದಾಳಿಗಳು ನಡೆದವು. ಈವರೆಗೆ 280ಕ್ಕೂ ಅಧಿಕ ಮಂದಿ ಈ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. 60 ಸಾವಿರಕ್ಕೂ ಅಧಿಕ ಮಂದಿ ತಮ್ಮ ಸ್ವಂತ ಮನೆಯನ್ನು ಕಳೆದುಕೊಂಡು ಅಥವಾ ತೊರೆದು ಈಗ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸಾವಿರಾರು ಮನೆಗಳು, ನೂರಾರು ಪ್ರಾರ್ಥನಾ ಮಂದಿರಗಳು ಸುಟ್ಟು ಭಸ್ಮವಾಗಿವೆ.

2023ರಲ್ಲಿ ಆರಂಭವಾಗಿದ ಈ ಸಂಘರ್ಷ ಇಂದಿಗೂ ಮೈತೇಯಿ-ಕುಕಿ ಸಮುದಾಯದ ನಡುವೆಯಿದೆ. ಆದರೆ ಈ ಎರಡು ಸಮುದಾಯಗಳ ನಡುವೆ ಸೀಮಿತವಾಗಿದ್ದ ಜನಾಂಗೀಯ ದ್ವೇಷ, ಇದೀಗ ಗುಡ್ಡಗಾಡು ಪ್ರದೇಶಗಳಲ್ಲಿ ಒಟ್ಟಿಗಿದ್ದ ಕುಕಿ ಮತ್ತು ನಾಗಾ ಸಮುದಾಯಗಳ ನಡುವೆಯೂ ಹರಡಿದೆ. ಗಡಿ ಭಾಗದ ಭೂಮಿ, ಗುಡ್ಡಗಾಡು ಪ್ರದೇಶದ ಮೇಲಿನ ಅಧಿಕಾರ, ಭದ್ರತೆಯ ಭಯದಿಂದಾಗಿ ನಾಗಾ ಮತ್ತು ಕುಕಿ ಸಮುದಾಯಗಳ ನಡುವೆ ಹಳೆಯ ವೈರತ್ವ ಮತ್ತೆ ಚಿಗುರೊಡೆದಿದೆ. ಅಪಹರಣಗಳು, ಹತ್ಯೆಗಳು ಹಾಗೂ ಗಡಿ ಗ್ರಾಮಗಳ ಮೇಲಿನ ಸಶಸ್ತ್ರ ದಾಳಿಗಳು ಉಭಯ ಸಮುದಾಯಗಳ ನಡುವೆ ಇದ್ದ ಕೊಂಚ ನಂಬಿಕೆಯನ್ನೂ ಕೊನೆಗಾಣಿಸಿವೆ. ಕಾಮ್‌ಜಾಂಗ್, ಕಾಗ್ಪೋಕ್ಪಿ ಮತ್ತು ಉಖ್ರುಲ್ ಜಿಲ್ಲೆಗಳಲ್ಲಿ ನಡೆದ ದಾಳಿ-ಪ್ರತಿದಾಳಿಗಳಲ್ಲಿ ನಾಗಾ ಮತ್ತು ಕುಕಿ ಸಮುದಾಯದ ಒಟ್ಟು 9 ಮಂದಿ ಕೊಲೆಯಾಗಿದೆ, ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.

ಹಿಂಸೆಗೆ ಬಿಜೆಪಿ ಸರ್ಕಾರದ ಧೋರಣೆಯೇ ಕಾರಣವಲ್ಲವೇ?

ಮಣಿಪುರದಲ್ಲಿ ಕಳೆದ ಮೂರು ವರ್ಷಗಳಿಂದ ಮುಗಿಯದ ಜನಾಂಗೀಯ ರಕ್ತಪಾತಕ್ಕೆ, ಸಮುದಾಯಗಳ ನಡುವಿನ ಹಳೆಯ ವೈರತ್ವವನ್ನು ಮೀರಿ, ಸರ್ಕಾರದ ಪಕ್ಷಪಾತದ ರಾಜಕಾರಣ, ಆಡಳಿತಾತ್ಮಕ ವೈಫಲ್ಯ ಮತ್ತು ವಿಭಜನಾತ್ಮಕ ನೀತಿಗಳೂ ಕಾರಣವಾಗಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿದು ಹೊಗೆಯ ಉರಿಯಿಂದ ತಪ್ಪಿಸಿಕೊಳ್ಳಲು ಕಣ್ಣು ಮುಚ್ಚಿ ಕೂತಿದೆ ಕೇಂದ್ರ, ರಾಜ್ಯದ ಈ ಬಿಜೆಪಿ ಸರ್ಕಾರ.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಮೋದಿ ದೋಣಿ ವಿಹಾರ ಮತ್ತು ಹೊತ್ತಿ ಉರಿಯುತ್ತಿರುವ ಮಣಿಪುರ

ಈ ಹಿಂದಿನ ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ನೇತೃತ್ವದ ಸರ್ಕಾರವಿದ್ದಾಗ ಆರಂಭದಿಂದಲೂ ತಟಸ್ಥವಾಗಿ ವರ್ತಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಮೈತೇಯಿ ಸಮುದಾಯದ ಮುಖಂಡರಾಗಿ ಗುರುತಿಸಿಕೊಂಡವರು ಬಿರೇನ್ ಸಿಂಗ್. ಅವರ ಕೆಲವು ಹೇಳಿಕೆಗಳು, ಧೋರಣೆಗಳು ಕುಕಿ ಮತ್ತು ಇತರ ಬುಡಕಟ್ಟು ಸಮುದಾಯಗಳಲ್ಲಿ ತೀವ್ರ ಅಭದ್ರತೆಯ ಭಾವನೆಯನ್ನು ಮೂಡಿಸಿತು. ಒಂದು ರಾಜ್ಯದ ಮುಖ್ಯಮಂತ್ರಿಯಾದವರು ಎಲ್ಲ ಸಮುದಾಯಗಳನ್ನೂ ಸಮಾನವಾಗಿ ಕಾಣಬೇಕು. ಆದರೆ ಈ ಬಿಜೆಪಿ ಸರ್ಕಾರ ಕೇವಲ ಒಂದೇ ಸಮಯದಾಯದ ಪರವಾಗಿ ನಿಂತಿತು.

ಹಿಂಸಾಚಾರದ ಆರಂಭಿಕ ದಿನಗಳಲ್ಲಿ ಇಂಫಾಲ್ ಕಣಿವೆಯ ವಿವಿಧ ಪೊಲೀಸ್ ಠಾಣೆಗಳು ಮತ್ತು ಶಸ್ತ್ರಾಗಾರಗಳಿಂದ ಸುಮಾರು 6,000ಕ್ಕೂ ಅಧಿಕ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಲಕ್ಷಾಂತರ ಗುಂಡುಗಳು ದರೋಡೆಯಾದವು. ಈ ಶಸ್ತ್ರಾಸ್ತ್ರಗಳನ್ನು ದರೋಡೆ ಮಾಡಿದವರಲ್ಲಿ ಬಹುಪಾಲು ಮಂದಿ ನಿರ್ದಿಷ್ಟ ಸಂಘಟನೆಗಳಿಗೆ ಸೇರಿದವರಾಗಿದ್ದರು. ಆಶ್ಚರ್ಯದ ಸಂಗತಿಯೆಂದರೆ, ರಾಜ್ಯ ಮತ್ತು ಕೇಂದ್ರದ ಭದ್ರತಾ ಪಡೆಗಳು ಈ ಶಸ್ತ್ರಾಸ್ತ್ರಗಳನ್ನು ಕಾಲಮಿತಿಯಲ್ಲಿ ಮರಳಿ ವಶಪಡಿಸಿಕೊಳ್ಳುವಲ್ಲಿ ಗಂಭೀರ ಪ್ರಯತ್ನವೇ ಮಾಡಲಿಲ್ಲ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸರ್ಕಾರ ತೋರಿದ ಈ ಮೌನ ಒಪ್ಪಿಗೆಯು ಸಶಸ್ತ್ರ ಗುಂಪುಗಳಿಗೆ ಮುಕ್ತವಾಗಿ ನರಮೇಧ ನಡೆಸಲು ದಾರಿ ಮಾಡಿಕೊಟ್ಟಿತು.

ಡಬಲ್ ಇಂಜಿನ್ ಸರ್ಕಾರದ ತಲೆಕೆಳಗಾದ ನೀತಿ

ಕೇಂದ್ರದಲ್ಲೂ ಮತ್ತು ರಾಜ್ಯದಲ್ಲೂ ಒಂದೇ ಪಕ್ಷದ ಸರ್ಕಾರವಿದ್ದರೆ ರಾಜ್ಯ ಅಭಿವೃದ್ಧಿ ಕಾಣುತ್ತದೆ, ಶಾಂತಿ ನೆಲೆಸುತ್ತದೆ ಎಂಬುದು ಬಿಜೆಪಿ ಸಿದ್ಧಾಂತ. ಆದರೆ ಈ ‘ಡಬಲ್ ಇಂಜಿನ್’ ಸರ್ಕಾರದ ಸಿದ್ಧಾಂತವು ಮಣಿಪುರದಲ್ಲಿ ಸಂಪೂರ್ಣವಾಗಿ ತಲೆಕೆಳಗಾಗಿದೆ. ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ನರಮೇಧ, ಅತ್ಯಾಚಾರಗಳು, ನೂರಾರು ಚರ್ಚ್‌ಗಳು ಮತ್ತು ದೇವಸ್ಥಾನಗಳ ಧ್ವಂಸ ಹಾಗೂ ಲಕ್ಷಾಂತರ ಜನರ ಸ್ಥಳಾಂತರ ನಡೆದರೂ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ದೀರ್ಘಕಾಲ ಮಣಿಪುರಕ್ಕೆ ಭೇಟಿ ನೀಡದೆ ಮೌನ ವಹಿಸಿದ್ದರು. ಇನ್ನೊಂದೆಡೆ ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರದೊಂದಿಗೆ ಕೇವಲ ಸಾಂಪ್ರದಾಯಿಕ ಮಾತುಕತೆಗಳಿಗೆ ಸೀಮಿತಗೊಂಡು, ಹಿಂಸೆಯನ್ನು ಅಡಗಿಸಲು ಯಾವುದೇ ಕಠಿಣ, ದಿಟ್ಟ ಹೆಜ್ಜೆಗಳನ್ನು ಇಡಲಿಲ್ಲ. ಈಗ ರಾಷ್ಟ್ರಪತಿ ಆಡಳಿತ ಮುಗಿದು ಮತ್ತೆ ಹೊಸ ಬಿಜೆಪಿ ಸರ್ಕಾರ ರಚನೆಯಾಗುವಾಗ ಮತ್ತೆ ಮೈತೇಯಿ ನಾಯಕನಿಗೆ ಬಿಜೆಪಿ ಮಣೆ ಹಾಕಿದ್ದು ಇನ್ನಷ್ಟೂ ಬಿಕ್ಕಟ್ಟಿಗೆ ಎಡೆಮಾಡಿಕೊಟ್ಟಿತು.

ಬಿಜೆಪಿ ಸರ್ಕಾರವು ಮಣಿಪುರದ ಹಿಂಸಾಚಾರಕ್ಕೆ ಮಯನ್ಮಾರ್‌ನಿಂದ ಬರುವ ‘ಅಕ್ರಮ ವಲಸಿಗರು’ ಮತ್ತು ‘ಅಫೀಮು (ಡ್ರಗ್ಸ್) ಕೃಷಿ’ಯೇ ಮೂಲ ಕಾರಣ ಎಂದು ಬಿಂಬಿಸಲು ಮುಂದಾಯ್ತು. ಈ ಮೂಲಕ ಒಂದು ನಿರ್ದಿಷ್ಟ ಸಮುದಾಯ ಅಂದರೆ ಕುಕಿಗಳನ್ನೇ ಗುರಿಯಾಗಿಸಿತು. ಗುಡ್ಡಗಾಡು ಪ್ರದೇಶಗಳಲ್ಲಿ ಒತ್ತುವರಿ ತೆರವಿನ ಹೆಸರಿನಲ್ಲಿ ಕುಕಿ ಸಮುದಾಯದವರ ಸಾಂಪ್ರದಾಯಿಕ ಭೂಮಿ ಮತ್ತು ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ನಡೆಸಿದ ಕಾರ್ಯಾಚರಣೆಗಳು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿತು. ಡ್ರಗ್ಸ್ ವಿರುದ್ಧದ ಹೋರಾಟದ ಮುಖವಾಡದ ಹಿಂದೆ ರಾಜಕೀಯ ಧ್ರುವೀಕರಣ ಮತ್ತು ಭೂ ಒಡೆತನದ ಮೇಲಿನ ಹಕ್ಕು ಕಸಿದುಕೊಳ್ಳುವ ಹುನ್ನಾರವಿದೆ ಎಂಬುದು ಬುಡಕಟ್ಟು ಜನರ ಅಸಮಾಧಾನಕ್ಕೆ ಕಾರಣವಾಯಿತು.

ಮಣಿಪುರ ಹೈಕೋರ್ಟ್ ಮೈತೇಯಿ ಸಮುದಾಯಕ್ಕೆ ಎಸ್‌ಟಿ (ಪರಿಶಿಷ್ಟ ಪಂಗಡ) ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲು ಮಾಡಿದಾಗ, ಸರ್ಕಾರವು ಅದನ್ನು ಕಾನೂನುಬದ್ದವಾಗಿ ಎದುರಿಸಬೇಕಾಗಿತ್ತು, ಎಲ್ಲಾ ಜನಾಂಗದ ಜನರೊಂದಿಗೆ ಸಮಾಲೋಚನೆ ನಡೆಸಬೇಕಾಗಿತ್ತು. ಅದರ ಬದಲಾಗಿ ತುರ್ತಾಗಿ ಪ್ರಕ್ರಿಯೆಗಳನ್ನು ನಡೆಸಿತು. ಇದು ಕುಕಿ ಮತ್ತು ನಾಗಾ ಸಮುದಾಯಗಳಲ್ಲಿ ಆತಂಕ ಸೃಷ್ಟಿಸಿತು. ತಮ್ಮ ಸಾಂಪ್ರದಾಯಿಕ ಹಕ್ಕುಗಳು ಮತ್ತು ಭೂಮಿ ಅನ್ಯರ ಕೈ ಸೇರಲಿದೆ ಎಂಬ ಭಯದಿಂದ ಬುಡಕಟ್ಟು ಜನಾಂಗದವರು ಪ್ರತಿಭಟನೆಗಿಳಿದರು. ಆದರೆ ಎಂದಿನಂತೆ ಸರ್ಕಾರವು ಈ ಸಮುದಾಯಗಳ ಅಳಲನ್ನು ಆಲಿಸುವ ಬದಲು ವಿರೋಧವನ್ನು ಹತ್ತಿಕ್ಕುವ ಪ್ರಯತ್ನ ಮಾಡಿತು.

ಹೀಗೆ ಒಟ್ಟಾರೆಯಾಗಿ ಹೇಳುವುದಾದರೆ, ಮಣಿಪುರದ ಬಿಕ್ಕಟ್ಟು ಕೇವಲ ಎರಡು ಬುಡಕಟ್ಟುಗಳ ನಡುವಿನ ಹಳೆಯ ಜಗಳವಲ್ಲ; ಬದಲಿಗೆ ಬಿಜೆಪಿ ಸರ್ಕಾರದ ತುಷ್ಟೀಕರಣದ ರಾಜಕಾರಣ, ಗಡಿ ಭದ್ರತೆಯ ವೈಫಲ್ಯ ಮತ್ತು ಎಲ್ಲಾ ಸಮುದಾಯಗಳನ್ನು ಒಟ್ಟಾಗಿ ಕೊಂಡೊಯ್ಯುವ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಉಂಟಾದ ಪ್ರಜಾಸತ್ತಾತ್ಮಕ ದುರಂತ. ಅಷ್ಟಕ್ಕೂ ಇದೊಂದು ಕಾನೂನು ಸಮಸ್ಯೆಯಾಗಿ ಉಳಿದಿಲ್ಲ. ದೇಶದ ಒಕ್ಕೂಟ ವ್ಯವಸ್ಥೆಗೆ ಬಂದೊದಗಿರುವ ಸವಾಲು. ಜನರಲ್ಲಿ ಸರ್ಕಾರದ ಮೇಲಿರುವ ನಂಬಿಕೆಯ ಕೊರತೆಯನ್ನು ನೀಗಿಸದೆ, ಕೇವಲ ಸೇನೆ-ಪೊಲೀಸರ ಬಲಪ್ರಯೋಗದಿಂದ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ಸರ್ಕಾರದ 200 ಅಧಿಕಾರಿಗಳು ನಮ್ಮ ಸಂಪರ್ಕದಲ್ಲಿದ್ದಾರೆ: ರಾಹುಲ್ ಗಾಂಧಿ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ವಿರೋಧ...

ಇನ್ಮುಂದೆ ಜಂತರ್ ಮಂತರ್ ಪ್ರತಿಭಟನಾ ಸ್ಥಳವಲ್ಲ; ದೆಹಲಿ ಪೊಲೀಸರ ಧೋರಣೆಗೆ ಸಿಜೆಪಿ ಕಿಡಿ

ದೆಹಲಿಯ ಐತಿಹಾಸಿಕ ಪ್ರತಿಭಟನಾ ತಾಣವಾದ ಜಂತರ್ ಮಂತರ್‌ಅನ್ನು ಅಧಿಕೃತ ಧರಣಿ ಸ್ಥಳಗಳ...

ಪ್ರತಿಭಟನೆ ತಡೆಯಲು ಸಾಮಾಜಿಕ ಕಾರ್ಯಕರ್ತನ ಗೃಹಬಂಧನ: ದೆಹಲಿ ಪೊಲೀಸರಿಗೆ ಹೈಕೋರ್ಟ್ ತರಾಟೆ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...