- ಪಕ್ಷದ ಹಿರಿಯರ ಬಗ್ಗೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿಕೆಯ ವಿರುದ್ಧ ವ್ಯಾಪಕ ಆಕ್ರೋಶ
- ದಕ್ಷಿಣದ ರಾಜ್ಯಗಳಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಬಲಪಡಿಸುವ ಬಿಜೆಪಿ ಪ್ರಯತ್ನಕ್ಕೆ ಹಿನ್ನಡೆ
ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ ರಚನೆಯಾಗುತ್ತಿದ್ದಂತೆಯೇ ಎನ್‌ಡಿಎ ಮೈತ್ರಿಕೂಟವನ್ನು ಬಲಪಡಿಸಲು ಹೊರಟಿದ್ದ ಬಿಜೆಪಿ ಪ್ರಯತ್ನಕ್ಕೆ ತಮಿಳುನಾಡಿನಲ್ಲಿ ತೀವ್ರ ಹಿನ್ನಡೆಯಾಗಿದ್ದು, ‘ಬಿಜೆಪಿ ಜೊತೆಗಿನ ಮೈತ್ರಿ ಮುರಿದಿದ್ದೇವೆ’ ಎಂದು ಎಐಎಡಿಎಂಕೆ ಮುಖಂಡ ಡಿ ಜಯಕುಮಾರ್ ಮಾಧ್ಯಮಗಳ ಮುಂದೆ ಘೋಷಿಸಿದ್ದಾರೆ.
ದಕ್ಷಿಣದ ರಾಜ್ಯಗಳಲ್ಲಿ ಈವರೆಗೆ ಬಿಜೆಪಿಯು ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡೇ ರಾಜಕೀಯವಾಗಿ ಬೆಳೆಯುತ್ತಿರುವ ಮಧ್ಯೆಯೇ ಈ ಬೆಳವಣಿಗೆ ಲೋಕಸಭಾ ಚುನಾವಣೆಗೂ ಮುನ್ನವೇ ಬಹಳಷ್ಟು ಹಿನ್ನಡೆಯಾಗಿದೆ.
ತಮಿಳುನಾಡಿನಲ್ಲಿಂದು ಮಾಧ್ಯಮಗಳ ಮುಂದೆ ಮಾತನಾಡಿದ ಎಐಎಡಿಎಂಕೆ ಮುಖಂಡ ಡಿ ಜಯಕುಮಾರ್, ಎಐಎಡಿಎಂಕೆ- ಬಿಜೆಪಿ ನಡುವೆ ಯಾವುದೇ ಮೈತ್ರಿ ಇಲ್ಲ. ಎಐಎಡಿಎಂಕೆ ಸಂಸ್ಥಾಪಕ ಎಂಜಿಆರ್ ಅವರ ಗುರು ಸಿಎನ್ ಅಣ್ಣಾದೊರೈ ಕುರಿತಾದ ಬಿಜೆಪಿಯ ತಮಿಳುನಾಡಿನ ಅಧ್ಯಕ್ಷ ಕೆ ಅಣ್ಣಾಮಲೈ ಹೇಳಿಕೆಯನ್ನು ಸಹಿಸಲು ಆಗಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.
“ಸದ್ಯ ಬಿಜೆಪಿಯ ಜೊತೆಗೆ ನಮ್ಮ ಮೈತ್ರಿ ಇಲ್ಲ. ಇನ್ನು ಮುಂದಿನ ಮೈತ್ರಿಯ ಬಗ್ಗೆ ಚುನಾವಣೆಗೂ ಮುನ್ನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅಣ್ಣಾಮಲೈ ಅವರು ಬಿಜೆಪಿ ರಾಜ್ಯ ಅಧ್ಯಕ್ಷರಾಗಿರಲು ಯೋಗ್ಯರಲ್ಲ. ತಮ್ಮನ್ನು ತಾವು ಬಿಂಬಿಸಿಕೊಳ್ಳುವ ಸಲುವಾಗಿಯಷ್ಟೇ ಅವರು ದಿವಂಗತ ನಾಯಕರ ಕುರಿತು ಕೆಟ್ಟದಾಗಿ ಮಾತನಾಡುತ್ತಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಮಾಜಿ ಸಿಎಂ, ದಿವಂಗತ ಜೆ ಜಯಲಲಿತಾ ಸೇರಿದಂತೆ ಎಐಎಡಿಎಂಕೆಯ ಕೆಲವು ನಾಯಕರ ಕುರಿತು ಕೆ ಅಣ್ಣಾಮಲೈ ಟೀಕಾತ್ಮಕ ಹೇಳಿಕೆಗಳನ್ನು ನೀಡಿದ್ದರಿಂದ ಈ ರೀತಿಯ ಬೆಳವಣಿಗೆ ನಡೆದಿದೆ.
ಎಐಎಡಿಎಂಕೆಯ ಹಿರಿಯ ನಾಯಕರಿಗೆ ಮಾಡುವ ಯಾವುದೇ ಅವಮಾನವನ್ನು ಪಕ್ಷದ ಕಾರ್ಯಕರ್ತರು ಸಹಿಸುವುದಿಲ್ಲ ಎಂದು ಜಯಕುಮಾರ್ ಇದೇ ವೇಳೆ ಎಚ್ಚರಿಕೆಯೂ ನೀಡಿದ್ದಾರೆ.
Big Breaking..
— Mahua Moitra Fans (@MahuaMoitraFans) September 18, 2023
The strongest partner of NDA alliance AIDMK has officially kicked out BJP from the so called “GathBandhan” in Tamilnadu.
Tamilnadu policies revolves rounds the DMK & AIDMK. While DMK still stands tall with INDIA alliance… and AIDMK has decided to go alone.
This… pic.twitter.com/zHCPg50IFK
“ಬಿಜೆಪಿ ಕಾರ್ಯಕರ್ತರು ಬಯಸಿದ್ದರೂ, ಎಐಎಡಿಎಂಕೆ ಜತೆ ಮೈತ್ರಿ ಹೊಂದುವ ಬಯಕೆ ಅಣ್ಣಾಮಲೈ ಅವರಿಗಿಲ್ಲ. ನಮ್ಮ ನಾಯಕರ ಕುರಿತಾದ ಈ ಎಲ್ಲ ಟೀಕೆಗಳನ್ನು ನಾವು ಸಹಿಸಿಕೊಳ್ಳಬೇಕೇ? ನಿಮ್ಮನ್ನು ನಮ್ಮ ಜತೆ ಏಕೆ ಕರೆದೊಯ್ಯಬೇಕು? ಬಿಜೆಪಿಗೆ ಇಲ್ಲಿ ಹೆಜ್ಜೆ ಇರಿಸುವುದು ಸಾಧ್ಯವಿಲ್ಲ. ನಿಮ್ಮ ಮತ ಬ್ಯಾಂಕ್ ಯಾವುದು ಎನ್ನುವುದು ಗೊತ್ತಿದೆ. ನೀವು ನಮ್ಮ ಕಾರಣದಿಂದಾಗಿ ಇಲ್ಲಿ ಪರಿಚಿತರಾಗಿದ್ದೀರಿ” ಎಂದು ಜಯಕುಮಾರ್ ತಿಳಿಸಿದ್ದಾರೆ.