ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಲಾಗಿದ್ದ ಜಾಮೀನಿಗೆ ದೆಹಲಿ ಹೈಕೋರ್ಟ್ ತಡೆಯೊಡ್ಡಿದ ಬೆನ್ನಲ್ಲೇ “ಸರ್ವಾಧಿಕಾರ ಹೆಚ್ಚುತ್ತಿದೆ” ಎಂದು ಅರವಿಂದ್ ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ಹೇಳಿದ್ದಾರೆ.
ಹಾಗೆಯೇ ಜಾಮೀನು ಮಂಜೂರು ಮಾಡಿದ ತೀರ್ಪುನ್ನು ಪ್ರಶ್ನಿಸಿದ ಜಾರಿ ನಿರ್ದೇಶನಾಲಯದ (ಇಡಿ) ಕ್ರಮವನ್ನು ಸುನಿತಾ ಟೀಕಿಸಿದ್ದಾರೆ. ವಿಚಾರಣಾ ನ್ಯಾಯಾಲಯವು ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡಿದ ಆದೇಶವನ್ನು ರದ್ದುಗೊಳಿಸುವಂತೆ ಇಡಿ ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದೆ. ಅರ್ಜಿಯನ್ನು ತ್ವರಿತವಾಗಿ ಆಲಿಸಲು ಸಮ್ಮತಿಸಿದ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ತೀರ್ಪಿಗೆ ತಡೆಯೊಡ್ಡಿದೆ.
मोदी सरकार की गुंडागर्दी देखिए अभी ट्रायल कोर्ट का आदेश ही नही आया आदेश की कॉपी भी नही मिली तो मोदी की ED हाईकोर्ट में किस आदेश को चुनौती देने पहुँच गई?
क्या हो रहा है इस देश में?
न्यायव्यवस्था का मज़ाक़ क्यों बना रहे हो मोदी जी पूरा देश आपको देख रहा है?— Sanjay Singh AAP (@SanjayAzadSln) June 21, 2024
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಕೇಜ್ರಿವಾಲ್, “ಆದೇಶವನ್ನು ಅಪ್‌ಲೋಡ್ ಮಾಡುವ ಮುನ್ನವೇ ಇಡಿ ಜಾಮೀನನ್ನು ವಿರೋಧಿ ದೆಹಲಿ ಹೈಕೋರ್ಟ್ ಮೊರೆ ಹೋಗಿದೆ. ಸರ್ಕಾರ ಮತ್ತು ಅದರ ಕೇಂದ್ರೀಯ ಸಂಸ್ಥೆಗಳು ನನ್ನ ಪತಿಯನ್ನು ವಾಂಟೆಡ್ ಭಯೋತ್ಪಾದಕನಂತೆ ನಡೆಸಿಕೊಳ್ಳುತ್ತಿವೆ” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಅಬಕಾರಿ ನೀತಿ ಪ್ರಕರಣ| ಅರವಿಂದ್ ಕೇಜ್ರಿವಾಲ್ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ
“ಅರವಿಂದ್ ಕೇಜ್ರಿವಾಲ್ ಅವರನ್ನು ಮೋಸ್ಟ್ ವಾಂಟೆಡ್ ಟೆರರಿಸ್ಟ್ ಎಂಬಂತೆ ನೋಡಲಾಗುತ್ತಿದೆ. ದೇಶದಲ್ಲಿ ಸರ್ವಾಧಿಕಾರ ಹೆಚ್ಚಿದೆ. ಹೈಕೋರ್ಟ್‌ನಲ್ಲಿ ಇನ್ನೂ ನಿರ್ಧಾರ ಬರಬೇಕಿದೆ. ಹೈಕೋರ್ಟ್ ನ್ಯಾಯ ಒದಗಿಸಲಿದೆ ಎಂದು ನಾವು ಭಾವಿಸುತ್ತೇವೆ” ಎಂದು ಸುನಿತಾ ಕೇಜ್ರಿವಾಲ್ ಹೇಳಿದ್ದಾರೆ.
ಇನ್ನು ಎಎಪಿ ನಾಯಕ ಸಂಜಯ್ ಸಿಂಗ್ ಅವರು ಜಾಮೀನು ಆದೇಶವನ್ನು ತಡೆಹಿಡಿಯುವ ದೆಹಲಿ ಹೈಕೋರ್ಟ್‌ನ ನಿರ್ಧಾರವನ್ನು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ನ್ಯಾಯ ವ್ಯವಸ್ಥೆಯನ್ನು ಅಣಕಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಂಜಯ್ ಸಿಂಗ್, “ಮೋದಿ ಸರ್ಕಾರದ ಗೂಂಡಾಗಿರಿ ನೋಡಿ, ವಿಚಾರಣಾ ನ್ಯಾಯಾಲಯದ ಆದೇಶ ಇನ್ನೂ ಬಂದಿಲ್ಲ, ಆದೇಶದ ಪ್ರತಿ ಕೂಡ ಬಂದಿಲ್ಲ. ಆದ್ದರಿಂದ ಮೋದಿ ಅವರ ಇಡಿ ಹೈಕೋರ್ಟ್‌ಗೆ ತಲುಪಿದೆಯೆ? ಈ ದೇಶದಲ್ಲಿ ಏನಾಗುತ್ತಿದೆ” ಎಂದು ಪ್ರಶ್ನಿಸಿದದಾರೆ.