- ಯಡಿಯೂರಪ್ಪ ಮತ್ತು ಸಂತೋಷ್ ನಡುವಣ ಮೇಲಾಟದಲ್ಲಿ ಯಾರ ಕೈ ಮೇಲಾಯ್ತು?
- ಸಿ ಟಿ ರವಿ, ನಿಮ್ಮ ಹೇಳಿಕೆಗೆ ವಿರುದ್ಧವಾಗಿ ಪಕ್ಷದ ನಾಯಕರು ನಡೆದುಕೊಳ್ಳುತ್ತಿದ್ದಾರಲ್ಲ?
ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಕಾಂಗ್ರೆಸ್ ನವರ ಮಾದರಿ ಅಡುಗೆ ಮನೆಯಲ್ಲಿ ನಡೆಯುವುದಿಲ್ಲ ಎಂದಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿಯವರನ್ನು ಕಾಂಗ್ರೆಸ್ ಕುಟುಕಿದೆ.
ಸಿ ಟಿ ರವಿ ಹೇಳಿಕೆ ವಿಚಾರವನ್ನು ಮುಂದಿಟ್ಟುಕೊಂಡು ಟ್ವೀಟ್ ಮಾಡಿರುವ ಕಾಂಗ್ರೆಸ್, ನಮ್ಮ ಪಕ್ಷದ ಟಿಕೆಟ್ ಕಿಚನ್ ನಲ್ಲಿ ತೀರ್ಮಾನ ಆಗಲ್ಲ ಎಂದಿದ್ದಿರಲ್ಲ ಮಾನ್ಯ ಸಿ ಟಿ ರವಿ ಅವರೇ, ಇದೇನಿದು ನಿಮ್ಮ ಹೇಳಿಕೆಗೆ ವಿರುದ್ಧವಾಗಿ ಎಲ್ಲವೂ ಆಗುತ್ತಿದೆಯಲ್ಲ ಎಂದು ಲೇವಡಿ ಮಾಡಿದೆ.
ವಿಜಯೇಂದ್ರ ಅವರಿಗೆ ಟಿಕೆಟ್ ಫಿಕ್ಸ್ ಆಯ್ತಾ? ಯಡಿಯೂರಪ್ಪ ಮತ್ತು ಸಂತೋಷ್ ನಡುವಣ ಮೇಲಾಟದಲ್ಲಿ ಯಾರ ಕೈ ಮೇಲಾಯ್ತು? ಎಲೆಕ್ಷನ್ ಮುಗಿಯುವವರೆಗೆ ‘ಸಂತೋಷ’ ಆಟ ನಡೆಯುವುದಿಲ್ಲ ಅಲ್ಲವೇ? ಎಂದು ಕಾಂಗ್ರೆಸ್ ಅಣಕಿಸಿದೆ.