ನಿಷೇಧಿತ ಸಂಘಟನೆಯ ಸದಸ್ಯತ್ವವೇ ಯುಎಪಿಎ ಅಡಿ ಅಪರಾಧ: ಸುಪ್ರೀಂಕೋರ್ಟ್‌

Date:

  • 2011ರ ದ್ವಿಸದಸ್ಯ ಪೀಠದ ತೀರ್ಪನ್ನು ರದ್ದುಗೊಳಿಸಿದ ತ್ರಿಸದಸ್ಯ ಪೀಠ
  • ತೀರ್ಪು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದ ಕೇಂದ್ರ, ಅಸ್ಸಾಂ ಸರ್ಕಾರ

ನಿಷೇಧಿತ ಸಂಘಟನೆಯ ಸದಸ್ಯತ್ವಪಡೆಯುವುದೇ ವ್ಯಕ್ತಿಯನ್ನು ಅಪರಾಧಿಯನ್ನಾಗಿ ಮಾಡುವುದಿಲ್ಲ ಎಂಬ ತನ್ನ 2011ರ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಮಾರ್ಚ್‌ 24) ಬದಲಿಸಿದೆ.

ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ ಆರ್ ಷಾ, ಸಿ ಟಿ ರವಿಕುಮಾರ್ ಮತ್ತು ಸಂಜಯ್ ಕರೋಲ್ ಅವರ ತ್ರಿಸದಸ್ಯ ಪೀಠ, ಈ ಹಿಂದೆ ದ್ವಿಸದಸ್ಯ ಪೀಠವು ನೀಡಿದ ತೀರ್ಪನ್ನು ರದ್ದುಮಾಡಿದೆ. ನಿಷೇಧಿತ ಸಂಘಟನೆಯ ಸದಸ್ಯತ್ವವು ಒಬ್ಬ ವ್ಯಕ್ತಿಯನ್ನು ಅಪರಾಧಿಯನ್ನಾಗಿ ಮಾಡುತ್ತದೆ. ಯುಎಪಿಎ (ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ, 1967 ನಿಬಂಧನೆಗಳ ಅಡಿಯಲ್ಲಿ ವ್ಯಕ್ತಿಯು ವಿಚಾರಣೆಗೆ ಒಳಪಡುತ್ತಾನೆ ಎಂದು ಪೀಠ ಇದೀಗ ಅಭಿಪ್ರಾಯಪಟ್ಟಿದೆ.

ನಿಷೇಧಿತ ಸಂಘಟನೆಗಳ ಸದಸ್ಯತ್ವದ ಕುರಿತು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ನೀಡಿದ 2011ರ ತೀರ್ಪು, “ನಿಷೇಧಿತ ಸಂಘಟನೆಯ ಸದಸ್ಯತ್ವ ಅಪರಾಧವಾಗುವುದಿಲ್ಲ, ಸದಸ್ಯತ್ವಪಡೆದ ನಂತರ ವ್ಯಕ್ತಿ ಹಿಂಸೆ ಅಥವಾ ಹಿಂಸೆಗೆ ಪ್ರಚೋದನೆಯಂತಹ ಅಕ್ರಮ ಚಟುವಟಿಕೆಗಳನ್ನು ನಡೆಸಿದಲ್ಲಿ ಯುಎಪಿಎ ಅಡಿಯಲ್ಲಿ ಅಪರಾಧವಾಗುತ್ತದೆ” ಎಂದು ಹೇಳಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಿಷೇಧಿತ ಸಂಘಟನೆಗಳ ಸದಸ್ಯತ್ವದ ಕುರಿತು ಸುಪ್ರೀಂ ಕೋರ್ಟ್‌ನ 2011ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರ ಮತ್ತು ಅಸ್ಸಾಂ ಸರ್ಕಾರದ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ.

ಅಮೆರಿಕದ ನ್ಯಾಯಾಲಯದ ಆದೇಶಗಳನ್ನು ಪರಿಗಣಿಸಿದ್ದರಿಂದ 2011ರ ತೀರ್ಪು ನೀಡಲಾಯಿತು. ಆದರೆ ಇಂತಹ ತೀರ್ಪುಗಳನ್ನು ಭಾರತದಲ್ಲಿನ ಪರಿಸ್ಥಿತಿಯನ್ನು ಅವಗಾಹಿಸದೆ ನೀಡಲಾಗುವುದಿಲ್ಲ ಎಂದು ತ್ರಿಸದಸ್ಯ ಪೀಠ ಹೇಳಿದೆ. 

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಕೃಷಿ ಸಾಲ ಮನ್ನಾ ಮಾಡಲಾಗುವುದು: ರಾಹುಲ್ ಗಾಂಧಿ

ಇಂಡಿಯಾ ಒಕ್ಕೂಟವು ಅಧಿಕಾರಕ್ಕೆ ಬಂದರೆ ಕೃಷಿ ಸಾಲ ಮನ್ನಾ ಮಾಡುತ್ತದೆ ಮತ್ತು...

ಕೇಂದ್ರೀಯ ಸಂಸ್ಥೆ ದುರುಪಯೋಗ ಪ್ರಶ್ನೆ; ಸಿಡಿಮಿಡಿಗೊಂಡ ಮೋದಿ, ಸ್ಕ್ರಿಪ್ಟ್‌ ಮಿಸ್ ಆಯ್ತ ಎಂದ ನೆಟ್ಟಿಗರು

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಎಎನ್‌ಐಗೆ ಸಂದರ್ಶನ ನೀಡಿದ್ದು, ಕೇಂದ್ರೀಯ...

ಪಶ್ಚಿಮ ಬಂಗಾಳ ಸೇರಿ ಮೂರು ರಾಜ್ಯಗಳಲ್ಲಿ ಸಿಎಎ ಅಡಿಯಲ್ಲಿ ಪೌರತ್ವ ಆರಂಭ: ಗೃಹ ಸಚಿವಾಲಯ

ಕೇಂದ್ರ ಗೃಹ ಸಚಿವಾಲಯವು ಪಶ್ಚಿಮ ಬಂಗಾಳ ಸೇರಿದಂತೆ ಮೂರು ರಾಜ್ಯಗಳಲ್ಲಿ ಪೌರತ್ವ...

ಹೈದರಾಬಾದ್‌ | ನವಜಾತ ಶಿಶುಗಳ ಬೃಹತ್ ಮಾರಾಟ ಜಾಲವನ್ನು ಭೇದಿಸಿದ ಪೊಲೀಸರು: 11 ಮಕ್ಕಳ ರಕ್ಷಣೆ

ಮಹತ್ವದ ಬೆಳವಣಿಗೆಯೊಂದರಲ್ಲಿ ಹೈದರಾಬಾದ್ ಪೊಲೀಸರು ನವಜಾತ ಶಿಶುಗಳ ಬೃಹತ್ ಕಳ್ಳಸಾಗಣೆ ಹಾಗೂ...