ಬಿಹಾರದಲ್ಲಿ ʼನಿತೀಶ್‌ ಯುಗʼದ ಅಂತ್ಯಕ್ಕೆ ನಾಂದಿ ಹಾಡಿದ ಬಿಜೆಪಿ

Date:

ನಿತೀಶ್‌ ಕುಮಾರ್‌ ಅವರನ್ನು ಚುನಾವಣೆಗಾಗಿ ಬಳಸಿಕೊಂಡು, ಈಗ ರಾಷ್ಟ್ರ ರಾಜಕಾರಣಕ್ಕೆ ಕಳುಹಿಸುತ್ತಿರುವುದು ಬಿಹಾರದ ಹಿಡಿತವನ್ನು ಸಾಧಿಸುವುದಕ್ಕೆ ಬಿಜೆಪಿ ಮಾಡಿದ ಹುನ್ನಾರ ಎನ್ನುವುದನ್ನು ಪ್ರತ್ಯೇಕಿಸಿ ಹೇಳಬೇಕೆಂದಿಲ್ಲ. ಇದು ಬಿಹಾರದಲ್ಲಿ ‘ನಿತೀಶ್ ಯುಗʼದ ಅಂತ್ಯದ ಮುನ್ಸೂಚನೆ. ಇದಕ್ಕೀಗ ಬಿಜೆಪಿ ಅಧಿಕೃತವಾಗಿ ನಾಂದಿ ಹಾಡಿದೆ. ಈ ಮೂಲಕ ಮತ್ತೊಮ್ಮೆ ಪ್ರಾದೇಶಿಕ ಪಕ್ಷವನ್ನು ಮೆಟ್ಟಿ ಆಳುವ ತನ್ನ ಹಳೆಯ ರಾಜಕಾರಣವನ್ನು ಬಿಹಾರದಲ್ಲಿಯೂ ಬಿಜೆಪಿ ಮಾಡಿ ತೋರಿಸಿದೆ.

ಬಿಹಾರದ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ದೀರ್ಘಕಾಲದವರೆಗೆ ಬಿಹಾರದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ನಿತೀಶ್ ಕುಮಾರ್ ಅವರು ಬಿಹಾರ ರಾಜಕಾರಣದಿಂದ ಹಿಂದೆ ಸರಿದು, ರಾಷ್ಟ್ರ ರಾಜಕಾರಣದತ್ತ ಮುಖ ಮಾಡುತ್ತಿದ್ದಾರೆ.

ನಿತೀಶ್ ಕುಮಾರ್ ಅವರು ಮಾರ್ಚ್ 2026ರಲ್ಲಿ ಬಿಹಾರ ವಿಧಾನ ಪರಿಷತ್ (MLC) ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಈಗಾಗಲೇ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಏಪ್ರಿಲ್ 10, 2026ರಂದು ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಏಪ್ರಿಲ್ 12 ರಂದು ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.  ನೂತನ ಮುಖ್ಯಮಂತ್ರಿಯಾಗಿ ಬೇರೆ ಯಾರೇ ಅಧಿಕಾರವನ್ನು ವಹಿಸಿಕೊಂಡರೂ, ಸುಮಾರು 6 ತಿಂಗಳುಗಳ ಕಾಲ ಸರ್ಕಾರವನ್ನು ನಿತೀಶ್‌ ಕುಮಾರ್ ಹಿಡಿತದಲ್ಲಿಟ್ಟುಕೊಂಡು ಸರ್ಕಾರಕ್ಕೆ ನಿರ್ದೇಶನ ನೀಡಲಿದ್ದಾರಂತೆ. ನಿತೀಶ್ ಕುಮಾರ್ ಪಕ್ಷದ ಅಧ್ಯಕ್ಷರಾಗಿ ಮತ್ತು ದೆಹಲಿಯಿಂದ ಬಿಹಾರ ಸರ್ಕಾರದ ಮೇಲೆ ನಿಯಂತ್ರಣ ಸಾಧಿಸಲಿದ್ದಾರೆ ಎನ್ನಲಾಗಿದೆ. ಇವೆಲ್ಲಾ ನಿತೀಶ್‌ ಕುಮಾರ್‌ ಅವರನ್ನು ಬಿಜೆಪಿ ಹೇಗೆ ಬಳಸಿಕೊಳ್ಳುತ್ತಿದೆ ಎನ್ನುವುದಕ್ಕೆ ಒಂದು ಸಾಕ್ಷಿಯಾಗಿ ಸ್ಪಷ್ಟವಾಗಿ ಕಾಣಿಸುತ್ತಿದೆ.

ಇದನ್ನೂ ಓದಿ : ‘ಶಿಲಾಯುಗ’ದಿಂದ ‘ಸುವರ್ಣಯುಗ’; ಇರಾನ್ ಮೇಲಿನ ಯುದ್ಧದಲ್ಲಿ ಬದಲಾದ ಟ್ರಂಪ್ ವರಸೆ

ಬಿಜೆಪಿಯ ಮಾಸ್ಟರ್‌ ಪ್ಲ್ಯಾನ್‌ :

ನಿತೀಶ್‌ ಕುಮಾರ್‌ ಅವರನ್ನು ಚುನಾವಣೆಗಾಗಿ ಬಳಸಿಕೊಂಡು, ಈಗ ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಿದ್ದು, ಬಿಹಾರದ ಹಿಡಿತವನ್ನು ಸಾಧಿಸುವುದಕ್ಕೆ ಬಿಜೆಪಿ ಮಾಡಿದ ಹುನ್ನಾರ ಎನ್ನುವುದನ್ನು ಪ್ರತ್ಯೇಕಿಸಿ ಹೇಳಬೇಕೆಂದಿಲ್ಲ. ಇದು ಬಿಹಾರದಲ್ಲಿ ‘ನಿತೀಶ್ ಯುಗʼದ ಅಂತ್ಯದ ಮುನ್ಸೂಚನೆ. ಇದಕ್ಕೀಗ ಬಿಜೆಪಿ ಅಧಿಕೃತವಾಗಿ ನಾಂದಿ ಹಾಡಿದೆ.

- Advertisement -

​2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ (89 ಕ್ಷೇತ್ರಗಳು) ಜೆಡಿಯು (85 ಕ್ಷೇತ್ರಗಳು)ಗಿಂತ ಹೆಚ್ಚು ಸ್ಥಾನಗಳನ್ನು ಗಳಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆರಂಭದಲ್ಲಿ ನಿತೀಶ್ ಅವರನ್ನೇ ಸಿಎಂ ಎಂದು ಒಪ್ಪಿಕೊಂಡಿದ್ದ ಬಿಜೆಪಿ, ನಂತರದ ಕೆಲವೇ ತಿಂಗಳಲ್ಲಿ ತನಗೆ ಅನುಕೂಲವಾಗುವ ಹಾಗೆ‌ ಇಡೀ ಸರ್ಕಾರದ ವ್ಯವಸ್ಥೆಯನ್ನೇ ಪರಿವರ್ತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಿಹಾರದಲ್ಲಿ ಬಿಜೆಪಿ ಪೂರ್ಣ ಹಿಡಿತ ಸಾಧಿಸಲು ಮಾಡಿಕೊಂಡ ಕುತಂತ್ರದ ಭಾಗವಿದು ಎನ್ನುವುದರಲ್ಲಿ ಸಂಶಯವಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

​ನಿತೀಶ್ ಕುಮಾರ್ ಅವರಿಗೆ ಬಿಹಾರದಲ್ಲಿ ಅಧಿಕಾರ ನಡೆಸಲು ಬಿಜೆಪಿಯ ಬೆಂಬಲ ಬೇಕಿತ್ತು, ಆದರೆ ಅದೇ ಬಿಜೆಪಿ ಈಗ ಅವರನ್ನು ದೆಹಲಿ ರಾಜಕಾರಣಕ್ಕೆ ಕಳುಹಿಸುವ ಮೂಲಕ ರಾಜ್ಯದಲ್ಲಿ ಜೆಡಿಯು ಶಕ್ತಿಯನ್ನು ಕುಗ್ಗಿಸುತ್ತಿದೆ. “20 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ನಿತೀಶ್‌ ಕುಮಾರ್, ಈಗ ರಾಜಕೀಯ ಅನಿವಾರ್ಯತೆಗಾಗಿ ರಾಜ್ಯಸಭೆಗೆ ಹೋಗುತ್ತಿರುವುದು ಅವರ ರಾಜಕೀಯ ಜೀವನದ ದುರಂತ”.

ಇದನ್ನೂ ಓದಿ : ಅಮೆರಿಕದ ಸಾಮ್ರಾಜ್ಯಶಾಹಿ ಅಹಂಕಾರಕ್ಕೆ ಇರಾನ್ ಸಡ್ಡು: ವಾಷಿಂಗ್ಟನ್ ಮುಂದಿಟ್ಟ 10 ಕಠಿಣ ಹಕ್ಕೊತ್ತಾಯಗಳು

​ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಬಿಜೆಪಿಯ ಬೆಳವಣಿಗೆಗೆ ಅಕ್ಷರಶಃ ಹೆಗಲಾಗಿದ್ದರು. ಆದರೆ ಬಿಜೆಪಿ ಕಳೆದ ಕೆಲವು ಚುನಾವಣೆಗಳಿಂದ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದರೊಂದಿಗೆ ತನ್ನ ಶಕ್ತಿ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ಏಕಾಂಗಿಯಾಗಿ ಸ್ಪರ್ಧಿಸುವಷ್ಟು ಈಗ ಬೆಳೆದಿದೆ. ನಿತೀಶ್ ಅವರಿಗೆ ರಾಜ್ಯ ರಾಜಕಾರಣದಲ್ಲಿ ಮೊದಲಿನಂತಹ ಪ್ರಾಮುಖ್ಯತೆ ಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣವೇ ನಿತೀಶ್‌ ಕುಮಾರ್‌ ಅವರ ರಾಜಕೀಯ ನೀತಿ. ನಿತೀಶ್‌ ಕುಮಾರ್‌ ಅಧಿಕಾರಕ್ಕಾಗಿ ಬಿಜೆಪಿ ಕಡೆಗೆ ಮುಖ ಮಾಡಿದ್ದೂ ಕೂಡ ಒಂದು ಕಾರಣ. ಇದು ರಾಜಕೀಯದ ಕ್ರೂರ ವಾಸ್ತವ. “ಬಳಸಿ ಬಿಸಾಡಿದ” ಭಾವನೆ ನಿತೀಶ್ ಬೆಂಬಲಿಗರಲ್ಲಿ ಮಾತ್ರವಲ್ಲದೆ ಸ್ವತಃ ನಿತೀಶ್‌ ಅವರಲ್ಲೇ ಈಗ ಮನೆಮಾಡಿರಬಹುದು.

ನಿಶಾಂತ್ ಕುಮಾರ್ ಮತ್ತು ಜೆಡಿಯು ಭವಿಷ್ಯ

ಇಲ್ಲಿಯವರೆಗೆ ರಾಜಕೀಯದಿಂದ ದೂರವಿದ್ದ ನಿತೀಶ್ ಕುಮಾರ್ ಅವರ ಏಕೈಕ ಪುತ್ರ ನಿಶಾಂತ್ ಕುಮಾರ್, ಮಾರ್ಚ್ 8, 2026ರಂದು ಅಧಿಕೃತವಾಗಿ ಜೆಡಿಯು ಪಕ್ಷವನ್ನು ಸೇರಿದ್ದಾರೆ. ಇದು ಪಕ್ಷದೊಳಗೆ ಒಂದು ದೊಡ್ಡ ಸಂಚಲನವನ್ನು ಮೂಡಿಸಿದೆ. ನಿತೀಶ್ ಕುಮಾರ್ ನಂತರ ಪಕ್ಷವನ್ನು ಮುನ್ನಡೆಸುವ ಶಕ್ತಿಯಾಗಿ ನಿಶಾಂತ್ ಅವರನ್ನು ಬಿಂಬಿಸಲಾಗುತ್ತಿದೆ. ಆದರೇ, ಇದು ಪಕ್ಷದೊಳಗೆ ಭಿನ್ನಮತಕ್ಕೆ ಕಾರಣವಾಗಿದೆ. ವಂಶಪಾರಂಪರ್ಯ ರಾಜಕಾರಣವನ್ನು ವಿರೋಧಿಸುತ್ತಿದ್ದ ನಿತೀಶ್‌ ಕುಮಾರ್‌ ಅವರಿಗೆ ಇದು ತಿರುಗುಬಾಣವಾಗಲಿದೆ ಎನ್ನುವ ಚರ್ಚೆಗಳು ಬಿಹಾರ ರಾಜಕೀಯದಲ್ಲಿ ಈಗಾಗಲೇ ಶುರುವಾಗಿದೆ.  

ಬಿಹಾರದ ರಾಜಕಾರಣದಲ್ಲಿ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ಬಂದಿದ್ದ ನಿತೀಶ್ ಕುಮಾರ್, ಈಗ ಅನಿವಾರ್ಯವಾಗಿ ತಮ್ಮ ಮಗನನ್ನೇ ರಾಜಕೀಯಕ್ಕೆ ತರುತ್ತಿರುವುದು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದೆ. ಆದರೆ, ಜೆಡಿಯು ಕಾರ್ಯಕರ್ತರು ಇದನ್ನು “ಪಕ್ಷದ ಉಳಿವಿಗೆ ಅನಿವಾರ್ಯವಾದ ನಿರ್ಧಾರ” ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

​ಬಿಹಾರದ ಈ ಹೊಸ ರಾಜಕೀಯ ಸಮೀಕರಣ ಮುಂಬರುವ ದಿನಗಳಲ್ಲಿ ರಾಜ್ಯದ ಅಭಿವೃದ್ಧಿ ಮತ್ತು ಮೈತ್ರಿ ಸರ್ಕಾರದ ಭವಿಷ್ಯದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎನ್ನುವುದರ ಬಗ್ಗೆ ಈಗಾಗಲೇ ಕುತೂಹಲ ಸೃಷ್ಟಿಯಾಗಿದೆ.

ಹೊಸ ಸಚಿವ ಸಂಪುಟದಲ್ಲಿ ನಿಶಾಂತ್ ಕುಮಾರ್ ಅವರಿಗೆ ಪ್ರಮುಖ ಖಾತೆಗಳನ್ನು ನೀಡುವುದರ ಜೊತೆಗೆ, ಅವರಿಗೆ ಉಪ ಮುಖ್ಯಮಂತ್ರಿ (Deputy CM) ಪಟ್ಟ ಸಿಗುವ ಸಾಧ್ಯತೆ ದಟ್ಟವಾಗಿದೆ ಎಂದೂ ಹೇಳಲಾಗುತ್ತಿದೆ. ಆದರೇ, ಜೆಡಿಯು ಪಕ್ಷವನ್ನು ಬಿಜೆಪಿಯೊಂದಿಗೆ ಹೇಗೆ ಸಮನ್ವಯ ಸಾಧಿಸಿಕೊಂಡು ಮುಂದೆ ಸಾಗುತ್ತಾರೆ, ಪಕ್ಷದ ಹಿರಿಯ ಮುಖಂಡರೊಂದಿಗೆ ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದರ ಬಗ್ಗೆ ಸಹಜವಾಗಿ ಕೆಲವು ಪ್ರಶ್ನೆಗಳು ಮೂಡಿವೆ.

ಒಟ್ಟಿನಲ್ಲಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 89 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿದೆ. ಹಾಗಾಗಿ ನಿತೀಶ್‌ ಕುಮಾರ್‌ ರಾಷ್ಟ್ರ ರಾಜಕಾರಣಕ್ಕೆ ತೆರಳುತ್ತಿರುವುದರ ಬೆನ್ನಲ್ಲೇ ಮುಂದಿನ ಮುಖ್ಯಮಂತ್ರಿ ಬಿಜೆಪಿ ಅಭ್ಯರ್ಥಿಯೇ ಆಗಿರಲಿದ್ದಾರೆ ಎನ್ನುವುದು ಸ್ಪಷ್ಟವಾಗಿತ್ತು. ಬಿಹಾರದಂತಹ ರಾಜ್ಯದಲ್ಲಿ ಇಂತಹದ್ದೊಂದು ಬದಲಾವಣೆಗೆ ಒಪ್ಪಿಗೆ ನೀಡಿದ ಜೆಡಿಯು ಪಕ್ಷ ಭವಿಷ್ಯದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹರಸಾಹಸ ಪಡುವ ಪರಿಸ್ಥಿತಿ ಎದುರಾಗಬಹುದು ಎನ್ನುವುದನ್ನು ಬಿಹಾರದಲ್ಲಿ ನಿರೀಕ್ಷಿತವಾಗಿಯೇ ನಡೆದ ಈ ಬೆಳವಣಿಗೆ ಸೂಚ್ಯವಾಗಿ ಹೇಳುತ್ತಿದೆ. ಈ ಮೂಲಕ ಮತ್ತೊಮ್ಮೆ ಪ್ರಾದೇಶಿಕ ಪಕ್ಷವನ್ನು ಮೆಟ್ಟಿ ಆಳುವ ತನ್ನ ಹಳೆಯ ರಾಜಕಾರಣವನ್ನು ಬಿಹಾರದಲ್ಲಿಯೂ ಬಿಜೆಪಿ ಮಾಡಿ ತೋರಿಸಿದೆ ಎನ್ನುವುದು ಬಹಳ ಸ್ಪಷ್ಟವಾಗಿದೆ.   

IMG 20260316 WA0002
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಶಿಸ್ತು ಮೈಗೂಡಿಸಿಕೊಳ್ಳಿ : ಜಯಕುಮಾರ ಶಿಂಧೆ

ಸಮಯ ಪ್ರಜ್ಞೆ ಹಾಗೂ ಶಿಸ್ತು ಮೈಗೂಡಿಸಿಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು...

ಮುದ್ದೇಬಿಹಾಳದಲ್ಲಿ ತೀವ್ರ ಬರ; ಕಾಲುವೆಗಳಿಗೆ ನೀರು ಹರಿಸಲು ಶಾಸಕ ನಾಡಗೌಡ ಮನವಿ

ಬರದ ಬಿಸಿಲಿಗೆ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳ ಗ್ರಾಮೀಣ ಬದುಕು ತತ್ತರಿಸುತ್ತಿರುವ...

ಈ ದಿನ ಸಂಪಾದಕೀಯ | ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್‌ಗೆ ಯಾಕೆ? ಕೊಡಿಸಿದವರು ಯಾರು?

ಚುನಾವಣೆಯ ಕಾವಲುಗಾರನಿಗೆ ಕಾನೂನಿನ ಕವಚ ಕುಂಡಲಗಳನ್ನು ನೀಡಿ, ಕಾನೂನಿನ ಕೈಗಳು ಮುಟ್ಟದಂತೆ,...

ಪದೇ ಪದೇ ಬಂಧನವಾದರೂ ಹಿಂಜರಿಯದ ವಿಪಕ್ಷಗಳು: ಮತ್ತೆ ಜಂತರ್ ಮಂತರ್‌ನತ್ತ ಹೆಜ್ಜೆಯಿಟ್ಟ ಇಂಡಿಯಾ ಒಕ್ಕೂಟ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಸೇರಿದಂತೆ ಚುನಾವಣಾ...