‘ಶಿಲಾಯುಗ’ದಿಂದ ‘ಸುವರ್ಣಯುಗ’; ಇರಾನ್ ಮೇಲಿನ ಯುದ್ಧದಲ್ಲಿ ಬದಲಾದ ಟ್ರಂಪ್ ವರಸೆ

Date:

39 ದಿನಗಳ ಸುದೀರ್ಘ ಸಂಘರ್ಷದ ನಂತರ, ಇರಾನ್ ಮತ್ತು ಅಮೆರಿಕ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಅಮೆರಿಕ ಪ್ರಸ್ತಾಪಿಸಿದ್ದ ‘ಹಾರ್ಮುಜ್ ಜಲಸಂಧಿ’ಯಲ್ಲಿ ಹಡಗುಗಳ ಸಂಚಾರಕ್ಕೆ ಇರಾನ್ ಅನುವು ಮಾಡಿಕೊಟ್ಟಿದೆ. ಅಂತೆಯೇ, ಇರಾನ್ ಮಂಡಿಸಿದ 10 ಹಕ್ಕೊತ್ತಾಯಗಳಿಗೆ ಅಮೆರಿಕವೂ ತಲೆ ಬಾಗಿದ್ದು, ಅವುಗಳ ಕುರಿತು ಚರ್ಚಿಸಿ, ನಿರ್ಧರಿಸಲು ಒಪ್ಪಿಕೊಂಡಿದೆ.

- Advertisement -

ಕದನ ವಿರಾಮದ ಕುರಿತು ತಮ್ಮ ‘ಟ್ರೂತ್ ಸೋಶಿಯಲ್’ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಟ್ರಂಪ್, ”ಇದೊಂದು ಜಾಗತಿಕ ಶಾಂತಿಯ ದೊಡ್ಡ ದಿನ” ಎಂದು ಕರೆದಿದ್ದಾರೆ. “ಇರಾನ್ ಇದನ್ನು ಬಯಸುತ್ತಿದೆ, ಅವರು ಸಾಕಪ್ಪಾ ಎಂದು ಸುಸ್ತಾಗಿದ್ದಾರೆ! ಅದೇ ರೀತಿ ಉಳಿದವರೆಲ್ಲರೂ ಬಸವಳಿದಿದ್ದಾರೆ” ಎಂದು ಟ್ರಂಪ್ ವ್ಯಂಗ್ಯವನ್ನೂ ಮಾಡಿದ್ದಾರೆ. ಅಂತೆಯೇ, ”ಸೋತಿದ್ದ ಟ್ರಂಪ್ ಶರಣಾಗಿದ್ದಾರೆ” ಎಂದು ಇರಾನ್‌ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

ಗಮನಾರ್ಹವಾಗಿ, ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ, “ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಸಂಚಾರ ದಟ್ಟಣೆಯನ್ನು ಸರಿಪಡಿಸಲು ಅಮೆರಿಕ ಸಹಾಯ ಮಾಡಲಿದೆ. ಅಲ್ಲಿ ಸಾಕಷ್ಟು ಸಕಾರಾತ್ಮಕ ಚಟುವಟಿಕೆಗಳು ನಡೆಯಲಿವೆ! ಭಾರಿ ಹಣ ಹರಿದು ಬರಲಿದೆ. ಇರಾನ್ ತನ್ನ ಪುನರ್‌ನಿರ್ಮಾಣ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು. ನಾವು ಎಲ್ಲ ರೀತಿಯ ಸಾಮಗ್ರಿಗಳನ್ನು ತುಂಬಿಕೊಂಡು, ಎಲ್ಲವೂ ಸರಿಯಾಗಿ ನಡೆಯುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅಲ್ಲಿಯೇ ಇರುತ್ತೇವೆ. ಎಲ್ಲವೂ ಸುಗಮವಾಗಿ ನಡೆಯುತ್ತದೆ ಎಂಬ ನಂಬಿಕೆ ನನಗಿದೆ. ಪ್ರಸ್ತುತ ಅಮೆರಿಕ ಅನುಭವಿಸುತ್ತಿರುವಂತೆಯೇ, ಇದು ಮಧ್ಯಪ್ರಾಚ್ಯದಲ್ಲಿ ‘ಸುವರ್ಣಯುಗ’ವಾಗಲಿದೆ!!!” ಎಂದು ಟ್ರಂಪ್ ಬರೆದಿದ್ದಾರೆ.

‘ಸುವರ್ಣಯುಗ’ಕ್ಕೂ ಮುನ್ನ, ‘ಶಿಲಾಯುಗ’ದ ಬಗ್ಗೆ ಮಾತನಾಡಿದ್ದ ಟ್ರಂಪ್

ಕದನ ವಿರಾಮದ ಮಾತುಕತೆಗಳು ಅಂತಿಮಗೊಳ್ಳುವ ಮೊದಲು, ಟ್ರಂಪ್ ಅವರು ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಏಪ್ರಿಲ್ 1ರಂದು ನೀಡಿದ್ದ ಭಾಷಣದಲ್ಲಿ, ‘ಇರಾನ್‌ಅನ್ನು ಕಠಿಣ ಶಿಲಾಯುಗ’ಕ್ಕೆ ತಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.

ಅಂತೆಯೇ, ಮಂಗಳವಾರ ಕೂಡ, ”ಅಮೆರಿಕದ ಪಡೆಗಳು ತಮ್ಮ ಯುದ್ಧಭೂಮಿಯ ಎಲ್ಲ ಗುರಿಗಳನ್ನು ಅತೀ ಶೀಘ್ರದಲ್ಲಿ ತಲುಪಲಿವೆ. ಒಪ್ಪಂದಕ್ಕೆ ಇರಾನ್ ಒಪ್ಪಿಕೊಳ್ಳದಿದ್ದರೆ, ಇಂದು ರಾತ್ರಿ ನಾಗರಿಕತೆಯೊಂದು ಅಂತ್ಯವಾಗಲಿದೆ. ಅದು ಮತ್ತೆ ಎಂದಿಗೂ ಮರಳಿ ಬರುವುದಿಲ್ಲ. ಅಂತಹ ಘಟನೆ ನಡೆಯುವುದು ನನಗೆ ಇಷ್ಟವಿಲ್ಲ. ಆದರೆ, ಅದು ಸಂಭವಿಸುವ ಸಾಧ್ಯತೆಯಿದೆ” ಎಂದು ಮತ್ತೊಮ್ಮೆ ಬೆದರಿಕೆ ಹಾಕಿದ್ದರು.

ಆದರೆ, ಟ್ರಂಪ್ ಬೆದರಿಕೆಗೆ ಇರಾನ್ ಜಗ್ಗಲಿಲ್ಲ. ಪ್ರತಿಕ್ರಿಯೆಯಾಗಿ, ”ಅಮೆರಿಕವು ಶಾಶ್ವತ ಅವಮಾನ, ವಿಷಾದ ಹಾಗೂ ಶರಣಾಗತಿಯನ್ನು ಅನುಭವಿಸುವವರೆಗೆ ಮಧ್ಯಪ್ರಾಚ್ಯದಲ್ಲಿ ಯುದ್ಧ ಮುಂದುವರಿಯುತ್ತದೆ” ಎಂದು ಇರಾನ್ ಎಚ್ಚರಿಸಿತ್ತು.

ಇರಾನ್‌ನ ಖಾತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ವಕ್ತಾರ ಇಬ್ರಾಹಿಂ ಝೋಲ್ಫಾಘರಿ ಅವರು, “ನಮ್ಮ ಮಿಲಿಟರಿ ಶಕ್ತಿ ಮತ್ತು ಸಲಕರಣೆಗಳ ಬಗ್ಗೆ ನಿಮ್ಮ ಜ್ಞಾನ ಅಪೂರ್ಣವಾಗಿದೆ. ನಮ್ಮ ಅಪಾರ ಕಾರ್ಯತಂತ್ರದ ಸಾಮರ್ಥ್ಯಗಳ ಬಗ್ಗೆ ನಿಮಗೆ ಏನೂ ತಿಳಿದಿಲ್ಲ. ಅಮೆರಿಕವು ಇನ್ನಷ್ಟು ವಿನಾಶಕಾರಿ ಮತ್ತು ಬಲವಾದ ಹೊಡೆತಗಳನ್ನು ಅನುಭವಿಸಲಿದೆ” ಎಂದು ಹೇಳಿದ್ದರು.

ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಕಮಾಂಡರ್ ಬ್ರಿಗೇಡಿಯರ್ ಜನರಲ್ ಸೈಯದ್ ಮಜಿದ್ ಮೂಸಾವಿ ಅವರು, ”ಅಮೆರಿಕ ತನ್ನ ಸೈನಿಕರನ್ನು ಮತ್ತೆ ಸಮಾಧಿಗೆ ಕೊಂಡೊಯ್ಯಲಿದೆ. ನೀವೇ ನಿಮ್ಮ ಸೈನಿಕರನ್ನು ಸಮಾಧಿಗೆ ಕೊಂಡೊಯ್ಯುತ್ತಿದ್ದೀರಿ, ಶಿಲಾಯುಗಕ್ಕೆ ಹೋಗುವುದು ಇರಾನ್ ಅಲ್ಲ. ಹಾಲಿವುಡ್ ಭ್ರಮೆಗಳು ನಿಮ್ಮ ಮನಸ್ಸನ್ನು ಎಷ್ಟು ವಿಷಪೂರಿತಗೊಳಿಸಿವೆ ಎಂದರೆ, ನಿಮ್ಮ ಕೇವಲ 250 ವರ್ಷಗಳ ಇತಿಹಾಸವನ್ನು ಇಟ್ಟುಕೊಂಡು 6,000 ವರ್ಷಗಳಿಗೂ ಹಳೆಯದಾದ ನಾಗರಿಕತೆಗೆ ಬೆದರಿಕೆ ಹಾಕುತ್ತಿದ್ದೀರಿ” ಎಂದು ಎಚ್ಚರಿಸಿದ್ದರು.

ಈ ಲೇಖನ ಓದಿದ್ದೀರಾ?: ಸಿಇಸಿ ವಿರುದ್ಧದ ಅವಿಶ್ವಾಸ; ಕಾರಣವಿಲ್ಲದೇ ನೋಟಿಸ್‌ ತಿರಸ್ಕಾರ ಕೂಡ ಪ್ರಜಾತಂತ್ರಕ್ಕೆ ಮಾರಕ!

ತಮ್ಮ ಬೆದರಿಕೆಗಳಿಗೆ ಇರಾನ್ ಬಗ್ಗದೇ ಇರುವುದನ್ನು ಕಂಡು ಟ್ರಂಪ್ ಕಂಗಾಲಾಗಿದ್ದರು. ಇದೀಗ, ಇರಾನ್ ಪ್ರಸ್ತಾಪಿಸಿರುವ 10 ಹಕ್ಕೊತ್ತಾಯಗಳ ಕುರಿತು ಚರ್ಚಿಸಲು ಅಮೆರಿಕ ಒಪ್ಪಿಕೊಂಡಿದೆ. ಕದನ ವಿರಾಮಕ್ಕಾಗಿ ಇರಾನ್‌ಗೆ ‘ರೆಡ್‌ ಕಾರ್ಪೆಟ್’ ಹಾಸಿದೆ.

ಇರಾನ್‌ನ 10 ಹಕ್ಕೊತ್ತಾಯಗಳು;

  1. ಪರಸ್ಪರರ ಮೇಲೆ ಆಕ್ರಮಣ ಮಾಡದೇ ಇರುವುದನ್ನು ಶಾಶ್ವತಗೊಳಿಸುವುದು.
  2. ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ನಿಯಂತ್ರಣ ಮುಂದುವರಿಕೆ.
  3. ಯುರೇನಿಯಂ ಪುಷ್ಟೀಕರಣಕ್ಕೆ ಅಂಗೀಕಾರ.
  4. ಎಲ್ಲ ಪ್ರಾಥಮಿಕ ನಿರ್ಬಂಧಗಳ ತೆರವು.
  5. ಎಲ್ಲ ಮಾಧ್ಯಮಿಕ ನಿರ್ಬಂಧಗಳ ತೆರವು.
  6. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎಲ್ಲ ನಿರ್ಣಯಗಳ ರದ್ದತಿ.
  7. ಐಎಇಎ ಆಡಳಿತ ಮಂಡಳಿಯ ಎಲ್ಲ ನಿರ್ಣಯಗಳ ರದ್ದತಿ.
  8. ಇರಾನ್‌ಗೆ ಪರಿಹಾರ ಧನ ಪಾವತಿ.
  9. ಮಧ್ಯಪ್ರಾಚ್ಯದಿಂದ ಅಮೆರಿಕ ಪಡೆಗಳನ್ನು ಹಿಂಪಡೆಯಬೇಕು.
  10. ಲೆಬನಾನ್‌ನ ಇಸ್ಲಾಮಿಕ್ ಪ್ರತಿರೋಧ ಸೇರಿದಂತೆ ಎಲ್ಲ ರಂಗಗಳಲ್ಲಿ ಯುದ್ಧವನ್ನು ನಿಲ್ಲಿಸಬೇಕು.

ಅಮೆರಿಕವು ಇರಾನ್ ಜೊತೆಗಿನ ಕದನ ವಿರಾಮವನ್ನು ತನ್ನ ವಿಜಯ ಎಂದು ನೋಡುತ್ತಿದೆ. “ಇದು 100%ರಷ್ಟು ಸಂಪೂರ್ಣ ಮತ್ತು ಪೂರ್ಣ ವಿಜಯ. ಇದರಲ್ಲಿ ಯಾವುದೇ ಸಂಶಯವಿಲ್ಲ,” ಎಂದು ಟ್ರಂಪ್ ಹೇಳಿದ್ದಾರೆ.

ಇರಾನ್ ಕೂಡ ಈ ಕದನ ವಿರಾಮವನ್ನು ತನ್ನ ಗೆಲುವು ಎಂದು ಹೇಳಿಕೊಂಡಿದೆ. ಆದರೆ, ಇದು ಯುದ್ಧದ ಅಂತ್ಯವಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಹೇಳಿಕೆ ನೀಡಿದ್ದು, “ಇದು ಯುದ್ಧದ ಅಂತ್ಯವಲ್ಲ. ಆದರೆ ಎಲ್ಲ ಮಿಲಿಟರಿ ವಿಭಾಗಗಳು ಸರ್ವೋಚ್ಚ ನಾಯಕನ ಆದೇಶವನ್ನು ಪಾಲಿಸಬೇಕು ಮತ್ತು ದಾಳಿಯನ್ನು ನಿಲ್ಲಿಸಬೇಕು” ಎಂದು ತಿಳಿಸಿದ್ದಾರೆ.

ಅಂತೆಯೇ, ಇರಾನ್‌ನ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿ ಕೂಡ, “ನಮ್ಮ ಕೈಗಳು ಇನ್ನೂ ಟ್ರಿಗರ್ ಮೇಲಿವೆ. ಶತ್ರುಗಳು ಸಣ್ಣ ತಪ್ಪು ಮಾಡಿದರೂ ಸಹ ಅದಕ್ಕೆ ಪೂರ್ಣ ಶಕ್ತಿಯೊಂದಿಗೆ ಉತ್ತರ ನೀಡಲಾಗುವುದು” ಎಂದು ಎಚ್ಚರಿಸಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಳೆ ಜಿಎಸ್‌ಟಿ ಮಂಡಳಿ ಸಭೆ: ಅಧಿಕಾರ ಹಂಚಿಕೆಯ ಅಸಮತೋಲನ; ಏನಿದು ಜಿಎಸ್‌ಟಿ ಕೌನ್ಸಿಲ್?

ಜಿಎಸ್‌ಟಿ ಮಂಡಳಿಯು ದೇಶದ 'ಸಹಕಾರ ಒಕ್ಕೂಟ ವ್ಯವಸ್ಥೆ'ಗೆ ಒಂದು ಉದಾಹರಣೆಯಾಗಿದ್ದರೂ, ಮತದಾನದ...

ತನ್ನ ಕಾದಂಬರಿಗಳ ಪಾತ್ರಗಳಂತೆಯೇ ಜೀವಿಸಿದ್ದ ಜನಪ್ರಿಯ ಕಾದಂಬರಿಕಾರ ಜೆಫ್ರಿ ಆರ್ಚರ್!

ಜನಪ್ರಿಯ ಕಾದಂಬರಿಕಾರ ಜೆಫ್ರಿ ಆರ್ಚರ್, ತಮ್ಮ 86ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸೇನೆ,...

ಚುನಾವಣಾ ಆಯೋಗವು ತಾನೇ ಹಾಕಿಕೊಂಡ ಗಂಟುಗಳನ್ನು ಬಿಡಿಸಿಕೊಳ್ಳಬಲ್ಲದೇ? ಇದೇ ಈಗಿನ ಪ್ರಶ್ನೆ

SIR ನಡೆಸುವ ನಿರ್ಧಾರ ಸರ್ವಾನುಮತದಿಂದ ಕೂಡಿತ್ತು ಎಂದು ಜನ ನಂಬಬೇಕಾದರೆ, ಆಯೋಗವು...

‘ಡಾವ್ನ್‌ ಆಫ್ ಯೆಮನ್’ ಕಾರ್ಯಾಚರಣೆ: ಅಲ್-ವಝೀಯಾ ಮರಳಿ ಪಡೆಯಲು ಯೆಮನ್ ಪಡೆಗಳ ದಾಳಿ

ಸನಾ: ಯೆಮನ್‌ನ ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಸರ್ಕಾರದ ಪಡೆಗಳು, ಹೂತಿಗಳ ವಶದಲ್ಲಿರುವ ಪರ್ವತ...