ಬಿಜೆಪಿಗರೇ ಕನ್ನಡಿಗರ ಮುಂದೆ ಮೋದಿ ಹೆಸರು ಹೇಳುವ ಮುಂಚೆ ನೂರು ಬಾರಿ ಯೋಚಿಸಿ: ಕಾಂಗ್ರೆಸ್ ತಿರುಗೇಟು

Date:

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಟ್ವೀಟ್‌ ವಾರ್ ಶುರುವಾಗಿದೆ. “ಅಯೋಗ್ಯ ಕರ್ನಾಟಕ ಕಾಂಗ್ರೆಸ್ ನಾಯಕರು ನಮ್ಮದು ಎಲುಬಿಲ್ಲದ ನಾಲಿಗೆ ಎನ್ನುವುದನ್ನು ತೋರಿಸಿಕೊಳ್ಳುತ್ತಿದ್ದಾರೆ” ಎಂದ ಬಿಜೆಪಿ ಟ್ವೀಟ್‌ಗೆ ತಿರುಗೇಟು ನೀಡಿರುವ ಕಾಂಗ್ರೆಸ್‌ ಪಕ್ಷವು “ಕನ್ನಡಿಗರ ಎದುರು ಮೋದಿಯ ಹೆಸರನ್ನು ಹೇಳುವ ಮುಂಚೆ ನೂರು ಬಾರಿ ಯೋಚಿಸಿ” ಎಂದು ತಿರುಗೇಟು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ಸಚಿವ ಶಿವರಾಜ್‌ ತಂಗಡಗಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ ಬಿಜೆಪಿ, “ಅಯೋಗ್ಯ ಕಾಂಗ್ರೆಸ್ ನಾಯಕರು ನಮ್ಮದು ಎಲುಬಿಲ್ಲದ ನಾಲಿಗೆ ಎನ್ನುವುದನ್ನು ತೋರಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಹಿಡಿದು ನಾಲಾಯಕ್ ಕೈ ಶಾಸಕರು ನಾಲಿಗೆ ಹರಿಬಿಡುತ್ತಿದ್ದಾರೆ” ಎಂದು ಹೇಳಿದೆ.

“ಕೈಲಾಗದವನು ಮೈ ಪರಚಿಕೊಂಡ ಎನ್ನುವಂತೆ ಕೊಪ್ಪಳದಲ್ಲಿ ಸಚಿವ ಶಿವರಾಜ್‌ ತಂಗಡಗಿ ಅವರು ಹತಾಶೆಗೊಂಡು ತಮ್ಮ ವ್ಯಕ್ತಿತ್ವವನ್ನು ಬೆತ್ತಲಾಗಿಸಿಕೊಂಡಿದ್ದಾರೆ. ಮೋದಿ ಮೋದಿ ಎನ್ನುವ ಯುವಕರ ಕಪಾಳಕ್ಕೆ ಹೊಡಿಯಿರಿ ಎನ್ನುವ ಸಚಿವರ ಕಪಾಳಕ್ಕೆ ಜನತೆ ಲೋಕಸಭಾ ಚುನಾವಣೆಯಲ್ಲಿ ಬಾರಿಸುವುದು ಶತಸಿದ್ಧ” ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಅಧಿಕಾರಕ್ಕೆ ಬಂದು ಹತ್ತು ತಿಂಗಳಾದರೂ ಬರ ಪರಿಹಾರ ಕೊಡದೆ, ಅಭಿವೃದ್ಧಿಯೂ ಮಾಡದೆ, ಕುಡಿಯುವುದಕ್ಕೆ ನೀರು ಕೊಡಲಾಗದೆ ಇರುವ ಅಯೋಗ್ಯರು, ಜನರಿಂದ ಆಯ್ಕೆಯಾದ ಪ್ರಧಾನಿ ಮೋದಿ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ” ಎಂದು ಬಿಜೆಪಿ ಹೇಳಿದೆ.

ಬಿಜೆಪಿಯ ಈ ಟ್ವೀಟ್‌ಗೆ ತಿರುಗೇಟು ನೀಡಿರುವ ಕಾಂಗ್ರೆಸ್, “ಅಯೋಗ್ಯತನವನ್ನೇ ಮೈಗೂಡಿಸಿಕೊಂಡಿರುವ ಕರ್ನಾಟಕ ಬಿಜೆಪಿಗರೇ ವಿಧಾನಸಭೆ ಚುನಾವಣೆಯಲ್ಲಿ ಮೋದಿಯನ್ನು ಗಲ್ಲಿ ಗಲ್ಲಿಯಲ್ಲಿ ಅಲೆಸಿದಿರಿ, ಆದರೆ ಕನ್ನಡಿಗರು ಮೋದಿಯನ್ನು ಹಾಗೂ ಬಿಜೆಪಿಯನ್ನು ತಿರಸ್ಕರಿಸಿ ಕಪಾಳಮೋಕ್ಷ ಮಾಡಿ ಕಳಿಸಿದ್ದಾರೆ” ಎಂದು ಛೇಡಿಸಿದೆ.

“ಸ್ಮಾರ್ಟ್ ಸಿಟಿಯಾಗಲಿಲ್ಲ, 2 ಕೋಟಿ ಉದ್ಯೋಗ ನೀಡಲಿಲ್ಲ, ಕಪ್ಪು ಹಣ ತರಲಿಲ್ಲ,
15 ಲಕ್ಷ ಬರಲಿಲ್ಲ, ಹೇಳಿದ ಯಾವ ಭರವಸೆಗಳನ್ನೂ ಈಡೇರಿಸದೆ ಮೋದಿ ಮೋದಿ ಎನ್ನುತ್ತಾ ಮತದಾರರೆದುರು ಹೋದರೆ ಬಿಜೆಪಿಗರು ಜನರಿಂದ ತಿರಸ್ಕಾರದ ಕಪಾಳಮೋಕ್ಷ ಎದುರಿಸುವುದು ನಿಶ್ಚಿತ” ಎಂದು ಕಾಂಗ್ರೆಸ್ ಹೇಳಿದೆ.

“ಮೋದಿ ಕರ್ನಾಟಕಕ್ಕೆ ವಿಶೇಷ ಅನುದಾನ ನೀಡಲಿಲ್ಲ, ಜಿಎಸ್‌ಟಿ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡಿದ್ದಾರೆ. ಬರ ಪರಿಹಾರ ನೀಡದೆ ವಂಚಿಸಿದ್ದಾರೆ. ಮೋದಿ ವಂಚನೆಗಳಿಂದ ಬೇಸತ್ತಿರುವ ಕನ್ನಡಿಗರ ಎದುರು ಮೋದಿಯ ಹೆಸರನ್ನು ಹೇಳುವ ಮುಂಚೆ ನೂರು ಬಾರಿ ಯೋಚಿಸಬೇಕು ಬಿಜೆಪಿಗರು” ಎಂದು ಕಾಂಗ್ರೆಸ್ ಟಾಂಗ್ ನೀಡಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಠ್ಯಪುಸ್ತಕ ಪರಿಷ್ಕರಣೆ | ಕೆಲವು ಪದ ಮತ್ತು ವಾಕ್ಯಗಳಲ್ಲಷ್ಟೇ ಬದಲಾವಣೆ: ಸಚಿವ ಮಧು ಬಂಗಾರಪ್ಪ

"ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮಕ್ಕಳು ಯಾವುದೇ ತೊಂದರೆ ಇಲ್ಲದಂತೆ ತೊಡಗಿಸಿಕೊಳ್ಳಲು...

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಹಂಚಿಕೆ ಆರೋಪ: ಕಾಂಗ್ರೆಸ್ ಕಾರ್ಯಕರ್ತ ನವೀನ್ ಗೌಡ ಸಹಿತ ಇಬ್ಬರ ಬಂಧನ

ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಲೈಂಗಿಕ ದೌರ್ಜನ್ಯದ ಅಶ್ಲೀಲ ವಿಡಿಯೋಗಳನ್ನು...