ಕಾರು ಇಲ್ಲದವನನ್ನು ಯಾರೂ ಮದುವೆಯಾಗಲು ಬಯಸಲ್ಲ: ತೇಜಸ್ವಿ ಬಳಿ ಸುರಂಗ ರಸ್ತೆ ಸಮರ್ಥಿಸಿಕೊಂಡ ಡಿ ಕೆ ಶಿವಕುಮಾರ್

Date:

ಸುರಂಗ ರಸ್ತೆ ಯೋಜನೆಯ ಕುರಿತು ನಿರಂತರ ವಾಗ್ದಾದ ನಡೆಸಿದ್ದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮಂಗಳವಾರ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಂಚಾರ ಅವ್ಯವಸ್ಥೆಯನ್ನು ಕಡಿಮೆ ಮಾಡಲು ಪರ್ಯಾಯ ಮಾರ್ಗಗಳ ಬಗ್ಗೆ ಚರ್ಚಿಸಿದರು. ಕಾರು ಮಾತ್ರ ಸಾಗಲು ಅವಕಾಶ ನೀಡುವ ಬಹುಕೋಟಿ ಮೌಲ್ಯದ ಸುರಂಗ ರಸ್ತೆ ಯೋಜನೆಯನ್ನು ರದ್ದುಗೊಳಿಸುವಂತೆ ಸೂರ್ಯ ವಾದಿಸಿದರು. ಹಾಗೆಯೇ ಮೆಟ್ರೋದಂತಹ ಸಾಮೂಹಿಕ ಸಾರಿಗೆಯಲ್ಲಿ ಹೂಡಿಕೆ ಮಾಡಿ ಎಂದು ಸೂಚಿಸಿದರು. ಇದನ್ನು ನಿರಾಕರಿಸಿದ ಡಿ ಕೆ ಶಿವಕುಮಾರ್, “ಕಾರು ಇಲ್ಲದ ವ್ಯಕ್ತಿಯನ್ನು ಯಾರೂ ಮದುವೆಯಾಗಲು ಬಯಸಲ್ಲ” ಎಂದು ವ್ಯಂಗ್ಯವಾಡಿದರು.

- Advertisement -

ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದು ಉತ್ತಮ. ಇದರಿಂದ ಖಾಸಗಿ ವಾಹನ ಬಳಕೆಯನ್ನು ಕಡಿಮೆ ಮಾಡಬಹುದು ಎಂಬ ತೇಜಸ್ವಿ ಸೂರ್ಯ ವಾದವನ್ನು ವಿರೋಧಿಸಿದ ಡಿ ಕೆ ಶಿವಕುಮಾರ್, “ನೀವು ವಾಹನ ಚಲಾಯಿಸುವುದನ್ನು ನಾನು ತಡೆಯಬಹುದೇ? ಇದು ಸಾಮಾಜಿಕ ಜವಾಬ್ದಾರಿಯ ವಿಷಯ. ಜನರು ತಮ್ಮ ಕುಟುಂಬಗಳೊಂದಿಗೆ ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಅದನ್ನು ತಡೆಯಲಾಗುತ್ತದೆಯೇ” ಎಂದು ಪ್ರಶ್ನಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಟನಲ್ ರೋಡ್ ದೈತ್ಯ ಯೋಜನೆಯನ್ನು ಸಾರ್ವಜನಿಕ ಚರ್ಚೆಗಿಡಲಿ ಸರ್ಕಾರ

ಹಾಗೆಯೇ, “ಅಗತ್ಯವಿದ್ದರೆ, ಸಂಸದರು ತಮ್ಮ ಮತದಾರರಿಗೆ ತಮ್ಮ ಕಾರುಗಳನ್ನು ಮನೆಯಲ್ಲಿಯೇ ಬಿಟ್ಟು ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಮನವಿ ಮಾಡಬಹುದು. ಎಷ್ಟು ಜನರು ಅದನ್ನು ಅನುಸರಿಸುತ್ತಾರೆ ನೋಡೋಣ. ಇಂದು ಕಾರು ಇಲ್ಲದ ಹುಡುಗನನ್ನು ಮದುವೆಯಾಗಲು ಹಿಂಜರಿಯುತ್ತಾರೆ. ಸಂಸದರಿಗೆ ಅಂತಹ ಸಾಮಾಜಿಕ ವಾಸ್ತವಗಳ ಬಗ್ಗೆ ಅರಿವು ಅಗತ್ಯ. ನಮಗೆ ಬೇಕಾಗಿರುವುದು ಹಣ, ಸಲಹೆಯಲ್ಲ” ಎಂದರು.

ಈ ಹಿಂದೆ ಸುರಂಗ ಯೋಜನೆಯನ್ನು ವಿರೋಧಿಸಿದ್ದ ತೇಜಸ್ವಿ ಸೂರ್ಯ, “ಸುಮಾರು 69,000 ಪ್ರಯಾಣಿಕರನ್ನು ಚಲಿಸಬಲ್ಲ ಮೆಟ್ರೋ ಮಾರ್ಗಕ್ಕೆ ಹೋಲಿಸಿದರೆ, ಸುರಂಗದಲ್ಲಿ ಒಂದು ದಿಕ್ಕಿನಲ್ಲಿ ಗಂಟೆಗೆ ಕೇವಲ 1,800 ಕಾರುಗಳು ಮಾತ್ರ ಚಲಿಸುತ್ತದೆ. ನಾವು ಹೆಚ್ಚಿನ ಕಾರುಗಳಲ್ಲ, ಹೆಚ್ಚಿನ ಜನರು ಚಲಿಸಲು ಸಾಧ್ಯವಾಗುವತ್ತ ಗಮನಹರಿಸಬೇಕು. ಸುರಂಗ ಮಾರ್ಗವು ಕೇವಲ ಒಂದು ಸಣ್ಣ ಭಾಗದ ಪ್ರಯಾಣಿಕರಿಗೆ ಮಾತ್ರ ಸೇವೆ ನೀಡುತ್ತದೆ. ಆದರೆ ಸಾರ್ವಜನಿಕ ಸಾರಿಗೆಯು ಬೆಂಗಳೂರಿನ ದೀರ್ಘಕಾಲದ ಸಂಚಾರ ಸಮಸ್ಯೆಗಳಿಗೆ ದೀರ್ಘಾವಧಿಯ ಪರಿಹಾರವನ್ನು ನೀಡುತ್ತದೆ” ಎಂದು ಹೇಳಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2017ರಲ್ಲಿ ಚುನಾವಣಾ ಆಯೋಗವನ್ನು ನಂಬಿದ್ದೆವು, ಆದರೆ 2022ರಲ್ಲಿ ಎಸ್‌ಪಿ ಮತಗಳನ್ನು ಇಸಿ ಅಳಿಸಿದೆ: ಅಖಿಲೇಶ್ ಆರೋಪ

2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಬೆಂಬಲಿಗರ...

ಹಾಸನ | ಮನುಷ್ಯಕೇಂದ್ರಿತ ವೈಜ್ಞಾನಿಕ ಚಿಂತನೆ ಅತ್ಯಗತ್ಯ: ಡಾ. ರಾಜಪ್ಪ ದಳವಾಯಿ

ಮನುಷ್ಯನಿಗಿಂತ ಧರ್ಮ, ದೇವರು, ದೇವಾಲಯಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಮುಖ್ಯವಾಗುವ ಪರಿಸ್ಥಿತಿ...