ಬಿಹಾರ | ಬಿಜೆಪಿ ಮಿತ್ರಪಕ್ಷ ಜೆಡಿಯು ಅಭ್ಯರ್ಥಿ ‘ಛೋಟೆ ಸರ್ಕಾರ್’ ಮೇಲಿದೆ 28 ಕ್ರಿಮಿನಲ್ ಪ್ರಕರಣಗಳು!

Date:

ಬಿಹಾರದಲ್ಲಿ ‘ಛೋಟೆ ಸರ್ಕಾರ್’ ಎಂದೇ ಕರೆಯಲಾಗುವ ಡಾನ್‌ ಅನಂತ್ ಕುಮಾರ್ ಸಿಂಗ್ ಮೋಕಾಮಾ ವಿಧಾನಸಭಾ ಸ್ಥಾನದಲ್ಲಿ ಬಿಜೆಪಿ ಮಿತ್ರಪಕ್ಷ ಜೆಡಿಯು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವಾಗ 37.88 ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿದ್ದಾರೆ. ಜೊತೆಗೆ ಈ ಅಭ್ಯರ್ಥಿ ವಿರುದ್ಧ 28 ಕ್ರಿಮಿನಲ್ ಪ್ರಕರಣಗಳೂ ಇವೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

- Advertisement -

ಜೆಡಿಯು ಇನ್ನೂ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿಲ್ಲ. ಆದರೆ ಅದಕ್ಕೂ ಮುನ್ನವೇ ಅನಂತ್ ಕುಮಾರ್ ಸಿಂಗ್ ಜೆಡಿಯು ಅಭ್ಯರ್ಥಿಯಾಗಿ ಚುನಾವಣಾ ಆಯೋಗಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಮೋಕಾಮಾದಲ್ಲಿ ನವೆಂಬರ್ 6ರಂದು ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬರ: ಪರಿಹಾರ ಮತ್ತು ಪರ್ಯಾಯ ಮಾರ್ಗಗಳತ್ತ ಒಂದು ನೋಟ

ಬರ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಹಾರಾಷ್ಟ್ರವು ಮಾದರಿ ಕಾರ್ಯಾಚರಣೆ ಕೈಗೊಂಡಿದೆ. ಮತ್ತು ಅದರಲ್ಲಿ ಅದು ಬಹುಪಾಲು ಯಶಸ್ಸನ್ನೂ ಸಾಧಿಸಿದೆ. ಬೃಹತ್ ನೀರಾವರಿ ಯೋಜನೆಗಳಿಗೆ ಕೊಡುವ ಆದ್ಯತೆ ಮತ್ತು ಮಹತ್ವವನ್ನು ಸಣ್ಣ ನೀರಾವರಿ ಯೋಜನೆಗಳಿಗೂ ನೀಡಬೇಕೆನ್ನುವುದೇ...

ಹಮ್ ಔರತೇಂ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

ಇದನ್ನು ಓದಿದ್ದೀರಾ? ಬಿಹಾರಕ್ಕೆ ‘ವಿಶೇಷ ವರ್ಗ’ ಸ್ಥಾನಮಾನಕ್ಕಾಗಿ ಜೆಡಿಯು ಬೇಡಿಕೆ

2020ರಲ್ಲಿ ಆರ್‌ಜೆಡಿ ಅಭ್ಯರ್ಥಿಯಾಗಿ ಮೋಕಾಮಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸಿಂಗ್ ಪತ್ನಿ ನೀಲಂ ದೇವಿ ಗೆದ್ದಿದ್ದರು. ಅದಾದ ಬಳಿಕ ಎನ್‌ಡಿಎ ಸರ್ಕಾರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ನೀಲಂ ಅವರ ಆಸ್ತಿ 62.72 ಕೋಟಿ ರೂ. ಮೌಲ್ಯದ್ದು ಎಂದು ಘೋಷಿಸಲಾಗಿದೆ.

‘ಛೋಟೆ ಸರ್ಕಾರ್’ ಅಫಿಡವಿಟ್ ಏನು ಹೇಳುತ್ತೆ?

ಅನಂತ್ ಕುಮಾರ್ ನಾಮಪತ್ರದ ಜೊತೆಗೆ ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, 26.66 ಕೋಟಿ ರೂ. ಮೌಲ್ಯದ ಚರ ಆಸ್ತಿ ಮತ್ತು 11.22 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅವರ ಪತ್ನಿ ನೀಲಂ 13.07 ಕೋಟಿ ರೂ. ಮೌಲ್ಯದ ಚರ ಆಸ್ತಿ ಮತ್ತು 49.65 ಕೋಟಿ ರೂ. ಸ್ಥಿರ ಆಸ್ತಿ ಹೊಂದಿದ್ದಾರೆ.

ಮೋಕಾಮಾದಲ್ಲಿ ಐದು ಬಾರಿ ಶಾಸಕರಾಗಿರುವ ಸಿಂಗ್ ಅವರ ಬಳಿ 15.61 ಲಕ್ಷ ರೂ. ನಗದು ಇದ್ದರೆ, ಅವರ ಪತ್ನಿ ಬಳಿ 34.60 ಲಕ್ಷ ರೂ. ಇದೆ. ಸಿಂಗ್ ಬಳಿ ಹಲವಾರು ಬ್ಯಾಂಕ್ ಖಾತೆಗಳು ಮತ್ತು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿವೆ. ನೀಲಂ ಬಳಿ ಹಲವಾರು ಬ್ಯಾಂಕ್ ಖಾತೆಗಳು ಮತ್ತು 76.61 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿವೆ.

ಸಿಂಗ್ ಅವರ ಚರಾಸ್ತಿಗಳಲ್ಲಿ 3.23 ಕೋಟಿ ರೂ. ಮೌಲ್ಯದ ಮೂರು ಐಷಾರಾಮಿ ಎಸ್‌ಯುವಿ ಕಾರುಗಳು ಸೇರಿವೆ. ಅವರ ಪತ್ನಿ 77.62 ಲಕ್ಷ ರೂ. ಮೌಲ್ಯದ ಮೂರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಕುದುರೆಗಳು, ಹಸುಗಳನ್ನೂ ಇವರು ಸಾಕುತ್ತಿದ್ದಾರೆ. ಸಿಂಗ್ ವಿರುದ್ಧ 28 ಕ್ರಿಮಿನಲ್ ಪ್ರಕರಣಗಳನ್ನು ಸಹ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಿಂಗ್ ಜೆಡಿಯು ಸೇರಿದವರಾಗದಿದ್ದರೂ ಅವರ ಕುಟುಂಬವು 1990ರಿಂದ ಈ ಸ್ಥಾನವನ್ನು ಗೆಲ್ಲುತ್ತಿದೆ. ನಡುವೆ ಕೆಲವು ವರ್ಷಗಳು ಸ್ಥಾನ ಅವರ ಕುಟುಂಬದ ಕೈತಪ್ಪಿತ್ತು. 2022ರಲ್ಲಿ ಯುಎಪಿಎ ಪ್ರಕರಣದಲ್ಲಿ ಶಿಕ್ಷಗೆ ಗುರಿಯಾದ ಬಳಿಕ ಸಿಂಗ್ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಲಾಗಿದೆ. ಅದಾದ ಬಳಿಕ ಅವರ ಪತಿ ನೀಲಂ ಶಾಸಕರಾಗಿದ್ದಾರೆ. ಇತ್ತೀಚೆಗೆ ಪಟನಾ ಹೈಕೋರ್ಟ್ ಸಿಂಗ್ ಅವರನ್ನು ಈ ಪ್ರಕರಣದಲ್ಲಿ ಖುಲಾಸೆಗೊಳಿಸಿದೆ.

ಈ ಬೆನ್ನಲ್ಲೇ “ಕುಟುಂಬದ ಕೋಟೆಯನ್ನು ಕಾಪಾಡುವ ಜವಾಬ್ದಾರಿಯನ್ನು ನನ್ನ ಪತ್ನಿ ಇನ್ನು ಮುಂದೆ ವಹಿಸಲು ಸಾಧ್ಯವಿಲ್ಲ” ಎಂದು ಸಿಂಗ್ ಹೇಳಿಕೊಂಡಿದ್ದಾರೆ. ಆದರೆ ಆರ್‌ಜೆಡಿ ಸಿಂಗ್ ಅವರನ್ನು ಸೋಲಿಸುವ ಪ್ರತಿಜ್ಞೆ ಮಾಡಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜೀವ ಉಳಿಸುವ ಔಷಧಿಗಳ ಹೆಸರಿನಲ್ಲಿ ‘ಹಗಲು ದರೋಡೆ’: ಕೇಂದ್ರಕ್ಕೆ ಸುಪ್ರೀಂ ಚಾಟಿ

ಕ್ಯಾನ್ಸರ್ ಸೇರಿದಂತೆ ಅತ್ಯಗತ್ಯ ಔಷಧಿಗಳ ಸಗಟು ದರ (ಚಿಲ್ಲರೆ ವ್ಯಾಪಾರಿಗಳಿಗೆ ನೀಡುವ...

Instagram ʼರೀಮಿಕ್ಸ್ʼ ಫೀಚರ್‌ಗೆ ತಕರಾರು; ಕಾಪಿರೈಟ್‌ ದುರ್ಬಳಕೆ ಸಾಧ್ಯತೆ ಎಂದ ದೆಹಲಿ ಹೈಕೋರ್ಟ್‌

Instagram ನಲ್ಲಿರುವ ಕೆಲವು ಫೀಚರ್‌ಗಳನ್ನು ಬಳಸಿಕೊಂಡು ಮೂಲ ಕಂಟೆಂಟ್‌ಗಳ ಕಾಪಿರೈಟ್ ಉಲ್ಲಂಘನೆ...

ಹಮ್ ಔರತೇಂ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ ಹಾಕದಿರಿ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ...