ಚುನಾವಣೆ 2023 | 10 ದಿನಗಳಲ್ಲಿ 38 ಕೋಟಿ ದಾಖಲೆ ಮುದ್ರಣಕ್ಕೆ ಮುಂದಾದ ಆಯೋಗ

Date:

ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ಮತದಾರರು ಮತ್ತು ಚುನಾವಣಾ ಅಧಿಕಾರಿಗಳಿಗೆ ವಿತರಿಸುವುದಕ್ಕಾಗಿ ಮತದಾರ ಚೀಟಿ ಮತ್ತು ಅಗತ್ಯ ದಾಖಲೆಗಳನ್ನು ಮುದ್ರಿಸಲು ಚುನಾವಣಾ ಅಯೋಗ ಮುಂದಾಗಿದೆ. ಮುಂದಿನ 10 ದಿನಗಳಲ್ಲಿ 38 ಕೋಟಿ ದಾಖಲೆಗಳನ್ನು ಮುದ್ರಿಸಲಾಗುತ್ತದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ಫೋಟೋಗಳುಳ್ಳ ಮತದಾರ ಗುರುತಿನ ಚೀಟಿ (ಇಪಿಐಸಿ), ಮತದಾರರ ಪಟ್ಟಿಗಳು, ಪೂರಕ ಪಟ್ಟಿಗಳು ಮತ್ತು ವೋಟರ್ ಸ್ಲಿಪ್‌ಗಳನ್ನು 10 ದಿಗನಳಲ್ಲಿ ಮುದ್ರಿಸುವ ಕಠಿಣ ಕೆಲಸವನ್ನು ಆಯೋಗ ಮುಂದಿಟ್ಟುಕೊಂಡಿದೆ. ಜೊತೆಗೆ, ಅವುಗಳನ್ನು ಅಂತಿಮ ಬಳಕೆದಾರರಿಗೆ ಸಮಯಕ್ಕೆ ಸರಿಯಾಗಿ ತಲುಪಿಸಲಾಗುತ್ತದೆ ಎಂದೂ ಆಯೋಗ ಹೇಳಿದೆ.

“ಹೊಸ ಮತದಾರರಿಗೆ ವಿತರಿಸಲು 18 ಲಕ್ಷ ಮತದಾರ ಗುರುತಿನ ಚೀಟಿಗಳನ್ನು ಮುದ್ರಿಸಬೇಕು. 8 ಕೋಟಿ ಪುಟಗಳ ಮತದಾರರ ಪಟ್ಟಿಗಳನ್ನು ಮತಗಟ್ಟೆಗಳಿಗೆ ಕಳುಹಿಸಬೇಕು ಮತ್ತು 30 ಕೋಟಿಗೂ ಹೆಚ್ಚು ಮತದಾರರ ಪಟ್ಟಿಗಳನ್ನು ಮುದ್ರಿಸಬೇಕು” ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಮತದಾರರು ಮತ ಚಲಾಯಿಸಲು ತೆರಳುವಾಗ ನೀಡಲಾಗುವ ಮತದಾರ ಗುರುತಿನ ಚೀಟಿಯ ನಕಲನ್ನು A4 ಗಾತ್ರದ ಸುಮಾರು 20,000 ಪುಟಗಳಲ್ಲಿ ಮುದ್ರಿಸಬೇಕು. 18 ಲಕ್ಷ ಹೊಸ ಮತದಾರರ ಗುರುತಿನ ಚೀಟಿಗಳ ಪೈಕಿ, ಈಗಾಗಲೇ 13 ಲಕ್ಷ ಕಾರ್ಡ್‌ಗಳನ್ನು ಮುದ್ರಿಸಿದ್ದೇವೆ. ಇವುಗಳಲ್ಲಿ 4.4 ಲಕ್ಷ ಕಾರ್ಡ್‌ಗಳು ರವಾನೆಗೆ ಸಿದ್ಧವಾಗಿವೆ. ಇನ್ನೆರಡು ದಿನಗಳಲ್ಲಿ ಉಳಿದ 5 ಲಕ್ಷ ಕಾರ್ಡ್‌ಗಳನ್ನು ಶೀಘ್ರದಲ್ಲೇ ಮುದ್ರಿಸಲಾಗುವುದು. ಪ್ರತಿದಿನ ಸುಮಾರು 3 ರಿಂದ 3.5 ಲಕ್ಷ ಕಾರ್ಡ್‌ಗಳನ್ನು ಮುದ್ರಿಸುತ್ತಿದ್ದೇವೆ,” ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟಿ ಎರಡು ಸೀಟು ತರಲಿ: ಎಚ್‌ಡಿಕೆ ಸವಾಲು

“ಬೆಂಗಳೂರಿನ ವ್ಯಾಪ್ತಿಯಲ್ಲಿ ಗುರುತಿನ ಚೀಟಿ ಮತ್ತು ಪಟ್ಟಿಗಳನ್ನು 24 ಗಂಟೆಗಳ ಒಳಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇತರ ನಗರ ಕೇಂದ್ರಗಳಿಗೆ ಎರಡು ದಿನಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಮೂರು ದಿನಗಳಲ್ಲಿ ತಲುಪಿಸಲಾಗುತ್ತದೆ,” ಎಂದಿದ್ದಾರೆ.

ಬೆಂಗಳೂರಿನಲ್ಲಿ, ಈಗಾಗಲೇ ಮಲ್ಲೇಶ್ವರಂ, ಬಸವನಗುಡಿ, ರಾಜಾಜಿನಗರ ಮತ್ತು ಗಾಂಧಿನಗರದಲ್ಲಿ ಮತದಾರ ಗುರುತಿನ ಚೀಟಿಗಳನ್ನು ರವಾನಿಸಿದೆ. ಚಾಮರಾಜಪೇಟೆ, ಚಿಕ್ಕಪೇಟೆ, ಗೋವಿಂದರಾಜನಗರ, ಸಿವಿ ರಾಮನ್ ನಗರ ಮತ್ತು ಮಹದೇವಪುರ ಕ್ಷೇತ್ರಗಳ ಮತದಾರರಿಗೆ ಗುರುತಿನ ಚೀಟಿಗಳನ್ನು ಪೋಸ್ಟ್‌ ಮಾಡುವ ಕೆಲಸ ಆರಂಭವಾಗಿದೆ. ಏಪ್ರಿಲ್ 10ರೊಳಗೆ ಮುದ್ರಣ ಮತ್ತು ರವಾನೆ ಕೆಲಸವನ್ನು ಪೂರ್ಣಗೊಳಿಸುವ ಗುರಿ ಇದೆ” ಎಂದು ಅವರು ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆಗೆ ಶುಲ್ಕ ನಿಗದಿ; ಎಸ್‌ಯುಸಿಐ ಖಂಡನೆ

ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ಮಾಡಲು ಹಲವು ರೀತಿಯ ಶುಲ್ಕ ನಿಗದಿ ಮಾಡಿರುವುದನ್ನು...

ಬೆಂಗಳೂರು | ನ್ಯಾಯಾಂಗ ಬಡಾವಣೆಯಲ್ಲಿ ಬೀದಿ ಬದಿ ವ್ಯಾಪಾರಿಯ ಎಳನೀರು ಕಳ್ಳತನ

ಬಡ ವ್ಯಾಪಾರಿಯೊಬ್ಬರು ಮಾರಾಟ ಮಾಡಲು ತಂದಿರಿಸಿದ್ದ ಸುಮಾರು 800 ಎಳನೀರು ರಾತ್ರೋರಾತ್ರಿ...

ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾಗೆ ಬೀಳ್ಕೊಡುಗೆ

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ವಯೋ ನಿವೃತ್ತಿ...

ಈಗಲಾದರೂ ಚರ್ಚೆಗೆ ಬರುತ್ತದೆಯೇ ಪ್ರಾದೇಶಿಕ ಅಸಮಾನತೆ ಕೂಗು

ಕರ್ನಾಟಕ ಏಕೀಕರಣವಾಗಿ ಅರ್ಧ ಶತಮಾನ ಕಳೆದರೂ ಇಡೀ ಕರ್ನಾಟಕವನ್ನು ಸಮಗ್ರವಾಗಿ ಅಭಿವೃದ್ಧಿಯ...