ಆಹಾರ ಕಲಬೆರಕೆ | ಗುಜರಾತ್‌ನಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಸಿಡಿದೆದ್ದ ಬಿಜೆಪಿ ಶಾಸಕ

Date:

ಗುಜರಾತ್‌ನಲ್ಲಿ ವ್ಯಾಪಕವಾಗಿ ಆಹಾರ ಕಲಬೆರಕೆ ನಡೆಯುತ್ತಿದೆ. ಗುಜರಾತ್ ಆರೋಗ್ಯ ವ್ಯವಸ್ಥೆಯು ‘ತಟ್ಟೆಯಲ್ಲಿ ವಿಷ’ ಇರುವುದನ್ನು ಕಣ್ಮುಚ್ಚಿ ಕುಳಿತಿದೆ ಎಂದು ಬಿಜೆಪಿ ಶಾಸಕ ಕುಮಾರ್ ಕನಾನಿ ಆರೋಪಿಸಿದ್ದಾರೆ.

- Advertisement -

ಮಾಜಿ ಆರೋಗ್ಯ ಸಚಿವರಾಗಿರುವ ಕನಾನಿ ಅವರು ಹಾಲಿ ಆರೋಗ್ಯ ಸಚಿವ ಪ್ರಫುಲ್ ಪನ್ಸೇರಿಯಾ ಅವರಿಗೆ ಕನಾನಿ ಪತ್ರ ಬರೆದಿದ್ದಾರೆ. “ಆಹಾರ ಕಲಬೆರಕೆಯು ರಾಜ್ಯಾದ್ಯಂತ ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ. ಆದರೂ, ಗುಜರಾತ್ ಆಡಳಿತವು ‘ಮೂಕ ಪ್ರೇಕ್ಷಕ’ನಂತೆ ಕುಳಿತಿದೆ. ಆಹಾರದಲ್ಲಿ ವಿಷ ಬೆರೆಸುವವರು ಭಯೋತ್ಪಾದಕರಿಗಿಂತ ಕಡಿಮೆಯಿಲ್ಲ. ಅವರು ಪ್ರತಿದಿನ ಅಮಾಯಕರನ್ನು ಕೊಲ್ಲುತ್ತಿದ್ದಾರೆ. ಆಹಾರ ಕಲಬೆರಕೆ ಮಾಫಿಯಾಗಳ ವಿರುದ್ಧ ಕಾನೂನು ಮತ್ತು ಕಠಿಣ ಕ್ರಮ ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

“ಜನರ ಆಹಾರದಲ್ಲಿ ವಿಷ ಬೆರೆಸುವುದನ್ನು ಗಮನಿಸದೆ ವ್ಯವಸ್ಥೆಯು ಕುರುಡನಂತೆ ವರ್ತಿಸುತ್ತದೆ. ಆಹಾರ ಕಲಬೆರಕೆಯ ಮೂಲಕ ಲಕ್ಷಾಂತರ ಜನರಿಗೆ ವಿಷವಿಕ್ಕುತ್ತಿರುವ ಜನರು ಯಾವುದೇ ಪರಿಣಾಮಗಳ ಭಯವಿಲ್ಲದೆ, ಮುಕ್ತವಾಗಿ ಮಾಫಿಯಾ ನಡೆಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

“ನಕಲಿ ತುಪ್ಪ, ನಕಲಿ ಪನೀರ್, ಕಲುಷಿತ ಮಸಾಲೆಗಳು ಹಾಗೂ ಕಲಬೆರಕೆ ಎಣ್ಣೆಗಳು ಗುಜರಾತ್‌ನ ಮಾರುಕಟ್ಟೆಗೆ ಪ್ರವಾಹದಂತೆ ಲಗ್ಗೆ ಇಡುತ್ತಿವೆ. ಸಣ್ಣ ಡೈರಿಗಳು ಮತ್ತು ದಿನಸಿ ಅಂಗಡಿಗಳ ಮೂಲಕ ದೂರದ ಹಳ್ಳಿಗಳನ್ನು ತಲುಪುತ್ತಿವೆ” ಎಂದು ಕನಾನಿ ಹೇಳಿದ್ದಾರೆ.

“ಆಹಾರವನ್ನು ಕಲಬೆರಕೆ ಮಾಡುವವರು ಅಥವಾ ನಕಲಿ ಔಷಧಿಗಳನ್ನು ತಯಾರಿಸುವವರಿಗೆ ಯಾವುದೇ ಭಯವಿಲ್ಲ. ಕಲಬೆರಕೆ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ವರದಿಗಳು ಆ ಆಹಾರಗಳು ನಕಲಿ ಎಂದು ಸಾಬೀತುಪಡಿಸುತ್ತವೆ. ಆದರೆ, ಅವರಿಗೆ ಟೋಕನ್ ರೀತಿಯಲ್ಲಿ ದಂಡ ವಿಧಿಸಲಾಗುತ್ತದೆ. ಅವರು ಕಡಿಮೆ ಮೊತ್ತದ ದಂಡ ಪಾವತಿಸಿ, ತಮ್ಮ ಕೃತ್ಯಗಳನ್ನು ಮುಂದುವರೆಸುತ್ತಿದ್ದಾರೆ” ಎಂದು ಕನಾನಿ ದೂರಿದ್ದಾರೆ.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ನಿತೀಶ್ ಕುಮಾರ್ ಮತ್ತು ಬಿಜೆಪಿಯ ಸ್ವಯಂ ಸೋಲು

“ಮಾಫಿಯಾವನ್ನು ತಡೆಯಲು ಕೇವಲ ಆಡಳಿತಾತ್ಮಕ ದಂಡಗಳು ವಿಫಲವಾಗಿವೆ. ಕಠಿಣ ಶಿಕ್ಷೆಗಳು ಮತ್ತು ಕಾನೂನುಗಳನ್ನು ಜಾರಿಗೆ ತರಬೇಕು. ಆ ಮೂಲಕ, ಕಲಬೆರಕೆ ಮಾಫಿಯಾವನ್ನು ಬಗ್ಗುಬಡಿಯಬೇಕು” ಎಂದು ಒತ್ತಾಯಿಸಿದ್ದಾರೆ.

“ನಾನು ನಿಮ್ಮನ್ನು (ಪನ್ಸೇರಿಯಾ) ನಂಬುತ್ತೇನೆ. ನೀವು ಪ್ರಾಮಾಣಿಕರು, ವಿದ್ಯಾವಂತರು ಹಾಗೂ ಕೆಲಸ ಮಾಡುವ ಇಚ್ಛೆ ಹೊಂದಿರುವವರು. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ನೀವು ಕಠಿಣ ಕಾನೂನನ್ನು ತರಬಹುದು ಮತ್ತು ಅದರ ಸಂಪೂರ್ಣ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಬಹುದು ಎಂಬ ಭರವಸೆ ನನ್ನಲ್ಲಿ ಮತ್ತು ಜನರಲ್ಲಿದೆ” ಎಂದು ಹೇಳಿದ್ದಾರೆ.

ಕಲಬೆರಕೆ ಆಹಾರ ಪದಾರ್ಥಗಳು ಕ್ಯಾನ್ಸರ್, ಉಸಿರಾಟದ ಕಾಯಿಲೆ ಹಾಗೂ ದೀರ್ಘಕಾಲದ ಹೊಟ್ಟೆಯ ಕಾಯಿಲೆಗಳಿಗೆ ಕಾರಣವಾಗಬಹುದು. ಕೆಲವೊಮ್ಮೆ ಸಾವಿಗೂ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಆದರೆ, ನ್ಯಾಯಾಲಯದಲ್ಲಿ ನೇರ ಅಪರಾಧವನ್ನು ಸಾಬೀತುಪಡಿಸುವುದು ಕಷ್ಟಕರವಾಗಿದೆ ಎಂದು ವರದಿಯಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

22 ನಿಮಿಷದ ಜಾಹೀರಾತು, 75 ಸಾವಿರ ದಂಡ! ಸಿನಿಪ್ಲೆಕ್ಸ್‌ ಕಿವಿಹಿಂಡಿದ ಗ್ರಾಹಕ ವೇದಿಕೆ

ಸಿನಿಮಾ ಶುರುವಾಗುವ ಮುನ್ನ 22 ನಿಮಿಷಗಳ ಕಾಲ ವಾಣಿಜ್ಯ ಜಾಹೀರಾತುಗಳು ಮತ್ತು...

ಸಿಇಸಿ ಗ್ಯಾನೇಶ್‌ ಕುಮಾರ್‌ ವಿರುದ್ಧ ದೇಶವ್ಯಾಪಿ ಪ್ರತಿಭಟನೆ; ಹೈದರಾಬಾದ್‌ನಲ್ಲಿ ‘ಸಿಜೆಪಿ’ ಮಹತ್ವದ ಸಭೆ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಜಮ್ಮು-ಕಾಶ್ಮೀರಕ್ಕೆ ಪೂರ್ಣ ರಾಜ್ಯ ಸ್ಥಾನಮಾನದ ನಿರ್ಣಯ ಅಂಗೀಕಾರ; ಸದನದಲ್ಲಿ ಬಿಜೆಪಿ ಗದ್ದಲ

ಜಮ್ಮು-ಕಾಶ್ಮೀರಕ್ಕೆ ತುರ್ತಾಗಿ ಪೂರ್ಣ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸುವ ನಿರ್ಣಯವನ್ನು...

ಅಕ್ಟೋಬರ್ 8ರೊಳಗೆ ಪಶ್ಚಿಮ ಬಂಗಾಳ ಶಾಸಕರ ಅನರ್ಹತೆ ಅರ್ಜಿಗಳ ವಿಲೇವಾರಿಗೆ ಸ್ಪೀಕರ್​ಗೆ ಸುಪ್ರೀಂ ಸೂಚನೆ

ಪಕ್ಷಾಂತರ ನಿಷೇಧ ಕಾಯ್ದೆ ಹಾಗೂ ಸಂವಿಧಾನದ ಹತ್ತನೇ ಶೆಡ್ಯೂಲ್‌ನ ಅಡಿಯಲ್ಲಿ, ರಿತಬ್ರತಾ...