ಮೊದಲ ಪಟ್ಟಿಯಲ್ಲಿಲ್ಲ ಮಾಜಿ ಸಚಿವ ಹೆಚ್‌ ಆಂಜನೇಯ ಹೆಸರು; ಗೊಂದಲಕ್ಕೀಡಾದ ಕಾರ್ಯಕರ್ತರು

Date:

  • ಚಿತ್ರದುರ್ಗ ಜಿಲ್ಲೆಯ 3 ಕ್ಷೇತ್ರಗಳಿಗೆ ಘೋಷಣೆಯಾಗದ ಟಿಕೆಟ್
  • ಹೊಸ ಹಾಗೂ ಯುವ ಅಭ್ಯರ್ಥಿಗಳಿಗೆ ಮಣೆ ಹಾಕುವ ಸಾಧ್ಯತೆ

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಮೊದಲನೇ ಪಟ್ಟಿ ಬಿಡುಗಡೆಯಾಗಿದ್ದು, ಚಿತ್ರದುರ್ಗ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರಗಳಿಗೆ ಅದರಲ್ಲೂ ಸಿದ್ದರಾಮಯ್ಯನವರ ಆಪ್ತ ಹೆಚ್‌ ಆಂಜನೇಯ ಪ್ರತಿನಿಧಿಸುವ ಕ್ಷೇತ್ರಕ್ಕೆ ಟಿಕೆಟ್‌ ಘೊಷಣೆಯಾಗದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ.

ಮಾಜಿ ಸಚಿವ ಹೆಚ್‌ ಆಂಜನೇಯ ಸ್ಪರ್ಧಿಸುವ ಹೊಳಲ್ಕೆರೆ ಕ್ಷೇತ್ರಕ್ಕೆ ಮೊದಲನೇ ಪಟ್ಟಿಯಲ್ಲಿ ಟಿಕೆಟ್‌ ಘೋಷಣೆಯಾಗದೇ ಇರುವುದರಿಂದ ಸಿದ್ದರಾಮಯ್ಯನವರ ಆಪ್ತರಿಗೆ ಟಿಕೆಟ್‌ ಕೈ ತಪ್ಪುತ್ತಾ ಎನ್ನುವ ಆತಂಕ ಸೃಷ್ಟಿಯಾಗಿದೆ.

ಇದೇ ಕ್ಷೇತ್ರಕ್ಕೆ ಹೆಚ್‌ ಆಂಜನೇಯ ಸೇರಿದಂತೆ ಹಲವರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಡಿ ಕೆ ಶಿವಕುಮಾರ್‌ ಆಪ್ತ ಹಾಗೂ ಕಾಂಗ್ರೆಸ್ ಕಾರ್ಮಿಕ ವಿಭಾಗದ ರಾಜ್ಯಾದ್ಯಕ್ಷ ಜಿ ಎಸ್‌ ಮಂಜುನಾಥ್ ಹಾಗೂ ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯೆ ಸವಿತಾ ರಘು ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಮಾತ್ರವಲ್ಲದೇ, ಚಿತ್ರದುರ್ಗ ಹಾಗೂ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೂ ಟಿಕೆಟ್‌ ಘೋಷಣೆಯಾಗಿಲ್ಲ. ಚಿತ್ರದುರ್ಗದಲ್ಲಿ ನಟ ದೊಡ್ಡಣ್ಣ ಅವರ ಅಳಿಯ ವೀರೇಂದ್ರ ಪಪ್ಪಿ ಹಾಗೂ ಮಾಜಿ ವಿಧಾನ ಪರಿಷತ್‌ ಸದಸ್ಯ ರಘು ಆಚಾರ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಕಾಂಗ್ರೆಸ್‌ ಹೈಕಮಾಂಡ್‌ ಚಿತ್ರದುರ್ಗದಲ್ಲಿ ಈ ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಮತ್ತೊಬ್ಬರು ಬಂಡಾಯ ಏಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯ ಹೆಜ್ಜೆ ಇಡಲು ತೀರ್ಮಾನಿಸಿದೆ ಎನ್ನಲಾಗಿದೆ.

ಇನ್ನು ಮೊಳಕಾಲ್ಮೂರು ಕ್ಷೇತ್ರದ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ನೇರ್ಲಗುಂಟೆ ಎಸ್‌ ತಿಪ್ಪೇಸ್ವಾಮಿ ಕಳೆದ ತಿಂಗಳು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರಿಂದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಯೋಗಿಶ್‌ ಬಾಬು ಅವರಿಗೆ ಟಿಕೆಟ್‌ ಪಕ್ಕಾ ಎನ್ನಲಾಗಿತ್ತು.

ಆದರೆ, ಈ ಕ್ಷೇತ್ರಕ್ಕೂ ಟಿಕೆಟ್‌ ಘೋಷಣೆ ಆಗದ ಹಿನ್ನೆಲೆಯಲ್ಲಿ ಬೇರೊಬ್ಬರಿಗೆ ಟಿಕೆಟ್ ಆಗುವ ಮಾತುಗಳು ಕೇಳಿಬಂದಿದೆ. ಕಾಂಗ್ರೆಸ್‌ ನಾಯಕ ವಿ ಎಸ್‌ ಉಗ್ರಪ್ಪ ಕೂಡ ಇದೇ ಕ್ಷೇತ್ರಕ್ಕೆ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದು, ಹೈಕಮಾಂಡ್‌ ಯಾರಿಗೆ ಮಣೆ ಹಾಕುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಒಟ್ಟಿನಲ್ಲಿ ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಚಿತ್ರದುರ್ಗವನ್ನು ಮತ್ತೊಮ್ಮೆ ಕೈ ವಶಪಡಿಸಿಕೊಳ್ಳಲು ತೀರ್ಮಾನಿಸಿದ್ದು, ಮೊದಲ ಪಟ್ಟಿಯಲ್ಲಿ ಕೇವಲ 3 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಉಳಿದ 3 ಕ್ಷೇತ್ರಕ್ಕೆ ಹೊಸ ಹಾಗು ಯುವ ಅಭ್ಯರ್ಥಿಯನ್ನು ಹಾಕುವ ಚಿಂತನೆ ನಡೆಸಿದೆ ಎನ್ನಲಾಗಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪನಿಶ್ಮೆಂಟ್‌ಗೆ ಆಸ್ಪದ ಕೊಡಬೇಡಿ, ಒಳ್ಳೆ ಕೆಲಸ ಮಾಡಿ: ಬಿಬಿಎಂಪಿ ಅಧಿಕಾರಿಗಳಿಗೆ ಡಿಸಿಎಂ ಎಚ್ಚರಿಕೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಡಿಸಿಎಂ ಸಭೆ 'ಪನಿಶ್ಮೆಂಟ್ ಮಾಡೋದು ದೊಡ್ಡ...

ಕೇಂದ್ರದ ಯೋಜನೆ ರಾಜ್ಯದ ಜನರಿಗೆ ತಲುಪಿಸುವಲ್ಲಿ ರಾಜಕಾರಣ ಮಾಡಿದರೆ ರಾಜ್ಯಕ್ಕೆ ನಷ್ಟ: ಬೊಮ್ಮಾಯಿ

'ಕೇಂದ್ರ ಸರ್ಕಾರಕ್ಕೆ 9 ವರ್ಷ, ನರೇಂದ್ರ ಮೋದಿ ಆಡಳಿತ ಮುಂದುವರೆಯಲಿʼ 'ಐದು ಗ್ಯಾರಂಟಿಗಳ...

ನೂತನ ಸಚಿವರಿಗೆ ಕೊಠಡಿ ಹಂಚಿಕೆ: ಇಲ್ಲಿದೆ ಪೂರ್ಣ ಮಾಹಿತಿ

ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡಿದ ಸಿಎಂ ಹೊಸ ಸಚಿವರಿಗೆ ಶಕ್ತಿ ಸೌಧದಲ್ಲಿ...

ಆರ್‌ಎಸ್‌ಎಸ್‌-ಬಜರಂಗದಳದ ದಲಿತರು, ಶೂದ್ರರನ್ನು ಸೆಳೆಯಬೇಕಿದೆ: ಸತೀಶ್‌ ಜಾರಕಿಹೊಳಿ

ಒಂದು ಸಂಘಟನೆ ನಿಷೇಧಿಸಿದರೆ ಮತ್ತೊಂದು ಹುಟ್ಟಿಕೊಳ್ಳುತ್ತದೆ ದಲಿತರಿಗೆ ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆ...