ಹಾಸನ ನಗರದ ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಶಿವಲಿಂಗೇಗೌಡರಿಗೆ ಮಂತ್ರಿಯಾಗಿರುವುದು ಸಂತೋಷ, ದೇವರು ಅವಕಾಶ ಕೊಟ್ಟಿದ್ದಾನೆ ಒಳ್ಳೆ ಕೆಲಸ ಮಾಡಲಿ. ನಾವು ದ್ವೇಷದ ರಾಜಕಾರಣ ಮಾಡಲ್ಲ ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಜನರ ಸಮಸ್ಯೆ ಪರಿಹಾರ ಬಗ್ಗೆ ಡಿಸಿ ಪ್ರಕ್ರಿಯಿಸುತ್ತಿಲ್ಲ; ಶಾಸಕ ಹೆಚ್.ಡಿ ರೇವಣ್ಣ
“ಜನರ ಸಮಸ್ಯೆಗಳ ಪರಿಹಾರಕ್ಕೆ ಬರೆದ ಪತ್ರಗಳಿಗೆ ಜಿಲ್ಲಾಧಿಕಾರಿ ಲತಾಕುಮಾರಿ ಪ್ರತಿಕ್ರಿಯಿಸಿಲ್ಲ, ಎಂದು ಡಿಸಿ ವಿರುದ್ಧ ದೂರಿದರು. ನಮ್ಮ ಜಿಲ್ಲೆಯ ಸಚಿವರಿಗೆ ಸಹಕಾರ ಕೊಡುತ್ಥೇವೆ. ಹಾಗೆಯೇ, ಶಾಸಕರಿಗೆ ಗೌರವ ಕೊಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಡೀಸಿಗೂ ಜಿಲ್ಲಾ ಉಸ್ತುವಾರಿ ಸಚಿವರು ಬುದ್ದಿ ಹೇಳಲಿ. ನನ್ನ ವಿರುದ್ಧ ಮಾತಾಡಿರುವ ಡಿಸಿಗೆ ಮುಖ್ಯಕಾರ್ಯದರ್ಶಿಯವರಿಂದ ನೋಟೀಸ್ ಕೊಡಿಸಲಿ ಎಂದು ಹೆಚ್. ಡಿ ರೇವಣ್ಣ ಒತ್ತಾಯಿಸಿದರು.




