2 ಸಾವಿರ ಅಡಿಯ ಹಿಮಖಂಡ ಛಿದ್ರ, 4.4 ತೀವ್ರತೆಯ ಭೂಕಂಪನ; ನೇಪಾಳದ ಜಲಪ್ರಳಯ ಸೃಷ್ಟಿಯಾದದ್ದು ಹೇಗೆ?

Date:

ನೇಪಾಳದ ಹಿಮಾಲಯದ ಗಡಿ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹಕ್ಕೆ ಸುಮಾರು 2,000 ಅಡಿ ಅಗಲದ ಹಿಮನದಿಯ ಬೃಹತ್ ಭಾಗ ಕುಸಿದು ಬಿದ್ದಿರುವುದು ಕಾರಣವಾಗಿರಬಹುದು ಎಂದು ಭೂವಿಜ್ಞಾನಿಗಳು ಹಾಗೂ ಹಿಮನದಿ ತಜ್ಞರ ಪ್ರಾಥಮಿಕ ವಿಶ್ಲೇಷಣೆ ತಿಳಿಸಿದೆ.

- Advertisement -

ದಿ ನ್ಯೂಯಾರ್ಕ್ ಟೈಮ್ಸ್ ವರದಿ ಉಲ್ಲೇಖಿಸಿರುವ ತಜ್ಞರ ಪ್ರಕಾರ, ಇದು ‘Ice Avalanche (ಹಿಮಪಾತ) ಆಗಿರಬಹುದು. ಅಂದರೆ, ಹಿಮನದಿಯಲ್ಲಿದ್ದ ಅಪಾರ ಪ್ರಮಾಣದ ಹಿಮ ಏಕಾಏಕಿ ಕುಸಿದು ಕೆಳಕ್ಕೆ ಬಿದ್ದು, ಅದರೊಂದಿಗೆ ನೀರು, ಹಿಮ ಮತ್ತು ಕಲ್ಲು-ಮಣ್ಣು ಭಾರೀ ವೇಗದಲ್ಲಿ ಹರಿದು ಬರುವ ಪ್ರಕ್ರಿಯೆ. ಬಹುಶಃ ನೇಪಾಳದ ದುರಂತಕ್ಕೆ ಹಿಮಪಾತವೇ ಕಾರಣವಾಗಿರಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಸ್ಯಾಟಲೈಟ್ ಚಿತ್ರಗಳನ್ನು ವಿಶ್ಲೇಷಿಸಿರುವ ಕೆನಡಾದ ಕ್ಯಾಲ್ಗರಿ ವಿಶ್ವವಿದ್ಯಾಲಯದ ಭೂವಿಜ್ಞಾನಿ ಡೇನಿಯಲ್ ಶುಗರ್‌, ಸುಮಾರು 17,000 ಅಡಿ ಎತ್ತರದಲ್ಲಿದ್ದ ಹಿಮನದಿಯ ಒಂದು ಭಾಗ ಸುಮಾರು 2,000 ಅಡಿ ಅಗಲದಲ್ಲಿ ಬಹುತೇಕ ನೇರವಾಗಿ ತುಂಡಾಗಿ ಕೆಳಕ್ಕೆ ಕುಸಿದಿದೆ. ಸುಮಾರು 4,000 ಅಡಿ ಕೆಳಗೆ ಬಿದ್ದ ಈ ಬೃಹತ್ ಹಿಮದ ರಾಶಿ ಕಣಿವೆಯನ್ನು ತಲುಪಿದಾಗ ಪುಡಿಪುಡಿಯಾಗಿ, ನೀರಿನೊಂದಿಗೆ ಸೇರಿಕೊಂಡು ಭಾರಿ ಪ್ರವಾಹದ ರೂಪ ಪಡೆದಿದೆ. ಈ ಪ್ರವಾಹ ಮೊದಲು ಲ್ಹೆಂಡೆ ಖೋಲಾ ನದಿಯತ್ತ ಹರಿದು ಬಳಿಕ ನೇಪಾಳ-ಚೀನಾ ಗಡಿಯ ಸಮೀಪದ ಭೋಟೆಕೋಶಿ ನದಿಯನ್ನು ಸೇರಿದೆ ಎಂದಿದ್ದಾರೆ. ಶುಗರ್‌ ಅವರು ಘಟನಾ ಸ್ಥಳದ ಸ್ಥಿತಿಯನ್ನು “ಬಾಂಬ್ ಸ್ಫೋಟಿಸಿದಂತೆ ಕಾಣುತ್ತಿದೆ” ಎಂದು ವಿವರಿಸಿದ್ದು, ಹಿಮನದಿ ಕುಸಿತದಿಂದ ಉಂಟಾದ ಅವಶೇಷಗಳು ಎಲ್ಲೆಡೆ ಹರಡಿರುವುದಾಗಿ ತಿಳಿಸಿದ್ದಾರೆ.

ಹಿಮನದಿಯ ಬೃಹತ್ ಭಾಗವು ಅತ್ಯಂತ ಎತ್ತರದಲ್ಲಿದ್ದ ಕಾರಣ, ಅದರಲ್ಲಿ ಅಪಾರ ಪ್ರಮಾಣದ ಸಂಭಾವ್ಯ ಶಕ್ತಿ ಸಂಗ್ರಹವಾಗಿತ್ತು. ಬ್ರಿಟನ್‌ನ ಡಂಡೀ ವಿಶ್ವವಿದ್ಯಾಲಯದ ಹಿಮನದಿ ತಜ್ಞ ಸೈಮನ್ ಕುಕ್ ಅವರ ಪ್ರಕಾರ, ಭಾರಿ ಪ್ರಮಾಣದ ಹಿಮವು ಕೆಳಗೆ ಬಿದ್ದಾಗ ಉಂಟಾದ ಪ್ರಚಂಡ ಹೊಡೆತದಿಂದ ಅದು ಪುಡಿಪುಡಿಯಾಗಿ ನೀರು ಮತ್ತು ಅವಶೇಷಗಳ ವೇಗದ ಹರಿವಾಗಿ ಪರಿವರ್ತನೆಯಾಗಿರಬಹುದು. ಈ ಭಾರೀ ಹರಿವು ಕಣಿವೆಯ ಮೂಲಕ ಲ್ಹೆಂಡೆ ಖೋಲಾ ಮತ್ತು ಭೋಟೆಕೋಶಿ ನದಿಗಳತ್ತ ಸಾಗಿದ್ದು, ದಾರಿಯಲ್ಲಿದ್ದ ವಸತಿ ಪ್ರದೇಶಗಳು, ರಸ್ತೆಗಳು, ಸೇತುವೆಗಳು ಹಾಗೂ ಜಲವಿದ್ಯುತ್ ಮೂಲಸೌಕರ್ಯಗಳಿಗೆ ಭಾರಿ ಹಾನಿ ಉಂಟುಮಾಡಿದೆ. ಲ್ಹೆಂಡೆ ಖೋಲಾ ನದಿಯ ಮೇಲ್ಭಾಗದಲ್ಲಿ ಇನ್ನೂ ನೀರಿನ ಹರಿವಿಗೆ ಅಡ್ಡಿಯಾಗಿರುವ ಅವಶೇಷಗಳಿರುವುದರಿಂದ ಮತ್ತೊಂದು ಪ್ರವಾಹ ಸಂಭವಿಸುವ ಸಾಧ್ಯತೆಯ ಬಗ್ಗೆಯೂ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಆದರೆ, ಪ್ರವಾಹಕ್ಕೆ ನಿಖರವಾಗಿ ಏನು ಕಾರಣ ಎಂಬುದು ಇನ್ನೂ ಖಚಿತವಾಗಿಲ್ಲ. ಬುಧವಾರ ಮುಂಜಾನೆ ಈ ಪ್ರದೇಶದಲ್ಲಿ 4.4 ತೀವ್ರತೆಯ ಭೂಕಂಪ ದಾಖಲಾಗಿದೆ. ಹೀಗಾಗಿ ಭೂಕಂಪದಿಂದ ಹಿಮ-ಕಲ್ಲಿನ ಕುಸಿತ ಸಂಭವಿಸಿತೇ ಎಂಬ ಸಾಧ್ಯತೆಯನ್ನೂ ತಜ್ಞರು ಪರಿಶೀಲಿಸುತ್ತಿದ್ದಾರೆ. ಹವಾಮಾನ ಹಾಗೂ ವಿಪತ್ತು ತಜ್ಞರು ಹಿಮ-ಕಲ್ಲಿನ ಆವಲಾಂಚ್‌ ಕೂಡ ಪ್ರವಾಹಕ್ಕೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ. ಸದ್ಯಕ್ಕೆ ಭೂಕಂಪವೇ ನೇರ ಕಾರಣ ಎಂದು ಹೇಳಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಈ ಪ್ರದೇಶದಲ್ಲಿ ಕಳೆದ 14 ತಿಂಗಳಲ್ಲಿ ಇದೇ ರೀತಿಯ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟನ್ ಡೆವಲಪ್‌ಮೆಂಟ್‌ನ ತಜ್ಞರ ಪ್ರಕಾರ, ಲ್ಹೆಂಡೆ ಖೋಲಾ ನದಿಯಲ್ಲಿ ಈ ಅವಧಿಯಲ್ಲಿ ಎರಡು ಬಾರಿ ಪ್ರವಾಹ ಉಂಟಾಗಿದೆ. ಕಳೆದ ವರ್ಷದ ಪ್ರವಾಹವು ಟಿಬೆಟ್‌ನಲ್ಲಿನ ಹಿಮನದಿ ಸರೋವರ ಉಕ್ಕಿ ಹರಿದ ಪರಿಣಾಮ ಸಂಭವಿಸಿತ್ತು. ವಿಪತ್ತು ಅಪಾಯ ಕಡಿತ ತಜ್ಞ ಸಶ್ವತ ಸನ್ಯಾಲ್ ಅವರ ಪ್ರಕಾರ, ಈ ಬಾರಿ ನೇಪಾಳ ಭಾಗದಲ್ಲಿರುವ ಹಿಮನದಿಯಿಂದ ಹಿಮ-ಕಲ್ಲಿನ ಕುಸಿತ ಸಂಭವಿಸಿ ನದಿಗೆ ತಾತ್ಕಾಲಿಕ ತಡೆ ಉಂಟಾಗಿದೆ. ಬಳಿಕ ಆ ತಡೆ ಒಡೆದು ಭಾರಿ ಪ್ರಮಾಣದ ನೀರು ಕೆಳಭಾಗಕ್ಕೆ ಏಕಾಏಕಿ ಹರಿದಿರಬಹುದು. ವೇಗವಾಗಿ ಬಿಸಿಯಾಗುತ್ತಿರುವ ಹಿಮಾಲಯದಲ್ಲಿ ಇಂತಹ ಘಟನೆಗಳನ್ನು ಎದುರಿಸಲು ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಎಚ್ಚರಿಸಿದ್ದಾರೆ.

ಈ ಭೀಕರ ದಿಢೀರ್ ಪ್ರವಾಹ ಮತ್ತು ಸರಣಿ ಭೂಸಸಿತಗಳಿಂದಾಗಿ 160ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಕಾಣೆಯಾಗಿದ್ದಾರೆ. ಈ ಪೈಕಿ ಕೈಲಾಸ ಮಾನಸಸರೋವರ ಯಾತ್ರೆಗೆ ತೆರಳಿದ್ದ 133 ಭಾರತೀಯರು ಕಾಣೆಯಾಗಿದ್ದು, ಇವರಲ್ಲಿ ತಮಿಳುನಾಡಿನ 37 ಯಾತ್ರಿಕರೂ ಸೇರಿದ್ದಾರೆ ಎಂದು‌ ತಿಳಿದುಬಂದಿದೆ. ಈ ಘಟನೆಯು ನೇಪಾಳದ ರಸುವಾ, ಧಾಡಿಂಗ್ ಹಾಗೂ ನುವಾಕೋಟ್ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ ಮತ್ತು ಮೂಲಸೌಕರ್ಯಗಳ ನಾಶಕ್ಕೆ ಕಾರಣವಾಗಿದೆ. ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ದಿಢೀರ್ ಪ್ರವಾಹ ಉಂಟಾಗಿ ನದಿಯ ದಂಡೆಯಲ್ಲಿದ್ದ ಇಡೀ ಗ್ರಾಮಗಳು, ಕಟ್ಟಡಗಳು ಹಾಗೂ ಜಲವಿದ್ಯುತ್ ಯೋಜನೆಗಳು ನೀರಿನಲ್ಲಿ ಕೊಚ್ಚಿಹೋಗಿವೆ.

ಕಾಣೆಯಾದ ಭಾರತೀಯರನ್ನು ಪತ್ತೆಹಚ್ಚಲು ಮತ್ತು ಸಂಕಷ್ಟದಲ್ಲಿರುವವರನ್ನು ರಕ್ಷಿಸಲು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೇಪಾಳ ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿವೆ. ಭಾರತವು 10 ಟನ್ ತುರ್ತು ಪರಿಹಾರ ಸಾಮಗ್ರಿಗಳು ಮತ್ತು ಔಷಧಿಗಳನ್ನು ಭಾರತೀಯ ವಾಯುಪಡೆಯ ಮೂಲಕ ಕಠ್ಮಂಡುವಿಗೆ ರವಾನಿಸಿದೆ. ತಮಿಳುನಾಡು ಸರ್ಕಾರವೂ ತನ್ನ ರಾಜ್ಯದ ಯಾತ್ರಿಕರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ನವದೆಹಲಿ ಮತ್ತು ನೇಪಾಳದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ.

ನೇಪಾಳದ ಸೇನೆ, ಪೊಲೀಸ್, ಸಶಸ್ತ್ರ ಪಡೆಗಳು ಹಾಗೂ ಚೀನಾದ ರಕ್ಷಣಾ ಸಿಬ್ಬಂದಿಗಳು ದುರಂತ ಪೀಡಿತ ಪ್ರದೇಶಗಳಲ್ಲಿ ಮಣ್ಣು ಮತ್ತು ರಾಡಿ ತೆರವುಗೊಳಿಸಿ ಕಾಣೆಯಾದವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಈ‌ ನಡುವೆ, ಮತ್ತೊಂದು ಪ್ರವಾಹದ ಭೀತಿಯೂ ಎದುರಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಇದನ್ನೂ ಓದಿ: ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: 160ಕ್ಕೂ ಹೆಚ್ಚು ಸಾವು, 133 ಭಾರತೀಯರು ನಾಪತ್ತೆ

ಹವಾಮಾನ ಬದಲಾವಣೆಯ ಪರಿಣಾಮವಾಗಿ ಹಿಂದೂಕುಶ್-ಹಿಮಾಲಯ ಪ್ರದೇಶದ ಹಿಮನದಿಗಳು ವೇಗವಾಗಿ ಕರಗುತ್ತಿವೆ. 2000ನೇ ಇಸವಿಯಿಂದ ಹಿಮನದಿಗಳ ಹಿಮ ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚಾಗಿರುವುದಾಗಿ ಹಲವು ಅಧ್ಯಯನಗಳು ಸೂಚಿಸಿವೆ. ಈ ದುರಂತದಲ್ಲಿ ನೇಪಾಳ ಮತ್ತು ಟಿಬೆಟ್‌ನಾದ್ಯಂತ ಹಲವರು ಮೃತಪಟ್ಟಿದ್ದು, ಭಾರತೀಯರು ಸೇರಿದಂತೆ ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ವಿದೇಶಿ ಪ್ರವಾಸಿಗರು, ಕಾರ್ಮಿಕರು ಮತ್ತು ಯಾತ್ರಿಕರೂ ನಾಪತ್ತೆಯಾದವರಲ್ಲಿ ಸೇರಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದರೂ, ಹಾನಿಗೊಳಗಾದ ರಸ್ತೆಗಳು, ಅಪಾರ ಪ್ರಮಾಣದ ಕೆಸರು ಮತ್ತು ಅಸ್ಥಿರ ಪರಿಸ್ಥಿತಿಗಳಿಂದ ರಕ್ಷಣಾ ತಂಡಗಳಿಗೆ ಸ್ಥಳಗಳನ್ನು ತಲುಪುವುದು ಸವಾಲಾಗಿದೆ.

ಹಿಮಾಲಯದ ಎತ್ತರದ ಪ್ರದೇಶದಲ್ಲಿ ಸಂಭವಿಸಿದ ಕೆಲವೇ ಕ್ಷಣಗಳ ಹಿಮನದಿ ಕುಸಿತವು ಕೆಳಭಾಗದಲ್ಲಿರುವ ಜನವಸತಿ ಪ್ರದೇಶಗಳಿಗೆ ಹೇಗೆ ಭೀಕರ ಜಲಪ್ರಳಯವಾಗಿ ಪರಿಣಮಿಸಬಹುದು ಎಂಬುದಕ್ಕೆ ನೇಪಾಳದ ಈ ದುರಂತ ಮತ್ತೊಂದು ಎಚ್ಚರಿಕೆಯಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುಪ್ರೀಂ ಆದೇಶ ಉಲ್ಲಂಘನೆ: ಕಾನೂನುಬಾಹಿರ ವಶಕ್ಕೆ ತಡೆ ಇದ್ದರೂ 100ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ!

ರಾಜಧಾನಿ ದೆಹಲಿಯಲ್ಲಿ ಕನ್ಹಾಟ್ ಪ್ಲೇಸ್ ಹಾಗೂ ಜಂತರ್ ಮಂತರ್ ಸುತ್ತಮುತ್ತ ನಡೆಯುತ್ತಿರುವ...

ಗ್ಯಾನೂ ವಿರುದ್ಧ ಪ್ರತಿಭಟನೆ: ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಬಂಧನ

ದೆಹಲಿಯಲ್ಲಿ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಭಾನುವಾರವೂ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿ, ಯುವತಿಯರ ಮೇಲೆ ಹಲ್ಲೆ; ನಾಲ್ವರು RSS ಗೂಂಡಾಗಳ ಬಂಧನ

ದೆಹಲಿಯಲ್ಲಿ ನಡೆದ 'ಕಾಕ್ರೋಚ್ ಜನತಾ ಪಾರ್ಟಿ' (CJP) ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು...