ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, “ಜನರ ಸಮಸ್ಯೆಗಳ ಪರಿಹಾರಕ್ಕೆ ಬರೆದ ಪತ್ರಗಳಿಗೆ ಜಿಲ್ಲಾಧಿಕಾರಿ ಲತಾಕುಮಾರಿ ಪ್ರತಿಕ್ರಿಯಿಸಿಲ್ಲ, ಇವರಿಗೇನು ಸ್ಪೆಷಲ್ ಕೋಡು ಇದೆಯೇ ಎಂದು ಡಿಸಿ ವಿರುದ್ಧ ದೂರಿದರು.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡುವ ದುಃರಂಕಾರದ ಧೋರಣೆಯ ಡೀಸಿ ವಿರುದ್ಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸ್ಪೀಕರ್‌ಗೆ ಪತ್ರ ಬರೆಯುವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ಡಿಸಿ ತಪ್ಪು ಮಾಡಿದ್ದರೆ ದಾಖಲೆ ಸಮೇತ ಆರೋಪ ಮಾಡಲಿ, ತನಿಖೆ ನಡೆಸಲಿ. ಆದರೆ, ರೇವಣ್ಣ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ ಎಂದರು.
ಲತಾಕುಮಾರಿ ಹಾಸನ ಜಿಲ್ಲಾಧಿಕಾರಿಯಾಗಿ ಬಂದ 15 ತಿಂಗಳಲ್ಲಿ ಒಂದೆರೆಡು ಬಾರಿ ಅವರ ಕಚೇರಿಗೆ ಹೋಗಿ ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ ಗಮನ ಸೆಳೆದೆ. ಅವರು ಸ್ಪಂದಿಸಲಿಲ್ಲ. ಆನಂತರ ನಾನು ಅವರ ಕಚೇರಿಗೆ ಹೋಗಿಲ್ಲ. ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳ ಮೀಸಲಾತಿ ನಿಗದಿಯಲ್ಲಿ ಲೋಪದೋಷವಿದೆ ಎಂದು ಹೇಳಲು ಕಳೆದ ಶುಕ್ರವಾರ ಅವರ ಕಚೇರಿಗೆ ಹೋದೆ. ಅವರು ಇರಲಿಲ್ಲ. ಅವರ ಆಪ್ತ ಸಹಾಯಕನ ಸಮ್ಮುಖದಲ್ಲಿಯೇ ಜಿಲ್ಲಾಧಿಕಾರಿಗೆ ಫೋನ್ ಮಾಡಿದೆ. ಫೋನ್ ರಿಸೀವ್ ಮಾಡಲಿಲ್ಲ. ಫೋನ್ ರಿಸೀವ್ ಮಾಡದಿದ್ದರೆ ಶಾಸಕನಾದ ನನಗೆ ನೋವಾಗುವುದಿಲ್ಲವೇ ? ಇಂತಹ ದುಃರಂಕಾರದ ಧೋರಣೆಯನ್ನು ಸಹಿಸಿಕೊಂಡು ಇರಬೇಕೇ ? ಜಿಲ್ಲಾ ಉಸ್ತುವಾರಿ ಸಚಿವರೇ ಹೇಳಲಿ, ಅವರ ಫೋನ್ ಗೆ ಪ್ರತಿಕ್ರಿಯಿಸದಿದ್ದರೆ ಏನ್ ಮಾಡ್ತಿದ್ದರು ಎಂದು ಪ್ರಶ್ನಿಸಿದರು.
ಒಮ್ಮೆ ಅಧಿಕಾರಿಗಳನ್ನು ಕರೆದುಕೊಂಡು ಜಿಲ್ಲಾಧಿಕಾರಿ ಲತಾಕುಮಾರಿ ಅವರ ಕಚೇರಿಗೆ ಹೋಗಿದ್ದೆ. ಸಮಸ್ಯೆಯನ್ನು ಅಧಿಕಾರಿಗಳೇ ಮನವರಿಕೆ ಮಾಡಿಕೊಡಲಿ ಎಂದು ಕರೆದುಕೊಂಡು ಹೋಗಿದ್ದ ಅಧಿಕಾರಿಗಳಿಗೆ ಏಕ ವಚನದಲ್ಲಿ ನಿಂದಿಸಿ ಕಚೇರಿಯಿಂದ ಆಚೆ ಕಳುಹಿಸಿದರು. ಯಾವ ಅಧಿಕಾರಿಗಳಿಗೂ ಡೀಸಿ ಗೌರವ ಕೊಡಲ್ಲ. ಬಹಳಷ್ಟು ಅಧಿಕಾರಿಗಳು, ನೌಕರರು ಡೀಸಿಯವರ ಧೋರಣೆಯಿಂದ ಬೇಸತ್ತು ಹೋಗಿದ್ದಾರೆ. ಬಹಳ ವರ್ಷಗಳಿಂದ ಡೀಸಿ ಪಿಎ ಆಗಿದ್ದ ಸುಬ್ರಹ್ಮಣ್ಯ ಎಂಬವರೂ ಇವರ ಕಿರುಕುಳದಿಂದ ಬೇಸತ್ತು ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾರೆ. ನಾನು ಹತ್ತಾರು ಪತ್ರಗಳನ್ನು ಬರೆದಿದ್ದೆನೆ ಯಾವ ಪತ್ರಕ್ಕೂ ಪ್ರತಿಕ್ರಿಯೆ ಇಲ್ಲ ಎಂದು ತಾವು ಬರೆದ ಪತ್ರಗಳನ್ನು ಸುದ್ದಿಗೋಷ್ಠೀಯಲ್ಲಿ ರೇವಣ್ಣ ತಿಳಿಸಿದರು.
ಅಧಿಕಾರಿಗಳನ್ನು ದಿನಗಟ್ಟಲೆ ಕೂರಿಸಿಕೊಂಡು ಮೀಟಿಂಗ್ ಮಾಡುವ ಡಿಸಿ ಜಿಲ್ಲೆಯ ಯಾವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿದ್ದಾರೆ ? ಹೇಮಾವತಿ, ಯಗಚಿ ಯೋಜನೆ ಭೂ ಸ್ವಾಧೀನದ ಪರಿಹಾರದಲ್ಲಿ ಸಾವಿರಾರು ಕೋಟಿ ರೂ. ಲೂಟಿಯಾಗುತ್ತಿದೆ ಎಂದು ಹಿಂದಿ ಡೀಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು . ಅದರ ಬಗ್ಗೆ ಈ ಡೀಸಿ ಏನು ಕ್ರಮ ಕೈಗೊಂಡಿದ್ದಾರೆ ಎಂದು ರೇವಣ್ಣ ಅವರು ಪ್ರಶ್ನಿಸಿದರು.
ಗ್ರಾಪಂ ಸದಸ್ಯ ಸ್ಥಾನಗಳ ಮೀಸಲು ನಿಗದಿಯಲ್ಲಿ ತಹಸೀಲ್ದಾರರಿಗೆ ಅಧಿಕಾರವಿಲ್ಲ ಎಂದು ಹೇಳುವ ಡೀಸಿ ಅವರು ಮೀಸಲಾತಿ ನಿಗದಿಪಡಿಸಿ ಜುಲೈ 15 ರೊಳಗೆ ವರದಿ ಸಲ್ಲಿಸಿ ಎಂದು ಏಕೆ ಸುತ್ತೋಲೆ ಹೊರಡಿಸಿದರು ಎಂದು ಪ್ರಶ್ನಿಸಿದ ರೇವಣ್ಣ, ಸಂಸದರ ಸೂಚನೆಯಂತೆ ಮೀಸಲಾತಿ ನಿಗದಿಪಡಿಸಬೇಕು ಎಂದು ಹಿರಿಯ ಅಧಿಕಾರಿಗಳ ನಿರ್ದೇಶನವಿದೆ ಎಂದು ಹಾಸನ ತಹಸೀಲ್ದಾರರೇ ನನಗೆ ಹೇಳಿದರು ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಸೈಬರ್ ಪ್ರಕರಣ; ಲಕ್ಷಾಂತರ ಹಣ ದೋಚಿದ ವಂಚಕರು
ಡೀಸಿಯವರು ಮೋಟರ್ ಬೈಕ್, ಜೀಪ್ ಓಡಿಸಲಿ, ಆದರೆ ಅವು ಹಳ್ಳಿಗಳ ಕಡೆಗೆ, ಬಡವರ ಕಡೆಗೆ ತಿರುಗಲಿ, ಶಾಸಕರು ಹೇಗೆ ಮಾತಾಡಬೇಕು ಎಂಬುದ ಬಗ್ಗೆ ಜಿಲ್ಲಾ ಮಂತ್ರಿಯವರ ಸಮ್ಮುಖದಲ್ಲಿಯೇ ಡೀಸಿಯವರು ಶಾಸಕರಿಗೆ ತರಬೇತಿ ನೀಡಲಿ. ಹಾಸನದ ಸಂಸದರೂ ಡೀಸಿ ಪರ ಮಾತನಾಡಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಅವರು ಯುವಕರಿದ್ದಾರೆ ಅವರ ಮಾರ್ಗದರ್ಶನದಲ್ಲೇ ನಾವು ನಡೆಯುತ್ತೇವೆ., ಜಿಲ್ಲೆಯ ಅಭಿವೃದ್ಧಿ ಕೆಲಸಗಳಾದರೆ ಸಾಕು ಎಂದು ರೇವಣ್ಣ ವ್ಯಂಗ್ಯ ಮಾಡಿದ್ದಾರೆ.




