ನಾನು ಹೆದರಿ ಓಡಿ ಹೋಗಲ್ಲ; ನಮ್ಮವರೂ ಶಾಂತಿ ಭಂಗ ಮಾಡಲ್ಲ : ಡಾ ಜಿ ಪರಮೇಶ್ವರ್

Date:

  • ಕಲ್ಲಿನೇಟಿನಿಂದ ಗಾಯಗೊಂಡಿದ್ದ ಜಿ ಪರಮೇಶ್ವರ್
  • ಪತ್ರಿಕಾಗೋಷ್ಠಿಯಲ್ಲಿ ನಡೆದ ಘಟನೆ ಬಗ್ಗೆ ಮಾಹಿತಿ

ನಾನು ಹೆದರಿ ಓಡಿಹೋಗಲ್ಲ; ನಮ್ಮ ಕಾರ್ಯಕರ್ತರೂ ಶಾಂತಿ ಭಂಗ ಮಾಡಲ್ಲ ಇದು ಶುಕ್ರವಾರ ಚುನಾವಣಾ ಪ್ರಚಾರದ ವೇಳೆ ಕಲ್ಲೇಟಿನಿಂದ ಗಾಯಗೊಂಡಿದ್ದ ಜಿ ಪರಮೇಶ್ವರ್ ಹೇಳಿರುವ ಮಾತು.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದೆ. ಅಭಿಮಾನಿಗಳು ಹಾರಹಾಕಲು ನನ್ನನ್ನು ಮೇಲೆತ್ತಲು ಬಂದರು. ಆ ವೇಳೆ ನಾನು ಮೇಲಕ್ಕೆ ಎತ್ತಬೇಡಿ ಎಂದೆ. ಆದರೂ ಕಾರ್ಯಕರ್ತರು ಎತ್ತುಕೊಂಡರು. ಜೆಸಿಬಿ ಮೂಲಕ ಹೂ ಹಾಕಲು ಮುಂದಾದರು.

ಈ ವೇಳೆ ತಕ್ಷಣ ತಲೆಗೆ ಏನೋ ಬಡಿದ ಹಾಗೆ ಆಯಿತು. ಕೆಂಪು ಹೂವು ಆಗಿದ್ದರಿಂದ ಯಾರಿಗೂ ಏನು ಅಂತಾ ಗೊತ್ತಾಗಲಿಲ್ಲ ತಲೆಗೆ ಕಲ್ಲು ಬೀಳುತ್ತಿದ್ದಂತೆ ಜೋರಾಗಿ ಕೂಗಿದೆ. ನಂತರ ಕೆಳಗೆ ಇಳಿಸಿದರು. ಆನಂತರ ಆಸ್ಪತ್ರೆಗೆ ತೆರಳಿದೆ. ಅಕ್ಕಿರಾಂಪುರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಬಂದೆ. ಹೂವಿನಲ್ಲಿ ಕಲ್ಲು ಬಂದಿರುವುದಿಲ್ಲ, ಯಾರೋ ದುಷ್ಕರ್ಮಿಗಳು ಕಲ್ಲು ಹಾಕಿರಬೇಕು ಎಂದು ಮಾಜಿ ಡಿಸಿಎಂ ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮುಂದೆ ವೈದ್ಯರ ಬಳಿ ಚರ್ಚಿಸಿ ಪ್ರಚಾರಕ್ಕೆ ಹೋಗುತ್ತೇನೆ. ನನಗೆ ಯಾವುದೇ ತೊಂದರೆಯಾದ್ರೂ ತಲೆಕೆಡಿಸಿಕೊಳ್ಳಲ್ಲ. ಹೆದರಿಕೊಂಡು ಓಡಿಹೋಗಲ್ಲ. ಎಲ್ಲವನ್ನೂ ಎದುರಿಸುತ್ತೇನೆ ಎಂದರು.

ನನ್ನ ಆರೋಗ್ಯದ ಬಗ್ಗೆ ಡಿ ಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ಧರಾಮಯ್ಯ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಇತ್ತ ಶಾಂತಿಯಿಂದ ಚುನಾವಣೆ ಎದುರಿಸುವಂತೆ ನಾನು ನನ್ನ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ ಎಂದು ಪರಮೇಶ್ವರ್ ಹೇಳಿದರು.

ಘಟನೆ ಬಗ್ಗೆ ತನಿಖೆ ಮಾಡಲು ತುಮಕೂರು ಎಸ್ಪಿಗೆ ಸೂಚಿಸಿದ್ದೇನೆ. 1999ರಲ್ಲಿ ನನಗೆ ಚಾಕುವಿನಿಂದ ಚುಚ್ಚಲು ಪ್ರಯತ್ನಿಸಿದ್ದರು. ಪದೇ ಪದೇ ಇಂತಹ ಘಟನೆಗಳು ಯಾಕೆ ನನ್ನ ವಿರುದ್ಧ ಆಗುತ್ತಿವೆಯೋ ಗೊತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ?:ಬಂಗಾರಪೇಟೆ | ಸಂಸದ ಮುನಿಸ್ವಾಮಿ ನಾಲಿಗೆಗೂ ಬ್ರೈನ್‌ಗೂ ಕನೆಕ್ಷನ್ನೇ…

ಬಳಿಕ ತಮ್ಮ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಜೆಡಿಎಸ್‌ ಮುಖಂಡ ಎಚ್‌ ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಮಾಜಿ ಡಿಸಿಎಂ, ಕುಮಾರಸ್ವಾಮಿಗೆ ಡ್ರಾಮಾ ಮಾಡಿ ಅಭ್ಯಾಸ ಇರಬೇಕು ಅದಕ್ಕೆ ಹಾಗೆ ಹೇಳಿದ್ದಾರೆ.

ನನಗೆ ಡ್ರಾಮಾ ಮಾಡುವ ಅಗತ್ಯವಿಲ್ಲ, ಏಟು ತಿಂದಿರೋನು ನಾನು, ಒಂದೂವರೆ ಇಂಚು ಗಾಯವಾಗಿದೆ, ಸರ್ಜಿಕಲ್ ಬ್ಲ್ಯೂ ಹಾಕಲಾಗಿದೆ. ಡಾಕ್ಟರ್ ಅನುಮತಿ ಕೊಟ್ಟರೆ ನಾಳೆಯಿಂದಲೇ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ. ಜನರ ಮುಂದೆ ಹೋಗುತ್ತೇನೆ, ಜನರ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.

ಪರಮೇಶ್ವರ್​ ಮೇಲೆ ಕಲ್ಲೆಸೆತ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇದೊಂದು ನಾಟಕ ಎಂದಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮನೆ ಕಳೆದುಕೊಂಡವರಿಗೆ ಕಾಂಗ್ರೆಸ್ ಸರಕಾರ ಹೆಚ್ಚಿನ ಪರಿಹಾರ ಕೊಡಲಿ: ವಿಜಯೇಂದ್ರ ಆಗ್ರಹ

ನೆರೆಪೀಡಿತರು ಮತ್ತು ಮನೆ ಕಳೆದುಕೊಂಡವರಿಗೆ ಹಿಂದಿನ ಬಿಜೆಪಿ ಸರಕಾರ ಸ್ಪಂದಿಸಿದ ಮಾದರಿಯಲ್ಲಿ...

ಹಿರಿಯ ಪತ್ರಕರ್ತ ಶಶಿಧರ ಭಟ್‌ ಅವರ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿದೆ: ಸಿಎಂ ಸಿದ್ದರಾಮಯ್ಯ

ಹಿರಿಯ ಪತ್ರಕರ್ತ ಶಶಿಧರ ಭಟ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಮೈಸೂರಿನ‌...

ಗಂಗಾರತಿ‌ ಮಾದರಿಯಲ್ಲೇ ಕೆಆರ್​ಎಸ್ ಜಲಾಶಯದಲ್ಲಿ ಕಾವೇರಿ ಆರತಿ ಕಾರ್ಯಕ್ರಮ: ಡಿ ಕೆ ಶಿವಕುಮಾರ್‌

ಗಂಗಾರತಿ‌ ಮಾದರಿಯಲ್ಲೇ ಕೆಆರ್​ಎಸ್ ಜಲಾಶಯದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು...