ಸರ್ಕಾರಿ ಲಾಂಛನವಿರುವ ಕಾರಿನಲ್ಲಿ ಸಚಿವರ ಪುತ್ರಿ ಸಂಚಾರ; ಸಾರ್ವಜನಿಕರಿಂದ ಟೀಕೆ

Date:

  • ಸಚಿವರ ಪುತ್ರಿಯಿಂದ ಸರ್ಕಾರಿ ಕಾರು ದುರ್ಬಳಕೆ ಆರೋಪ
  • ಮಗಳಿಗೆ ಎಚ್ಚರಿಕೆ ನೀಡಲಾಗುವುದು; ಸಚಿವ ಶಿವಾನಂದ ಪಾಟೀಲ್

ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರ ಪುತ್ರಿ ಸಂಯುಕ್ತಾ ಪಾಟೀಲ್ ಅವರು ತಮ್ಮ ತಂದೆಗೆ ನೀಡಿರುವ ಸರ್ಕಾರಿ ಕಾರಿನಲ್ಲಿ ಕುಳಿತು ಬೆಂಗಳೂರಿನಲ್ಲಿ ಸಂಚರಿಸಿರುವುದನ್ನು ನೋಡಿ ಸಾರ್ವಜನಿಕರು ಟೀಕೆ ಮಾಡಿದ್ದಾರೆ.

ಈ ಘಟನೆ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸಚಿವರು ಪ್ರತಿಕ್ರಿಯೆ ನೀಡಿ, ತಮ್ಮ ಪುತ್ರಿಗೆ ಎಚ್ಚರಿಕೆ ನೀಡುವುದಾಗಿ ತಿಳಿಸಿದ್ದಾರೆ.

ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಪಡೆದಿರುವ ಸಚಿವ ಶಿವಾನಂದ ಪಾಟೀಲ್ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ಸಹಜವಾಗಿ ಸಿಗುವ ಎಲ್ಲ ಸೌಲಭ್ಯಗಳ ಜೊತೆಗೆ ಅವರ ಸಂಚಾರಕ್ಕಾಗಿ ಐಶಾರಾಮಿ ಕಾರೊಂದನ್ನು ನೀಡಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಿಯಮಗಳ ಪ್ರಕಾರ, ಸಚಿವರು ಸಹ ಸರ್ಕಾರಿ ನೌಕರರ ಸಾಲಿಗೆ ಸೇರುತ್ತಾದ್ದರಿಂದ ಸರ್ಕಾರದ ಕಾರನ್ನು ಅವರು ಮಾತ್ರ ಬಳಸಬೇಕು. ಬೇರೆಯವರು ಬಳಸಬಾರದು ಅಥವಾ ತಮಗೆ ನೀಡಲಾಗಿರುವ ಸೌಕರ್ಯಗಳನ್ನು ಬಳಸುವಂತೆ ಬೇರೆಯವರಿಗೆ ನೀಡಲೂಬಾರದು.

ಸಚಿವರ ಪುತ್ರಿ ಸಂಯುಕ್ತಾ ಪಾಟೀಲ್ ಅವರು ತಮ್ಮ ತಂದೆಗೆ ನೀಡಿರುವ ಸರ್ಕಾರಿ ಕಾರಿನಲ್ಲಿ ಕುಳಿತು, ಬೆಂಗಳೂರಿನ ಸದಾಶಿವ ನಗರದಲ್ಲಿ ಸಂಚರಿಸಿದ್ದಾರೆ. ಡ್ರೈವರ್ ಕಾರು ಚಲಾಯಿಸುತ್ತಿದ್ದರೆ, ಅವರ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಸಂಯುಕ್ತಾ ಅವರು, ತಮ್ಮ ಆಸನದ ಕಿಟಕಿ ಗಾಜನ್ನು ಇಳಿಸಿ, ನಗರ ಸೌಂದರ್ಯ ನೋಡುತ್ತಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದುದನ್ನು ಸಾರ್ವಜನಿಕರು ನೋಡಿದ್ದಾರೆ.

ಕಾರಿನ ಮುಂದೆ ಕರ್ನಾಟಕ ಸರ್ಕಾರದ ಲಾಂಛನ ನೋಡಿ, ಕಾರಿನೊಳಗೆ ಸಚಿವರು ಇಲ್ಲದಿರುವುದನ್ನು ಗಮನಿಸಿ ತಮ್ಮ ಮೊಬೈಲ್ ಗಳಿಂದ ಸಚಿವರ ಪುತ್ರಿಯು ಕಾರಿನಲ್ಲಿ ರೌಂಡ್ಸ್ ಹೊಡೆಯುತ್ತಿರುವುದನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಚಿವರ ಪುತ್ರಿಯ ಈ ನಡೆಯುನ್ನು ಟೀಕಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಖಾಲಿ ಹುದ್ದೆ ಭರ್ತಿಗೆ ಮುಂದಾದ ಗೃಹ ಇಲಾಖೆ; ಮುಂದಿನ ವಾರದಲ್ಲಿ ನೂತನ ನೇಮಕಾತಿ

ಮಗಳಿಗೆ ಎಚ್ಚರಿಕೆ ನೀಡುತ್ತೇನೆ: ಸಚಿವ

ತಮ್ಮ ಪುತ್ರಿಯ ಬಗ್ಗೆ ಕೇಳಿಬಂದಿರುವ ಟೀಕೆಗಳಿಗೆ ಸಚಿವ ಶಿವಾನಂದ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, “ಸರ್ಕಾರ ಕೊಟ್ಟಿರುವ ಅಧಿಕೃತ ಕಾರು ನನ್ನ ಬಳಿಯೇ ಇದೆ. ಬೋರ್ಡ್ ಇರುವ ಕಾರು ಬೆಂಗಳೂರಿನಲ್ಲಿದೆ. ಆ ಕಾರನ್ನು ಸಹ ನನ್ನ ಮಗಳು ಉಪಯೋಗಿಸಬಾರದು. ಅವರು ಯಾವ ಸಂದರ್ಭದಲ್ಲಿ ಅದನ್ನು ಉಪಯೋಗಿಸಿದ್ದಾರೋ ನನಗೆ ಗೊತ್ತಿಲ್ಲ. ನಾನು ಆ ಬಗ್ಗೆ ಮಾಹಿತಿ ಪಡೆಯುತ್ತೇನೆ. ನನ್ನ ಕಾರನ್ನು ಬಳಸಬಾರದೆಂದು ಮಗಳಿಗೆ ಎಚ್ಚರಿಕೆ ನೀಡುತ್ತೇನೆ” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮನೆ ಕಳೆದುಕೊಂಡವರಿಗೆ ಕಾಂಗ್ರೆಸ್ ಸರಕಾರ ಹೆಚ್ಚಿನ ಪರಿಹಾರ ಕೊಡಲಿ: ವಿಜಯೇಂದ್ರ ಆಗ್ರಹ

ನೆರೆಪೀಡಿತರು ಮತ್ತು ಮನೆ ಕಳೆದುಕೊಂಡವರಿಗೆ ಹಿಂದಿನ ಬಿಜೆಪಿ ಸರಕಾರ ಸ್ಪಂದಿಸಿದ ಮಾದರಿಯಲ್ಲಿ...

ಹಿರಿಯ ಪತ್ರಕರ್ತ ಶಶಿಧರ ಭಟ್‌ ಅವರ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿದೆ: ಸಿಎಂ ಸಿದ್ದರಾಮಯ್ಯ

ಹಿರಿಯ ಪತ್ರಕರ್ತ ಶಶಿಧರ ಭಟ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಮೈಸೂರಿನ‌...

ಗಂಗಾರತಿ‌ ಮಾದರಿಯಲ್ಲೇ ಕೆಆರ್​ಎಸ್ ಜಲಾಶಯದಲ್ಲಿ ಕಾವೇರಿ ಆರತಿ ಕಾರ್ಯಕ್ರಮ: ಡಿ ಕೆ ಶಿವಕುಮಾರ್‌

ಗಂಗಾರತಿ‌ ಮಾದರಿಯಲ್ಲೇ ಕೆಆರ್​ಎಸ್ ಜಲಾಶಯದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು...