ಮುಂದಿನ 36 ಗಂಟೆಗಳಲ್ಲಿ ಬಿಪೊರ್‌ಜಾಯ್‌ ಚಂಡಮಾರುತ ತೀವ್ರ ಸ್ವರೂಪ: ಐಎಂಡಿ

Date:

ಮುಂದಿನ 36 ಗಂಟೆಗಳಲ್ಲಿ ಬಿಪೊರ್‌ಜಾಯ್‌ ಚಂಡಮಾರುತ ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ (ಜೂನ್ 9) ಹೇಳಿದೆ.

ಈ ಕುರಿತು ಐಎಂಡಿ ಟ್ವೀಟ್‌ ಮಾಡಿದ್ದು, ಮುಂದಿನ ಎರಡು ದಿನಗಳಲ್ಲಿ ಉತ್ತರ-ವಾಯವ್ಯ ದಿಕ್ಕಿನತ್ತ ಬಿಪೊರ್‌ಜಾಯ್ ಚಂಡಮಾರುತ ಚಲಿಸಲಿದೆ ಎಂದು ತಿಳಿಸಿದೆ.

“ಜೂನ್ 8ರಂದು ರಾತ್ರಿ 11.30 ಗಂಟೆ ಹೊತ್ತಿಗೆ ಗೋವಾದ ಪಶ್ಚಿಮ-ನೈರುತ್ಯಕ್ಕೆ 840 ಕಿಲೋಮೀಟರ್ ಮತ್ತು ಮುಂಬೈನಿಂದ ಪಶ್ಚಿಮ-ನೈರುತ್ಯಕ್ಕೆ 870 ಕಿಮೀ ದೂರದಲ್ಲಿ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ನೆಲೆಗೊಂಡಿರುವ ಅತ್ಯಂತ ತೀವ್ರವಾದ ಬಿಪೊರ್‌ಜಾಯ್‌ ಚಂಡಮಾರುತ ಮುಂದಿನ 36 ಗಂಟೆಗಳಲ್ಲಿ ಕ್ರಮೇಣವಾಗಿ ಮತ್ತಷ್ಟು ತೀವ್ರ ಸ್ವರೂಪ ಪಡೆಯಲಿದೆ. ಬಳಿಕ ಇದು ಮುಂದಿನ 2 ದಿನ ಉತ್ತರ-ವಾಯವ್ಯ ದಿಕ್ಕಿನತ್ತ ಚಲಿಸುತ್ತದೆ” ಎಂದು ಐಎಂಡಿ ಟ್ವೀಟ್‌ನಲ್ಲಿ ತಿಳಿಸಿದೆ.

ಬಿಪೊರ್‌ಜಾಯ್‌ ಚಂಡಮಾರುತವಿರುವ ಅರಬ್ಬೀ ಸಮುದ್ರದ ಪ್ರದೇಶಗಳಿಗೆ ತೆರಳದಂತೆ ಐಎಂಡಿ ಮೀನುಗಾರರಿಗೆ ಸೂಚಿಸಿದೆ.

ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ದೇವಸ್ಥಾನದ ವಿಗ್ರಹಗಳನ್ನು ಧ್ವಂಸ ಮಾಡಿದ್ದ ನಾಲ್ವರ ಬಂಧನ

ಸಮುದ್ರದಲ್ಲಿ ಇರುವವರಿಗೆ ಕರಾವಳಿಗೆ ಮರಳಲು ಸೂಚಿಸಲಾಗಿದೆ ಎಂದು ಹವಾಮಾನ ಇಲಾಖೆ ಈ ಮೊದಲು ನೀಡಿದ್ದ ಪ್ರಕಟಣೆಯಲ್ಲಿ ತಿಳಿಸಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅ.4ರಿಂದ ಮತ್ತೆ ಚುನಾವಣಾ ಬಾಂಡ್: ‘ಬಿಜೆಪಿಗೆ ಚಿನ್ನದ ಫಸಲು’ ಎಂದ ಪಿ ಚಿದಂಬರಂ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿವಾದಾತ್ಮಕ ಚುನಾವಣಾ ಬಾಂಡ್‌ಗಳನ್ನು ವಿತರಣೆ...

ಸಾರ್ವಜನಿಕ ಕಾರ್ಯಕ್ರಮದಲ್ಲಿ ಶಾಸಕಿಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ ಬಿಜೆಪಿ ಸಂಸದ ಸತೀಶ್ ಗೌತಮ್

ಉತ್ತರ ಪ್ರದೇಶದ ಬಿಜೆಪಿ ಸಂಸದ ಸತೀಶ್ ಗೌತಮ್ ಸಾರ್ವಜನಿಕ ಕಾರ್ಯಕ್ರಮವೊಂದರ ವೇದಿಕೆಯಲ್ಲೇ...

ದೆಹಲಿ | ಆಝಾದ್‌ಪುರ ಮಂಡಿಯಲ್ಲಿ ಭೀಕರ ಬೆಂಕಿ ಅವಘಡ

ಟೊಮ್ಯಾಟೋ ಬೆಲೆ ಏರಿಕೆ ಸಂದರ್ಭದಲ್ಲಿ ತರಕಾರಿ ಕೊಂಡುಕೊಳ್ಳಲಾಗದೆ ವ್ಯಾಪಾರಿ ರಾಮೇಶ್ವರ್‌ ಅವರ...

ಪಿಟಿಐ ಅಧ್ಯಕ್ಷರಾಗಿ ‘ಪ್ರಜಾವಾಣಿ’ಯ ನಿರ್ದೇಶಕ ಕೆ ಎನ್ ಶಾಂತಕುಮಾರ್ ಆಯ್ಕೆ

ದೇಶದ ಖ್ಯಾತ ಸುದ್ದಿ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ(ಪಿಟಿಐ)ದ...