ಜಮ್ಮು-ಕಾಶ್ಮೀರ ಮಿಲಿಟರೀಕೃತ ರಾಜ್ಯವಾಗಿ ಮಾರ್ಪಟ್ಟಿದೆ: ಮೆಹಬೂಬಾ ಮುಫ್ತಿ

Date:

“ಕೇಂದ್ರ ಸರ್ಕಾರವು ಜಿ20 ಲಾಂಛನವನ್ನು ಬದಲಿಸಿದೆ. ಲಾಂಛನದಲ್ಲಿ ಕಮಲವನ್ನು ಸೇರಿಸಿದೆ. ಕಾಶ್ಮೀರವು ಸಹಜ ಸ್ಥಿತಿಗೆ ಮರಳಿದೆ ಎಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಚಾರ ಪಡೆದುಕೊಳ್ಳುತ್ತಿದೆ. ಆದರೆ, ಕಣಿವೆ ರಾಜ್ಯವು ಮಿಲಿಟರೀಕೃತ ರಾಜ್ಯವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಸಚಿವ ಪ್ರಮಾಣವಚನ ಕಾರ್ಯಕ್ರಮಕ್ಕಾಗಿ ಮುಫ್ತಿ ಬೆಂಗಳೂರಿಗೆ ಬಂದಿದ್ದರು. ಅವರೊಂದಿಗೆ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮ ಸಂವಾದ ಏರ್ಪಡಿಸಲಾಗಿತ್ತು. ಸಂವಾದದಲ್ಲಿ ಮಾತನಾಡಿದ ಅವರು ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಮೋದಿ ಸರ್ಕಾರ ಎಸಗುತ್ತಿರುವ ಧೋರಣೆಗಳ ವಿರುದ್ಧ ಕಿಡಿಕಾರಿದರು.

ಕಾಶ್ಮೀರದ ಶ್ರೀನಗರದಲ್ಲಿ ಇಂದಿನಿಂದ (ಮೇ 22) ಮೂರು ದಿನಗಳ ಕಾಲ ಜಿ20 ಶೃಂಗಸಭೆ ನಡೆಯಲಿದೆ. ಆ ಬಗ್ಗೆ ಮಾತನಾಡಿದ ಮುಫ್ತಿ, “ಜಿ20 ಲೋಗೋವನ್ನು ದೇಶಕ್ಕೆ ಸಂಬಂಧಿಸಿದ ಯಾವುದನ್ನಾದರೂ ಚಿಹ್ನೆಯನ್ನು ಅಳವಡಿಸಬೇಕೆ ಹೊರತು, ಪಕ್ಷದ ಚಿಹ್ನೆಯನ್ನಲ್ಲ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಕಾಶ್ಮೀರಕ್ಕೆ ಸಂಬಂಧಿಸಿದಂತೆ ಮೋದಿಯವರ ನಿರ್ಧಾರಗಳು ಚೀನಾದ ಹಸ್ತಕ್ಷೇಪಕ್ಕೆ ಕಾರಣವಾದವು. ಕಣಿವೆಯ ಸಮಸ್ಯೆಗಳಿಗೆ ಸಾರ್ಕ್ ಕೆಲವು ಪರಿಹಾರಗಳನ್ನು ಕಂಡುಕೊಳ್ಳಬೇಕು” ಎಂದು ಅವರು ಆಶಿಸಿದರು.

“ರಾಜ್ಯಕ್ಕೆ 370ನೇ ವಿಧಿಯಡಿ ವಿಶೇಷ ಸ್ಥಾನಮಾನವನ್ನು ಮರಳಿ ನೀಡುವವರೆಗೆ ನಾನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ” ಎಂದು ಅವರು ಪುನರುಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ?: ಕೇಜ್ರಿವಾಲ್ ನಿಯಂತ್ರಿಸಲು ‘ಸುಪ್ರೀಂ’ ಆದೇಶ ಧಿಕ್ಕರಿಸಿ ಸುಗ್ರೀವಾಜ್ಞೆ ಹೊರಡಿಸಿದ ಮೋದಿ ಸರ್ಕಾರ

“ಇಂದು, ಜಮ್ಮು ಮತ್ತು ಕಾಶ್ಮೀರವು ಅತ್ಯಂತ ಮಿಲಿಟರೀಕೃತ ರಾಜ್ಯವಾಗಿದೆ. ವಿಶೇಷವಾಗಿ, ಜಿ20 ಶೃಂಗಸಭೆಯ ಈ ಹೊತ್ತಿನಲ್ಲಿ ತಪಾಸಣೆ ಮತ್ತು ಭದ್ರತೆಯ ಹೆಸರಿನಲ್ಲಿ ಕಿರುಕುಳ ನೀಡಲಾಗುತ್ತಿದೆ. ಕಣಿವೆಯಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಗಮನ ಸೆಳೆಯಲು ನಾನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಇತರರೊಂದಿಗೆ ಮಾತನಾಡಿದ್ದೇನೆ” ಎಂದು ಅವರು ಹೇಳಿದರು.

“ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ದೆಹಲಿ ಸರ್ಕಾರವನ್ನು ನಿಯಂತ್ರಿಸಲು ಮುಂದಾಗಿದೆ. ಅದನ್ನೇ ಇತರ ರಾಜ್ಯ ಸರ್ಕಾರಗಳ ಮೇಲೂ ಮಾಡಬಹುದು. ಹೀಗಾಗಿ, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಡುವುದು ಅಗತ್ಯವಾಗಿದೆ” ಎಂದು ಎಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ?: ಪ್ರಧಾನಿ ಮೋದಿ ಜಪಾನ್‌ಗೆ ಹೋದಾಗಲೆಲ್ಲ ಭಾರತದಲ್ಲಿ ನೋಟು ನಿಷೇಧ: ಖರ್ಗೆ ಆರೋಪ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇಶದ ಆರ್ಥಿಕತೆ ಕುಸಿತ ಮೋದಿಯವರ ಸಾಧನೆ: ಸಿಎಂ ಸಿದ್ದರಾಮಯ್ಯ

"ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ರೈತರ ಆದಾಯ ಕುಸಿತ, ನಿರುದ್ಯೋಗ...

ಬೀದರ್‌ | ಕಾಂಗ್ರೆಸ್‌ನವರು ನಪುಂಸಕರು, ಷಂಡರು : ಬಿಜೆಪಿ ಮುಖಂಡ ಎಸ್.ಕೆ.ಬೆಳ್ಳುಬ್ಬಿ

ಕಾಂಗ್ರೆಸ್‌ನವರು ನಪುಂಸಕರು, ಷಂಡರು ಎಂದು ಬಿಜೆಪಿ ಮುಖಂಡ ಎಸ್.ಕೆ.ಬೆಳ್ಳುಬ್ಬಿ ಹೇಳಿಕೆ ನೀಡಿದ್ದಾರೆ.ಬೀದರ್‌...

ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಕೊಲ್ಲಲು ಸಂಚು: ಎಎಪಿ ಗಂಭೀರ ಆರೋಪ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರನ್ನು ಕೊಲ್ಲಲು ಸಂಚು ನಡೆಯುತ್ತಿದೆ ಎಂದು...

ಸೋಲಿನ ಭೀತಿಯಿಂದ ಐಟಿ, ಇಡಿ ಮೂಲಕ ನಮ್ಮನ್ನು ಬೆದರಿಸುವ ಪ್ರಯತ್ನ ನಡೆಯುತ್ತಿದೆ: ಡಿ.ಕೆ. ಸುರೇಶ್ ಆಕ್ರೋಶ

"ಬಿಜೆಪಿ ಹಾಗೂ ಮಾಜಿ ಪ್ರಧಾನಿಗಳ ಕೈಗೊಂಬೆಯಾಗಿರುವ ಐಟಿ ಅಧಿಕಾರಿಗಳು ನಮ್ಮ ಕಾರ್ಯಕರ್ತರ...