ರಾಜಕೀಯ ಪಕ್ಷಗಳ ವಿರೋಧ; ರಿಮೋಟ್ ಮತದಾನ ರದ್ದುಗೊಳಿಸಿದ ಚುನಾವಣಾ ಆಯೋಗ

Date:

  • ರಿಮೋಟ್ ಮತದಾನ ಯಂತ್ರಗಳನ್ನು ಜಾರಿಗೆ ತರುವ ಪ್ರಸ್ತಾಪ ಸದ್ಯಕ್ಕೆ ರದ್ದು
  • ಡಿಸೆಂಬರ್‌ನಲ್ಲಿ ರಿಮೋಟ್ ಮತದಾನ ಯೋಜನೆ ಘೋಷಿಸಿದ್ದ ಆಯೋಗ

ಹಲವು ರಾಜಕೀಯ ಪಕ್ಷಗಳು ವಿರೋಧದ ನಂತರ ಚುನಾವಣೆಯಲ್ಲಿ ರಿಮೋಟ್ ಮತದಾನ ಯಂತ್ರಗಳನ್ನು ಜಾರಿಗೆ ತರುವ ಪ್ರಸ್ತಾಪವನ್ನು ಸದ್ಯಕ್ಕೆ ರದ್ದುಗೊಳಿಸಲು ಭಾರತದ ಚುನಾವಣಾ ಆಯೋಗ ನಿರ್ಧರಿಸಿದೆ.

ದೂರದ ಕ್ಷೇತ್ರಗಳಲ್ಲಿ ಮನೆ ಇರುವವರಿಗೆ ತಮ್ಮ ಹತ್ತಿರದ ಪ್ರದೇಶದ ಕ್ಷೇತ್ರದಿಂದಲೇ ಮತ ಚಲಾಯಿಸಲು ಸಹಾಯ ಮಾಡುವ ಈ ರಿಮೋಟ್ ಮತದಾನ ಯೋಜನೆಯನ್ನು ಬಹುತೇಕ ರಾಜಕೀಯ ಪಕ್ಷಗಳು ವಿರೋಧಿಸಿದ ನಂತರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ರಿಮೋಟ್ ಮತದಾನ ಯಂತ್ರಗಳನ್ನು ಜಾರಿಗೆ ತರುವ ಸಂಬಂಧ ಚುನಾವಣಾ ಆಯೋಗವು 60 ರಾಷ್ಟ್ರೀಯ ಮತ್ತು ರಾಜ್ಯ ಮಾನ್ಯತೆ ಪಡೆದ ಪಕ್ಷಗಳಿಂದ ಪ್ರತಿಕ್ರಿಯೆಗಳನ್ನು ಕೋರಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಡಿಸೆಂಬರ್‌ನಲ್ಲಿ ಚುನಾವಣಾ ಸಮಿತಿ ರಿಮೋಟ್ ಮತದಾನ ಯೋಜನೆಯನ್ನು ಮೊದಲು ಘೋಷಿಸಿದಾಗ ಹೆಚ್ಚಿನ ಪಕ್ಷಗಳು ಕಳವಳ ವ್ಯಕ್ತಪಡಿಸಿದ್ದವು ಎಂದು ಚುನಾವಣಾ ಆಯೋಗದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುಮಾರು 30 ಕೋಟಿ ನೋಂದಾಯಿತ ಮತದಾರರು ಹಕ್ಕು ಚಲಾಯಿಸುವ ಸಮಸ್ಯೆಯನ್ನು ಸರಿಯಾದ ನಿಟ್ಟಿನಲ್ಲಿ ಪರಿಹರಿಸಬೇಕಿರುವ ಕಾರಣ, ಈ ಪ್ರಸ್ತಾಪವನ್ನು ಶೀಘ್ರದಲ್ಲೇ ಜಾರಿಗೆ ತರುವ ಸಾಧ್ಯತೆಯಿಲ್ಲ ಎಂದು ಮಾಧ್ಯಮಗಳು ತಿಳಿಸಿವೆ.

ಈ ಸುದ್ದಿ ಓದಿದ್ದೀರಾ? 40% ಸರ್ಕಾರದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ: ಶಶಿ ತರೂರ್

“ಮತದಾನದಿಂದ ದೂರ ಉಳಿಯುವ ಮತದಾರರನ್ನು ಗುರುತಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.ಇದು ದೀರ್ಘಕಾಲದ ಪ್ರಕ್ರಿಯೆ. ಅಲ್ಲದೆ ಈ  ಪ್ರಕ್ರಿಯೆ ಸಮಯ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ಎಲ್ಲರನ್ನು ಅವರ ಕ್ಷೇತ್ರದ ಮತಗಟ್ಟೆಗೆ ಕರೆತರುವ ಪ್ರಕ್ರಿಯೆಗಳು ನಡೆಯುತ್ತಿವೆ” ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಜನವರಿ 16ರಂದು ಚುನಾವಣಾ ಆಯೋಗವು ರಿಮೋಟ್‌ ಮತದಾನ ಯಂತ್ರಗಳ ಬಗ್ಗೆ ಚರ್ಚೆ ಮತ್ತು ಮಾಹಿತಿ ನೀಡಲು ರಾಜಕೀಯ ಪಕ್ಷಗಳನ್ನು ಆಹ್ವಾನಿಸಿತ್ತು. ಆದರೆ ಬಹುತೇಕ ರಾಜಕೀಯ ಪಕ್ಷಗಳು ಈ ಯೋಜನೆಯನ್ನು ವಿರೋಧಿಸಿದ್ದರಿಂದ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ.

ಚುನಾವಣಾ ಆಯೋಗದ ಪ್ರಕಾರ, ರಿಮೋಟ್‌ ಮತದಾನ ಯಂತ್ರವು ಏಕಕಾಲದಲ್ಲಿ 72 ಕ್ಷೇತ್ರಗಳ ಡೇಟಾವನ್ನು ನಿರ್ವಹಿಸಬಲ್ಲದು. ಇದಲ್ಲದೆ, ತಮ್ಮ ಸ್ವಂತ ಕ್ಷೇತ್ರಗಳ ವಲಸೆ ಮತದಾರರು ಸಹ ಇದರ ಲಾಭವನ್ನು ಪಡೆಯಬಹುದು.   

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುದ್ಧದಲ್ಲಿ ಹೋರಾಡಲು ಭಾರತೀಯ ಕಾರ್ಮಿಕರಿಗೆ ರಷ್ಯಾ ಒತ್ತಾಯ; ಪ್ರಧಾನಿ ಮೋದಿ ಮೌನವೇಕೆ?

ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ಜಾಹೀರಾತು ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬಳು, ‘ಯುದ್ಧ ಪೀಡಿತ...

ಪ್ರಚಾರದಲ್ಲಿ ಸಮೋಸಾ, ಬಿರಿಯಾನಿ ಸೇರಿ ಪ್ರತಿಯೊಂದು ಆಹಾರಕ್ಕೂ ಚುನಾವಣಾ ಆಯೋಗದಿಂದ ದರ ನಿಗದಿ

ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳು ಖರ್ಚು ಮಾಡುವ ಆಹಾರ ಒಳಗೊಂಡ...

ರಮೇಶ್‌ ಕುಮಾರ್‌ ಮತ್ತು ನಾನು ಒಂದಾದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಗೆಲುವು ಖಚಿತ: ಸಚಿವ ಮುನಿಯಪ್ಪ

ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಬೇರೆ ವ್ಯಕ್ತಿಯನ್ನು ಅಭ್ಯರ್ಥಿ ಮಾಡುವುದು ಸರಿಯಲ್ಲ. ಅವರಿಗೂ...

ಕರ್ನಾಟಕದಲ್ಲಿ ಯೋಗಿ ಮಾದರಿ ಸರ್ಕಾರ ಇದ್ದಿದ್ದರೆ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುತ್ತಿತ್ತು: ಸಾಹಿತಿ ಎಸ್.ಎಲ್ ಭೈರಪ್ಪ

ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲೋದು ಕಷ್ಟ. ಅರ್ಧ...