ಬೀದರ್‌ | ಶೋಷಿತ ಸಮಾಜದ ಏಳಿಗೆಗೆ ಬದ್ಧ: ಈಶ್ವರ ಖಂಡ್ರೆ

Date:

ಶೋಷಿತ ಸಮಾಜ, ಅದರಲ್ಲೂ ಮಾದಿಗ ಸಮಾಜದ ಏಳಿಗೆಗಾಗಿ ತಾವು ಸದಾ ಬದ್ಧರಾಗಿದ್ದು, ಸಮಾಜವನ್ನು ಮುನ್ನಡೆಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಈಶ್ವರ ಖಂಡ್ರೆ ಹೇಳಿದರು.

- Advertisement -

ಬೀದರ್ ನಗರದ ನಾವದಗೇರಿ ಬಡಾವಣೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಗುರುವಾರ ಕರ್ನಾಟಕ ಮಾದರ ಮಹಾಸಭಾ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

“ಬುದ್ಧ, ಬಸವ, ಅಂಬೇಡ್ಕರ್, ಬಾಬು ಜಗಜೀವನರಾಮ್ ಹಾಗೂ ಮಾದರ ಚೆನ್ನಯ್ಯನವರ ಸಿದ್ಧಾಂತಗಳನ್ನು ಅನುಸರಿಸಿಕೊಂಡು ಮುನ್ನಡೆಯುತ್ತಿದ್ದೇವೆ. ಬಸವಣ್ಣನವರ ಅನುಭವ ಮಂಟಪದಲ್ಲಿ ಮಾದರ ಚೆನ್ನಯ್ಯನವರು ಪ್ರತಿಪಾದಿಸಿದ ತತ್ವಗಳಂತೆ ತಮ್ಮ ಕುಟುಂಬ ಸದಾ ಮಾದರ ಸಮಾಜದೊಂದಿಗೆ ಇರಲಿದೆ” ಎಂದು ಭರವಸೆ ನೀಡಿದರು.

WhatsApp Image 2026 10 15 at 5.13.41 PM 1
ಜಾಹೀರಾತು

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಕಾಂತ ಹಿಪ್ಪಳಗಾಂವ ಮಾತನಾಡಿ, “ಖಂಡ್ರೆ ಕುಟುಂಬ ಹಾಗೂ ತಮ್ಮ ಕುಟುಂಬದ ನಡುವೆ ಅನ್ಯೋನ್ಯತೆ, ನಂಬಿಕೆ ಮತ್ತು ಅವಿನಾಭಾವ ಸಂಬಂಧವಿದೆ. 1983ರಿಂದಲೂ ಖಂಡ್ರೆ ಕುಟುಂಬದೊಂದಿಗೆ ಗುರುತಿಸಿಕೊಂಡಿರುವ ತಾವು, ರಾಜಕೀಯ ತತ್ವಗಳನ್ನು ಬದಲಿಸುವವರ ನಡುವೆಯೂ ಕಳೆದ 43 ವರ್ಷಗಳಿಂದ ಒಂದೇ ಪಕ್ಷ ಹಾಗೂ ಒಂದೇ ಕುಟುಂಬದೊಂದಿಗೆ ನಿಷ್ಠೆಯಿಂದ ಇದ್ದೇನೆ. ಸಮಾಜ ಮತ್ತು ಪಕ್ಷ ನೀಡಿದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ” ಎಂದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದ್ದೇವರು ಮಾತನಾಡಿ, “ಮಾದಿಗ ಸಮಾಜಕ್ಕೆ ತನ್ನದೇ ಆದ ಪರಂಪರೆ ಮತ್ತು ಸಂಸ್ಕೃತಿಯಿದೆ. ಹಲಗೆ ವಾದನ ಸೇರಿದಂತೆ ಚರ್ಮವಾದ್ಯಗಳ ಪರಂಪರೆಯನ್ನು ಇಂದಿಗೂ ಜೀವಂತವಾಗಿಟ್ಟಿರುವ ಸಮಾಜದ ಏಳಿಗೆಗೆ ನಾಡಿನ ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಬೇಕು” ಎಂದು ಹೇಳಿದರು.

ಇದಕ್ಕೂ ಮುನ್ನ ನಗರದ ಸಿದ್ದಾರ್ಥ ಕಾಲೇಜಿನ ಮುಂಭಾಗದಲ್ಲಿ ಕ್ರೇನ್ ಮೂಲಕ ಹಲಗೆಗಳ ಹಾರ ಹಾಕಿ ಈಶ್ವರ ಖಂಡ್ರೆ ಅವರನ್ನು ಗೌರವಿಸಲಾಯಿತು. ಬಳಿಕ ಅಲ್ಲಿಂದ ಚಂದ್ರಕಾಂತ ಹಿಪ್ಪಳಗಾಂವ ಅವರ ಮನೆವರೆಗೆ ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಲಾಯಿತು.

WhatsApp Image 2026 10 10 at 6.59.42 PM 6
ಜಾಹೀರಾತು

ನಂತರ ಬೆಂಗಳೂರಿನಿಂದ ಆಗಮಿಸಿದ್ದ ಕ್ರಾಂತಿಕಾರಿ ಗೀತೆಗಳ ಕಲಾತಂಡದ ಅರುಣ ವೆಚ್ಚಿ, ವಿಜಯಕುಮಾರ ಸೋನಾರೆ, ದೇವಿದಾಸ ಚಿಮಕೋಡೆ, ದೇವಿದಾಸ ಹಿಪ್ಪಳಗಾಂವ, ಶಾರ್ದಕ ಹಿಪ್ಪಳಗಾಂವ ಸೇರಿದಂತೆ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಇದನ್ನೂ ಓದಿ : ಬೀದರ್‌ | ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಕಾರ್ಯಕ್ರಮದಲ್ಲಿ ವಿಜಯಕುಮಾರ ಕೌಡ್ಯಾಳ, ರಾಜು ಕಡ್ಯಾಳ, ಫರ್ನಾಂಡಿಸ್ ಹಿಪ್ಪಳಗಾಂವ, ರೋಹಿದಾಸ ಘೋಡೆ, ಪ್ರಭು ತಾಳಮಡಗಿ, ಸುಮಂತ ಕಟ್ಟಿಮನಿ, ವಿಠಲರಾವ ಶಿಪ್ಪಿಕರ್, ಶಿವರಾಜ ಬಂಬುಳಗಿ, ಶ್ರೀದೇವಿ ಕಟ್ಟಿಮನಿ, ವಿಜಯಕುಮಾರ ಹಿಪ್ಪಳಗಾಂವ, ಬಸವರಾಜ ಮಾಳಗೆ, ಶಿವಣ್ಣ ಹಿಪ್ಪಳಗಾಂವ, ಕಮಲಾಕರ ಹೆಗಡೆ, ದತ್ತಾತ್ರಿ ಜ್ಯೋತಿ, ಝಾಪೆಟರಾಜ ಕಡ್ಯಾಳ, ಹರೀಶ ಗಾಯಕವಾಡ, ವೀರಾಶೆಟ್ಟಿ ಬಂಬುಳಗಿ, ಪರಮೇಶ್ವರ ಕಾಳಮಂದರಗಿ, ಮನೋಹರ ಉಡಬಾಳ, ಸ್ವಾಮಿದಾಸ ಮೇಘಾ, ವಿಶಾಲ ಜೋಷಿ, ಸಚೀನ ಅಂಬೆಸಂಗಿ, ರಾಜು ಸಾಂಗ್ಲೆ, ಲಾಲಪ್ಪ ನೀರ್ಣಾ, ಲಕ್ಷ್ಮಣ ಮುರಾಳ, ಸುಧಾಕರ ಸೂರ್ಯವಂಶಿ, ಅಂತೋನಿ ಜನವಾಡ, ವಿಜಯಕುಮಾರ ಸೂರ್ಯವಂಶಿ, ಅನಿಲ ಹಾಲೆಪುರ್ಗಿ, ಸಂಜು ಹಿಪ್ಪಳಗಾಂವ, ಪವನ ಉದ್ದಾನ, ಗೋವಿಂದ ಭೋಸಲೆ, ಅವಿನಾಶ ಬುದೇರಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ನೀರು, ಆರೋಗ್ಯ ಸೇವೆ ಪರಿಶೀಲನೆ; ಕಾರ್ಮಿಕರ ಸಮಸ್ಯೆ ಆಲಿಸಿದ ಸಿಇಒ

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಸೇವೆ ಹಾಗೂ ಅಭಿವೃದ್ಧಿ...

ರಾಜ್ಯದ 12 ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರೀ ಮಳೆ: ಹವಾಮಾನ ಇಲಾಖೆ

ತೀವ್ರ ಮಳೆ ಕೊರತೆಯಿಂದ ಕೂಡಿದ್ದ ಮುಂಗಾರು ಹಂಗಾಮು ಕೊನೆಗೊಂಡಿದೆ. ಹಿಂಗಾರು ಆರಂಭವಾಗಿದೆ....

ಭಾಲ್ಕಿ | ವಿಬಿ-ಜಿ ರಾಮ್ ಜಿ ಕಾರ್ಮಿಕರಿಗೆ ಜಾಗೃತಿ ಕಾರ್ಯಕ್ರಮ

ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ವಿಬಿ-ಜಿ ರಾಮ್ ಜಿ ಯೋಜನೆಯ ಸದುಪಯೋಗ...