ಕೆಲಸವಿಲ್ಲ, ಸಾಲವಿದೆ: ಪ್ರಧಾನಿ ಮೋದಿಯವರಿಗೆ ಚಹಾ ಆತಿಥ್ಯ ನೀಡಿದ್ದ ಅಯೋಧ್ಯೆಯ ದಲಿತ ಮಹಿಳೆ ಅಳಲು

Date:

“ನಮಗೆ ಇನ್ನೂ ಸ್ವಂತ ಶೌಚಾಲಯವಿಲ್ಲ, ಪ್ರಧಾನಿ ನರೇಂದ್ರ ಮೋದಿಯವರು ಮನೆಗೆ ಬಂದು ಹೋದ ಬಳಿಕ ಮನೆಗೆ ಬರುವವರ ಸಂಖ್ಯೆ ಕೂಡ ಜಾಸ್ತಿಯಾಗಿದೆ. ಪತಿಗೆ ಕೂಲಿ ಕೆಲಸಕ್ಕೂ ಹೋಗಲಾಗುತ್ತಿಲ್ಲ. ಇದರಿಂದಾಗಿ ಸಾಲದಲ್ಲಿ ಮುಳುಗಿದ್ದೇವೆ”

- Advertisement -

ಹೀಗಂತ ತಮ್ಮ ಕಷ್ಟಗಳನ್ನು ಹೇಳಿಕೊಂಡವರು ಬೇರಾರೂ ಅಲ್ಲ. ಕಳೆದ ಡಿಸೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಿ ತನ್ನ ಮನೆಗೆ ಭೇಟಿ ನೀಡಿದಾಗ ಚಹಾ ಆತಿಥ್ಯ ನೀಡಿದ್ದ ಅಯೋಧ್ಯೆಯ ದಲಿತ ಮಹಿಳೆ ಮೀರಾ ದೇವಿ ಮಾಂಝಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಸ್ವತಂತ್ರ ಸುದ್ದಿ ಸಂಸ್ಥೆ ನ್ಯೂಸ್ ಲಾಂಡ್ರಿಯ ಪ್ರತಿನಿಧಿ ಬಸಂತ್ ಕುಮಾರ್ ಅವರಿಗೆ ನೀಡಿದ ಸಂದರ್ಶನದ ವೇಳೆ ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಡಿಸೆಂಬರ್ 30 ರಂದು ಅಯೋಧ್ಯೆಗೆ ಭೇಟಿ ನೀಡಿದ್ದರು. ರೈಲ್ವೆ ನಿಲ್ದಾಣ, ಹೊಸ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು. ಈ ವೇಳೆ ಅಯೋಧ್ಯೆಯ ಉಜ್ವಲ ಫಲಾನುಭವಿ ಮೀರಾ ದೇವಿ ಮಾಂಝಿ ಎಂಬ ಮಹಿಳೆ ಮನೆಗೆ ಭೇಟಿ ನೀಡಿ ಚಹಾ ಕುಡಿದು, ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದರು.

Modi Meets Meera manji

ಕಂಠರಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ್‌ಘಾಟ್‌ನ ನಿವಾಸಿ ಮೀರಾ ಮಾಂಝಿ ಅವರ ಪತಿಯ ಹೆಸರು ಸೂರಜ್ ಮಾಂಝಿ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್ ಪಡೆದಿದ್ದರು. ಅವರು ಈ ಯೋಜನೆಯ ಫಲಾನುಭವಿಗಳಲ್ಲಿ 10ನೇ ಕೋಟಿಯವರಾಗಿದ್ದರು.

ಈ ಹಿನ್ನೆಲೆಯಲ್ಲಿ ದಂಪತಿಯ ಸಂದರ್ಶನ ನಡೆಸಿರುವ ನ್ಯೂಸ್ ಲಾಂಡ್ರಿ, ಪ್ರಧಾನಿ ಮೋದಿಯವರು ಬಂದು ಹೋದ ನಂತರ ತಮ್ಮ ಜೀವನದಲ್ಲಿ ಬದಲಾವಣೆಗಳಾಗಿದೆಯಾ? ಎಂದು ಕೇಳಿದಾಗ, “ಮಾಂಝಿ ಸಮುದಾಯದ ನಡುವೆ ನಮಗೆ ಗೌರವ ಹೆಚ್ಚಿದೆ. ಆದರೆ ಮನೆಗೆ ದಿನನಿತ್ಯವೂ ಹೊಸಬರು ಬರುತ್ತಲೇ ಇದ್ದಾರೆ. ಇದರಿಂದಾಗಿ ಪತಿಗೆ ಕೆಲಸಕ್ಕೆ ಹೋಗಲಿಕ್ಕೆ ಆಗುತ್ತಿಲ್ಲ. ಬಂದವರ ಆತಿಥ್ಯ ಮಾಡಲು ಸಾಲ ಬೇರೆ ಮಾಡಬೇಕಾಯಿತು” ಎಂದು ತಿಳಿಸಿದ್ದಾರೆ.

ಬೇರೇನಾದರೂ ಬದಲಾವಣೆ ಆಗಿದೆಯಾ ಎಂದು ಕೇಳಿದಾಗ, “ಅಂತಹ ವಿಶೇಷ ಬದಲಾವಣೆ ಆಗಿಲ್ಲ. ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ನಮಗೆ ಸಣ್ಣ ಮನೆ ಸಿಕ್ಕಿದೆಯಾದರೂ ಇನ್ನೂ ಕೂಡ ಸಿಮೆಂಟ್ ಪ್ಲಾಸ್ಟಿಂಗ್, ಸುಣ್ಣ ಬಣ್ಣ ಇನ್ನೂ ಬಳಿದಿಲ್ಲ. ನಮ್ಮ ಸಮುದಾಯದ ಮುಖಂಡ ವೀರ್ ಚಂದ್ ಮಾಂಝಿ ಎಂಬವರ ಬಳಿ ಅದಕ್ಕೆ ಹಣ ಕೊಟ್ಟಿದ್ದಾರೆ ಅಂತ ನಮಗಿರುವ ಮಾಹಿತಿ. ಆದರೆ ಅವರು ಇನ್ನೂ ಈ ಬಗ್ಗೆ ಏನೂ ಕ್ರಮ ಕೈಗೊಂಡಿಲ್ಲ” ಎಂದು ಬೇಸರಿಸಿದ್ದಾರೆ.

ಮೋದಿಯವರಿಗೆ ಚಹಾ ನೀಡಲಾಗಿದ್ದ ಕಪ್ ಅನ್ನು ಈಗ ದೇವರ ಮೂರ್ತಿಗಳು ಇಡುವ ಪೀಠದಲ್ಲಿ ಇಟ್ಟಿದ್ದಾರೆ, ಈ ಬಗ್ಗೆ ಸಂದರ್ಶಕ ಪ್ರಶ್ನಿಸಿದಾಗ, “ಅವರು ನಮಗೆ (ಪ್ರಧಾನಿ ಮೋದಿ) ದೇವರಿದ್ದಂತೆ. ಹಾಗಾಗಿ, ಅವರು ಬಂದ ನೆನಪಿಗೆ ಅಲ್ಲಿ ಇಟ್ಟಿದ್ದೇವೆ” ಎಂದು ಮೀರಾ ದೇವಿ ಮಾಂಝಿ ಹೇಳಿದ್ದಾರೆ.

“ಪ್ರಧಾನಿ ಮೋದಿಯವರ ಭೇಟಿ ಬಳಿಕ ಚುನಾವಣೆ ನಿಲ್ಲಿಸುವ ಮಾತುಗಳು ಕೂಡ ಕೇಳಿ ಬಂದಿದೆ. ನೋಡೋಣ ಎಂದು ತಿಳಿಸಿರುವ ಮೀರಾ ಮನೆಯಲ್ಲಿ, ಅಡುಗೆ ಮನೆಯಲ್ಲಿ ಸರಿಯಾದ ವಿದ್ಯುತ್ ವ್ಯವಸ್ಥೆ ಇನ್ನೂ ಇಲ್ಲ. ವಿದ್ಯುತ್ ಬಿಲ್ ಹೆಚ್ಚು ಬರಬಹುದು ಎಂಬ ಹಿನ್ನೆಲೆಯಲ್ಲಿ ಮನೆಗೆ ಒಂದೇ ಬಲ್ಬ್ ಬಳಸುತ್ತಿದ್ದೇವೆ. ಟಾರ್ಚ್‌ನ ಬೆಳಕಿನಲ್ಲಿ ಅಡುಗೆ ಮಾಡುತ್ತಿದ್ದೇವೆ” ಎಂದು ತಮ್ಮ ಕಷ್ಟಗಳನ್ನು ‘ನ್ಯೂಸ್ ಲಾಂಡ್ರಿ’ಯೊಂದಿಗೆ ವಿವರಿಸಿದ್ದಾರೆ.

“ಮೊದಲು ನಾವು ಕಟ್ಟಿಗೆಗಳಲ್ಲಿ ಅಡುಗೆ ಮಾಡುತ್ತಿದ್ದೆವು. ಈಗ ಉಜ್ವಲ ಯೋಜನೆಯ ಮೂಲಕ ನಮಗೆ ಗ್ಯಾಸ್ ಸಿಲಿಂಡರ್ ಸಿಕ್ಕಿದೆ. ಆದರೆ ಈಗ ಸಿಕ್ಕಿರುವ ಗ್ಯಾಸ್ ಮುಗಿದ ಬಳಿಕ ಇನ್ನೊಂದು ಗ್ಯಾಸ್ ತೆಗೆದುಕೊಳ್ಳುತ್ತೇವೆಯೋ ಎಂಬುದು ಗೊತ್ತಿಲ್ಲ. ಒಂದು ವೇಳೆ ಆಗದೇ ಇದ್ದರೆ ಮತ್ತೆ ಕಟ್ಟಿಗೆಯನ್ನೇ ಬಳಸುವೆ” ಎಂದು ಇದೇ ವೇಳೆ ಮೀರಾ ತಿಳಿಸಿದ್ದಾರೆ.

“ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್ ಪಡೆದಿದ್ದ ಫಲಾನುಭವಿಗಳ ಪೈಕಿ ನಾವು 10ನೇ ಕೋಟಿಯವರಾಗಿದ್ದೆವು. ಹಾಗಾಗಿ ಪ್ರಧಾನಿ ಮೋದಿ ನಮ್ಮ ಮನೆಗೆ ಭೇಟಿ ನೀಡಿದ್ದಾರೆ. ಆ ಬಳಿಕ ನಮ್ಮ ಮನೆಗೆ ಭೇಟಿ ನೀಡುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಇದರಿಂದ ಕೂಲಿ ಕೆಲಸಕ್ಕೆ ಹೋಗಲಿಕ್ಕೆ ಆಗುತ್ತಿಲ್ಲ. ಬಂದವರನ್ನು ಸತ್ಕರಿಸಲಿಕ್ಕಾಗಿ 5-6 ಸಾವಿರ ರೂ ಸಾಲ ಪಡೆದುಕೊಳ್ಳಬೇಕಾಯಿತು” ಎಂದು ದಿನಗೂಲಿ ಕಾರ್ಮಿಕನಾಗಿರುವ ಮೀರಾ ಪತಿ ಸೂರಜ್ ಮಾಂಝಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬಳಿಕ ಬಂಧನವಾಗಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪ್ರಧಾನ್‌ಗೆ ಮಧ್ಯಂತರ ಜಾಮೀನು

2007ರ ನಂದಿಗ್ರಾಮ್ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಸಂಬಂಧಿಸಿದ ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿ...

1929ರ ಸೈಮನ್ ವಿರುದ್ಧದ ಹೋರಾಟದಂತೆ ‘SIR ಗೋ ಬ್ಯಾಕ್’ ಆಂದೋಲನ ನಡೆಯಬೇಕು: ಸಿಎಂ ರೇವಂತ್ ರೆಡ್ಡಿ ಕರೆ

ಮತದಾರರ ಪಟ್ಟಿಯ ಮೇಲೆ ಮೋದಿ-ಶಾ ಜೋಡಿ ಮತ್ತು ಗ್ಯಾನೇಶ್‌ ಕುಮಾರ್‌ ನಡೆಸುತ್ತಿರುವ...

‘ನಥಿಂಗ್ ನೈಸ್’: ಸಿಎಂ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಭೂಕಬಳಿಕೆ ಆರೋಪ

ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ...

ಅಮೇಥಿ ಸೋಲಿನ ಬಳಿಕ ಯುಪಿ ರಾಜ್ಯಸಭೆ ರೇಸ್‌ನಲ್ಲಿ ಸ್ಮೃತಿ ಇರಾನಿ; ಸಂಭಾವ್ಯ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ?

ಉತ್ತರ ಪ್ರದೇಶದಿಂದ ಅಕ್ಟೋಬರ್ 16ರಂದು ನಡೆಯಲಿರುವ 10 ರಾಜ್ಯಸಭಾ ಸ್ಥಾನಗಳ ಚುನಾವಣೆಗೆ...