ಪ್ರಜ್ವಲ್ ಲೈಂಗಿಕ ಹಗರಣ | ದೇವೇಗೌಡರಿಗೆ ಐಟಿಯಿಂದ ಮಕ್ಕಳ ರಕ್ಷಣೆಯೇ ಮುಖ್ಯ ಆಯ್ತಾ?

Date:

ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಲೈಂಗಿಕ ಹಗರಣ ಬೆಳಕಿಗೆ ಬಂದ ಬಳಿಕ, ಹಾಸನದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು ಕಟ್ಟಿಕೊಂಡಿರುವ ‘ರಿಪಬ್ಲಿಕ್’ ಕುರಿತು ಈದಿನ.ಕಾಮ್ ನಾನಾ ಸುದ್ದಿಗಳನ್ನು ಬಿತ್ತರಿಸುತ್ತಿದೆ. ದೇವೇಗೌಡ ಕುಟುಂಬದ ಸರ್ವಾಧಿಕಾರವನ್ನು ಹತ್ತಿರದಿಂದ ಬಲ್ಲ ಹಲವಾರು ನಾಯಕರನ್ನು ಮಾತನಾಡಿಸಿದೆ. ಹಾಸನದಲ್ಲಿ ಸಕ್ರಿಯವಾಗಿರುವ ದಲಿತ ಮುಖಂಡ ಎಚ್‌.ಕೆ ಸಂದೇಶ್ ಅವರನ್ನು ನಮ್ಮ ತಂಡ ಸಂದರ್ಶನ ಮಾಡಿದ್ದು, ಅವರು ವಿವರಿಸಿದ ದೇವೇಗೌಡ ಮತ್ತು ರೇವಣ್ಣ ಕುಟುಂಬದ ಹಲವಾರು ವಿಚಾರಗಳು ಇಲ್ಲಿವೆ.

ಪ್ರಜ್ವಲ್ ರೇವಣ್ಣ ಎಸಗಿರುವ ಲೈಂಗಿಕ ಕೃತ್ಯಗಳು ದೇಶದಲ್ಲೇ ಬೃಹತ್ ಲೈಂಗಿಕ ಹಗರಣ. ಇಂಥದೊಂದು ಅನೈತಿಕ, ಅಶ್ಲೀಲ ಕೃತ್ಯ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹಲವಾರು ಹೆಣ್ಣು ಮಕ್ಕಳ ಮೇಲೆ ಪ್ರಜ್ವಲ್ ಬಲವಂತದಿಂದ ಅತ್ಯಾಚಾರ ಮಾಡಿದ್ದಾನೆ. ರೇವಣ್ಣಗೆ ಜಾಮೀನು ಸಿಕ್ಕ ಮೇಲೆ ಸಾಕ್ಷ್ಯ  ನಾಶ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಅವರ ಸಹೋದರ, ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ. ಕುಮಾರಸ್ವಾಮಿ ಅವರು ಪೆನ್‌ಡ್ರೈವ್ ಹಂಚಿದವರ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಕೃತ್ಯ ಎಸಗಿದವರು ಯಾರು? ಅವರ ಅಣ್ಣನ ಮಗ. ಅದರ ಬಗ್ಗೆ ಕುಮಾರಸ್ವಾಮಿ ಮಾತನಾಡುವುದಿಲ್ಲ.

ದೇವೇಗೌಡರು ಒಂದು ತಿಂಗಳಿನಿಂದ ಮೌನವಾಗಿದ್ದು, ಈಗ ಮಾತನಾಡಿದ್ದಾರೆ. ತನ್ನ ಕುಟುಂಬದ ಬಗ್ಗೆ ಇಡೀ ದೇಶವೇ ಮಾತನಾಡುತ್ತಿದ್ದರೂ, ತಮ್ಮ ಮೊಮ್ಮಗನ್ನು ಕರೆಸುವ ಕೆಲಸಕ್ಕೆ ದೇವೇಗೌಡರು ಮುಂದಾಗಲಿಲ್ಲ. ಆರೋಪಿ ಪ್ರಜ್ವಲ್‌ನನ್ನು ಕರೆಸದಿದ್ದರೆ, ಅವರ ಪಕ್ಷಕ್ಕೆ-ಕುಟುಂಬದ ರಾಜಕಾರಣಕ್ಕೆ ಉಳಿಗಾಲವಿಲ್ಲ.

ಒಬ್ಬ ಮಾಜಿ ಪ್ರಧಾನಿಯಾಗಿ, ತಮಗಿರುವ ಗೌರವ, ಪ್ರಭಾವವನ್ನು ಬಳಸಿಕೊಂಡು ದೇಶದ ಗೃಹ ಸಚಿವ ಅಮಿತ್ ಶಾ ಜೊತೆ ಮಾತನಾಡಿ, ಆತನನ್ನು ಕರೆಸಬಹುದಿತ್ತು. ಆದರೆ, ಅವರು ತಮ್ಮ ಮೊಮ್ಮಗನನ್ನು ರಕ್ಷಿಸಿಕೊಳ್ಳಲು ಕಾನೂನು ತಜ್ಞರನ್ನು ಕೂರಿಸಿಕೊಂಡು ಯಾರು ಎಕ್ಸ್‌ಪರ್ಟ್‌ ಇದ್ದಾರೆ, ಕೋರ್ಟ್‌ನಲ್ಲಿ ಯಾರ ಬೆಂಚ್‌ಗೆ ಪ್ರಕರಣ ಹೋಗಬೇಕು ಎಂಬುದರ ಬಗ್ಗೆ ಚರ್ಚಿಸುತ್ತಿದ್ದಾರೆ. ಇದು ನಿಜಕ್ಕೂ ಅಕ್ಷ್ಯಮ್ಯ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಂತ್ರಸ್ತ ಮಹಿಳೆಯರ ಪರಿಸ್ಥಿತಿ ಬಗ್ಗೆ ದೇವೇಗೌಡ ಕುಟುಂಬ ಯೋಚಿಸಿದೆಯೇ? ಕೆಲವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೆಲವು ವಿವಾಹಗಳು ಮುರಿದುಬಿದ್ದಿವೆ. ಸಂತ್ರಸ್ತೆಯರು ಹೊರಗೆ ಬಾರದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿಯಾಗಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಜವಾಬ್ದಾರಿ ಏನಿತ್ತು. ಸಂತ್ರಸ್ತೆಯರ ಬಗ್ಗೆ ಇವರು ಮಾತನಾಡಿದ್ದಾರೆಯೇ? ಚಿಂತಿಸಿದ್ದಾರೆಯೇ? ಜನರು ಎಲ್ಲವನ್ನು ನೋಡುತ್ತಿದ್ದಾರೆ. ದೇವೇಗೌಡ, ಕುಮಾರಸ್ವಾಮಿ, ರೇವಣ್ಣ, ಭವಾನಿ ರೇವಣ್ಣ – ಅವರಾರು ಮುಂದೆ ರಾಜಕೀಯ ಮಾಡೋಕೆ ಸಾಧ್ಯವಿಲ್ಲ.

ರೇವಣ್ಣ ಕುಟುಂಬ – ಎಚ್‌ಡಿಕೆ ಕುಟುಂಬ

ಪ್ರಜ್ವಲ್‌ ಲೈಂಗಿಕ ಹಗರಣ ಬಯಲಾದಾಗ ರೇವಣ್ಣ ಕುಟುಂಬವೇ ಬೇರೆ – ನಮ್ಮ ಕುಟುಂಬವೇ ಬೇರೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಆದ್ರೆ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್‌ ಹೋದಾಗ ದೇವೇಗೌಡ, ರೇವಣ್ಣ, ಕುಮಾರಸ್ವಾಮಿ, ಪ್ರಜ್ವಲ್ ಎಲ್ಲರೂ ಒಟ್ಟಿಗೆ ಹೋಗಿದ್ದರು. ಈಗ, ಈಗ ನಮ್ಮ ಕುಟುಂಬಗಳೇ ಬೇರೆ ಎನ್ನುತ್ತಿದ್ದಾರೆ. ಇದೆಲ್ಲ ನಾಟಕಗಳು. ಇಂತಹ ನಾಟಕವನ್ನು ಬದಿಗಿಟ್ಟು, ಪ್ರಜ್ವಲ್‌ನನ್ನು ಎಡೆಮುರಿ ಕಟ್ಟಿ ಎಳೆತರಬೇಕು. ಪ್ರಜ್ವಲ್ ‘ಸಮಾಜಘಾತುಕ’ ಆತನನ್ನು ಎಳೆತರಬೇಕು. ಕುಮಾರಸ್ವಾಮಿ ತಮ್ಮ ಅಣ್ಣನ ಮಗನ ಕೃತ್ಯಗಳನ್ನು ಖಂಡಿಸಬೇಕು. ಆತನ ಕೃತ್ಯದ ಬಗ್ಗೆ ಅಸಹ್ಯವಿಲ್ಲದೆ, ಬಾಯಿಗೆ ಬಂದಂತೆ ಮಾತನಾಡುವುದು ಸಲ್ಲ.

ಮಕ್ಕಳು-ಮೊಮ್ಮಕ್ಕಳ ಭವಿಷ್ಯಕ್ಕಾಗಿ ಕೋಮುವಾದಿ ಪಕ್ಷದೊಂದಿಗೆ ಮೈತ್ರಿ

ದೇವೇಗೌಡರು ಜಾತ್ಯತೀತವಾಗಿ ಕೆಲಸ ಮಾಡಿದವರು. ಆದರೆ ಈಗ, ಮುಸ್ಲಿಂ, ದಲಿತರು, ಒಕ್ಕಲಿಗರನ್ನು ಬದಿಗೊತ್ತಿ, ಅವರು ಕೋಮುವಾದಿ ಪಕ್ಷದೊಂದಿಗೆ ರಾಜಿ ಮಾಡಿಕೊಂಡಿದ್ದಾರೆ. ಅವರು ಕೇವಲ, ತಮ್ಮ ರಾಜಕಾರಣವನ್ನು ಉಳಿಸಿಕೊಳ್ಳೋಕ್ಕಾಗಿ, ತಮ್ಮ ಮಕ್ಕಳು, ಮರಿಮಕ್ಕಳ ಭವಷ್ಯಕ್ಕಾಗಿ, ತಮ್ಮ ಆಸ್ತಿಯನ್ನು ಉಳಿಸಿಕೊಳ್ಳೋಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಕೋಮುವಾದಿ ಪಕ್ಷದ ಜೊತೆ ಕೈಜೋಡಿಸಿರುವ ದೇವೇಗೌಡರ ಕುಟುಂಬವನ್ನು ಸೋಲಿಸಬೇಕು. ಅವರ ರಾಜಕಾರಣವನ್ನ ಬಗ್ಗು ಬಡಿಯಬೇಕು.

ಹಾಸನದಲ್ಲಿ ವಿಧಾನಸಭಾ ಚುನಾವಣೆಗಳು ನಡೆದಾಗ 200 ಮುಸ್ಲಿಂ ಮತಗಳಿದ್ದರೆ, 198 ಮತಗಳು, 500 ಮತಗಳಿದ್ದ 425 ಮತಗಳು ಜೆಡಿಎಸ್‌ಗೆ ಬರುತ್ತಿದ್ದವು. ಜೆಡಿಎಸ್‌ ಮೇಲೆ ಜಿಲ್ಲೆಯ ಮುಸಲ್ಮಾರು ನಂಬಿಕೆ ಇಟ್ಟಿದ್ದರು. ಅದರೆ, ಅವರೆಲ್ಲರ ನಂಬಿಕೆಗೆ ದೇವೇಗೌಡರು ದ್ರೋಹ ಬಗೆದಿದ್ದಾರೆ.

ಅವರು, ಐಟಿ, ಇಡಿ ದಾಳಿಗೆ ಹೆದರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಮೋದಿ ಸರ್ಕಾರ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸುರೆನ್, ಬಿಆರ್‌ಎಸ್‌ ನಾಯಕಿ ಕೆ ಕವಿತಾ ಅವರನ್ನ ಬಂಧಿಸಿತು. ಅವರೆಲ್ಲರೂ ಧೈರ್ಯವಾಗಿ ಹೋರಾಟ ಮಾಡ್ತಿದ್ದಾರೆ. ಆದ್ರೆ, ದೇವೇಗೌಡರು ತಮ್ಮ ಕುಟುಂಬದ ರಕ್ಷಣೆಗಾಗಿ ಬಿಜೆಪಿ ಜೊತೆ ಹೋಗಿದ್ದಾರೆ.

ಮುಗ್ಧ ಮನಸ್ಸಿನ ರೇವಣ್ಣನ ಅಸಲಿ ವ್ಯಾಘ್ರ ಮುಖ

ರೇವಣ್ಣಗೆ ಎರಡು ಮುಖಗಳಿವೆ. ಒಂದು ವ್ಯಾಘ್ರನ ಮುಖ, ಮತ್ತೊಂದು ಹಸುವಿನ ಮುಖ. ಅವರ ಸಂಬಂಧಿಗಳು, ಅವರ ಒಡನಾಡಿಗಳು, ಬೇರೆ ರಾಜ್ಯಗಳಿಂದ ಬಂದ ದೊಡ್ಡ ಅಧಿಕಾರಿಗಳು, ಮುಖ್ಯಮಂತ್ರಿಗಳು ಇದ್ದಾಗ ಹಸುವಿನ ಮುಖವಿರುತ್ತದೆ. ಹಾಸನ ಜಿಲ್ಲೆಯೊಳಗೆ ವ್ಯಾಘ್ರನ ಮುಖವಿರುತ್ತದೆ. ಗುತ್ತಿಗೆದಾರರು, ಸ್ಥಳೀಯ ಅಧಿಕಾರಿಗಳ ಮುಂದೆ ದರ್ಪ, ಏಕವಚನದಲ್ಲಿ ಮಾತನಾಡುತ್ತಾರೆ. ಒಂದೇ ಯೋಜನೆಯನ್ನು ಬೇಕಾದಂತೆ ವಿಭಜಿಸಿ, ತಮ್ಮ ಆಪ್ತರಿಗೆ ವಿತರಿಸುತ್ತಾರೆ. ಎಲ್ಲ ಅಧಿಕಾರಿಗಳು ದಿನನಿತ್ಯ ಅವರ ಮನೆಗೆ ಹೋಗಿ ನಮಸ್ಕಾರ ಮಾಡಬೇಕು. ಇಲ್ಲದಿದ್ದರೆ, ಆ ಅಧಿಕಾರಿಗೆ ಹೊಳೆನರಸೀಪುರದಲ್ಲಿ ಜಾಗವಿರುವುದಿಲ್ಲ.

ಬೆಳಗ್ಗೆಯ ಸಮಯದಲ್ಲಿ ದಲಿತರು ಕಂಡರೆ, ಮತ್ತೆ ಮನೆಗೆ ಹೋಗಿ ಸ್ನಾನ ಮಾಡಿಬರುತ್ತಾರೆ ಎಂಬ ಆರೋಪ ಜಿಲ್ಲೆಯಾದ್ಯಂತ ಇದೆ. ಬೆಳಗ್ಗೆಯ ವೇಳೆ ದಲಿತರ ಮುಖ ನೋಡುವುದು ಅಪಶಕುನವೆಂದು ಅವರು ಭಾವಿಸುತ್ತಾರೆ. ಇದು ರೇವಣ್ಣನ ಅಸಲಿ ಮುಖ.

ಹಾಸನ ಹಾಲು ಒಕ್ಕೂಟದಲ್ಲಿ ರೇವಣ್ಣ ಅವರೇ 7ನೇ ಬಾರಿ ಅಧ್ಯಕ್ಷರಾಗಿದ್ದಾರೆ. ಜಿಲ್ಲೆಯಲ್ಲಿ ಬೇರೆ ಯಾರೂ ನಾಯಕರಿಲ್ಲವೇ? ಅವರಿಗೆ ಯಾಕೆ ಅವಕಾಶ ಮಾಡಿಕೊಡುವುದಿಲ್ಲ. ಎಲ್ಲವೂ ತಮ್ಮ ಕುಟುಂಬದ ಅಧೀನದಲ್ಲೇ ಇರಬೇಕು ಎಂಬ ಸ್ವಾರ್ಥ ಅವರ ಕುಟುಂಬದಲ್ಲಿದೆ. ಹಾಸನದಲ್ಲಿ ದೇವೇಗೌಡ ಕುಟುಂಬದ ರಾಜಕಾರಣ ಮುಗಿಯಿತು. ಇನ್ನು, ಅವರಿಗೆ ನೆಲೆ ಇಲ್ಲ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ಇಸ್ರೋ ಮಹತ್ವದ ಸಾಧನೆ; ವಿಆರ್‌ಎಲ್‌ ಪುಷ್ಪಕ್ ಮೂರನೇ ಬಾರಿಗೆ ಯಶಸ್ವಿ ಲ್ಯಾಂಡಿಂಗ್

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬಳಿ ಕುದಾಪುರದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಮರುಬಳಕೆ...

ಚನ್ನಪಟ್ಟಣ ಉಪಚುನಾಚಣೆ | ಊಹೆಗಳಾಚೆಗೂ ನಡೆಯುತ್ತಿದೆ ಡಿಕೆಶಿ-ಹೆಚ್‌ಡಿಕೆ ಆಟ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಶೀಘ್ರದಲ್ಲೇ ಉಪಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಹುರಿಯಾಳು ಯಾರು?...

ಅಂಗನವಾಡಿ ಕೇಂದ್ರಗಳ ಉನ್ನತೀಕರಣ; LKG, UKG ಆರಂಭಿಸಲು ಸಿಎಂ ಸಮ್ಮತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

"ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಣಕರಿಸಲು ಹಾಗೂ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಲು...

ವಾಲ್ಮೀಕಿ ನಿಗಮ ಅಕ್ರಮ | ಜಾರಿ ನಿರ್ದೇಶನಾಲಯದಿಂದ ಪ್ರತ್ಯೇಕ ತನಿಖೆ ಆರಂಭ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣವನ್ನು ಜಾರಿ...