“ರಾಹುಲ್ ಗಾಂಧಿ ಜನಪ್ರಿಯ ನಾಯಕರಾಗಿದ್ದು ಇಂಡಿಯಾ ಒಕ್ಕೂಟದಲ್ಲಿ ಮುಂದಿನ ಪ್ರಧಾನಿ ಯಾರಾಗಬೇಕೆಂದ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ” ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಇಂಡಿಯಾ ಒಕ್ಕೂಟ ಸರ್ಕಾರ ರಚಿಸುವುದಾದರೆ ರಾಹುಲ್ ಗಾಂಧಿ ಪ್ರಧಾನಿಯಾಗಬಹುದೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಜಯ್ ರಾವತ್, “ರಾಹುಲ್ ಗಾಂಧಿ ನಾಯಕತ್ವವನ್ನು ಒಪ್ಪಿಕೊಳ್ಳಲು ಸಿದ್ಧರಿದ್ದರೆ, ನಾವು ಏಕೆ ವಿರೋಧಿಸುತ್ತೇವೆ” ಎಂದು ಪ್ರಶ್ನಿಸಿದರು.
ಹಾಗೆಯೇ, “ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕ ಮತ್ತು ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ. ಜನಪ್ರಿಯ ನಾಯಕರಾಗಿದ್ದಾರೆ, ನಾವೆಲ್ಲರೂ ಅವರನ್ನು ಪ್ರೀತಿಸುತ್ತೇವೆ. ಇಂಡಿಯಾ ಒಕ್ಕೂಟದಲ್ಲಿ ಮುಂದಿನ ಪ್ರಧಾನಿ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ” ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿದ್ದೀರಾ? ‘ಇಂಡಿಯಾ’ ಮೈತ್ರಿಕೂಟ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ ನಿರ್ಧರಿಸುತ್ತದೆ: ಉದ್ಧವ್ ಠಾಕ್ರೆ
“ಬಿಜೆಪಿಗೆ ಬಹುಮತ ಲಭ್ಯವಾಗಿಲ್ಲ. 235-240 ಸೀಟುಗಳಲ್ಲಷ್ಟೆ ಬಿಜೆಪಿ ಗೆಲುವು ಕಂಡಿದೆ. ಅವರು ಮೋದಿ ಸರ್ಕಾರವನ್ನು ಆರಂಭಿಸುವ ಬಗ್ಗೆ ಮಾತನಾಡುತ್ತಿದ್ದರು. ಆದರೆ ಮೋದಿ ಸರ್ಕಾರ ಎಲ್ಲಿ” ಎಂದು ಲೇವಡಿ ಮಾಡಿದರು.
#WATCH | Mumbai: On whether Rahul Gandhi is the PM face of the INDIA alliance, Shiv Sena leader Sanjay Raut says, “If Rahul Gandhi is ready to accept the leadership, why would we object? He is a national leader and has proved himself. He is popular… We all love him. In the… pic.twitter.com/ft1mFwuKE0
— ANI (@ANI) June 5, 2024
“ಎನ್‌ಡಿಎ ಸರ್ಕಾರ ರಚನೆಯಾದರೂ ಕೂಡಾ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಎಂಬ ಎರಡು ಸ್ತಂಭಗಳ ಬಲದಿಂದ ರಚಿಸಬೇಕಾಗುತ್ತದೆ. ಆ ಸ್ತಂಭ ಯಾವಾಗ ಬೇಕಾದರೂ ಕುಸಿಯಬಹುದು. ಬಿಜೆಪಿ ತನ್ನ ಗೌರವವನ್ನೇ ಕಳೆದುಕೊಂಡಿದೆ. ಗೌರವವನ್ನು ಕಳೆದುಕೊಂಡ ಪ್ರಧಾನಿ ನಮಗೆ ಬೇಕಾಗಿಲ್ಲ. ಮೋದಿ ಬ್ರ್ಯಾಂಡ್ ಅಂತ್ಯವಾಗಿದೆ” ಎಂದು ಹೇಳಿದರು.
“ಇಡಿ, ಸಿಬಿಐ, ಐಟಿ ಕಾರಣದಿಂದಾಗಿ ಬಿಜೆಪಿ ಗೆಲುವು ಕಂಡಿದೆ. ಅವರು ಸರ್ಕಾರ ರಚಿಸುವುದಾದರೆ ರಚಿಸಲಿ. ಇದು ಪ್ರಜಾಪ್ರಭುತ್ವ, ನಾವು ಆ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಸರ್ಕಾರ ರಚಿಸುವ ಅಧಿಕಾರ ಅವರಿಗಿದೆ” ಎಂದರು.
ಇದನ್ನು ಓದಿದ್ದೀರಾ? ಕಾರ್ಯತಂತ್ರ ರೂಪಿಸಲು ಎನ್‌ಡಿಎ, ಇಂಡಿಯಾ ಒಕ್ಕೂಟ ಸಜ್ಜು
ಹಾಗೆಯೇ “ನಮಗೆ ಬೇಕಾದಷ್ಟು ಸ್ಥಾನವಿದೆ. ನಮ್ಮನ್ನು ಜನರು 250 ಕ್ಷೇತ್ರದಲ್ಲಿ ಗೆಲ್ಲಿಸಿದ್ದಾರೆ. ಸರ್ಕಾರ ರಚಿಸುವ ಅಧಿಕಾರ ನಮಗಿದೆ. ಪ್ರಜಾಪ್ರಭುತ್ವದ ಜೊತೆ ನಿಲ್ಲಬೇಕೇ ಅಥವಾ ಸರ್ವಾಧಿಕಾರದ ಪರವಾಗಿ ನಿಲ್ಲಬೇಕೆ ಎಂಬುವುದನ್ನು ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ನಿರ್ಧರಿಸಬೇಕು” ಎಂದು ತಿಳಿಸಿದರು.
ಇನ್ನು ಚಂದ್ರ ಬಾಬು ನಾಯ್ಡು ಈಗಾಗಲೇ ಎನ್‌ಡಿಎ ಪರವಾಗಿದ್ದೇವೆ ಎಂದು ಘೋಷಣೆ ಮಾಡಿದ್ದು, ಸ್ಪೀಕರ್ ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಆದರೆ ಎನ್‌ಡಿಎ ಸೇರುವುದೋ ಇಂಡಿಯಾ ಕೂಟ ಸೇರುವುದೋ ಎಂಬ ಬಗ್ಗೆ ನಿತೀಶ್ ಕುಮಾರ್ ಈವರೆಗೂ ನಿರ್ಧಾರ ಮಾಡಿಲ್ಲ.
ರಾಹುಲ್ ಗಾಂಧಿಯವರನ್ನು ‘ ಮೂರ್ಖರ ನಾಯಕ ‘ ಎಂದು ಝರಿದ ಮೋದಿಗೆ ಜನರೇ ಸರಿಯಾದ ಪ್ರತ್ಯುತ್ತರ ನೀಡಿದ್ದಾರೆ.
ವಾರಣಾಸಿಯ ಜನರು ಮೋದಿ ಅವರನ್ನು ಮತ್ತೊಮ್ಮೆ ಚುನಾಯಿಸಿದ್ದಾರೆ, ಬಹಳ ಕಡಿಮೆ ಅಂತರದಿಂದ !
ರಾಯಬರೇಲಿ ಹಾಗೂ ವಯನಾಡ್ ಕ್ಷೇತ್ರಗಳಿಂದ ರಾಹುಲ್ ಗಾಂಧಿ ಗೆದ್ದು ಬಂದಿದ್ದಾರೆ , ಭಾರಿ ಬಹುಮತದಿಂದ !
ದೇಶಕ್ಕೆ ಒಬ್ಬನೇ ಪ್ರಧಾನಿ ನಿಜ , ಅದರೆ ನೀವೊಬ್ಬರೇ ದೇಶದ ನಾಯಕನಲ್ಲ !