ಕೃಷಿರಂಗ | ಜಿಕೆವಿಕೆ ಭೂಮಿ ಉಳಿಸಿದ ಹೋರಾಟಕ್ಕೆ 25 ವರ್ಷಗಳು: ರೈತರ ಬಾಳಿಗೆ ಬೆಳಕಾದ ವಿಶ್ವವಿದ್ಯಾಲಯ

Date:

ಜಿಕೆವಿಕೆಯ ಭೂಮಿ ಉಳಿಸಿದ ಐತಿಹಾಸಿಕ ಜಯದ ಹೋರಾಟ ಜರುಗಿ 25 ವರ್ಷಗಳು ಸಂದ ಸಂದರ್ಭದಲ್ಲಿ ಅದರ ಸವಿ ನೆನೆಪಿಗಾಗಿ ಸೆಪ್ಟೆಂಬರ್ 24, 2026ರಂದು ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಚಿಂತನ ಮಂಥನ ಗೋಷ್ಟಿಯನ್ನು ಏರ್ಪಡಿಸಲಾಗಿತ್ತು. ಕರ್ನಾಟಕ ಕೃಷಿ ಮತ್ತು ಸಂಬಂಧಿತ ವಿಶ್ವವಿದ್ಯಾಲಯಗಳ ನಿವೃತ್ತ ಪ್ರಾಧ್ಯಾಪಕರು, ವಿಜ್ಞಾನಿಗಳು ಹಾಗೂ ಹಳೆಯ ವಿದ್ಯಾರ್ಥಿಗಳ ವೇದಿಕೆಯು ಕಾರ್ಯಕ್ರಮವನ್ನು ಆಯೋಜಿಸಿತ್ತು.

- Advertisement -


ಅಂದು ಸೆಪ್ಟೆಂಬರ್ 27, 2001. ಬೆಂಗಳೂರಿನ ಜಿಕೆವಿಕೆಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ಸರ್ಪಗಾವಲಿನಲ್ಲಿ ಜೆಸಿಬಿಗಳು ಘರ್ಜಿಸುತ್ತಿದ್ದವು. ಜೀವವೈವಿಧ್ಯತೆಯ ಮರಗಿಡಗಳನ್ನು ಬೀಳಿಸುತ್ತಾ ನೆಲಸಮ ಮಾಡುತ್ತಿದ್ದವು. ಖಾಸಗಿಯವರಿಂದ ಬಯೋಟೆಕ್ ಪಾರ್ಕ್ ಸ್ಥಾಪಿಸಲು 100 ಎಕರೆ ಭೂಮಿಯನ್ನು ವಿಶ್ವವಿದ್ಯಾಲಯದಿಂದ ಸರ್ಕಾರದ ಸುಪರ್ಧಿಗೆ ತೆಗೆದುಕೊಳ್ಳುವುದು ಸರ್ಕಾರದ ಉದ್ದೇಶವಾಗಿತ್ತು. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಆ ಸ್ಥಳದಲ್ಲಿ ಭೂಮಿಯ ಹಸ್ತಾಂತರಕ್ಕೆ ಒಪ್ಪಿಗೆಯನ್ನು ಕೊಟ್ಟಿರಲಿಲ್ಲ. ಮರಗಿಡಗಳು ಭೂಮಿಗೆ ಉರುಳುತ್ತಿದ್ದಂತೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯು ಸ್ಥಳಕ್ಕೆ ಧಾವಿಸಿದರು. ಅವರು ಸುಂದರಲಾಲ್ ಬಹುಗುಣರ ‘ಅಪ್ಪಿಕೊ ಚಳವಳಿ’ಯನ್ನು ಸಾಕಾರಗೊಳಿಸಿದ್ದರು. ಆದರೆ, ಪೋಲಿಸ್ ಪಡೆಯು ಅವರ ಮೇಲೆ ಮುಗಿಬಿದ್ದಿತು. ಕ್ಷಣಾರ್ಧದಲ್ಲಿ ಲಾಠಿ ಚಾರ್ಜ್. ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ, ಅಧಿಕಾರಿಗಳು ಗಾಯಗೊಂಡರು. ಹಲವರ ಬಂಧನವೂ ಜರುಗಿತು.

ಮಾಧ್ಯಮಗಳು ಸುದ್ದಿ ಮಾಡಿದವು. ರೈತ ಮುಖಂಡರಾದ ಪ್ರೊ. ಎಂ. ಡಿ. ನಂಜುಂಡಸ್ವಾಮಿ, ರಾಜಕೀಯ ನಾಯಕರಾದ ಬಿ. ಸೋಮಶೇಖರ್, ಬಸವರಾಜ ಬೊಮ್ಮಾಯಿ, ಸಿ. ಭೈರೇಗೌಡ, ಕೆ. ಎಚ್. ಶ್ರೀನಿವಾಸ್, ಸುರೇಶ್ ಕುಮಾರ್, ಪರಿಸರವಾದಿಗಳು, ಪ್ಲಾಂಟರ್ಸ್ ಸಂಘಟನೆ, ರೈತ, ದಲಿತ, ಪ್ರಗತಿಪರ ಚಳುವಳಿಗಳು ಸ್ಥಳಕ್ಕೆ ಆಗಮಿಸಿ ‘ಜಿಕೆವಿಕೆ ಭೂಮಿ ಉಳಿಸಿ’ ಹೋರಾಟಕ್ಕೆ ಬೆಂಬಲ ಸೂಚಿಸಿದವು. ಮಾನವ ಹಕ್ಕುಗಳ ಸಂಘಟನೆಗಳು ಘಟನೆಯ ಅಧ್ಯಯನ ನಡೆಸಿದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಹವ್ಯಾಸದಿಂದ ಉದ್ಯಮದತ್ತ: ಶಿರಸಿ ಮಹಿಳೆಯರ ʻಡೇರೆʼ ಕೃಷಿಗೆ ಸ್ವಾವಲಂಬನೆಯ...

ಮನೆಯಂಗಳದ ಅಂದ ಹೆಚ್ಚಿಸುವ ಹೂವಷ್ಟೇ ಆಗಿದ್ದ ಡೇರೆ ಹೂವು (ಡೇಲಿಯಾ), ಇದೀಗ ಮಲೆನಾಡಿನ ಮಹಿಳೆಯರ ಪಾಲಿಗೆ ಹೊಸ ಆದಾಯದ ಸಾಧ್ಯತೆಗಳನ್ನು ತೆರೆದಿಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಶಿವಮೊಗ್ಗ...

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...
1. Lathi Charge at GKVK
ಪೋಲಿಸರಿಂದ ಲಾಠಿ ಚಾರ್ಜ್, ಗಾಯಗೊಂಡ ಸಿಬ್ಬಂದಿ
3. VC Dr. A M Krishnappa
ಘಟನೆಯಿಂದ ಚಿಂತಿತರಾದ ಕುಲಪತಿ ಡಾ. ಎ. ಎಂ. ಕೃಷ್ಣಪ್ಪ

ಕುಲಪತಿಗಳಾಗಿದ್ದ ಡಾ. ಎ. ಎಂ. ಕೃಷ್ಣಪ್ಪನವರು ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಯ ಮೇಲಾದ ದೌರ್ಜನ್ಯವನ್ನು ಕಂಡು ನೊಂದುಕೊಂಡರು. ರಾಜ್ಯಪಾಲರಾದ ವಿ. ಎಸ್. ರಮಾದೇವಿಯವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಲು ಮುಂದಾದರು. ವಿದ್ಯಾಮಾತೆಯೆಂಬ ಸಂಸ್ಥೆಯ ಮೇಲಾದ ದಬ್ಬಾಳಿಕೆಯನ್ನು ಸಹಿಸಲಾಗದು ಎಂದರು. ಆದರೆ, ಮಾತೃ ಹೃದಯದ ರಾಜ್ಯಪಾಲರು ಜಿಕೆವಿಕೆ ಭೂಮಿಯನ್ನು ಉಳಿಸಲು ತಮ್ಮ ಸಹಕಾರವೂ ಇರುತ್ತದೆಯೆಂದರು. ಘಟನೆ ನಡೆದಾಗ ವಿದೇಶ ಪ್ರವಾಸದಲ್ಲಿದ್ದ ಮುಖ್ಯಮಂತ್ರಿಗಳಾದ ಎಸ್. ಎಂ. ಕೃಷ್ಣರವರು ವಾಪಸ್ಸು ಬಂದ ಮೇಲೆ ಮಾಹಿತಿ ತಂತ್ರಜ್ಞಾನ ಸಚಿವ ಬಿ. ಕೆ. ಚಂದ್ರಶೇಖರ್ ಮತ್ತು ಕೃಷಿ ಸಚಿವ ಟಿ. ಬಿ. ಜಯಚಂದ್ರರೊಂದಿಗೆ ಚರ್ಚಿಸಿ ಬಯೋಟೆಕ್ ಪಾರ್ಕಿನ ಸ್ಥಾಪನೆಗಾಗಿ ಜಿಕೆವಿಕೆಯ ಭೂಮಿಯನ್ನು ವಶಪಡಿಸಿಕೊಳ್ಳುವ ಯೋಜನೆಯನ್ನು ಕೈಬಿಟ್ಟರು. ನಂತರ ಬಯೋಟೆಕ್ ಪಾರ್ಕ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ಥಾಪನೆಯಾಯಿತು. ಜಿಕೆವಿಕೆಯ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಯ ಹೋರಾಟಕ್ಕೆ ಅಭೂತಪೂರ್ವ ಜಯ ಸಿಕ್ಕಿತು.

ಐತಿಹಾಸಿಕ ಜಯದ ಸವಿನೆನಪಿನ ಕಾರ್ಯಕ್ರಮ

ಜಿಕೆವಿಕೆಯ ಭೂಮಿ ಉಳಿಸಿದ ಐತಿಹಾಸಿಕ ಜಯದ ಹೋರಾಟ ಜರುಗಿ 25 ವರ್ಷಗಳು ಸಂದ ಸಂದರ್ಭದಲ್ಲಿ ಅದರ ಸವಿ ನೆನೆಪಿಗಾಗಿ ಸೆಪ್ಟೆಂಬರ್ 24, 2026ರಂದು ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಚಿಂತನ ಮಂಥನ ಗೋಷ್ಟಿಯನ್ನು ಏರ್ಪಡಿಸಲಾಗಿತ್ತು. ಕರ್ನಾಟಕ ಕೃಷಿ ಮತ್ತು ಸಂಬಂಧಿತ ವಿಶ್ವವಿದ್ಯಾಲಯಗಳ ನಿವೃತ್ತ ಪ್ರಾಧ್ಯಾಪಕರು, ವಿಜ್ಞಾನಿಗಳು ಹಾಗೂ ಹಳೆಯ ವಿದ್ಯಾರ್ಥಿಗಳ ವೇದಿಕೆಯು ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದ ಆಯೋಜನೆಯಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಡಾ. ಟಿ. ಎನ್. ಪ್ರಕಾಶ್‍ರವರ ಶ್ರಮ ಎದ್ದು ಕಾಣುತ್ತಿತ್ತು. ರಾಜ್ಯ ಹಣಕಾಸು ಆಯೋಗದ ಆಧ್ಯಕ್ಷರಾದ ಸಿ. ನಾರಾಯಣ ಸ್ವಾಮಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಹೋರಾಟದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು. ಮಾಜಿ ಕುಲಪತಿಗಳಾದ ಡಾ. ಕೆ. ನಾರಾಯಣಗೌಡರವರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಕುಲಪತಿಗಳಾದ ಡಾ. ಪಿ. ಜಿ. ಚೆಂಗಪ್ಪ, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಚುಕ್ಕಿ ನಂಜುಂಡಸ್ವಾಮಿ, ವಕೀಲರಾದ ಡಾ. ಸಿ. ಎಸ್. ದ್ವಾರಕಾನಾಥ್ ಮತ್ತಿತರರು ಅಂದಿನ ಹೋರಾಟದ ಅನುಭವ ಮತ್ತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ರೈತರ ಬಾಳಿಗೆ ಬೆಳಕಾದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಸ್ಥಾಪನೆಯಾದ 1965ರಿಂದ 2025ರವರೆಗೆ, 60 ವರ್ಷಗಳಲ್ಲಿ ಬಿಡುಗಡೆ ಮಾಡಿದ ಹಲವು ಬೆಳೆ ಹಾಗೂ ಪ್ರಾಣಿ ತಳಿಗಳ ಕುರಿತು 2025ರಲ್ಲಿ ನಡೆದ ಕೃಷಿ ಮೇಳದ ಸಂದರ್ಭದಲ್ಲಿ 288 ಪುಟಗಳ ಪುಸ್ತಕವೊಂದನ್ನು ಪ್ರಕಟಿಸಿದೆ. ಅದೊಂದು ಮಹತ್ವದ ದಾಖಲೆ. ವಿಶ್ವವಿದ್ಯಾಲಯದಿಂದ ಬಿಡುಗಡೆಯಾದ ಒಟ್ಟು 337 ತಳಿಗಳ ವಿವರಗಳಿವೆ. ಅದರಲ್ಲಿ ಒದಗಿಸಿರುವ ಮಾಹಿತಿಯಂತೆ, ವಿಶ್ವವಿದ್ಯಾಲಯವು ಇಡೀ ವಿಶ್ವದಲ್ಲೇ ಮೊಟ್ಟಮೊದಲಿಗೆ ಹತ್ತಿಯಲ್ಲಿ ವರಲಕ್ಷ್ಮಿ ಎಂಬ ಹೈಬ್ರಿಡ್ ತಳಿಯನ್ನು ಉತ್ಪಾದಿಸಿ 1970ರಲ್ಲಿ ಬಿಡುಗಡೆ ಮಾಡಿದೆ. ಅದು ಧಾರವಾಡದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಕೊಡುಗೆ. ಕಾಟನ್ ಕಾತರಕಿ ಎಂಬ ವಿಜ್ಞಾನಿಯ ಶ್ರಮವದು. ಹಾಗೆಯೇ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಇಡೀ ರಾಷ್ಟ್ರದಲ್ಲೇ ಮೊಟ್ಟಮೊದಲಿಗೆ ಕೆಆರ್‍ಎಚ್ -1 ಎಂಬ ಹೈಬ್ರಿಡ್ ಭತ್ತದ ತಳಿಯನ್ನು 1995ರಲ್ಲಿ ಮತ್ತು ಮೊಟ್ಟಮೊದಲಿಗೆ ಬಿಎಸ್‍ಎಚ್ -1 ಎಂಬ ಸೂರ್ಯಕಾಂತಿ ಹೈಬ್ರಿಡ್ ತಳಿಯನ್ನು 1980ರಲ್ಲಿ ಬಿಡುಗಡೆ ಮಾಡಿದೆ. ಇದು ಕನ್ನಡಿಗ ಕೃಷಿ ವಿಜ್ಞಾನಿಗಳ ಅಪರಿಮಿತ ಸಾಧನೆ. ವಿಶ್ವವಿದ್ಯಾಲಯದ ಸಾರ್ವಕಾಲಿಕ ಹೆಗ್ಗಳಿಕೆ.

5. Discussion on Struggle of GKVK after 25 years1
ಜಿಕೆವಿಕೆ ಹೋರಾಟದ ನೆನಪಿನಲ್ಲಿ ಚಿಂತನಗೋಷ್ಠಿ

ರೈತರ ಬಾಳಿಗೆ ಬೆಳಕಾದ ಜಿಕೆವಿಕೆ

ಜಿಕೆವಿಕೆಯು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನವಾಗಿದೆ. ಅಂದಿನ ಪ್ರಧಾನ ಮಂತ್ರಿಗಳಾದ ಶ್ರೀಮತಿ ಇಂದಿರಾ ಗಾಂಧಿಯವರು ಜುಲೈ 12, 1969ರಲ್ಲಿ ಜಿಕೆವಿಕೆ ಆವರಣವನ್ನು ಉದ್ಘಾಟಿಸಿದರು. ಅದರ ವಿಸ್ತೀರ್ಣ ಸುಮಾರು 1300 ಎಕರೆಗಳು. ಅಲ್ಲಿ ಕೃಷಿ ಮಹಾವಿದ್ಯಾಲಯವಿದೆ. ತೋಟಗಾರಿಕಾ ಮಹಾವಿದ್ಯಾಲಯವಿದೆ. ಕೃಷಿ ಇಂಜಿನಿಯರಿಂಗ್ ಮಹಾವಿದ್ಯಾಲಯವಿದೆ. ಮೂಲ ವಿಜ್ಞಾನ ಮತ್ತು ಮಾನವಿಕ ಶಿಸ್ತುಗಳ ಮಹಾವಿದ್ಯಾಲಯವಿತ್ತು. ಸಂಶೋಧನೆಗಾಗಿ ಪ್ರಾದೇಶಿಕ ಸಂಶೋಧನಾ ಕೇಂದ್ರವಿತ್ತು. ತದನಂತರ, ವಲಯ ಕೃಷಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕಳೆದ ಕೃಷಿ ಮೇಳದ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಪುಸ್ತಕದಲ್ಲಿ ಜಿಕೆವಿಕೆಯ ಸಂಶೋಧನಾ ಕೇಂದ್ರದಿಂದ ಬಿಡುಗಡೆಯಾದ ವಿವಿಧ ತಳಿಗಳ ವಿವರಗಳನ್ನು ಕೊಡಲಾಗಿದೆ. ಜಿಕೆವಿಕೆಯು ರೈತರ ಒಳಿತಿಗಾಗಿ ಸದಾ ಶ್ರಮಿಸಿದೆ. ಅಲ್ಲಿಂದ ಬಿಡುಗಡೆಯಾದ ತಳಿಗಳು ರಾಜ್ಯ ಹಾಗೂ ರಾಷ್ಟ್ರಕ್ಕೆ ಪಸರಿಸಿವೆ. ರೈತರ ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಜಿಕೆವಿಕೆಯ ಸಂಶೋಧನಾ ಕೇಂದ್ರದಿಂದ ಬಿಡುಗಡೆಯಾದ ಸುಮಾರು 100ಕ್ಕೂ ಹೆಚ್ಚು ಅಧಿಕ ಇಳುವರಿಯ ತಳಿಗಳ ಪಟ್ಟಿಯನ್ನು ಇಲ್ಲಿ ಒದಗಿಸಲಾಗಿದೆ. ಓದುವ ಕ್ರಮ : ತಳಿಯ ಹೆಸರು ಮತ್ತು ಆವರಣದಲ್ಲಿ ಬಿಡುಗಡೆಯಾದ ವರ್ಷ.

ಭತ್ತದ ತಳಿಗಳು : ಶಾರದ (2007), ಎಂಎಎಸ್-26 (2008), ಎಆರ್‍ಬಿ-6 (2009), ಪೌಸ್ಟಿಕ್–1 (2016), ಪೌಸ್ಟಿಕ್–7 (2016) ಮತ್ತು ಪೌಸ್ಟಿಕ್–9 (2016),
ರಾಗಿ ತಳಿಗಳು : ಎಂಆರ್-1 (1990), ಜಿಪಿಯು-28 (1997), ಜಿಪಿಯು-26 (1998), ಜಿಪಿಯು-45 (2001), ಜಿಪಿಯು-48 (2005), ಎಂಎಲ್–365 (2008), ಜಿಪಿಯು-67 (2009), ಜಿಪಿಯು-66 (2009) ಮತ್ತು ಎಂಎಲ್-322 (2023).
ನವಣೆ ತಳಿ: ಜಿಪಿಯುಎಫ್-3 (2021).
ಬರಗು ತಳಿಗಳು: ಜಿಪಿಯುಪಿ-21 (2004), ಜಿಪಿಯುಪಿ-28 (2021) ಮತ್ತು ಜಿಪಿಯುಪಿ-32 (2023).
ಸಾಮೆ ತಳಿಗಳು : ಜಿಪಿಯುಎಲ್-06 (2021) ಮತ್ತು ಜಿಪಿಯುಎಲ್-11 (2023).
ಕೊರಲೆ ತಳಿ: ಜಿಪಿಯುಬಿಟಿ 2 (2022).
ಹಕ್ಕಿ ಹುರುಳಿ ಕಾಯಿ ತಳಿ: ಕೆಬಿಆರ್ -1 (2018).
ದಂಟಿನ ಸೊಪ್ಪಿನ ತಳಿ: ಕೆಬಿಜಿಎ-4 (2017) ಮತ್ತು ಕೆಬಿಜಿಎ-15 (2021).
ಹಲಸಂದೆ ತಳಿಗಳು : ಸಿ-152 (1976), ಲೊಲಿತಾ (1976), ಕೆಎಚ್‍ಸಿಡಬ್ಲ್ಯೂ-2 (1979), ಟಿವಿಎಕ್ಸ್-944-02ಎಫ್ (1987), ಕೆಬಿಸಿ-1 (1998), ವಿ-16 (1991), ಕೆಬಿಸಿ-2 (1998), ಪಿಕೆಬಿ-6 (2006), ಐಟಿ-38956-1 (2006), ಕೆಎಂ-5 (2007), ಪಿಕೆಬಿ-4 (2010), ಎವಿ-5 (2012), ಕೆಬಿಸಿ-9 (2017), ಪಿಜಿಸಿಪಿ-6 (2019), ಕೆಬಿಸಿ-11 (2020) ಮತ್ತು ಕೆಬಿಸಿ-12 (2024).
ತೊಗರಿ ತಳಿಗಳು : ಟಿಟಿಬಿ-7 (1987), ಬಿಆರ್‍ಜಿ-1 (2004), ಬಿಆರ್‍ಜಿ-2 (2005), ಐಸಿಪಿ-7035 (2005), ಬಿಆರ್‍ಜಿ-4 (2012), ಬಿಆರ್‍ಜಿ-5 (2014) ಮತ್ತು ಬಿಆರ್‍ಜಿ-3 (2017).
ಸೋಯಾ ಅವರೆ ತಳಿಗಳು : ಡೇವಿಸ್ (1976), ಇಂಪ್ರೂವ್ಡ್ ಪೆಲಿಕಾನ್ (1976), ಹಾರ್ದಿ (1976), ಕೆಎಚ್‍ಎಸ್‍ಬಿ-2 (1979), ಮೊನೆಟ್ಟಾ (1989), ಸ್ನೇಹಾ (1996), ಕರುಣೆ (2009), ಪೂಜಾ (2010) ಮತ್ತು ಕೆಬಿಎಸ್-23 (2018).
ಕಡಲೆ ಕಾಳಿನ ತಳಿಗಳು : ಜೆಜಿ-11 (2006), ವಿಶಾಲ್ (2006) ಮತ್ತು ಕಾಕ್-2 (2006).
ಅವರೆ ತಳಿಗಳು : ಹೆಬ್ಬಾಳ ಅವರೆ-4 (2007) ಮತ್ತು ಹೆಬ್ಬಾಳ ಅವರೆ-5 (2022).
ಹುರುಳಿ ತಳಿಗಳು: ಕೆಬಿಎಚ್-1 (1990) ಮತ್ತು ಪಿಎಚ್‍ಜಿ-9 (1998).
ನೆಲಗಡಲೆ ತಳಿಗಳು : ಜಿಕೆವಿಕೆ-5 (2015) ಮತ್ತು ಜಿಕೆವಿಕೆ-27 (2020).
ಸೂರ್ಯಕಾಂತಿ ತಳಿಗಳು : ಇಸಿ-68414 (1972), ಮೋರ್ಡೆನ್ (1979), ಬಿಎಸ್‍ಎಚ್-1 (1980), ಇಸಿ-68415 (1984), ಕೆಬಿಎಸ್‍ಎಚ್-1 (1987), ಕೆಬಿಎಸ್‍ಎಚ್-41 (2000), ಕೆಬಿಎಸ್‍ಎಚ್-42 (2000), ಕೆಬಿಎಸ್‍ಎಚ್-44 (2002), ಕೆಬಿಎಸ್‍ಎಚ್-53 (2008), ಕೆಬಿಎಸ್‍ಎಚ್-78 (2018), ಕೆಬಿಎಸ್‍ಎಚ್-85 (2023), ಕೆಬಿಎಸ್‍ಎಚ್-90 (2024) ಮತ್ತು ಕೆಬಿಎಸ್‍ಎಚ್-88 (2025).
ಎಳ್ಳು ತಳಿಗಳು : ಈಟಿ-1 (2012) ಮತ್ತು ಜಿಕೆವಿಕೆಎಸ್-1 (2022).
ಹರಳು ತಳಿಗಳು: ಐಸಿಎಚ್-66 (2022) ಮತ್ತು ಬಿಸಿಎಚ್-162 (2025).
ಹುಚ್ಚೆಳ್ಳು ತಳಿಗಳು : ಕೆಬಿಎನ್-1 (2006) ಮತ್ತು ಕೆಬಿಎನ್-2 (2022).
ಟೊಮ್ಯಾಟೊ ತಳಿಗಳು : ಎನ್‍ಟಿಡಿಆರ್-1 (1978), ನಂದಿ (2001), ಸಂಕ್ರಾಂತಿ (2001) ಮತ್ತು ವೈಭವ್ (2001).
ಹಲಸು ತಳಿಗಳು : ಸ್ವರ್ಣ ಹಲಸು (2009), ಲಾಲ್‍ಬಾಗ್ ಮಧುರ (2019), ಬೈರಚಂದ್ರ (2021) ಮತ್ತು ಜಿಕೆವಿಕೆ ರೆಡ್ ಜಾಕ್ (2023).
ಮೆಣಸಿನಕಾಯಿ ತಳಿಗಳು : ಸಿಲೋನ್ (2002) ಮತ್ತು ಸೋನಿಯಾ (2013).
ದಾಳಿಂಬೆ ತಳಿ : ಜ್ಯೋತಿ (1985).
ಮಾವಿನ ತಳಿ : ಎಂಎ-1 ಕ್ಲೋನ್ (1998).
ಚಕ್ಕೋತ ತಳಿ : ವೇದ (2009)

ಕೊನೆಯ ಮಾತು
ಜೀವವೈವಿಧ್ಯ ಪಾರಂಪರಿಕ ತಾಣವಾಗಿರುವ ಜಿಕೆವಿಕೆ
ಕರ್ನಾಟಕ ಸರ್ಕಾರವು ದಿನಾಂಕ: 02.09.2010ರಂದು ಆದೇಶ ಹೊರಡಿಸಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ವನ್ನು ಜೀವವೈವಿಧ್ಯ ಪಾರಂಪರಿಕ ತಾಣ (ಃioಜiveಡಿsiಣಥಿ ಊeಡಿiಣಚಿge Siಣe :ಃಊS)ವೆಂದು ಘೋಷಿಸಿದೆ. ಇಂತಹ ಘೋಷಣೆಗೆ 1992ರಲ್ಲಿ ಬ್ರೆಜಿಲ್ ದೇಶದ ರಿಯೋ ಡಿ ಜನೈರೋದಲ್ಲಿ ನಡೆದ ಶೃಂಗ ಸಮ್ಮೇಳನ ಮೂಲ ಕಾರಣ. ಜಿಕೆವಿಕೆಯ ಒಟ್ಟು ವಿಸ್ತೀರ್ಣವಾದ 1300 ಎಕರೆಗಳ ಪೈಕಿ ಸುಮಾರು 412 ಎಕರೆಗಳನ್ನು ಜೀವವೈವಿಧ್ಯ ಪಾರಂಪರಿಕ ತಾಣವೆಂದು ಪರಿಗಣಿಸಲಾಗಿದೆ. ಇಂತಹ ತಾಣವು ಒಂದು ಸಂರಕ್ಷಿತ ಪ್ರದೇಶವಾಗುತ್ತದೆ. ಜೀವವೈವಿಧ್ಯ ಕಾಯ್ದೆ 2002ರ ಸೆಕ್ಷನ್ 37ರ ಪ್ರಕಾರ ರಾಜ್ಯದಲ್ಲಿ ಘೋಷಿಸಲಾದ ಇಂತಹ ಇತರೆ ತಾಣಗಳೆಂದರೆ, ದೇವನಹಳ್ಳಿ ಬಳಿಯ ನಲ್ಲೂರು ಹುಣಸೆತೋಪು, ಚಿಕ್ಕಮಗಳೂರು ಜಿಲ್ಲೆಯ ಹೊಗರೆಕಾನ್ ಮತ್ತು ಶಿವಮೊಗ್ಗ ಜಿಲ್ಲೆಯ ಅಂಬಾರಗುಡ್ಡ. ಇವುಗಳ ಜೊತೆಗೆ ಇತ್ತೀಚೆಗೆ, 2024ರಲ್ಲಿ ಘೋಷಿಸಲಾದ ವಿಜಯಪುರ ಜಿಲ್ಲೆಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವವೈವಿಧ್ಯ ಪಾರಂಪರಿಕ ತಾಣವೂ ಸೇರಿದೆ. ಇಂತಹ ತಾಣಗಳು ಸಂರಕ್ಷಣೆಗೆ ಒಳಪಡುತ್ತವೆ. ಜಿಕೆವಿಕೆಯು ಉತ್ತಮ ಶೈಕ್ಷಣಿಕ ವಾತಾವರಣದ ಕ್ಯಾಂಪಸ್ ಆಗಿದೆ. ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್‍ಗಳಿಗೆ ಹೋಲಿಸಬಹುದಾದ ಮಟ್ಟದಲ್ಲಿದೆ. ಸಂಶೋಧನೆಗೆ ಹೆಸರಾಗಿದೆ. ರೈತ ತರಬೇತಿ ಕೇಂದ್ರದಲ್ಲಿ ನಿರಂತರವಾಗಿ ತರಬೇತಿ ನಡೆಯುತ್ತಿರುತ್ತದೆ. ಪ್ರತಿ ವರ್ಷ ನಡೆಯುವ ಕೃಷಿ ಮೇಳ ಜನಪ್ರಿಯವಾಗಿದೆ, ರೈತ ಸಲಹಾ ಕೇಂದ್ರವಿದೆ. ಬಿತ್ತನೆ ಬೀಜಗಳ ಮಾರಾಟವಿದೆ. ರೈತರು ಮತ್ತು ಸಾರ್ವಜನಿಕರಿಗಾಗಿ ಕೃಷಿ ಸಾಹಿತ್ಯವನ್ನು ಒದಗಿಸುತ್ತಿದೆ. ವಿಶ್ವವಿದ್ಯಾಲಯಗಳ ರಾಷ್ಟ್ರೀಯ ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಸತತವಾಗಿ ಅತ್ಯುತ್ತಮ ಶ್ರೇಯಾಂಕವನ್ನು ಪಡೆಯುತ್ತಿರುವುದು ಕನ್ನಡಿಗರ ಹೆಮ್ಮೆ. ‘ಮಿಷನ್ ಜಿಕೆವಿಕೆ’ ‘ಮಿಷನ್ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ’ ‘ಮಿಷನ್ ಸಮಗ್ರ ಕೃಷಿ ವಿಶ್ವವಿದ್ಯಾಲಯ’ ಎಂಬ ಹೆಸರಿನಲ್ಲಿ ಜಿಕೆವಿಕೆಯನ್ನು ಚಿರಂಜೀವಿಯಂತೆ ಕಾಪಾಡಬೇಕಿದೆ.

WhatsApp Image 2025 07 22 at 12.22.50 PM
ಪ್ರೊ. ಎಂ. ನಾರಾಯಣ ಸ್ವಾಮಿ
+ posts

ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಎಂ. ನಾರಾಯಣ ಸ್ವಾಮಿ
ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು ವಾಹನ ಸವಾರರ ಗಮನಕ್ಕೆ: ನಿಯಮ ಪಾಲಿಸದಿದ್ದರೆ ಡ್ರೈವಿಂಗ್‌ ಲೈಸೆನ್ಸ್‌ ರದ್ದು!

ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪೊಲೀಸ್...

ಮತದಾರರ ಹೆಸರು ಅಳಿಸಲು ಫಾರಂ-7 ದುರ್ಬಳಕೆ; ತನಿಖೆಗೆ ಜಾಗೃತ ಕರ್ನಾಟಕ ಆಗ್ರಹ

ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಆರೋಪಿಯನ್ನು ಹಿಡಿದರೂ FIRನಲ್ಲಿ ಹೆಸರಿಲ್ಲ; ಯುಪಿ ಪೊಲೀಸರ ನಡೆಗೆ ಸುಪ್ರೀಂ ಅಸಮಾಧಾನ

ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ತನಿಖೆಯಲ್ಲಿ ಉತ್ತರ ಪ್ರದೇಶ ಪೊಲೀಸರ...

ಇಡಿ ಅಧಿಕಾರಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ಪ್ರಕರಣ: ಪ್ರತಿಕ್ರಿಯಿಸಲು ವಿಳಂಬ ಮಾಡಿದ ಸಿಎಂ ಸೊರೇನ್‌ಗೆ ಜಾರ್ಖಂಡ್ ಹೈಕೋರ್ಟ್ ದಂಡ

ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ...