ನೆಹರೂ ನಿಂದನೆಗೆ ಅವಕಾಶ ಹುಡುಕುವ ಮೋದಿ ಮುಂದೆಯೇ ದೇಶದ ಮೊದಲ ಪ್ರಧಾನಿ ಗುಣಗಾನ ಮಾಡಿದ ವಿಯೆಟ್ನಾಂ ಅಧ್ಯಕ್ಷ!

Date:

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ನಿಂದನೆ ಮಾಡಲು ಆಗಾಗ ಅವಕಾಶ ಹುಡುಕುವವರು. ಸಣ್ಣ ಅವಕಾಶ ಸಿಕ್ಕರೂ ಅದನ್ನು ಬಿಡದೆ ನೆಹರೂ ನಿಂದನೆಗೆ ಇಳಿಯುವವರು. ತೆಗಳುವ ಭರದಲ್ಲಿ ಸುಳ್ಳುಗಳ ಸರಮಾಲೆ ಪೋಣಿಸಿ ಭಾಷಣ ಮಾಡುವವರು ನಮ್ಮ ಪ್ರಧಾನಿ ನರೇಂದ್ರ ಮೋದಿ. ಹಾಗಿರುವಾಗ ಪ್ರಧಾನಿ ಮೋದಿ ಮುಂದೆಯೇ ವಿಯೆಟ್ನಾಂ ಅಧ್ಯಕ್ಷ ಟೊ ಲ್ಯಾಮ್ ಅವರು ನೆಹರೂ ಗುಣಗಾನ ಮಾಡಿದ್ದಾರೆ.

- Advertisement -

ಟೊ ಲ್ಯಾಮ್ ಜವಾಹರಲಾಲ್ ನೆಹರೂ ಅವರನ್ನು ಸ್ಮರಿಸಿದ್ದು ಸದ್ಯ ರಾಜತಾಂತ್ರಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ದೇಶದಲ್ಲಿ ಮೋದಿ ಸರ್ಕಾರ ನೆಹರೂ ವಿರುದ್ಧ ವಾಗ್ದಾಳಿ ನಡೆಯುತ್ತಿರುವಾಗಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆಹರೂ ಅವರ ಪ್ರಭಾವ ಇಂದಿಗೂ ಮಸುಕಾಗಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜನಪ್ರತಿನಿಧಿಗಳ ಘನತೆ ಇಲ್ಲದ ಮಾತಿಗೆ ಲಗಾಮು ಬೀಳಬೇಕು

ನವದೆಹಲಿಯಲ್ಲಿ ನಡೆದ ಮಾತುಕತೆಯ ವೇಳೆ ಲ್ಯಾಮ್, “ಹನೋಯಿ ವಿಮೋಚನೆಯಾದ ಒಂದು ವಾರದ ನಂತರ (1954ರಲ್ಲಿ) ವಿಯೆಟ್ನಾಂಗೆ ಭೇಟಿ ನೀಡಿದ ಮೊದಲ ವಿದೇಶಿ ನಾಯಕ ಜವಾಹರಲಾಲ್ ನೆಹರೂ ಎಂಬುದು ನಮಗೆ ಎಂದಿಗೂ ಮರೆಯಲಾಗದ ಸಂಗತಿ” ಎಂದು ಹೇಳಿದ್ದಾರೆ. ಹಾಗೆಯೇ ವಿಯೆಟ್ನಾಂ ಮತ್ತು ಭಾರತದ ನಡುವಿನ ಐತಿಹಾಸಿಕ ಸ್ನೇಹ, ವಿಶೇಷವಾಗಿ ಹೋ ಚಿ ಮಿನ್ಹ್ ಮತ್ತು ಜವಾಹರಲಾಲ್ ನೆಹರೂ ನಡುವಿನ ನಿಕಟ ಸಂಬಂಧವನ್ನೂ ಉಲ್ಲೇಖಿಸಿದ್ದಾರೆ.

ವಿಯೆಟ್ನಾಂ ಅಧ್ಯಕ್ಷರು ನೆಹರೂ ಅವರನ್ನು ಕೇವಲ ಭಾರತದ ಮೊದಲ ಪ್ರಧಾನಿಯಾಗಿ ಮಾತ್ರವಲ್ಲದೆ, ವಿಯೆಟ್ನಾಂನ ಹೋರಾಟದ ದಿನಗಳಲ್ಲಿ ಬೆಂಬಲ ನೀಡಿದ ನಾಯಕರಾಗಿ ಗೌರವಿಸಿದ್ದಾರೆ. ಅಲಿಪ್ತ ಚಳವಳಿಯ (Non-Aligned Movement) ಮೂಲಕ ವಿಯೆಟ್ನಾಂನಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆಹರೂ ನೀಡಿದ ಧ್ವನಿಯನ್ನು ಟೊ ಲ್ಯಾಮ್ ಸ್ಮರಿಸಿದ್ದಾರೆ.

ಇಂದು ಭಾರತಕ್ಕೆ ವಿವಿಧ ದೇಶಗಳ ನಾಯಕರು ಆಗಮಿಸಲು, ನಮಗೆ ಬೆಂಬಲ ನೀಡಲು ಮೋದಿ ಸರ್ಕಾರದ ಸಾಧನೆಯೇ ಕಾರಣ ಎಂಬಂತೆ ಕೇಂದ್ರ ಬಿಂಬಿಸುತ್ತಿದೆ. ನೆಹರೂ ನಿಂದನೆ ಮಾಡುತ್ತಲೇ ಬಂದಿದೆ. ಆದರೆ ವಿದೇಶಿ ನಾಯಕರು ಭಾರತಕ್ಕೆ ಬಂದಾಗ ನೆಹರೂ ಗುಣಗಾನ ಮಾಡಿರುವುದು ಭಾರತದೊಂದಿಗಿನ ವಿಯೆಟ್ನಾಂನ ಸಂಬಂಧವು ದಶಕಗಳಷ್ಟು ಹಳೆಯದು ಮತ್ತು ಸ್ಥಿರವಾದುದು ಎಂಬ ಸಂದೇಶ ನೀಡಿದ್ದಂತಾಗಿದೆ. ಹಾಗೆಯೇ ಭಾರತವು ‘ದಕ್ಷಿಣದ ರಾಷ್ಟ್ರಗಳ ಧ್ವನಿ’ (Voice of Global South) ಆಗಬೇಕೆಂಬ ಇಂದಿನ ಆಶಯಕ್ಕೆ ಅಂದೇ ನೆಹರೂ ಅಡಿಪಾಯ ಹಾಕಿದ್ದರು ಎಂಬುದನ್ನು ವಿಯೆಟ್ನಾಂ ಅಧ್ಯಕ್ಷ ಪರೋಕ್ಷವಾಗಿ ನೆನಪಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಅರ್ಹ ಮತದಾರರ ಹಕ್ಕು ಕಸಿಯಲು ಬಿಡುವುದಿಲ್ಲ: ಎಂ ಬಿ ಪಾಟೀಲ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ...

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...