ಬಿಹಾರವು ಮತದಾನ ಹೆಚ್ಚಿದಾಗೆಲ್ಲ ಅಧಿಕಾರ ಬದಲಾವಣೆ ಕಂಡಿದೆ; ಈಗ ಏನಾಗಲಿದೆ?

Date:

ಬಿಹಾರವು ಬದಲಾವಣೆ ಬಯಸುತ್ತಿದೆ. ಅಭಿವೃದ್ಧಿ, ಮೂಲಸೌಕರ್ಯ ಹಾಗೂ ಉದ್ಯೋಗಕ್ಕಾಗಿ ಎದುರು ನೋಡುತ್ತಿದೆ. ಆದರೆ, ‘ಎಕ್ಸಿಟ್ ಪೋಲ್‌’ಗಳು ಎನ್‌ಡಿಎ ಮತ್ತೆ ಸರ್ಕಾರ ರಚಿಸುತ್ತದೆ ಎನ್ನುತ್ತಿವೆ. ಆದಾಗ್ಯೂ, ಶುಕ್ರವಾರ ಪ್ರಕಟವಾಗುವ ಫಲಿತಾಂಶವು ಎನ್‌ಡಿಎಗೆ ನಿರಾಳತೆ ನೀಡಬಹುದು ಅಥವಾ ಬದಲಾವಣೆಯನ್ನು ತರಬಹುದು, ಮಹಾಘಟಬಂಧನ್‌ಗೆ ಅಧಿಕಾರ ನೀಡಬಹುದು.

- Advertisement -

ಮತಎಣಿಕೆಗೆ ಕೆಲವೇ ಗಂಟೆಗಳು ಮಾತ್ರವೇ ಬಾಕಿ ಇವೆ. ನಾಳೆ (ನ.14) ಕಣದಲ್ಲಿರುವ ಅಭ್ಯರ್ಥಿಗಳ ಭವಿಷ್ಯ ಗೊತ್ತಾಗಲಿದೆ. ಸದ್ಯ, ಬಿಹಾರದಲ್ಲಿ ಅನಿಶ್ಚಿತತೆ ಮತ್ತು ಮೌನ ಆವರಿಸಿದೆ. ಫಲಿತಾಂಶಕ್ಕಾಗಿ ಬಿಹಾರವೂ ಸೇರಿದಂತೆ ಇಡೀ ದೇಶ ಎದುರು ನೋಡುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

“ಈ ಬಾರಿ, ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದ ಕುರಿತು ಅನಿಶ್ಚಿತತೆ ಉಂಟಾಗಿದೆ. ಎನ್‌ಡಿಎ ಮತ್ತು ಮಹಾಘಟಬಂಧನ್‌ ನಡುವಿನ ಸೋಲು-ಗೆಲುವಿನ ಅಂತರವು ತೀರಾ ಕಡಿಮೆ ಇದೆ ಎಂಬುದನ್ನು ಎಕ್ಸಿಟ್‌ ಪೋಲ್‌ನಲ್ಲಿ ಗಮನಿಸಬಹುದು. ಫಲಿತಾಂಶಕ್ಕೂ ಮುನ್ನ ಸಂಭ್ರಮಿಸುವ ಪರಿಸ್ಥಿತಿ ಇದ್ದಂತೆ ಕಾಣುತ್ತಿಲ್ಲ” ಎಂದು ಹೆಸರು ಹೇಳಲಿಚ್ಚಿಸದ ಎನ್‌ಡಿಎ ನಾಯಕರೊಬ್ಬರು ಹೇಳಿರುವುದಾಗಿ ‘ಟಿಎನ್‌ಐಇ’ ವರದಿ ಮಾಡಿದೆ.

ಬಿಹಾರ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ 68% ಮತದಾನವಾಗಿದೆ. 2020ಕ್ಕೆ (57.29%) ಹೋಲಿಸಿದರೆ, 9.62%ರಷ್ಟು ಹೆಚ್ಚು ಮತದಾನವಾಗಿದೆ. ಈ ದಾಖಲೆಯ ಮತದಾನವು ರಾಜ್ಯದಲ್ಲಿರುವ ಆಡಳಿತ ವಿರೋಧಿ ಅಲೆಯಿಂದ ಸಂಭವಿಸಿದೆ ಎಂದು ಮಹಾಘಟಬಂಧನ್‌ ನಾಯಕರು ಹೇಳುತ್ತಿದ್ದಾರೆ, ಮಹಿಳೆಯರು ಹಾಲಿ ಸರ್ಕಾರದ ಪರವಾಗಿ ಮತದಾನ ಮಾಡಿದ್ದಾರೆಂದು ಎನ್‌ಡಿಎ ಭಾವಿಸಿದೆ.

ದಾಖಲೆಯ ಪ್ರಕಾರ, ಬಿಹಾರವು ಮೂರು ಬಾರಿ ಅಧಿಕಾರ ಬದಲಾವಣೆಯನ್ನು ಕಂಡಿದೆ. ಆ ಮೂರೂ ಸಂದರ್ಭಗಳಲ್ಲಿಯೂ ಮತದಾರರ ಮತದಾನವು ಸರಾಸರಿ 5% ರಷ್ಟು ಹೆಚ್ಚಾಗಿತ್ತು ಎಂಬುದು ಗಮನಾರ್ಹ. ಉದಾಹರಣೆಗೆ, 1962ರ ವಿಧಾನಸಭಾ ಚುನಾವಣೆಯಲ್ಲಿ 44.5% ಮತದಾನವಾಗಿದ್ದರೆ, ನಂತರದ 1967ರಲ್ಲಿ 51.5%ಗೆ ಏರಿಕೆ ಕಂಡಿತ್ತು. ಈ 7% ಅಧಿಕ ಮತದಾನದೊಂದಿಗೆ ಸರ್ಕಾರವು ಪದಚ್ಯುತಿಗೊಂಡಿತು.

ಅದೇ ರೀತಿ,1977ರಲ್ಲಿ 50.5% ಇದ್ದ ಮತದಾನವು 1980ರಲ್ಲಿ 57.3%ಗೆ ಏರಿಕೆಯಾಗಿತ್ತು. ಆಗಲೂ, ಸರ್ಕಾರದ ಬದಲಾಯಿತು. ಆ ನಂತರ, 1990ರಲ್ಲಿ ಮತದಾನವು 62%ಗೆ ಏರಿಕೆಯಾಗುವ ಜೊತೆಗೆ ಮತ್ತೊಮ್ಮೆ ಅಧಿಕಾರದಲ್ಲಿ ಬದಲಾವಣೆ ಸಂಭವಿಸಿತು. ಆಗಲೂ, 1985ರ 56.3% ಮತದಾನಕ್ಕಿಂತ 5.7%ರಷ್ಟು ಮತಪ್ರಮಾಣ ಏರಿಕೆಯಾಗಿತ್ತು.

ಈ ಲೇಖನ ಓದಿದ್ದೀರಾ?: ರಾಷ್ಟ್ರಗೀತೆ, ರಾಷ್ಟ್ರಧ್ವಜ ಒಪ್ಪದವರು ದೇಶದ್ರೋಹಿಗಳಲ್ಲವೇ?

ಅಂದಿನಿಂದ ಈವರೆಗೆ ಬಿಹಾರದಲ್ಲಿ ಮತದಾನ ಪ್ರಮಾಣವು ಏರಿಳಿತಗಳನ್ನು ಕಂಡಿದೆ. ಈ ಬಾರಿಯೂ ಬರೋಬ್ಬರಿ 9.62%ರಷ್ಟು ಮತದಾನ ಹೆಚ್ಚಾಗಿದೆ. ಅಧಿಕಾರ ಬದಲಾವಣೆಯನ್ನು ನಿರೀಕ್ಷಿಸಲಾಗುತ್ತಿದೆ.

ಆದಾಗ್ಯೂ, ಬಿಹಾರದಲ್ಲಿ ಅಧಿಕಾರ ಉಳಿಸಿಕೊಳ್ಳಲು ಎನ್‌ಡಿಎ ವಿಶೇಷವಾಗಿ ಮಹಿಳಾ ಮತದಾರರನ್ನು ಅವಲಂಬಿಸಿದೆ ಎನ್ನಲಾಗಿದೆ. ದತ್ತಾಂಶದ ಪ್ರಕಾರ, 3.51 ಕೋಟಿ ನೋಂದಾಯಿತ ಮಹಿಳಾ ಮತದಾರರ ಪೈಕಿ, 2.52 ಕೋಟಿ ಮಹಿಳೆಯರು (71.60%) ಮತ ಚಲಾಯಿಸಿದ್ದಾರೆ. ಆದಾಗ್ಯೂ, ಒಟ್ಟು ನೋಂದಾಯಿತ ಮತ್ತು ಅರ್ಹ ಪುರುಷ ಮತದಾರರಲ್ಲಿ ಕೇವಲ 62.80% ಅಂದರೆ, ಸುಮಾರು 2.47 ಕೋಟಿ ಪುರುಷರು ಮತ ಚಲಾಯಿಸಿದ್ದಾರೆ. ಇದು, ಫಲಿತಾಂಶದ ಕುರಿತು ಅನಿಶ್ಚಿತತೆಯನ್ನು ಸೃಷ್ಟಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬಳಿಕ ಬಂಧನವಾಗಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪ್ರಧಾನ್‌ಗೆ ಮಧ್ಯಂತರ ಜಾಮೀನು

2007ರ ನಂದಿಗ್ರಾಮ್ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಸಂಬಂಧಿಸಿದ ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿ...

1929ರ ಸೈಮನ್ ವಿರುದ್ಧದ ಹೋರಾಟದಂತೆ ‘SIR ಗೋ ಬ್ಯಾಕ್’ ಆಂದೋಲನ ನಡೆಯಬೇಕು: ಸಿಎಂ ರೇವಂತ್ ರೆಡ್ಡಿ ಕರೆ

ಮತದಾರರ ಪಟ್ಟಿಯ ಮೇಲೆ ಮೋದಿ-ಶಾ ಜೋಡಿ ಮತ್ತು ಗ್ಯಾನೇಶ್‌ ಕುಮಾರ್‌ ನಡೆಸುತ್ತಿರುವ...

‘ನಥಿಂಗ್ ನೈಸ್’: ಸಿಎಂ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಭೂಕಬಳಿಕೆ ಆರೋಪ

ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ...

ಅಮೇಥಿ ಸೋಲಿನ ಬಳಿಕ ಯುಪಿ ರಾಜ್ಯಸಭೆ ರೇಸ್‌ನಲ್ಲಿ ಸ್ಮೃತಿ ಇರಾನಿ; ಸಂಭಾವ್ಯ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ?

ಉತ್ತರ ಪ್ರದೇಶದಿಂದ ಅಕ್ಟೋಬರ್ 16ರಂದು ನಡೆಯಲಿರುವ 10 ರಾಜ್ಯಸಭಾ ಸ್ಥಾನಗಳ ಚುನಾವಣೆಗೆ...