ಜಿ 20 ಶೃಂಗಸಭೆ ಮುಗಿದಿದೆ, ಮೋದಿ ಸರ್ಕಾರ ದೇಶೀಯ ಸಮಸ್ಯೆಗಳತ್ತ ಗಮನ ಹರಿಸಬೇಕು: ಮಲ್ಲಿಕಾರ್ಜುನ ಖರ್ಗೆ

Date:

ಜಿ20 ಶೃಂಗಸಭೆ ಈಗ ಮುಗಿದಿದ್ದು, ಮೋದಿ ಸರಕಾರವು ಹಣದುಬ್ಬರ, ನಿರುದ್ಯೋಗ ಮತ್ತು ಮಣಿಪುರ ಹಿಂಸಾಚಾರದಂತಹ ದೇಶೀಯ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ (ಸೆಪ್ಟೆಂಬರ್‌ 11) ಹೇಳಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ನಿರುದ್ಯೋಗದ ಹೆಚ್ಚಳ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಖರ್ಗೆ ಪಟ್ಟಿ ಮಾಡಿರುವ ವಿಷಯಗಳು

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹಣದುಬ್ಬರ: ಸಾಮಾನ್ಯ ಒಂದು ಪ್ಲೇಟ್‌ ಊಟದ ಬೆಲೆ ಆಗಸ್ಟ್‌ನಲ್ಲಿ ಶೇ. 24 ರಷ್ಟು ಹೆಚ್ಚಾಗಿದೆ

ನಿರುದ್ಯೋಗ: ದೇಶದಲ್ಲಿ ನಿರುದ್ಯೋಗ ದರ ಶೇ.8 ರಷ್ಟಿದ್ದು, ಯುವಕರ ಭವಿಷ್ಯ ಮಂಕಾಗಿದೆ

ಹಗರಣಗಳು: ಮೋದಿ ಸರ್ಕಾರದ ದುರಾಡಳಿತ ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಸಿಎಜಿ ಹಲವಾರು ವರದಿಗಳಲ್ಲಿ ಬಿಜೆಪಿ ಸರ್ಕಾರದ ಹಗರಣಗಳನ್ನು ಬಹಿರಂಗಪಡಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 13000 ಕೋಟಿ ರೂ. ಜಲ ಜೀವನ್ ಹಗರಣ ಬೆಳಕಿಗೆ ಬಂದಿದೆ. ಇದರಲ್ಲಿ ದಲಿತ ಐಎಎಸ್ ಅಧಿಕಾರಿಯೊಬ್ಬರು ಭ್ರಷ್ಟಾಚಾರವನ್ನು ಬಯಲಿಗೆಳೆದ ಕಾರಣ ಅವರಿಗೆ ಚಿತ್ರಹಿಂಸೆ ನೀಡಲಾಗಿದೆ.

ಲೂಟಿ: ಪ್ರಧಾನಿ ಆತ್ಮೀಯ ಗೆಳೆಯನ ಲೂಟಿ ಇತ್ತೀಚೆಗೆ ಮತ್ತೆ ಬೆಳಕಿಗೆ ಬಂದಿದೆ. 2019 ರ ಚುನಾವಣೆಗೆ ಮುನ್ನ ಆರ್‌ಬಿಐ ಖಜಾನೆಯಿಂದ ಮೋದಿ ಸರ್ಕಾರಕ್ಕೆ 3 ಲಕ್ಷ ಕೋಟಿ ರೂಪಾಯಿ ವರ್ಗಾಯಿಸುವಂತೆ ಸರ್ಕಾರದ ಒತ್ತಡವನ್ನು ಆರ್‌ಬಿಐ ಮಾಜಿ ಡೆಪ್ಯೂಟಿ ಗವರ್ನರ್ ವಿರಳ್ ಆಚಾರ್ಯ ವಿರೋಧಿಸಿದ್ದರು ಎಂಬುದು ಈಗ ಬಹಿರಂಗವಾಗಿದೆ.

ದುರಂತ: ಕಳೆದ ಕೆಲ ದಿನಗಳಿಂದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಹೆಚ್ಚಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ವಿಪತ್ತು ಸಂಭವಿಸಿದ್ದು, ಆದರೆ ದುರಹಂಕಾರಿ ಮೋದಿ ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವುದನ್ನು ತಪ್ಪಿಸುತ್ತಿದೆ. ಇದೆಲ್ಲದರ ನಡುವೆ ಮೋದಿಯವರು ಸತ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? 5 ರಾಜ್ಯಗಳ ಚುನಾವಣೆಯನ್ನು ಮುಂದೂಡುವುದೇ ‘ಒಂದು ರಾಷ್ಟ್ರ ಒಂದು ಚುನಾವಣೆ’ ಗುರಿ: ಪ್ರಶಾಂತ್ ಭೂಷಣ್

ಆದರೆ ಸಾರ್ವಜನಿಕರು ಮೋದಿ ಸರ್ಕಾರದ ಗಮನ ಬೇರೆಡೆ ಸೆಳೆಯುವ ಸಮಸ್ಯೆಗಳ ಬದಲಿಗೆ ಸತ್ಯವನ್ನು ತಿಳಿದುಕೊಳ್ಳಲು ಬಯಸುತ್ತಾರೆ.

ಅಲ್ಲದೆ 2024 ರಲ್ಲಿ ನಿಮ್ಮ ನಿರ್ಗಮನಕ್ಕೆ ದೇಶದ ನಾಗರಿಕರು ದಾರಿ ಮಾಡಿಕೊಡಲು ಪ್ರಾರಂಭಿಸಿದ್ದಾರೆ ಎಂಬುದನ್ನು ಮೋದಿ ಸರ್ಕಾರ ಎಚ್ಚರಿಕೆಯಿಂದ ಆಲಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪದವೀಧರರಿಗೆ ಹೆಂಡ ಕುಡಿಸಿ ಚಟಗಳ ದಾಸರನ್ನಾಗಿಸುತ್ತಿರುವ ಬಿಜೆಪಿ: ಕಾಂಗ್ರೆಸ್‌ ಕಿಡಿ

ಕಾಂಗ್ರೆಸ್ ಪಕ್ಷ ಪದವೀಧರರಿಗೆ ಯುವನಿಧಿ ಯೋಜನೆ ನೀಡಿದೆ, ಉದ್ಯೋಗ ಸೃಷ್ಟಿಸಲು ಶ್ರಮಿಸುತ್ತಿದೆ,...

ಈ ಚುನಾವಣೆ ಪ್ರಜಾಪ್ರಭುತ್ವದ ಭವಿಷ್ಯ ನಿರ್ಧರಿಸಲಿದೆ: ಮಲ್ಲಿಕಾರ್ಜುನ ಖರ್ಗೆ

ಈ ಲೋಕಸಭೆ ಚುನಾವಣೆಯು ಭಾರತದ ಪ್ರಜಾಪ್ರಭುತ್ವದ ಭವಿಷ್ಯ ಮತ್ತು ಸಂವಿಧಾನದ ಭವಿಷ್ಯವನ್ನು...

ಆರು ಜನರ ಹತ್ಯೆಯಾದ ಎರಡು ವರ್ಷಗಳ ನಂತರ 2 ಎಫ್‌ಐಆರ್‌ ದಾಖಲಿಸಿದ ಸಿಬಿಐ!

ಅಸ್ಸಾಂ ಪೊಲೀಸರು ಮತ್ತು ಜನಸಮೂಹದ ನಡುವಿನ ಘರ್ಷಣೆಯಲ್ಲಿ ಅಸ್ಸಾಂ ಫಾರೆಸ್ಟ್ ಗಾರ್ಡ್...

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಕೃಷಿ ಸಾಲ ಮನ್ನಾ ಮಾಡಲಾಗುವುದು: ರಾಹುಲ್ ಗಾಂಧಿ

ಇಂಡಿಯಾ ಒಕ್ಕೂಟವು ಅಧಿಕಾರಕ್ಕೆ ಬಂದರೆ ಕೃಷಿ ಸಾಲ ಮನ್ನಾ ಮಾಡುತ್ತದೆ ಮತ್ತು...