ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ SIR ಪ್ರಕ್ರಿಯೆ ಆರಂಭಿಸಿದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿದ್ದು. ಪ್ರತಿಯೊಬ್ಬ ಮತದಾರನ ಅಸ್ಮಿತೆಯನ್ನು ಪ್ರಶ್ನಿಸಿದಂತಾಗಿದೆ. ಈ SIR ಪ್ರಕ್ರಿಯೆಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸಿದ್ದಕ್ಕೆ ಕಾಂಗ್ರೆಸ್ ಪಕ್ಷವನ್ನು ದೋಷಿಸುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ಚಿಕ್ಕಮಗಳೂರು ನಗರದ ಪತ್ರಿಕಾ ಪ್ರಕಟಣೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸೈಯದ್ ಹನೀಫ್ ಖಂಡಿಸಿದ್ದಾರೆ.
ನಮ್ಮ ಕಾಂಗ್ರೆಸ್ ಪಕ್ಷವು ಎಸ್.ಐ.ಆರ್ ಪ್ರಕ್ರಿಯೆಯ ಲೋಪ ದೋಷಗಳ ಬಗ್ಗೆ ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದ್ದರೂ ಹಾಗೂ ಪ್ರಶ್ನಿಸಿದ್ದರೂ ಕೂಡ ಇದುವರೆಗೂ ಕೇಂದ್ರ ಚುನಾವಣಾ ಆಯುಕ್ತರು ಇದುವರೆಗೂ ಪತ್ರಿಕಾಗೋಷ್ಠಿ ನಡೆಸಿಲ್ಲ. ಬಿಜೆಪಿ ನಾಯಕರು ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಚುನಾವಣೆಯನ್ನು ಆಯುಕ್ತರನ್ನು ಸಮರ್ಥಿಸಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಕೇಂದ್ರ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ.
ಎಸ್.ಐ.ಆರ್ ಪ್ರಕ್ರಿಯೆ ಮುಗಿದು ಸರಿ ಸುಮಾರು 99 ಲಕ್ಷ ಮತದಾರರನ್ನು ಪಟ್ಟಯಿಂದ ಹೊರಗಿಡಲಾಗಿದ್ದು ರಾಜ್ಯದ ಹಲವು ಭಾಗಗಳಲ್ಲಿ ರಾಷ್ಟ್ರೀಯ ಬಿಜೆಪಿ ನಾಯಕರ ಹಾಗೂ ರಾಜ್ಯ ಬಿಜೆಪಿ ನಾಯಕರ ಸೂಚನೆಯ ಮೇರೆಗೆ ಬಿಜೆಪಿಯ ಬಿ ಎಲ್ ಎ -2ಗಳನ್ನ ಬಳಸಿಕೊಂಡು ಫಾರಂ ನಂಬರ್ 7 ರ ಮೂಲಕ ಕಾಂಗ್ರೆಸ್ ಮತದಾರರನ್ನು ಅಳಿಸುವ ಪ್ರಯತ್ನ ನಡೆದಿರುತ್ತದೆ. ಅದ್ದರಿಂದ ಎಸ್.ಐ.ಆರ್ ನಿಂದ ಹೊರಗಿಡಲ್ಪಟ್ಟ ಮತದಾರರನ್ನು ಮರು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗ ಹೆಲ್ಪಡೆಸ್ಟ್ ರಚಿಸಬೇಕೆಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸೈಯದ್ ಹನೀಫ್ ಒತ್ತಾಯಿಸಿದ್ದಾರೆ.
ಕರ್ನಾಟಕ ಎಸ್.ಎಸ್.ಟಿ ಬಾಯ್ದೆ 2022ರ ಅಡಿಯಲ್ಲಿ ಎಸ್.ಸಿ ಮೀತಲಾತಿಯನ್ನು ಶೇಕಡ 15 ರಿಂದ ಶೇಖರ ಬಕ್ಕೆ ಮತ್ತು ಎಸ್.ಟಿ ಮೀಸಲಾತಿಯನ್ನು ಶೇಕಡ 3 ರಿಂದ ಶೇಕಡ 7 ಕ್ಕೆ ಹೆಚ್ಚಿಸಿದ್ದನ್ನು ರಾಜ್ಯ ಉಚ್ಛ ನ್ಯಾಯಾಲಯ ತಡೆ ಹಿಡಿದಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವು ತಮಿಳುನಾಡು ರಾಜ್ಯದ ಉದಾಹರಣೆಯೊಂದಿಗೆ ಶೇಕಡ 50 ಮಿತಿಯನ್ನು ಹೆಚ್ಚಿಸಬೇಕು ಹಾಗೂ ಜನೇ ಪರಿಚ್ಛೇದಕ್ಕೆ ಸೇರಿಸಿ ಮೀಸಲಾತಿ ಮಿತಿಯನ್ನು ಎಸ್.ಸಿ ಶೇಕಡ 17 ಹಾಗೂ ಎಸ್.ಟಿ ಶೇಕಡ 7 ಹಾಗೂ ಹಿಂದುಆದ ವರ್ಗಗಳ ಮೀಸಲಾತಿಯನ್ನು ಸಹ ಹೆಚ್ಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇವೆ.
ಹಾಗೆಯೇ, ಕಾಂಗ್ರೆಸ್ ಸರ್ಕಾರವು ಯುವಶಕ್ತಿಯನ್ನು ಸಂಘಟಿಸುವುದಕ್ಕಾಗಿ ಭಾರತ್ ಜೋಡೋ ಯುವಸಂಘಗಳನ್ನು ಸ್ಥಾಪಿಸಿ ಪ್ರತಿ ಪಂಚಾಯ್ತಿ ಹಾಗೂ ವಾರ್ಡ್ ಮಟ್ಟದಲ್ಲಿ ಹತ್ತು ಲಕ್ಷ ರೂಗಳನ್ನು ನೀಡುವುದರ ಮೂಲಕ ಯುವಕರ ಸಖಲೀಕರಣಕ್ಕೆ ಒತ್ತು ಕೊಟ್ಟಿದ್ದು ಇದರಿಂದ ಸಮಾಜದ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಿದಂತಾಗುತ್ತದೆ. ಪಿಂಚಣಿಗಳಿಗಿದ್ದ ಆದಾಯದ ಮಿತಿಯನ್ನು ಇಂದಿನ ಬಿಜೆಪಿಯ ಬೊಮ್ಮಾಯಿ ಸರ್ಕಾರ 120,೦೦೦ರೂ ಆದಾಯದ ಮಿತಿಯನ್ನು 32,000ರೂಗಳಿಗೆ ಇಳಿಸಿದ್ದು ಇದರಿಂದ 23 ಲಕ್ಷ ಫಲಾನುಭವಿಗಳು ಪಿಂಚಣಿಯಿಂದ ಹೊರಗಿದ್ದರು. ಇದರಿಂದ ಪಿಂಚ ಫಲಾನುಭವಿಗಳಿಗೆ ತೊಂದರೆಯಾಗಿರುತ್ತದೆ. ಕಾಂಗ್ರೆಸ್ ಸರ್ಕಾರ ಪಿಂಚಣಿದಾರರ ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ಪರಿಷ್ಠರಣೆ ನಡೆಸಿ ಎಲ್ಲಾ ಫಲಾನುಭವಿಗಳಿಗೆ ಪಿಂಚಣಿ ವೇತನ ಸಿಗುವಂತೆ ಮಾಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ವಾಟರ್ ಹೀಟರ್ ನಿಂದ ಮಗು ಸಾವು
ಕೇಂದ್ರ ಬಿಜೆಪಿ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಿಸಿದ್ದರಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಉಂಟಾಗಿದ್ದು ಇದರಿಂದ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಂತಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸೈಯದ್ ಹನೀಫ್ ತಿಳಿಸಿದರು. ಈ ವೇಳೆ ಪ್ರಚಾರ ಸಮಿತಿಯ ಮುಖಂಡರಾದ ಗಂಗಾಧರ್, ಮಹೇಶ್ ಉಪಸ್ಥಿತರಿದ್ದರು.




