ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಬಕೆಟ್‌ನಲ್ಲಿ ನೀರು ಕಾಯಿಸಲು ಹಾಕಿದ್ದ ವಾಟರ್ ಹೀಟರ್‌ನಿಂದ ವಿದ್ಯುತ್ ಶಾಕ್ ತಗುಲಿ 8 ವರ್ಷದ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಪಟ್ಟ ಬಾಲಕ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ನೀಲಾಂಶ್ (8) ಎಂದು ಗುರುತಿಸಲಾಗಿದೆ. ಭಾನುವಾರ ರಜೆ ಇದ್ದ ಕಾರಣ ಬಾಲಕ ಮನೆಯಲ್ಲೇ ಇದ್ದುದರಿಂದ ಬಾತ್‌ರೂಮ್‌ಗೆ ತೆರಳಿದ್ದಾಗ, ನೀರು ಕಾಯಿಸಲು ಬಕೆಟ್‌ನಲ್ಲಿ ಎಲೆಕ್ಟಿಕ್ ವಾಟರ್ ಹೀಟರ್ ಹಾಕಲಾಗಿತ್ತು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ʼನಮಗೊಂದು ಸೂರು ಕೊಡಿ; ಇಲ್ಲವಾದ್ರೆ ಗುಡಿಸಲಿನಲ್ಲೇ ಪ್ರಾಣ ಬಿಡ್ತೇವೆʼ: ವಸತಿಹೀನರ ಅಳಲು
ಈ ವೇಳೆ ಬಕೆಟ್‌ನಲ್ಲಿದ್ದ ನೀರಿಗೆ ಬಾಲಕ ಕೈ ಹಾಕಿದ ಪರಿಣಾಮ ತೀವ್ರ ವಿದ್ಯುತ್ ಸ್ಪರ್ಶ ತಗುಲಿ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




