ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

Date:

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ  ಹತ್ತೊಂಬತ್ತು ಪ್ರತಿಪಕ್ಷಗಳು ಚುನಾವಣಾ ಆಯೋಗದತ್ತ ಕೈಗೊಂಡ ಜಾಥಾವನ್ನು ಪೊಲೀಸರು ತಡೆದಿದ್ದಾರೆ.   

- Advertisement -

ಕೇರಳಂ ಸರ್ಕಾರದಿಂದ 20 ವರ್ಷ ಹಳೆಯ ಕೇಸಿನ ಮರು ತನಿಖೆ ಹಾಗೂ ಚುನಾವಣಾ ಆಯೋಗದ ನಿರ್ಧಾರಗಳ ಪ್ರಶ್ನಿಸಿದ ಎರಡು ಅರ್ಜಿಗಳ ವಿಚಾರಣೆ ಆರಂಭಿಸಿದೆ ಸುಪ್ರೀಮ್ ಕೋರ್ಟ್…. ಮೋಶಾ ಸರ್ಕಾರದ ಪರವಾಗಿ ಜನಾದೇಶಗಳನ್ನು ಅಪಹರಿಸಿರುವ ಗುಮಾನಿ ದಟ್ಟವಾಗುತ್ತಿದ್ದಂತೆ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ‘ಕುತ್ತಿಗೆಯ ಸುತ್ತಣ ಕುಣಿಕೆ’ ಬಿಗಿ ಆಗತೊಡಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸುಪ್ರೀಮ್ ಕೋರ್ಟಿನಲ್ಲಿ ಅಕ್ಟೋಬರ್ ಐದರಂದು ಗ್ಯಾನೇಶ್ ವಿರುದ್ಧ ಎರಡು ಅರ್ಜಿಗಳ ವಿಚಾರಣೆ ನಡೆಯಿತು. ಚುನಾವಣಾ ಆಯೋಗದ ಉಳಿದ ಇಬ್ಬರು ಆಯುಕ್ತರನ್ನು ಕತ್ತಲಲ್ಲಿಟ್ಟು, ಏಕಪಕ್ಷೀಯವಾಗಿ ಕೈಗೊಂಡ 14 ತೀರ್ಮಾನಗಳನ್ನು ರದ್ದುಗೊಳಿಸಬೇಕು. ತನಿಖೆಗೆಂದು ವಿಶೇಷ ತನಿಖಾ ತಂಡ ರಚಿಸಬೇಕು. ತನಿಖೆ ಪೂರ್ಣಗೊಳ್ಳುವ ತನಕ ಗ್ಯಾನೇಶ್ ಅವರನ್ನು ಅಮಾನತಿನಲ್ಲಿ ಇರಿಸಬೇಕು. ಚುನಾವಣಾ ಆಯೋಗದ ದಾಖಲೆ ದಸ್ತಾವೇಜುಗಳ ತಪಾಸಣೆ ನಡೆಯಬೇಕು. ಆಯೋಗದ ತೀರ್ಮಾನಗಳನ್ನು ಮುಖ್ಯ ಆಯುಕ್ತರೊಬ್ಬರೇ ಕೈಗೊಳ್ಳುವಂತಿಲ್ಲವೆಂದು ಸಾರಬೇಕು. ಎರಡೂ ಅರ್ಜಿಗಳ ಮನವಿಯ ಸಾರಾಂಶವಿದು.

‘ಕೇವಲ ಸುದ್ದಿಪತ್ರಿಕೆಯ ವರದಿಯ ಆಧಾರದ ಮೇಲೆ ಮುಖ್ಯ ಚುನಾವಣಾ ಆಯುಕ್ತರನ್ನು ಅಮಾನತುಗೊಳಿಸಲು ಬರುವುದಿಲ್ಲ. ಆಯೋಗದ ಕೆಲಸ ನಿಂತು ಹೋಗುತ್ತದೆ. ಚುನಾವಣೆಗಳನ್ನು ನಡೆಸುವವರು ಯಾರು’ ಎಂಬುದಾಗಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ವಿಚಾರಣೆಯ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.

ಆದರೆ ಚುನಾವಣಾ ಆಯೋಗ ಮತ್ತು ಗ್ಯಾನೇಶ್ ಗೆ ನೋಟಿಸ್ ಜಾರಿ ಮಾಡಿ, ಸಮಜಾಯಿಷಿ ಸಲ್ಲಿಸುವಂತೆ ಸೂಚಿಸಿದೆ ಸುಪ್ರೀಮ್ ಕೋರ್ಟು. ತನ್ನ ಪ್ರತಿಕ್ರಿಯೆ ಏನೆಂದು ವಿವರಿಸಿ ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೂ ತಾಕೀತು ಮಾಡಿದೆ.

ಫಾರಂ ನಂ- 6 ರ ತಿದ್ದುಪಡಿಗೆ ತಾನು ಅನುಮತಿ ನೀಡಿರಲಿಲ್ಲ ಎಂಬುದಾಗಿ ಸುಪ್ರೀಮ್ ಕೋರ್ಟ್ ಹೊರಹಾಕಿರುವ ಸುಡು ಸುಡು ಸತ್ಯವು ಗ್ಯಾನೇಶ್ ಮತ್ತು ಅವರ ಸೂತ್ರಧಾರರನ್ನು ಮುಂಬರುವ ದಿನಗಳಲ್ಲಿ ಬಹುವಾಗಿ ಕಾಡಲಿದೆ. ಫಾರಂ-6 ಎಂಬುದು  ಹೊಸ ಮತದಾರರ ನೋಂದಣಿಗೆ ಬಳಕೆಯಾಗುವ ನಮೂನೆ. ಆದರೆ ಇದರಲ್ಲಿ ಗ್ಯಾನೇಶ್ ಕುಮಾರ್ ಹೊಸ ಕಾಲಂ ಸೇರಿಸಿದ್ದಾರೆ. ಅರ್ಜಿದಾರ, ಅಥವಾ ಆತನ ತಂದೆ ತಾಯಿ ಇಲ್ಲವೇ ಅಜ್ಜಿ ತಾತನ ಹೆಸರುಗಳು ಈ ಹಿಂದಿನ  SIR ನಲ್ಲಿ ಇದ್ದವೇ ಇಲ್ಲವೇ ಎಂದು ಕೇಳಲಾಗಿದೆ. ಈ ಪ್ರಶ್ನೆಗೆ ಉತ್ತರಿಸುವುದು ಕಡ್ಡಾಯವಾಗಿದೆ. ಸುಪ್ರೀಮ್ ಒಪ್ಪಿಗೆಯ ನಂತರವೇ ಈ ಬದಲಾವಣೆ ಮಾಡಲಾಗಿತ್ತು ಎಂದಿದ್ದರು ಗ್ಯಾನೇಶ್. ಆದರೆ ತಾನು ಇಂತಹ‌ ತಿದ್ದುಪಡಿಗೆ ಒಪ್ಪಿಗೆ ನೀಡಿಲ್ಲ ಎಂದಿದೆ ಸುಪ್ರೀಮ್ ಕೋರ್ಟ್.

ಕೇರಳ ಕಾಡರ್ ಐಎಎಸ್ ಅಧಿಕಾರಿ ಆಗಿದ್ದ ಗ್ಯಾನೇಶ್ ಸರ್ಕಾರಿ ಸೇವೆಯ ಸುದೀರ್ಘ ಅವಧಿ ಆ ರಾಜ್ಯದಲ್ಲೇ ಕಳೆದಿತ್ತು. ಇಪ್ಪತ್ತು ವರ್ಷಗಳ ಹಿಂದೆ ಕೇರಳದ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ವಿಶ್ವಬ್ಯಾಂಕ್ ನೆರವಿನ ರಸ್ತೆ ನಿರ್ಮಾಣ ಯೋಜನೆಯ ಚೀಫ್ ಪ್ರಾಜೆಕ್ಟ್ ಆಫೀಸರ್ ಆಗಿದ್ದವರು ಮಲೇಷ್ಯಾದ ಎಂಜಿನಿಯರ್ ಲೀ ಸೀ ಬೀನ್. ಈ ಯೋಜನೆಗೆ ಹಣ ಬಿಡುಗಡೆಯಲ್ಲಿ ಉಂಟಾದ ವಿಳಂಬ ಮತ್ತು ತೀವ್ರತರ ಕಿರುಕುಳ ಬೀನ್ ಅವರ ಆತ್ಮಹತ್ಯೆಗೆ ಕಾರಣ ಆಯಿತು. ಲೋಕೋಪಯೋಗಿ ಇಲಾಖೆಯ ಗುತ್ತಿಗೆಗಳನ್ನು ತನಗೆ ಬೇಕಾದ ಗುತ್ತಿಗೆದಾರರಿಗೆ ನೀಡಿ ಅಕ್ರಮ ಎಸಗಿದ್ದಾರೆ ಎಂಬುದು ಗ್ಯಾನೇಶ್ ಮೇಲಿನ ಆರೋಪ. ಬೀನ್ ಎರಡು ಆತ್ಮಹತ್ಯೆ ಪತ್ರಗಳನ್ನು ಉಳಿಸಿ ಹೋಗಿದ್ದಾರೆನ್ನಲಾಗಿದೆ. ಕೇರಳದ ಅಧಿಕಾರಿಗಳ ವಲಯದಲ್ಲಿನ ತಮ್ಮ ಪ್ರಭಾವ ಬಳಸಿ ಮುಚ್ಚಿಸಿ ಹಾಕಿಸಿರುವ ಈ ಕೇಸುಗಳನ್ನು ಮರು ತನಿಖೆಗೆ ಗುರಿಪಡಿಸಲು ಆ ರಾಜ್ಯದ ಸರ್ಕಾರ ಇತ್ತೀಚೆಗೆ ತೀರ್ಮಾನಿಸಿದೆ.

ಹೀಗೆ ಮೂರು ದಿಕ್ಕುಗಳಿಂದ ಮುತ್ತಿಗೆ ಎದುರಿಸಿದ್ದಾರೆ ಗ್ಯಾನೇಶ್.

ಸಿಇಸಿ ಮೇಲಿನ ಐದು ಪ್ರಮುಖ ಆರೋಪಗಳು – 1. ಫಾರ್ಮ್- 6 ರಲ್ಲಿ ಕಾನೂನುಬಾಹಿರ ಬದಲಾವಣೆ. 2. SIR ಕುರಿತ ತೀರ್ಮಾನಗಳನ್ನು ಉಳಿದ ಇಬ್ಬರು ಆಯುಕ್ತರಿಗೆ ತಿಳಿಸದೆ ಏಕಪಕ್ಷೀಯವಾಗಿ ಕೈಗೊಂಡ ನಡೆ. 3. ERO ಗಳನ್ನು ECINet ಕೇಂದ್ರೀಯ ಮತದಾರ ಡೇಟಾ ಬೇಸ್ ನಿಂದ ಹೊರ ಹಾಕಿದ್ದು. 4. ಬಂಗಾಳದಲ್ಲಿ 16. 1 ಲಕ್ಷ ಮತದಾರರ ಹೆಸರುಗಳನ್ನು ಕೈಬಿಡುವಂತೆ ಅಪೀಲು ಮಾಡಿದ್ದು ಯಾರು? ಈ ವಿಚಾರ ಇತರೆ ಇಬ್ಬರು ಆಯುಕ್ತರಾದ ಸಂಧು, ಜೋಶಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ ಮನೋಜ್ ಅಗರವಾಲ್ ಗೂ ತಿಳಿದಿಲ್ಲ!

5. ಖಾಸಗಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಯಿಂದ ತಯಾರು ಮಾಡಿಸಿ ಅಳವಡಿಸಿಕೊಂಡಿರುವ ಸಾಫ್ಟ್‌ವೇರ್ ಗೋವಾದ ಯೋಗ್ಯ ಮತದಾರರನ್ನೂ ತಿರಸ್ಕರಿಸಿರುವ ಗಂಭೀರ ಬೆಳವಣಿಗೆ.

ಮೋದಿ ಸರ್ಕಾರಕ್ಕೆ ನೆರವಾಗಲು ತಮ್ಮ ಸ್ಥಾನಮಾನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎನ್ನಲು ಫಾರಂ-6ರಲ್ಲಿ ತಂದಿರುವ ಅಕ್ರಮ ಮತ್ತು ಏಕಪಕ್ಷೀಯ ಬದಲಾವಣೆಯು ಬಹುದೊಡ್ಡ ಉದಾಹರಣೆಗಳಲ್ಲೊಂದು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

ಜಂತರ್ ಮಂತರ್ ಪ್ರತಿಭಟನೆಗಳಿಗೆ ತಡವಾಗಿಯಾದರೂ ಮಣಿಯಲೇಬೇಕಾಯಿತು ಮೋದಿ. ತಮ್ಮ ಸಂಪುಟ ಸದಸ್ಯ  ಧರ್ಮೇಂದ್ರ ಪ್ರಧಾನ್ ಅವರ ತಲೆದಂಡ ತೆತ್ತ ನಂತರವೇ ಪ್ರತಿಭಟನೆಗಳು ತಣಿದದ್ದು. ಗ್ಯಾನೇಶ್ ಅವರನ್ನೂ ಚುನಾವಣಾ ಆಯೋಗದಿಂದ ಹೊರಹಾಕಿ ಬೇರೆ ಹುದ್ದೆ ನೀಡಬಹುದಿತ್ತು. ಪ್ರತಿಭಟನೆಗಳಿಗೆ ತಲೆಬಾಗುವುದು ತಮ್ಮ ದೌರ್ಬಲ್ಯವೆಂದು ಜನ ಭಾವಿಸುವುದು ಮೋದಿಯವರಿಗೆ ಇಷ್ಟವಿಲ್ಲ. ಕದ ಬಡಿದಿರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಗೆಲ್ಲಬೇಕಿದೆ. ಈ ಕಾರಣಕ್ಕಾಗಿ ಗ್ಯಾನೇಶ್ ನೆರವು ಬೇಕೇ ಬೇಕು.

ಗ್ಯಾನೇಶ್ ಅವರನ್ನು ಉಳಿಸಿಕೊಂಡು ಉತ್ತರಪ್ರದೇಶದಲ್ಲಿ ಗಳಿಸಬಹುದಾದ ಗೆಲುವಿಗೆ ವಿಶ್ವಾಸಾರ್ಹತೆ ಇರುವುದಿಲ್ಲ. ಹೀಗಾಗಿ ಪ್ರತಿಭಟನೆಗಳು ನಿಲ್ಲುವುದಿಲ್ಲ. ಯೂಪಿಯಲ್ಲಿ ಸೋತರೂ ಪರವಾಗಿಲ್ಲವೆಂದು ಇಂದಲ್ಲ ನಾಳೆ, ಗ್ಯಾನೇಶ್ ತಲೆದಂಡ ನೀಡಿ ಪ್ರತಿಪಕ್ಷಗಳನ್ನು ತಣ್ಣಗಾಗಿಸುವ ತಂತ್ರವನ್ನು ಮೋದಿ ಪ್ರಯೋಗಿಸಬಹುದು. ಆದರೆ ಯೂಪಿಯಲ್ಲಿ ಸೋಲುವುದು ಸಾಧಾರಣವಲ್ಲ, ದೇಶದಲ್ಲಿಯೇ ಸೋಲಿನ ಸೋಪಾನವನ್ನು ಅಹ್ವಾನಿಸಿದಂತೆಯೇ ಸರಿ.

ಗ್ಯಾನೇಶ್ ಬಣ್ಣ ಈಗಾಗಲೆ ಬಯಲಾಗಿರುವ ಕಾರಣ ಆತನ ಉಪಯುಕ್ತತೆ ತೀರಿದಂತೆಯೇ ಲೆಕ್ಕ. ಆತನನ್ನು ಗೌರವಯುತವಾಗಿ ಬೇರೆ ಯಾವುದಾದರೂ ಹುದ್ದೆಗೆ ಕಳಿಸಿಕೊಡುವ ಒತ್ತಡ ಮೋಶಾ ಮೇಲಿದೆ. ಅಪಾರ ರಾಜರಹಸ್ಯಗಳನ್ನು ಬಲ್ಲ ಗ್ಯಾನೇಶ್ ಅವರನ್ನು ಉಪಾಯವಾಗಿ ನಿರ್ವಹಿಸದೆ ಬೇರೆ ದಾರಿಯೇ ಇಲ್ಲ ಈ ಜೋಡಿಗೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ.2 ಮೀಸಲಾತಿ ಸ್ವಾಗತಾರ್ಹ: ಮುತ್ತಣ್ಣ ಮೇತ್ರಿ

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಗಳ ನೇಮಕಾತಿಯಲ್ಲಿ ಶೇ.2ರಷ್ಟು...

ವಿಜಯಪುರ | ಉದ್ಯೋಗ ಖಾತ್ರಿ ಪೂರ್ಣ ಕೂಲಿ ಪಾವತಿಗೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿರುವ ಕೂಲಿಕಾರರಿಗೆ ಅವರ ಶ್ರಮಕ್ಕೆ ತಕ್ಕಂತೆ...