ಕರ್ನಾಟಕ SIR | ಒಬ್ಬರಿಗೇ ಹಲವು ‘ವೋಟರ್ ಐಡಿ’ಗಳ ಸೃಷ್ಟಿ: ಲೋಪ ಒಪ್ಪಿಕೊಂಡ ಚುನಾವಣಾ ಕಚೇರಿ!

Date:

ಮಹದೇವಪುರ ಕ್ಷೇತ್ರದಲ್ಲಿ ಕೇವಲ 397 ಮಂದಿಯ ಹೆಸರಿನಲ್ಲಿ 803 ಮತದಾರರ ಗುರುತಿನ ಚೀಟಿಗಳ ಸಂಖ್ಯೆ ಪತ್ತೆ; ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದ ತಪ್ಪು ಸಂಭವಿಸಿದೆ ಎಂದ ಚುನಾವಣಾಧಿಕಾರಿ

ಕರ್ನಾಟಕದಲ್ಲಿ ನಡೆದ ಎಸ್‌ಐಆರ್‌ ಪ್ರಕ್ರಿಯೆ ವೇಳೆ, ಒಬ್ಬ ವ್ಯಕ್ತಿಯ ಹೆಸರಿನಲ್ಲೇ ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿ ಸಂಖ್ಯೆಗಳು ಸೃಷ್ಟಿಯಾಗಿರುವುದನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಒಪ್ಪಿಕೊಂಡಿದೆ. ಮತದಾರರ ಪಟ್ಟಿಯ ದತ್ತಾಂಶ ಸಂಸ್ಕರಣೆ ಮತ್ತು ಅರ್ಜಿಗಳ ಪರಿಶೀಲನೆಯ ಸಂದರ್ಭದಲ್ಲಿ ಉಂಟಾದ ತಾಂತ್ರಿಕ ಲೋಪಗಳಿಂದ ಈ ಸಮಸ್ಯೆ ಸಂಭವಿಸಿದೆ ಎಂದು ಹೇಳಿಕೊಂಡಿದೆ.

- Advertisement -

ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 397 ವ್ಯಕ್ತಿಗಳ ಹೆಸರಿನಲ್ಲಿ ಕನಿಷ್ಠ 803 ಮತದಾರರ ಗುರುತಿನ ಚೀಟಿ ಸಂಖ್ಯೆಗಳು (ಇಪಿಐಸಿ) ಸೃಷ್ಟಿಯಾಗಿವೆ ಎಂಬುದನ್ನು ‘ದಿ ಹಿಂದು’ ಪತ್ರಿಕೆಯ ತನಿಖಾ ವರದಿ ಬಹಿರಂಗಪಡಿಸಿತ್ತು. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆಯೂ, ಮತದಾರರ ಪಟ್ಟಿಗೆ ಸಂಬಂಧಿಸಿದ ಅಕ್ರಮಗಳ ಕುರಿತು ಆರೋಪಗಳು ಕೇಳಿಬಂದಿದ್ದವು.  ಇದೀಗ ಅದೇ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಇಪಿಐಸಿ ಸಂಖ್ಯೆಗಳು ಸೃಷ್ಟಿಯಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇದು ಮತದಾರರ ಪಟ್ಟಿ ಪರಿಷ್ಕರಣೆಯ ವಿಶ್ವಾಸಾರ್ಹತೆ ಮತ್ತು ದತ್ತಾಂಶ ನಿರ್ವಹಣೆಯಲ್ಲಿನ ಲೋಪಗಳ ಕುರಿತು ಹೊಸ ಚರ್ಚೆ ಹುಟ್ಟುಹಾಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಗಲಕೋಟೆ | ಉತ್ಪಾದನೆ ಕುಸಿತ, ಭರ್ಜರಿ ಬೇಡಿಕೆ: ದಾಖಲೆ...

ಮುಂಗಾರು ಮಳೆಯ ಕೊರತೆ, ಭೀಕರ ಬರದ ಪರಿಣಾಮ ಹೊಲಗಳಲ್ಲಿ ಮೆಕ್ಕೆಜೋಳದ ಇಳುವರಿ ಕುಸಿದಿದೆ. ಆದರೆ, ಮಾರುಕಟ್ಟೆಯಲ್ಲಿ ಮಾತ್ರ ಮೆಕ್ಕೆಜೋಳಕ್ಕೆ ಚಿನ್ನದ ಬೆಲೆ ಬಂದಿದೆ! ಕಡಿಮೆ ಬೆಲೆಯಿಂದ ವರ್ಷಗಟ್ಟಲೆ ನಷ್ಟ ಅನುಭವಿಸಿದ್ದ ಬೆಳೆಗಾರರಿಗೆ ಈ...

ಏಳು ಕೊಲೆಗಳು ಮತ್ತು ಮನುಷ್ಯ ಮೃಗ!: ಕ್ರೋಧ, ಕ್ರೌರ್ಯ,...

ಮನುಷ್ಯತ್ವದ ಮುಖವಾಡ ಕಳಚಿದಾಗಒಳಗಿನ ಮೃಗ ಎಚ್ಚರಗೊಳ್ಳುತ್ತದೆ…ವಿವೇಕದ ಬೆಳಕು ಆರಿದಾಗಕ್ರೋಧವೇ ದಾರಿದೀಪವಾಗುತ್ತದೆ… ಬುದ್ಧಿಯೇ ಅದರ ಆಯುಧವಾದಾಗಸೇಡಿನ ಯೋಚನೆ ಸಂಚಾಗುತ್ತದೆ…ಪರರ ನೋವಿನಲ್ಲಿ ಸುಖ ಕಾಣುವ ಮನಸ್ಸುಕ್ರೌರ್ಯದ ಪರಮಾವಧಿ ತಲುಪುತ್ತದೆ… ಸುತ್ತಲಿನವರ ಮೌನ, ನಿರ್ಲಕ್ಷ್ಯಕೆಲವೊಮ್ಮೆ ಅಪಾಯಕ್ಕೆ ಆಹ್ವಾನವಾಗುತ್ತದೆ…ಕಾಲ ಮಿಂಚುವ ಮುನ್ನ...

ಮೀಸಲಾತಿ ಬಗ್ಗೆ ಮಾತನಾಡುವ ಮೊದಲು ತಮ್ಮ ಕುಟುಂಬದ ರಾಜಕೀಯ...

ಮೂರು ತಲೆಮಾರುಗಳಿಂದ ರಾಜಕೀಯ ಅಧಿಕಾರ ಅನುಭವಿಸುತ್ತಿರುವ ದೇವೇಗೌಡರ ಕುಟುಂಬಕ್ಕೆ ಇತರರ ಮೀಸಲಾತಿಯ ಬಗ್ಗೆ ಮಾತನಾಡುವ ನೈತಿಕ ಅರ್ಹತೆ ಇದೆಯೇ? “ಮೀಸಲು ಅನುಕೂಲ ಪಡೆದವರೇ ಮತ್ತೆ ಮತ್ತೆ ಪಡೆಯುತ್ತಿದ್ದಾರೆ, ನನ್ನ ಜನ ಅನಾಥರಾಗಿದ್ದಾರೆ” ಎಂಬ ಕೇಂದ್ರ...

ವರದಿಯ ಪ್ರಕಾರ, ಮಹದೇವಪುರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಒಂದೇ ವ್ಯಕ್ತಿಯೊಂದಿಗೆ ಹಲವು ಗುರುತಿನ ಚೀಟಿ ಸಂಖ್ಯೆಗಳು ಸಂಪರ್ಕ ಹೊಂದಿರುವ ಪ್ರಕರಣಗಳು ಪತ್ತೆಯಾಗಿವೆ. ಇದಲ್ಲದೆ, ಒಂದೇ ಮತದಾರರ ಗುರುತಿನ ಚೀಟಿ ಸಂಖ್ಯೆ ಎರಡು ವಿಭಿನ್ನ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಗಳಲ್ಲಿ ಕಾಣಿಸಿಕೊಂಡಿದೆ.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿ, ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವಂತೆ ಕೋರಿ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿರುವುದೇ ಸಮಸ್ಯೆಗೆ ಒಂದು ಕಾರಣ ಎಂದು ಹೇಳಿಕೊಂಡಿದೆ.

ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರಿಸಲು ಬಳಸುವ ‘ಫಾರ್ಮ್‌-6’ಅನ್ನು ಕೆಲವು ಅರ್ಜಿದಾರರು ನಾಗರಿಕ ಸೇವಾ ಪೋರ್ಟಲ್ ಮೂಲಕ ಹಲವು ಬಾರಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ಪ್ರತ್ಯೇಕವಾಗಿ ನಿರ್ವಹಿಸಿದ ಪರಿಣಾಮ, ಒಂದೇ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಇಪಿಐಸಿ ಸಂಖ್ಯೆಗಳು ಸೃಷ್ಟಿಯಾಗಿವೆ ಎಂದು ಚುನಾವಣಾಧಿಕಾರಿಗಳು ವಿವರಿಸಿದ್ದಾರೆ.

ಎರಡು ವಿಧಾನಸಭಾ ಕ್ಷೇತ್ರಗಳ ಪಟ್ಟಿಯಲ್ಲೂ ಒಬ್ಬರೇ ಮತದಾರರ ಗುರುತಿನ ಚೀಟಿ ಸಂಖ್ಯೆ!

ಮಹದೇವಪುರದಲ್ಲಿ ಪತ್ತೆಯಾಗಿರುವ ಮತ್ತೊಂದು ಪ್ರಮುಖ ಸಂಗತಿ ಎಂದರೆ, ಒಂದೇ ಇಪಿಐಸಿ ಸಂಖ್ಯೆ ಎರಡು ವಿಭಿನ್ನ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳಲ್ಲಿ ಕಾಣಿಸಿಕೊಂಡಿವೆ. ಇದಕ್ಕೂ ಚುನಾವಣಾಧಿಕಾರಿ ಕಚೇರಿ ವಿವರಣೆ ನೀಡಿದ್ದು, “ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ವಾಸಸ್ಥಳ ಬದಲಾಯಿಸಿದ ಮತದಾರರ ದಾಖಲೆಗಳನ್ನು ನವೀಕರಿಸುವ ಪ್ರಕ್ರಿಯೆಯಲ್ಲಿ ವಿಳಂಬ ಉಂಟಾಗಿರುವುದರಿಂದ ಈ ಗೊಂದಲ ನಿರ್ಮಾಣವಾಗಿದೆ” ಎಂದು ಹೇಳಿದೆ.

ಮತದಾರರೊಬ್ಬರು ತಮ್ಮ ವಾಸಸ್ಥಳ ಬದಲಾಯಿಸಿದಾಗ, ಹೊಸ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ವರ್ಗಾಯಿಸಲು ‘ಫಾರ್ಮ್‌-8’ರ ಮೂಲಕ ಅರ್ಜಿ ಸಲ್ಲಿಸಬಹುದು. ಅದೇ ವೇಳೆ, ಹಿಂದಿನ ಕ್ಷೇತ್ರದ ಪಟ್ಟಿಯಿಂದ ಅವರ ಹೆಸರನ್ನು ತೆಗೆದುಹಾಕುವ ಪ್ರಕ್ರಿಯೆಯೂ ನಡೆಯುತ್ತದೆ. ಆದರೆ, ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ‘ಫಾರ್ಮ್‌-8’ ಸಲ್ಲಿಕೆಗೆ ಅವಕಾಶ ಇರಲಿಲ್ಲ ಎಂಬುದು ಗಮನಾರ್ಹ.

ಅಂತಿಮ ಮತದಾರರ ಪಟ್ಟಿ ಪ್ರಕಟಣೆಗೆ ಮುನ್ನ ಕಾನೂನುಬದ್ಧ ನಿಯಮಗಳ ಅನ್ವಯ ಮತದಾರರ ಪಟ್ಟಿ ಸಂಬಂಧಿತ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈ ಕಾರಣದಿಂದ ಕೆಲವು ಅರ್ಜಿಗಳ ಪರಿಶೀಲನೆ ಮತ್ತು ಹೆಸರು ತೆಗೆದುಹಾಕುವ ಪ್ರಕ್ರಿಯೆ ಪೂರ್ಣಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ವಾದಿಸಿದೆ.

ಲೋಪಗಳ ಪರಿಶೀಲನೆಗೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ

ಒಂದೇ ವ್ಯಕ್ತಿಗೆ ಹಲವು ಇಪಿಐಸಿ ಸಂಖ್ಯೆಗಳು ಸೃಷ್ಟಿಯಾಗಿರುವುದು ಮತ್ತು ಒಂದೇ ಇಪಿಐಸಿ ಸಂಖ್ಯೆ ವಿಭಿನ್ನ ಕ್ಷೇತ್ರಗಳ ಪಟ್ಟಿಗಳಲ್ಲಿ ಕಾಣಿಸಿಕೊಂಡಿರುವ ಪ್ರಕರಣಗಳನ್ನು ಪರಿಶೀಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ಈ ಪ್ರಕರಣಗಳನ್ನು ಆಯಾ ಜಿಲ್ಲಾ ಚುನಾವಣಾಧಿಕಾರಿಗಳು, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮತದಾರರ ನೋಂದಣಾಧಿಕಾರಿಗಳಿಗೆ ರವಾನಿಸಲಾಗಿದೆ. ಸಂಬಂಧಪಟ್ಟ ಮತದಾರರ ದಾಖಲೆಗಳನ್ನು ಪರಿಶೀಲಿಸಿ, ಕಾನೂನಿನ ಪ್ರಕಾರ ಅಗತ್ಯ ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಮತದಾರರ ಪಟ್ಟಿಯ ಸಂಪೂರ್ಣ ನಿಖರತೆ, ಪಾರದರ್ಶಕತೆ ಹಾಗೂ ಸಮಗ್ರತೆಯನ್ನು ಕಾಪಾಡಲು ಚುನಾವಣಾ ಆಯೋಗ ಬದ್ಧವಾಗಿದೆ ಎಂದು ಕಚೇರಿ ಹೇಳಿಕೊಂಡಿದೆ,

ಆದರೆ, ಪತ್ತೆಯಾಗಿರುವ 803 ಇಪಿಐಸಿ ಸಂಖ್ಯೆಗಳ ಪೈಕಿ ಎಷ್ಟು ಸಂಖ್ಯೆಗಳು ಅನಗತ್ಯವಾಗಿ ಸೃಷ್ಟಿಯಾಗಿವೆ, ಎಷ್ಟು ದಾಖಲೆಗಳು ಸರಿಪಡಿಸಲ್ಪಟ್ಟಿವೆ ಹಾಗೂ ಇಂತಹ ಸಮಸ್ಯೆಗಳು ಮಹದೇವಪುರ ಕ್ಷೇತ್ರದ ಹೊರತಾಗಿಯೂ ಇತರ ಕ್ಷೇತ್ರಗಳಲ್ಲಿ ಕಂಡುಬಂದಿವೆಯೇ ಎಂಬುದರ ಕುರಿತು ಚುನಾವಣಾಧಿಕಾರಿ ಕಚೇರಿ ಯಾವುದೇ ಸ್ಪಷ್ಟನೆ ಮತ್ತು ವಿವರಣೆ ನೀಡಿಲ್ಲ.

ರಾಜ್ಯದಲ್ಲಿ 99.3 ಲಕ್ಷ ಮತದಾರರು ಡಿಲೀಟ್

ಕರ್ನಾಟಕದಲ್ಲಿ ಹೇರಲಾದ ಎಸ್‌ಐಆರ್‌ ಪ್ರಕ್ರಿಯೆಯ ನಂತರ, ಅಕ್ಟೋಬರ್ 27ರಂದು ಪ್ರಕಟಿಸಲಾದ ಕರ್ನಾಟಕದ ಅಂತಿಮ ಮತದಾರರ ಪಟ್ಟಿಯಿಂದ 99.3 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಿಹಾಕಲಾಗಿದೆ. ಎಸ್‌ಐಆರ್ ಪ್ರಕ್ರಿಯೆ ಆರಂಭವಾಗುವ ಮೊದಲು ರಾಜ್ಯದ ಮತದಾರರ ಪಟ್ಟಿಯಲ್ಲಿ ಸುಮಾರು 5.5 ಕೋಟಿ ಮತದಾರರಿದ್ದರು. ಆದರೆ, ಪರಿಷ್ಕರಣೆಯ ನಂತರ ಈ ಸಂಖ್ಯೆ 4.5 ಕೋಟಿಗೆ ಕುಸಿದಿದೆ. ಅಂದರೆ, ರಾಜ್ಯದ ಒಟ್ಟು ಮತದಾರರ ಸಂಖ್ಯೆಯಲ್ಲಿ ಸುಮಾರು 17.9%ರಷ್ಟು ಮತದಾರರನ್ನು ಹೊರಹಾಕಲಾಗಿದೆ. ಅಂತೆಯೇ, ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಬರೋಬ್ಬರಿ 13 ಕೋಟಿ ಮತದಾರರ ಹೆಸರುಗಳನ್ನು ಡಿಲೀಟ್‌ ಮಾಡಲಾಗಿದ್ದು, ಲಕ್ಷಾಂತರ ಅರ್ಹ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ.

ಈ ಲೇಖನ ಓದಿದ್ದೀರಾ?: ಟ್ರಂಪ್‌ ತಿರಸ್ಕರಿಸಿದ ಯುವಜನರು; 2029ರಲ್ಲಿ ಭಾರತದ ಯುವ ಮತದಾರರ ರಾಜಕೀಯ ನಿಲುವು ಯಾವ ದಿಕ್ಕಿಗೆ?

ಅಂದಹಾಗೆ, ಎಸ್‌ಐಆರ್‌ ಪ್ರಕ್ರಿಯೆ ಆರಂಭವಾದ ಮೊದಲ ದಿನದಿಂದಲೇ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಎಸ್‌ಐಆರ್‌ ಉದ್ದೇಶ, ಅನುಷ್ಠಾನ ಮತ್ತು ಮತದಾರರ ಹಕ್ಕುಗಳ ಮೇಲಿನ ಪರಿಣಾಮಗಳ ಕುರಿತು ಆತಂಕಗಳು ವ್ಯಕ್ತವಾಗುತ್ತಿವೆ. ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ಎಸ್‌ಐಆರ್‌ಅನ್ನು ನಡೆಸಲಾಗುತ್ತಿದೆ. ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಅಳಿಸುಹೋಗುವ ಅಪಾಯವಿದೆ ಎಂದು ವಿಪಕ್ಷಗಳು, ಹೋರಾಟಗಾರರು, ಕಾರ್ಯಕರ್ತರು ಆರೋಪಿಸಿದ್ದರು. ಎಸ್‌ಐಆರ್‌ ವಿರುದ್ಧ ಕಾನೂನು ಹೋರಾಟವೂ ನಡೆದಿತ್ತು.

ಆದರೂ, ದೇಶಾದ್ಯಂತ ಎಸ್‌ಐಆರ್‌ ಪ್ರಕ್ರಿಯೆ ನಡೆದಿದೆ. ಮತಪಟ್ಟಿಯಲ್ಲಿನ ಲೋಪಗಳನ್ನು ಸರಿಪಡಿಸುವ ಉದ್ದೇಶದಿಂದ ಈ ಪ್ರಕ್ರಿಯೆ ನಡೆಸುತ್ತಿದ್ದೇವೆಂದು ಚುನಾವಣಾ ಆಯೋಗ ಹೇಳಿಕೊಳ್ಳುತ್ತಲೇ ಇದೆ. ಆದರೆ, ಈ ಪ್ರಕ್ರಿಯೆಯಿಂದಲೂ ಹತ್ತಾರು ಲೋಪಗಳು ಸಂಭವಿಸಿದ್ದು, ಅರ್ಹ ಮತದಾರರು ಮತದ ಹಕ್ಕು ಕಳೆದುಕೊಂಡಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಳ್ಳಾರಿ | ₹25 ಲಕ್ಷ ಸಾಲದ ಆಸೆಗೆ ಬಿದ್ದು ₹49.90 ಲಕ್ಷ ಕಳೆದುಕೊಂಡ ವ್ಯಾಪಾರಿ

ವ್ಯವಹಾರದಲ್ಲಿನ ನಷ್ಟ ಸರಿದೂಗಿಸಲು ₹25 ಲಕ್ಷ ಸಾಲ ಪಡೆಯಲು ಮುಂದಾದ 52...

‘ಕೂಡಲೇ ಕ್ರಮ ಕೈಗೊಳ್ಳಿ’: ಚೀನಾ ಅತಿಕ್ರಮಣಕ್ಕೆ ಕೇಂದ್ರಕ್ಕೆ ಅರುಣಾಚಲ ಸಂಘಟನೆಗಳ ಆಗ್ರಹ

ಅರುಣಾಚಲ ಪ್ರದೇಶದಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಅತಿಕ್ರಮಣ ಮಾಡುತ್ತಿದೆ...

ಔರಾದ್‌ | ಸಂಭ್ರಮದಿಂದ ಜರುಗಿದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥಾಪನಾ ದಿನ

ಔರಾದ್ ಪಟ್ಟಣದ ಎಂ.ನಾಮದೇವರಾವ ತಾರೆ ಶಾಲೆಯಲ್ಲಿ ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌...

ಪ್ರಸಿದ್ಧ ಚಿತ್ರಕಲಾವಿದೆ, ಪದ್ಮಭೂಷಣ ಪುರಸ್ಕೃತೆ ಅರ್ಪಿತಾ ಸಿಂಗ್ ನಿಧನ

ಭಾರತೀಯ ಆಧುನಿಕ ಕಲಾ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದ ಪ್ರಖ್ಯಾತ ಸಮಕಾಲೀನ...