7 ದಿನಗಳಲ್ಲಿ 8 ಇ-ಮೇಲ್‌ಗಳು; ಆದರೂ ಮತಪಟ್ಟಿಯಲ್ಲಿ ಉಳಿಯಲಿಲ್ಲ ಗೋವಾದ 97 ಅರ್ಹರ ಹೆಸರು!

Date:

90 ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ 97 ಮತದಾರರು ಎಂಬ ಸಂಖ್ಯೆ ಅತಿ ಚಿಕ್ಕದಾಗಿ ಕಾಣಬಹುದು. ಆದರೆ, ಗೋವಾದ ಈ 97 ಮತದಾರರ ಪ್ರಕರಣವು ಚುನಾವಣಾ ಆಯೋಗದ ಕಾರ್ಯವಿಧಾನ, ECI-Net ಸಾಫ್ಟ್‌ವೇರ್‌ನ ಕೇಂದ್ರೀಕೃತ ನಿಯಂತ್ರಣ ಹಾಗೂ ಸ್ಥಳೀಯ ಚುನಾವಣಾಧಿಕಾರಿಗಳ ಕಾನೂನುಬದ್ಧ ಅಧಿಕಾರದ ಬಗ್ಗೆ ರಾಷ್ಟ್ರಮಟ್ಟದ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

- Advertisement -

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದಲ್ಲಿ ಚುನಾವಣಾ ಆಯೋಗ ಕೈಗೊಂಡ ಹಲವು ಕ್ರಮಗಳಿಗೆ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಕಳೆದ 10 ತಿಂಗಳಲ್ಲಿ 14 ಬಾರಿ ಆಕ್ಷೇಪ ದಾಖಲಿಸಿದ್ದರು ಎಂಬುದು ‘ದಿ ಇಂಡಿಯನ್ಸ್‌ ಎಕ್ಸ್‌ಪ್ರೆಸ್‌’ನ ತನಿಖಾ ವರದಿಯಿಂದ ಬಹಿರಂಗವಾಗಿದೆ. ಹೊಸ ಮತದಾರರ ಸೇರ್ಪಡೆ, ಹೆಸರು ಅಳಿಸುವಿಕೆ ಹಾಗೂ ಮತದಾರರ ಪಟ್ಟಿಯ ಸಾಫ್ಟ್‌ವೇರ್ ಮೇಲಿನ ನಿಯಂತ್ರಣವನ್ನು ದೆಹಲಿಯಲ್ಲಿ ಕೇಂದ್ರೀಕರಿಸುವ ಕ್ರಮಗಳ ಬಗ್ಗೆ ಇವರಿಬ್ಬರೂ ಪ್ರಶ್ನೆ ಎತ್ತಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮತದಾರರ ಪಟ್ಟಿ: ನಿರ್ಧಾರ ತೆಗೆದುಕೊಳ್ಳುವುದು, ಜಾರಿಗೆ ತರುವುದು ಯಾರು?

ಗೋವಾದ 97 ಮತದಾರರ ಪ್ರಕರಣ ಚುನಾವಣಾ ವ್ಯವಸ್ಥೆಯ ಮುಂದಿರುವ ಒಂದು ಮಹತ್ವದ ಪ್ರಶ್ನೆಯನ್ನು ಎದುರುತರುತ್ತದೆ: ಸ್ಥಳೀಯ ಮಟ್ಟದ ಮತದಾರರ ನೋಂದಣಿ ಅಧಿಕಾರಿಗಳು (ERO) ದಾಖಲೆಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿಯಲ್ಲಿ ಸೇರಿಸಲು ಅರ್ಹರೆಂದು ಕಂಡುಕೊಂಡ...

ಸೆ.23 ‘ಭೀಮ ಸಂಕಲ್ಪ ದಿನ’: ಡಾ ಬಿ ಆರ್...

1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಅವರ ಪ್ರಮುಖ ಆಕ್ಷೇಪಗಳಲ್ಲಿ ಒಂದು; ಮತದಾರರ ಪಟ್ಟಿಯ ಮೇಲಿನ ನಿಯಂತ್ರಣವನ್ನು ಸ್ಥಳೀಯ ಚುನಾವಣಾ ನೋಂದಣಿ ಅಧಿಕಾರಿಗಳಿಂದ ಕಸಿದುಕೊಂಡು ದೆಹಲಿಯ ಐಟಿ ಸೆಲ್‌ ವ್ಯವಸ್ಥೆಯಲ್ಲಿ ಕೇಂದ್ರೀಕರಿಸುವುದರ ವಿರುದ್ಧವಾಗಿತ್ತು. ಅವರ ಈ ಆಕ್ಷೇಪದ ಕಳಕಳಿ ಏನೆಂಬುದು ಗೋವಾದಲ್ಲಿನ 97 ಮತದಾರರ ಪ್ರಕರಣದಲ್ಲಿ ಗೋಚರಿಸಿದೆ.

ಗೋವಾದಲ್ಲಿ ಎಸ್‌ಐಆರ್‌  ಪ್ರಕ್ರಿಯೆಯ ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 21ರಂದು ಪ್ರಕಟಿಸಬೇಕಿತ್ತು. ಅದಕ್ಕೂ ಮೊದಲು ‘ತಾರ್ಕಿಕ ವ್ಯತ್ಯಾಸ’ (Logical Discrepancy) ಎಂದು ಗುರುತಿಸಲ್ಪಟ್ಟ ಮತದಾರರ ಪ್ರಕರಣಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದಂತೆ ಸ್ಥಳೀಯ ಚುನಾವಣಾ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.

ಒಟ್ಟು 649 ಮತದಾರರು ದಾಖಲೆಗಳು ಮತ್ತು ಆಕ್ಷೇಪಗಳೊಂದಿಗೆ ಅಧಿಕಾರಿಗಳ ಮುಂದೆ ಹಾಜರಾದರು. ಅವರಲ್ಲಿ 97 ಮಂದಿಯ ಪ್ರಕರಣಗಳನ್ನು ಪರಿಶೀಲಿಸಿದ ಚುನಾವಣಾ ನೋಂದಣಿ ಅಧಿಕಾರಿಗಳು (EROs) ಮತ್ತು ಸಹಾಯಕ EROಗಳು, ಈ ಮತದಾರರು ಅಂತಿಮ ಪಟ್ಟಿಯಲ್ಲಿ ಸೇರಲು ಅರ್ಹರು ಎಂದು ನಿರ್ಧರಿಸಿದರು. ಅಂದರೆ, ಇವರನ್ನು ಹಿಂದೆ ಪಟ್ಟಿಯಿಂದ ಹೊರಗಿಟ್ಟ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂಬುದು ಅವರ ಸ್ಪಷ್ಟ ತೀರ್ಮಾನವಾಗಿತ್ತು.

ಆದರೆ ಸಮಸ್ಯೆ ಇಲ್ಲಿಯೇ ಆರಂಭವಾಯಿತು. ಈ 97 ಮಂದಿಯ ಹಿಂದಿನ ಸ್ಥಿತಿಯನ್ನು ಬದಲಾಯಿಸಲು ECINet ಸಾಫ್ಟ್‌ವೇರ್‌ನಲ್ಲಿ EROಗಳಿಗೆ ಅವಕಾಶವೇ ಇರಲಿಲ್ಲ. Rollback ಅಥವಾ Revert ಸೌಲಭ್ಯವನ್ನು ಬಳಸುವ ಅನುಮತಿ ದೆಹಲಿಯಲ್ಲಿರುವ ಚುನಾವಣಾ ಆಯೋಗದ ಐಟಿ ಸೆಲ್‌ನ ನಿಯಂತ್ರಣದಲ್ಲಿತ್ತು.

ಈ ಸಮಸ್ಯೆಯನ್ನು ಪರಿಹರಿಸುವಂತೆ ಗೋವಾದ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ದೆಹಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಫೆಬ್ರವರಿ 11ರಿಂದ 17ರವರೆಗೆ ಏಳು ದಿನಗಳಲ್ಲಿ 8 ಇ-ಮೇಲ್‌ಗಳನ್ನು ಕಳುಹಿಸಲಾಯಿತು. “ಈ 97 ಮತದಾರರು ಅರ್ಹರಾಗಿದ್ದಾರೆ, ಹಿಂದಿನ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು, Rollback ಸೌಲಭ್ಯ ಒದಗಿಸಿ” ಎಂದು ಪದೇಪದೇ ವಿನಂತಿಸಲಾಯಿತು.

ಗೋವಾ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕೂಡ, “DEO, ERO ಮತ್ತು AEROಗಳಿಂದ ಹಲವು ಮನವಿಗಳು ಬಂದಿದ್ದರೂ Rollback ಮತ್ತು ದಾಖಲೆಗಳನ್ನು ಮರುಅಪ್‌ಲೋಡ್ ಮಾಡುವ ಸೌಲಭ್ಯ ಇನ್ನೂ ಒದಗಿಸಿಲ್ಲ” ಎಂದು ಚುನಾವಣಾ ಆಯೋಗ ಮತ್ತು ಅದರ ತಾಂತ್ರಿಕ ಸೇವಾ ಸಂಸ್ಥೆ TCSಗೆ ತಿಳಿಸಿತ್ತು.

ಫೆಬ್ರವರಿ 13ರಂದು ಕಳುಹಿಸಲಾದ ಇ-ಮೇಲ್‌ನಲ್ಲಿ “ಗೋವಾ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಕಳುಹಿಸಲಾದ ಯಾವುದೇ ಇ-ಮೇಲ್ ಅಥವಾ ಪತ್ರಕ್ಕೆ ಇನ್ನೂ ಉತ್ತರ ಬಂದಿಲ್ಲ” ಎಂದು ಸ್ಪಷ್ಟವಾಗಿ ದಾಖಲಿಸಲಾಗಿತ್ತು.

ಫೆಬ್ರವರಿ 14ರಂದು ಎರಡು ಬಾರಿ ಮತ್ತೆ ಮನವಿ ಮಾಡಲಾಯಿತು. ಫೆಬ್ರವರಿ 15ರಂದು ಸುಪ್ರೀಂ ಕೋರ್ಟ್ ಆದೇಶವನ್ನು ಸಮಯಕ್ಕೆ ಸರಿಯಾಗಿ ಪಾಲಿಸಲು Rollback ಸೌಲಭ್ಯ ತುರ್ತಾಗಿ ಬೇಕೆಂದು ಕೋರಲಾಯಿತು. ಫೆಬ್ರವರಿ 16ರಂದು ಕೂಡ ಉತ್ತರ ಬಂದಿಲ್ಲ ಎಂದು ಮತ್ತೆ ನೆನಪಿಸಲಾಯಿತು. ಫೆಬ್ರವರಿ 17ರಂದು 97 ಮಂದಿಯ ಸಂಪೂರ್ಣ ಪಟ್ಟಿಯೊಂದಿಗೆ ಮತ್ತೊಂದು ಮನವಿ ಕಳುಹಿಸಲಾಯಿತು.

ಇದಾದ ನಂತರ, ಫೆಬ್ರವರಿ 18ರಂದು ದೆಹಲಿಯಲ್ಲಿ ಮತದಾರರ ಪಟ್ಟಿಯ ಜವಾಬ್ದಾರಿ ಹೊಂದಿದ್ದ ಉಪ ಚುನಾವಣಾ ಆಯುಕ್ತ ಸಂಜಯ್ ಕುಮಾರ್ ಅವರು ಚುನಾವಣಾ ಆಯೋಗದ ಐಟಿ ಮಹಾನಿರ್ದೇಶಕಿ ಸೀಮಾ ಖನ್ನಾ ಅವರಿಗೆ ನೇರ ಸೂಚನೆ ನೀಡಿದರು. “ERO/AEROಗಳಿಗೆ ಕಾನೂನಿನಡಿ ತಪ್ಪುಗಳನ್ನು ಸರಿಪಡಿಸುವ ಅಧಿಕಾರವಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೈಗೊಳ್ಳಬೇಕಾದ ಕ್ರಮವನ್ನು ಐಟಿ ವ್ಯವಸ್ಥೆ ತಡೆಯಲು ಸಾಧ್ಯವಿಲ್ಲ. ಸ್ಥಳೀಯ ಅಧಿಕಾರಿಗಳಿಗೆ ರೋಲ್‌ಬ್ಯಾಕ್‌ ಸೌಲಭ್ಯ ಒದಗಿಸಿ” ಎಂದು ಸ್ಪಷ್ಟ ಸೂಚನೆ ನೀಡಿದರು.

ಆದರೂ, ಫೆಬ್ರವರಿ 21ರಂದು ಅಂತಿಮ ಪಟ್ಟಿ ಪ್ರಕಟವಾದಾಗ ಆ 97 ಮತದಾರರ ಹೆಸರುಗಳು ಮತಪಟ್ಟಿಯಲ್ಲಿ ಕಾಣಿಸಲಿಲ್ಲ. ಸೆಪ್ಟೆಂಬರ್ 20ರವರೆಗಿನ ಪರಿಶೀಲನೆಯಲ್ಲಿಯೂ ಈ 97 ಹೆಸರುಗಳು ಪಟ್ಟಿಗೆ ಮರಳಿರಲಿಲ್ಲ.

ಗೋವಾದ ಮುಖ್ಯ ಚುನಾವಣಾಧಿಕಾರಿ ಸಂಜಯ್ ಗೋಯೆಲ್ ಈ ವಿಷಯವನ್ನು ಇನ್ನಷ್ಟು ಸ್ಪಷ್ಟಪಡಿಸಿದ್ದಾರೆ. “ಆರಂಭದಲ್ಲಿ ಈ 97 ಮಂದಿಯನ್ನು ‘ತಾರ್ಕಿಕ ವ್ಯತ್ಯಾಸ’ದಡಿ ಗುರುತಿಸಿ, ನೋಟಿಸ್‌ ನೀಡಲಾಗಿತ್ತು. ಆದರೂ, ನಂತರದ ಪ್ರಕ್ರಿಯೆಯಲ್ಲಿ ಅವರು ಅರ್ಹ ಮತದಾರರು ಎಂಬುದು ಸ್ಪಷ್ಟವಾದ ಬಳಿಕ, ಅವರನ್ನು ಮತಪಟ್ಟಿಗೆ ಸೇರಿಸಬೇಕೆಂದು ಚುನಾವಣಾ ಆಯೋಗಕ್ಕೆ ತಿಳಿಸಿದ್ದೆವು. ಆದರೆ, ಸೇರಿಸದೇ ಇರುವ ನಿರ್ಧಾರ ಕೇಂದ್ರ ಚುನಾವನಾ ಆಯೋಗದ್ದು. ಆದರೆ, ERO ಮಟ್ಟದಲ್ಲಿಯೇ ಮತದಾರರನ್ನು ಮತ್ತೆ ಸೇರಿಸಲು ECI-Netನಲ್ಲಿ ಯಾವುದಾದರೂ ವ್ಯವಸ್ಥೆ ಇರಲೇಬೇಕು” ಎಂದು ಹೇಳಿದ್ದಾರೆ.

ಈ ಹೇಳಿಕೆಯೇ ಸ್ಥಳೀಯ ಚುನಾವಣಾಧಿಕಾರಿಗಳ ಕಾನೂನುಬದ್ಧ ಅಧಿಕಾರ ಮತ್ತು ದೆಹಲಿಯ ಸಾಫ್ಟ್‌ವೇರ್ ನಿಯಂತ್ರಣದ ನಡುವಿನ ಸಂಘರ್ಷವನ್ನು ಬಹಿರಂಗಪಡಿಸುತ್ತದೆ.

ಇದೇ ವಿಷಯದ ಬಗ್ಗೆ ಚುನಾವಣಾ ಆಯುಕ್ತರಾದ ವಿವೇಕ್ ಜೋಶಿ ಮತ್ತು ಸುಖಬೀರ್ ಸಿಂಗ್ ಸಂಧು ಮೊದಲೇ ಆಕ್ಷೇಪ ದಾಖಲಿಸಿದ್ದರು. ವಿವೇಕ್ ಜೋಶಿ ಅವರು “ಮತದಾರರ ಪಟ್ಟಿಯ ಡೇಟಾಬೇಸ್ ಕ್ರಮೇಣ ದೆಹಲಿ ಕೇಂದ್ರೀಕೃತವಾಗುತ್ತಿದೆ” ಎಂದು ಎಚ್ಚರಿಸಿದ್ದರು. ಸುಖಬೀರ್ ಸಿಂಗ್ ಸಂಧು, “ERO, DEO ಮತ್ತು CEOಗಳಿಗೆ ERO-Net ಪೋರ್ಟಲ್‌ಗೆ ಸಂಪೂರ್ಣ ಪ್ರವೇಶವಿಲ್ಲ. ಕಾನೂನಿನಿಂದ ಅಧಿಕಾರ ಪಡೆದಿರುವ ಸ್ಥಳೀಯ ಚುನಾವಣಾ ಅಧಿಕಾರಿಗಳಿಗೆ ERO-Net ಪೋರ್ಟಲ್‌ಗೆ ಪ್ರವೇಶ ಮತ್ತು ಕಾರ್ಯಸ್ವಾತಂತ್ರ್ಯವನ್ನು ನಿರ್ಬಂಧಿಸಲು DG (IT)ಗೆ ಕಾನೂನುಬದ್ಧ ಅಧಿಕಾರವಿಲ್ಲ” ಎಂದು ಆಕ್ಷೇಪ ಎತ್ತಿದ್ದರು.

ಈ ಲೇಖನ ಓದಿದ್ದೀರಾ?: ‘SIR ಪ್ರಕ್ರಿಯೆ ಕುರಿತು ನಮಗೆ ಏನನ್ನೂ ತಿಳಿಸದೇ ತೀರ್ಮಾನ’: ಗ್ಯಾನೇಶ್ ಕುಮಾರ್ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು

ಕಾನೂನಿನ ಪ್ರಕಾರ ಪ್ರತಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ಬಗ್ಗೆ ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ EROಗೆ ಇದೆ. ಮತದಾರನ ದಾಖಲೆ ಪರಿಶೀಲಿಸಿ, ವಿಚಾರಣೆ ನಡೆಸಿ, ಹೆಸರು ಸೇರಿಸಬೇಕೇ ಅಥವಾ ಬೇಡವೇ ಎಂಬುದನ್ನು ERO ತೀರ್ಮಾನಿಸುತ್ತಾರೆ.

ಆದರೆ, ಗೋವಾ ಪ್ರಕರಣದಲ್ಲಿ ERO ಮತದಾರನ ಪರವಾಗಿ ತೀರ್ಮಾನಿಸಿದರೂ, ಸಾಫ್ಟ್‌ವೇರ್ ಅದನ್ನು ಜಾರಿಗೆ ತರಲು ಅವಕಾಶ ನೀಡದಿರುವುದು ಮೂಲಭೂತ ಸಮಸ್ಯೆ.

ಜನವರಿ 29ರಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಸುಪ್ರೀಂ ಕೋರ್ಟ್ ಪೀಠವು ‘ತಾರ್ಕಿಕ ವ್ಯತ್ಯಾಸ’ ಹೊಂದಿರುವ ಮತದಾರರ ಹೆಸರುಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ, ಕಾರಣ ತಿಳಿಸಬೇಕು ಮತ್ತು ದಾಖಲೆ ಸಲ್ಲಿಸಲು 10 ದಿನಗಳ ಅವಕಾಶ ಕೊಡಬೇಕು ಎಂದು ಸೂಚಿಸಿತ್ತು. ಈ ನಿರ್ದೇಶನವನ್ನು SIR ನಡೆಯುತ್ತಿರುವ ಎಲ್ಲ ರಾಜ್ಯಗಳಲ್ಲೂ ಪಾಲಿಸಬೇಕು ಎಂದು ನ್ಯಾಯಾಲಯ ಕಟ್ಟುನಿಟ್ಟಾಗಿ ಹೇಳಿತ್ತು.

ಗೋವಾದಲ್ಲಿ ಈ ನಿರ್ದೇಶನವನ್ನು ಪಾಲಿಸಿತು. ಮತದಾರರಿಗೆ ನೋಟಿಸ್‌ ನೀಡಿತು. ಮತದಾರರು ದಾಖಲೆಗಳನ್ನೂ ಸಲ್ಲಿಸಿದರು. ಸ್ಥಳೀಯ ಅಧಿಕಾರಿಗಳು ಪರಿಶೀಲಿಸಿದರು. 97 ಮಂದಿ ಅರ್ಹರು ಎಂದು ತೀರ್ಮಾನಿಸಿದರು. ಆದರೂ, ಕೇಂದ್ರ ಚುನಾವಣಾ ಆಯೋಗದ ಧೋರಣೆ ಮತ್ತು ತಾಂತ್ರಿಕ ನಿಯಂತ್ರಣದ ಕಾರಣದಿಂದ ಆ 97 ಹೆಸರುಗಳು ಅಂತಿಮ ಪಟ್ಟಿಗೆ ಮರಳಲಿಲ್ಲ.

ಅರ್ಹರಾಗಿದ್ದರೂ ಮತದ ಹಕ್ಕು ಕಳೆದುಕೊಂಡಿರುವ ಈ  97 ಮಂದಿಯಲ್ಲಿ 65 ಜನ ತಾಳಿಗಾಂವ್ ವಿಧಾನಸಭಾ ಕ್ಷೇತ್ರದವರು. ಉಳಿದವರು ಸೇಂಟ್ ಕ್ರೂಸ್, ಕುಂಬರ್ಜುವಾ, ಪ್ರಿಯೊಲ್, ಮಾರ್ಗಾವ್, ಬೆನೌಲಿಂ ಮತ್ತು ವೆಲಿಂ ಕ್ಷೇತ್ರಗಳಿಗೆ ಸೇರಿದವರು.

ಗೋವಾದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದು ಕೇವಲ ಮತದಾನ ಹಕ್ಕಿನ ನಷ್ಟವಲ್ಲ. ರಾಜ್ಯ ಸರ್ಕಾರದ ಕೆಲವು ಪ್ರಮುಖ ಯೋಜನೆಗಳಿಗೆ ಮತದಾರರ ಪಟ್ಟಿಯೇ ಅರ್ಹತೆಯ ಆಧಾರವಾಗಿದೆ. ಉದಾಹರಣೆಗೆ, ಡಯಾಲಿಸಿಸ್, ಆಂಜಿಯೋಪ್ಲಾಸ್ಟಿ, ಓಪನ್ ಹಾರ್ಟ್ ಸರ್ಜರಿ, ಅಂಗಾಂಗ ಕಸಿ ಮತ್ತು ಕೀಮೋಥೆರಪಿ ಸೇರಿದಂತೆ ದುಬಾರಿ ಚಿಕಿತ್ಸೆಗಳಿಗೆ ನೆರವು ನೀಡುವ ಗೋವಾ ಮೆಡಿಕ್ಲೇಮ್ ಯೋಜನೆ ರಾಜ್ಯದ ಮತದಾರರಿಗೆ ಮಾತ್ರ ಲಭ್ಯ. ಹೀಗಿರುವಾಗ, ಮತದ ಹಕ್ಕು ಇಲ್ಲವಾದರೆ, ಅವರು ಸರ್ಕಾರಿ ಸೌಲಭ್ಯಗಳಿಂದಲೂ ವಂಚಿತರಾಗುತ್ತಾರೆ.

ಜ್ಞಾನೇಶ್‌ ಕುಮಾರ್‌ ಅವರ ಸರ್ವಾಧಿಕಾರಿ ಧೋರಣೆಯಿಂದಾಗಿ, ERO-Netಅನ್ನು ಪ್ರವೇಶಿಸುವ ಸೌಲಭ್ಯ ದೊರೆಯದೇ ಇದ್ದಾಗ, ಸ್ಥಳೀಯ ಚುನಾವಣಾ ಅಧಿಕಾರಿಗಳು ಈ 97 ಮಂದಿಗೆ ಹೊಸ ಮತದಾರರು ಬಳಸುವ Form-6 ಮೂಲಕ ಮತ್ತೆ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಒಮ್ಮೆ ಅರ್ಹರೆಂದು ವಿಚಾರಣೆ ನಡೆಸಿ ತೀರ್ಮಾನಿಸಿದ ಮತದಾರನೇ, ಸಾಫ್ಟ್‌ವೇರ್ ವ್ಯವಸ್ಥೆಯ ಕಾರಣದಿಂದ ಮತ್ತೆ ‘ಹೊಸ ಮತದಾರ’ನಂತೆ ಅರ್ಜಿ ಸಲ್ಲಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲದಕ್ಕೂ ಮೂಲ ಕಾರಣ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ ಮತ್ತು ಅವರನ್ನು ನೇಮಿಸಿ, ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿರುವ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಬಿಜೆಪಿ, ಭಕ್ತರು ಮತ್ತು ಸಾರ್ವಜನಿಕ ಸಭ್ಯತೆ

ದೇಶದ ರಾಜಕೀಯ ಇತಿಹಾಸವನ್ನು ತಿಳಿಯದ, ಮಹನೀಯರ ನಡೆ-ನುಡಿಗಳನ್ನು ಅರಿಯದ; ಅರಿತರೂ ಅಳವಡಿಸಿಕೊಳ್ಳದ...

ಹೆರಿಗೆಯ ನಂತರ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಿಗೆ! ಬಾಲಕನ ವಿರುದ್ಧ ಪೋಕ್ಸೋ ದಾಖಲು

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಕೇರಳ ಮೂಲದ ಬಾಲಕನೊಬ್ಬ ಅಪ್ರಾಪ್ತ ಬಾಲಕಿಯೊಂದಿಗೆ...

ಸತ್ಯ ಬರೆದ ಪತ್ರಕರ್ತನ ಹತ್ಯೆ, ಮಗನ ಒಂಟಿ ಹೋರಾಟ: ಪೆರೋಲ್ ಮೋಜಿನಲ್ಲಿ ಅತ್ಯಾಚಾರಿ ರಾಮ್ ರಹೀಮ್

ಸಾಧ್ವಿಗಳ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ...