ಆಗುಂಬೆ ಸುರಂಗ, ಶೃಂಗೇರಿ ರೈಲು ಮಾರ್ಗ: ವಯನಾಡು ಮಾದರಿ ದುರಂತಕ್ಕೆ ಮುನ್ನುಡಿಯೇ?

Date:

ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮತೆಯನ್ನು ಸಂರಕ್ಷಿಸುವಂತೆ ಪ್ರೊ. ಮಾಧವ್ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಗಳು ದಶಕದ ಹಿಂದೆಯೇ ಘಂಟಾಘೋಷವಾಗಿ ಸಾರಿದ್ದವು. ಆದರೆ, ರಾಜಕೀಯ ಲಾಭ ಹಾಗೂ ಉದ್ಯಮಿಗಳ ಹಿತಾಸಕ್ತಿಗಾಗಿ ಈ ಎಚ್ಚರಿಕೆಗಳನ್ನು ಕಡೆಗಣಿಸಿದ ಪರಿಣಾಮವನ್ನು ಇಂದು ನೆರೆರಾಜ್ಯಗಳು ಅನುಭವಿಸುತ್ತಿವೆ.

- Advertisement -

ದುರದೃಷ್ಟವಶಾತ್, ಕರ್ನಾಟಕ ಸರ್ಕಾರವೂ ಇದೇ ತಪ್ಪುಗಳನ್ನು ಪುನರಾವರ್ತಿಸಲು ಹೊರಟಂತಿದೆ. ಮಲೆನಾಡಿನ ಜೀವನಾಡಿಯಾಗಿರುವ ಪರಿಸರ ಸೂಕ್ಷ್ಮ ವಲಯದಲ್ಲಿ ಪ್ರಸ್ತಾಪಿಸಲಾಗಿರುವ ‘ಆಗುಂಬೆ ಸುರಂಗ ಮಾರ್ಗ’ ಮತ್ತು ‘ಶೃಂಗೇರಿ-ಮಂಗಳೂರು ರೈಲ್ವೇ ಯೋಜನೆ’ಗಳು ಸ್ಥಳೀಯರ ಪ್ರಗತಿಗಾಗಿಯೇ ಅಥವಾ ಮಲೆನಾಡಿನ ಒಡಲನ್ನು ಸೀಳಿ ವಯನಾಡು ಮಾದರಿಯ ಮಹಾ ದುರಂತವನ್ನು ನಾವೇ ಆಹ್ವಾನಿಸುವುದಕ್ಕಾಗಿಯೇ ಎಂಬ ಆತಂಕ ಸದ್ಯ ಪರಿಸರವಾದಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಮೂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...
wayanad landslide more than 100 people are yet to be found

ಜುಲೈ 7ರ ವಯನಾಡಿನ ಭೂ ಕುಸಿತ ಮತ್ತದೇ ಕರಾಳ ನೆನಪಿನ ಪುಟಗಳನ್ನು ಸ್ಮೃತಿಪಟಲದ ಮೇಲೆ ತಂದಿರಿಸಿದೆ. 30 ಜುಲೈ 2024ರ ನಡುರಾತ್ರಿ ಸಂಭವಿಸಿದ ಭೂ ಕುಸಿತದಲ್ಲಿ 325ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು, 250ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಕಲ್ಲು ಮಣ್ಣು ಕೆಸರಿನಾಳದಲ್ಲಿ ಕಳೆದು ಸಿಗದೇ ಹೋದವರಿಗೆ ಲೆಕ್ಕವಿಲ್ಲ. ಈ ಬಾರಿಯ ಭೂ ಕುಸಿತದಲ್ಲಿ ಸತ್ತವರು 7 ಮಂದಿ ಎಂದು ವರದಿಯಾಗಿದೆ.

ಪಶ್ಚಿಮ ಘಟ್ಟಗಳ ಒಡಲಲ್ಲಿ ಮಾನವನ ಹಸ್ತಕ್ಷೇಪ ಉಂಟು ಮಾಡಬಹುದಾದ ದುರಂತಗಳಿಗೆ ಕೇರಳದ ವಯನಾಡಿನ ಭೂ ಕುಸಿತ ಅಂಗೈ ಮೇಲಿನ ಹುಣ್ಣಿನಂತೆ. 2024ರ ವಯನಾಡು ಭೂಕುಸಿತದ ಸಂದರ್ಭದಲ್ಲಿ ಮಾಧವ್‌ ಗಾಡ್ಗೀಳ್‌ ವರದಿಯ ಕುರಿತು ದೇಶಾದ್ಯಂತ ಚರ್ಚೆಗಳು ನಡೆದವು.

27090144 waya4 0807newsroom 1783474332 991

ಪ್ರೊ.ಮಾಧವ್ ಗಾಡ್ಗೀಳ್ ವರದಿಯಲ್ಲಿ ಏನಿತ್ತು?

ಪರಿಸರ ಸೂಕ್ಷ್ಮ ವಲಯಗಳನ್ನು ಗುರುತಿಸುವುದು, ಸುಸ್ಥಿರ ಅಭಿವೃದ್ಧಿಗೆ ಪೂರಕವಲ್ಲದ ಯೋಜನೆಗಳನ್ನು ಕೈಬಿಡುವುದು.

ಅವೈಜ್ಞಾನಿಕ ಯೋಜನೆಗಳನ್ನು ಮೊಟಕುಗೊಳಿಸುವುದು, ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಿ ಮಾನವ ಹಸ್ತಕ್ಷೇಪ ನಿಯಂತ್ರಿಸುವುದು.

1.29.037 ಚದುರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವುದು. ಪರಿಸರ ಸೂಕ್ಷ್ಮತೆಯನ್ನು ಆಧರಿಸಿ 3 ಸೂಕ್ಷ್ಮ ವಲಯಗಳಾಗಿ ವಿಂಗಡಿಸುವುದು.

2010ರಲ್ಲಿ ಪಶ್ಚಿಮ ಘಟ್ಟ ವಿಜ್ಞಾನ ತಜ್ಞರ ಸಮಿತಿಯ ಸ್ಥಾಪನೆಯಾಯಿತು. ಹವಾಮಾನ ಬದಲಾವಣೆಯಲ್ಲಿನ ನಿರಂತರ ಏರುಪೇರು ಹಾಗೂ ಅನಿಯಂತ್ರಿತ ಅಭಿವೃದ್ಧಿ ಯೋಜನೆಗಳ ಮೇಲೆ ನಿಗಾ ಇರಿಸಲು ಈ ಸಮಿತಿ ಹುಟ್ಟಿಕೊಂಡಿತು. ನೀಲಗಿರಿ ತಪ್ಪಲಿನಲ್ಲಿ ನಡೆದ ಪಶ್ಚಿಮ ಘಟ್ಟ ಉಳಿಸಿ ಹೋರಾಟದ ವೇಳೆ ಹುಟ್ಟಿಕೊಂಡ ಈ ಸಮಿತಿ ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ, ಪರಿಸರ ವಲಯ ನಶಿಸದಂತೆ ಉಳಿಸಲು ಹಲವಾರು ಮಾರ್ಗದರ್ಶಿಗಳನ್ನು ರೂಪಿಸಿತು.

ಮಹಾ ದುರಂತಗಳಿಗೆ ಮುನ್ನುಡಿ ಬರೆದುಕೊಂಡಿದ್ದ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳು ಈ ವರದಿಯನ್ನು ತೀವ್ರವಾಗಿ ವಿರೋಧಿಸಿದವು. ವರದಿ ಜನಸಾಮಾನ್ಯರ ಬದುಕು, ಕೃಷಿ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದೂ, ಅದರಲ್ಲೂ ಇಡುಕ್ಕಿ ಮತ್ತು ವಯನಾಡಿನ ಅಭಿವೃದ್ಧಿಗೆ ಮಾರಕ ಎಂದು ಕೇರಳ ಸರ್ಕಾರ ಮೈಕೊಡವಿತು. ಅಂತೆಯೇ ಮಹಾರಾಷ್ಟ್ರ ಇದು ಸದ್ಯದ ಸಾಂಸ್ಥಿಕ ರಚನೆಗಳಿಗೆ ಪೂರಕವಾಗಿಲ್ಲ ಎಂದು ತಳ್ಳಿಹಾಕಿತು.

ರಾಜಕೀಯ ಪಕ್ಷಗಳು, ಧಾರ್ಮಿಕ ಸಂಸ್ಥೆಗಳು, ಆರ್ಥಿಕ ಪ್ರಗತಿಗೆ ಹಿನ್ನೆಡೆಯಾಗುತ್ತದೆ ಸ್ಥಳೀಯ ಸಮುದಾಯಗಳ ಸ್ಥಳಾಂತರ ಅಸಾಧ್ಯ ಎಂಬ ಕಾರಣ ಕೊಟ್ಟು ವರದಿಗೆ ನಕಾರ ಹಾಕಿದವು.

ಪ್ರೊ.ಮಾಧವ್ ಗಾಡ್ಗೀಳ್ ವರದಿಗೆ ವಿರೋಧದ ಮಹಾಪೂರವೇ ಹರಿದು ಬಂದ ನಂತರ ಪರಿಸರ ಸಚಿವಾಲಯ 2021ರಲ್ಲಿ ಕಸ್ತೂರಿ ರಂಗನ್‌ ನೇತೃತ್ವದ ಸಮಿತಿಗೆ ವರದಿ ಪರಿಶೀಲಿಸುವ ಜವಾಬ್ದಾರಿ ವಹಿಸಿಕೊಟ್ಟಿತು. ಕಸ್ತೂರಿ ರಂಗನ್‌ ವರದಿ 56,825 ಚದುರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಲು ಸಲಹೆ ನೀಡಿತು. ಗಾಡ್ಗೀಳ್‌ ವರದಿಯಲ್ಲಿದ್ದ ಕಟ್ಟುನಿಟ್ಟಿನ ನಿಬಂಧನೆಗಳು ಇದರಲ್ಲಿಲ್ಲವಾದರೂ ಸರ್ಕಾರ ಈ ವರದಿಯನ್ನೂ ಸಂಪೂರ್ಣ ಒಪ್ಪಲಿಲ್ಲ.

ಪಕ್ಕದ ರಾಜ್ಯದಲ್ಲೇನೋ ಇಂತಹ ದುರಂತ ನಡೆದರೆ ಸಿಂಪಥಿ ತೋರಿಸಿ ಸುಮ್ಮನಾಗಿ ಬಿಟ್ಟೆವು, ನಮ್ಮ ಕಾಲಿನ ಕೆಳಗೆ ನಾವೇ ನಿರ್ಮಿಸಿಕೊಂಡ ಗುಂಡಿಯ ಅರಿವೂ ನಮಗಿಲ್ಲ.

ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಅಭಿವೃದ್ಧಿ ಯೋಜನೆಯ ನೆಪದಲ್ಲಿ ಪರಿಸರದ ದುರಂತ ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತಿರುವ ರಾಜಕೀಯ ನಾಯಕರು ಕೈಗೆತ್ತಿಕೊಂಡಿರುವ ಆಗುಂಬೆ ಸುರಂಗ ಮಾರ್ಗ ಮತ್ತು ಶೃಂಗೇರಿ-ಮಂಗಳೂರು ರೈಲ್ವೇ ಯೋಜನೆಗಳು ನಮ್ಮ ಭೂಗರ್ಭದ ಗಾಯವನ್ನು ಇನ್ನಷ್ಟು ತಿವಿದು ಸ್ರಾವಗೊಳಿಸುತ್ತವೆ.

ಆಗುಂಬೆ ಸುರಂಗ ಮಾರ್ಗ: ಆಗುಂಬೆಗೆ ಸುರಂಗ ಮಾರ್ಗದ ಪ್ರಸ್ತಾಪ ಇಂದು ನೆನ್ನೆಯದಲ್ಲ. ಈ ಯೋಜನೆಯ ಕುರಿತು ಚರ್ಚೆಯಾಗಿದ್ದು ಶೋಭಾ ಕರಂದ್ಲಾಜೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿದ್ದ ಕಾಲದಲ್ಲಿ ಆಗುಂಬೆಯನ್ನು ಉಡುಪಿಗೆ ಸಂಪರ್ಕಿಸುವ ಚತುಷ್ಪಥ ರಸ್ತೆ ನಿರ್ಮಿಸುವ ಉದ್ದೇಶದಿಂದ ಆ ಸಂದರ್ಭದಲ್ಲಿ ಆಗುಂಬೆಯಲ್ಲಿ ಸುರಂಗ ನಿರ್ಮಿಸುವ ಯೋಚನೆ ಪ್ರಚುರಗೊಂಡಿತು.

768 512 26014406 thumbnail 16x9 news

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಟೆಂಡರ್ ಕರೆದು, ಸುರಂಗ ಮಾರ್ಗ ಪರ್ಯಾಯವನ್ನು ನಿರ್ಮಿಸುವ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ವಿವರವಾದ ಯೋಜನಾ ವರದಿ (DPR) ತಯಾರಿಸಲು 2.33 ಕೋಟಿ ರೂ.ಗಳನ್ನು ಹಂಚಿಕೆ ಮಾಡಿತು. ಈ ಅಧ್ಯಯನವು ಈ ಪ್ರದೇಶದಲ್ಲಿ NH-169A ಕಾರಿಡಾರ್ ಅನ್ನು ನವೀಕರಿಸಲು 400 ಕೋಟಿ ರೂಪಾಯಿ ವೆಚ್ಚ ತಗುಲುತ್ತದೆ. ಇದು ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ನಡುವೆ ಸುರಕ್ಷಿತ ಸಂಚಾರವನ್ನು ಉತ್ತೇಜಿಸುವ ಉದ್ದೇಶದಿಂದ ಕೈಗೊಂಡ ಯೋಜನೆ ಎಂದು ಸಂಸದರು, ಯೋಜನಾಧಿಕಾರಿಗಳು ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ಕುರಿತು ಈದಿನ.ಕಾಮ್‌ ಜೊತೆಗೆ ಮಾತನಾಡಿದ ಪರಿಸರವಾದಿ ನಾಗರಾಜ್‌ ಕೂವೆ, “ಆಗುಂಬೆ ಸುರಂಗ ಯೋಜನೆಯಿಂದ ರೈತರು ಭೂಮಿ ಕಳೆದುಕೊಳ್ಳುತ್ತಾರೆ. ಯೋಜನೆಯ ವ್ಯಾಪ್ತಿಯೊಳಗೆ ಬರಬಹುದಾದ ಜಮೀನುಗಳನ್ನು ವಶಪಡಿಸಿಕೊಳ್ಳುವ ಸಾಧ್ಯತೆಗಳಿವೆ. ಸ್ಥಳೀಯರನ್ನು ಒಕ್ಕಲೆಬ್ಬಿಸಿ ಅವರ ಬದುಕನ್ನು ಅತಂತ್ರದಂಚಿಗೆ ನೂಕಲಾಗುತ್ತದೆ. ಆದ್ದರಿಂದ ಈಗಿರುವ ರಸ್ತೆಯನ್ನೇ ದುರಸ್ತಿ ಮಾಡಿ ಸಂಚಾರಕ್ಕೆ ಯೋಗ್ಯವಾಗಿಸುವುದು ಉತ್ತಮ” ಎಂದು ಅಭಿಪ್ರಾಯಿಸಿದ್ದಾರೆ.

“ಯೋಜನೆಯು ದೇಶದ ಉದ್ಯಮಿಗಳನ್ನು ಉದ್ದರಿಸಲೆಂದು ಪ್ರಸ್ತಾಪನೆಯಾದಂತಿದೆ. ಆಗುಂಬೆ ಮಾರ್ಗದಲ್ಲಿ ಸುರಂಗ ಕೊರೆದರೆ ಜೀವ ವೈವಿಧ್ಯ ತಾಣವನ್ನೇ ಹಾಳುಗೆಡವಿದಂತೆ. ಭಾರೀ ಗಾತ್ರದ ಯಂತ್ರೋಪಕರಣ, ಜೆಸಿಬಿ ಮುಂತಾದ ವಾಹನಗಳನ್ನು ಬಳಸುವುದರಿಂದ, ಕಲ್ಲು ಬಂಡೆಗಳನ್ನು ಪುಡಿಗೊಳಿಸಲು ಸ್ಫೋಟಕ ಬಳಸುವುದರಿಂದ ಪರಿಸರ ಸೂಕ್ಷ್ಮ ಪ್ರದೇಶ ತೀವ್ರ ಘಾಸಿಗೆ ಒಳಗಾಗುತ್ತದೆ. ಸಿಂಗಳೀಕ, ಕಾಳಿಂಗ ಸರ್ಪದಂತಹ ಅಪರೂಪದ ಜೀವ ಪ್ರಭೇದಗಳು ಇನ್ನಿಲ್ಲದಾಗುತ್ತವೆ. ಭೂ ರಚನೆಯನ್ನೇ ಪೂರ್ತಿಯಾಗಿ ಬದಲಿಸುವುದು ಭೂ ಕುಸಿತಕ್ಕೆ ಕಾರಣವಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಶೃಂಗೇರಿ-ಮಂಗಳೂರು ರೈಲುಮಾರ್ಗ: ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಮಾರ್ಗದ ಪ್ರಸ್ತಾಪನೆ ಆಗುಂಬೆ ಸುರಂಗ ಮಾರ್ಗದಂತೆಯೇ ಅವೈಜ್ಞಾನಿಕ ಅಭಿವೃದ್ಧಿ ಪ್ರಿಯರ ಬಹಳ ಹಿಂದಿನ ದುರಾಲೋಚನೆ. ಸದ್ಯ ಶಿವಮೊಗ್ಗ ಜಿಲ್ಲೆಯ ಸಂಸದ ಬಿ.ವಿ. ರಾಘವೇಂದ್ರ ರೈಲು ಮಾರ್ಗ ಆರಂಭಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡುವ ತೀವ್ರ ಹಪಹಪಿ ವ್ಯಕ್ತಪಡಿಸಿದ್ದಾರೆ.

images 6 3

ಶೃಂಗೇರಿ, ಕೊಪ್ಪ ಸುತ್ತಮುತ್ತಲಿನ ಪ್ರದೇಶಗಳು ಆಗುಂಬೆಯಂತೆಯೇ ಪರಿಸರ ಸೂಕ್ಷ್ಮ ವಲಯಕ್ಕೆ ಒಳಪಡುತ್ತವೆ. ಈಗಾಗಲೇ ತುಸು ಹೆಚ್ಚು ಮಳೆಯಾದರೆ ಅಲ್ಲಲ್ಲಿ ರಸ್ತೆ ಬದಿಯ ಗುಡ್ಡಗಳು ಕುಸಿಯುವುದು ಸಾಮಾನ್ಯವಾಗಿ ಹೋಗಿರುವಾಗ ಸುರಂಗ ಕೊರೆದು ರೈಲು ಓಡಿಸುವ ಯೋಜನೆ ಕಾರ್ಯರೂಪಕ್ಕೆ ಬಂದರೆ ಮಲೆನಾಡಿನ ಹೃದಯ ಭಾಗವನ್ನೇ ಬಗೆದು ಇಲ್ಲಿನ ಜನರ ಬದುಕನ್ನೂ, ಜೀವ ಸಂಕುಲವನ್ನು ಸಂಕಷ್ಟದ ಬಲೆಗೆ ಸಿಲುಕಿಸಿ ಅಭಿವೃದ್ಧಿಯ ಹಣೆಪಟ್ಟಿ ಕೊಟ್ಟಂತಾಗುತ್ತದೆ.

ಈ ಯೋಜನೆಯ ಸಾಧ್ಯಾಸಾಧ್ಯತೆಯ ಕುರಿತು ಈದಿನ.ಕಾಮ್‌ ಜೊತೆಗೆ ಮಾತನಾಡಿದ ಪರಿಸರ ಕಾರ್ಯಕರ್ತೆ ಶ್ರೀದೇವಿ ಅಡಿಗ, “ಮಲೆನಾಡಿನಲ್ಲಿ ರೈಲಿನಲ್ಲಿ ಸಂಚರಿಸುವವರ ಸಂಖ್ಯೆ ಎಷ್ಟಿದೆ ಎಂಬುದನ್ನು ಮೊದಲು ವಿಶ್ಲೇಷಿಸಬೇಕು. ಪ್ರಸ್ತುತ ಚಾಲ್ತಿಯಲ್ಲಿರುವ ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಬೆರಳೆಣಿಕೆಯ ರೈಲುಗಳು ಸಂಚರಿಸುತ್ತಿವೆ. ಹೀಗಿರುವಾಗ ಮಲೆನಾಡ ಒಡಲನ್ನು ಕೊರೆದು ರೈಲು ಮಾರ್ಗ ನಿರ್ಮಿಸುವುದರಲ್ಲಿ ಅರ್ಥವಿಲ್ಲ. ಸರ್ಕಾರ ಕೊಪ್ಪ, ತೀರ್ಥಹಳ್ಳಿ, ನರಸಿಂಹರಾಜಪುರ ತಾಲೂಕುಗಳಲ್ಲಿ ಸರ್ಕಾರಿ ಬಸ್ಸು ಸೇವೆಯನ್ನೇ ಒದಗಿಸದೆ ಖಾಸಗಿ ಬಸ್ಸು ಮಾಲಿಕರ ಕಿಸೆ ತುಂಬಿಸುವಲ್ಲಿ ನಿರತವಾಗಿದೆ. ರೈಲು ಮಾರ್ಗದ ಬದಲು ಅಗತ್ಯ ಪ್ರದೇಶಗಳಲ್ಲಿ ಸರ್ಕಾರಿ ಬಸ್ಸುಗಳ ಸೇವೆ ಪ್ರಾರಂಭಿಸಬೇಕು” ಎಂದು ಅಭಿಪ್ರಾಯಿಸಿದರು.

ಈ ಯೋಜನೆಗಳ ನೈಜ ಚಿತ್ರಣ ಹತ್ತಿರದಿಂದ ಗಮನಿಸಿದರೆ ಈ ಯೋಜನೆಗಳಿಂದ ಸಾರ್ವಜನಿಕರಿಗೆ, ಸ್ಥಳೀಯರಿಗೆ ಅಗುಳಿನಷ್ಟು ಲಾಭವಿಲ್ಲ. ಬದಲಿಗೆ ರೈತರ ಅನ್ನದ ತಟ್ಟೆಗೆ ಕಲ್ಲು ಹಾಕುವ ದುರುದ್ದೇಶದಂತೆ, ಉದ್ಯಮಿಗಳ ಲಾಭಕೋರತನಕ್ಕೆ ಮಲೆನಾಡಿನ ಜೀವಸಂಕುಲದ ಜೊತೆಗಿನ ಸರ್ಕಾರದ ಚೆಲ್ಲಾಟದಂತೆ ಕಾಣುತ್ತದೆ ಎನ್ನುತ್ತಾರೆ ಪರಿಸರವಾದಿಗಳು.

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತಗಳು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮತೆಯನ್ನು ನಮಗೆ ಮತ್ತೊಮ್ಮೆ ನೆನಪಿಸಿವೆ. ಮಾಧವ್ ಗಾಡ್ಗೀಳ್‌, ಮತ್ತು ಕಸ್ತೂರಿ ರಂಗನ್ ವರದಿಗಳ ಎಚ್ಚರಿಕೆಯನ್ನು ಕಡೆಗಣಿಸಿದ ಪರಿಣಾಮವನ್ನು ಇಂದು ನೆರೆರಾಜ್ಯಗಳು ಉಣ್ಣುತ್ತಿವೆ.

ಇದೇ ತಪ್ಪುಗಳನ್ನು ಕರ್ನಾಟಕದಲ್ಲೂ ಪುನರಾವರ್ತಿಸಲು ಹೊರಟಿರುವಂತೆ ಕಾಣಿಸುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಸ್ತಾಪಿಸಲಾಗಿರುವ ಆಗುಂಬೆ ಸುರಂಗ ಮಾರ್ಗ ಮತ್ತು ಶೃಂಗೇರಿ-ಮಂಗಳೂರು ರೈಲ್ವೇ ಯೋಜನೆಗಳು ಕೇವಲ ಕಾಡನ್ನು ಮಾತ್ರವಲ್ಲ, ಇಡೀ ಮಲೆನಾಡಿನ ಭೂಗರ್ಭದ ಸ್ಥಿರತೆಯನ್ನೇ ಅಲ್ಲಾಡಿಸುವ ಅಪಾಯವನ್ನು ಹೊಂದಿವೆ. ಭಾರೀ ಯಂತ್ರೋಪಕರಣಗಳ ಬಳಕೆ, ಸ್ಫೋಟಗಳು ಮತ್ತು ಅವೈಜ್ಞಾನಿಕ ಕಾಮಗಾರಿಗಳು ಮುಂದೊಂದು ದಿನ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲೂ ವಯನಾಡು ಮಾದರಿಯ ಮಹಾ ದುರಂತಗಳಿಗೆ ಮುನ್ನುಡಿ ಬರೆಯಬಹುದು.

ಸ್ಥಳೀಯರ ಬದುಕನ್ನು ಅತಂತ್ರಗೊಳಿಸುವ ಮತ್ತು ಜೀವವೈವಿಧ್ಯವನ್ನು ನಾಶಮಾಡುವ ಇಂತಹ ಯೋಜನೆಗಳಿಗಿಂತ, ಪ್ರಸ್ತುತ ಇರುವ ರಸ್ತೆಗಳ ದುರಸ್ತಿ ಹಾಗೂ ಸಾರ್ವಜನಿಕ ಸಾರಿಗೆಯ (ಸರ್ಕಾರಿ ಬಸ್ಸುಗಳ) ಬಲವರ್ಧನೆಯಂತಹ ಪರಿಸರ ಸ್ನೇಹಿ ಪರ್ಯಾಯ ಮಾರ್ಗಗಳತ್ತ ಸರ್ಕಾರ ಗಮನಹರಿಸಬೇಕಿದೆ. ಪ್ರಕೃತಿಯನ್ನು ಕೆಣಕಿ ಪಡೆಯುವ ‘ಅಭಿವೃದ್ಧಿ’ ಎಂದಿಗೂ ಸುಸ್ಥಿರವಲ್ಲ.

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700 ಕೋಟಿ ನಾಮ!

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ...

ಚಿಕ್ಕಮಗಳೂರು | ಫಾರಂ-7 ದುರುಪಯೋಗ; ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್‌ ಯತ್ನಕ್ಕೆ ತೀವ್ರ ವಿರೋಧ

ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಮತದಾರರ...

ರಾಯಚೂರು | ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೃಷಿ ವಿವಿಯಲ್ಲಿ ವರ್ಗಾವಣೆ ಆದೇಶ: ಉಲ್ಲಂಘನೆ ಆರೋಪ

ಈಶಾನ್ಯ ಶಿಕ್ಷಕರ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ರಾಯಚೂರಿನ ಕೃಷಿ ವಿಜ್ಞಾನಗಳ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ ನಂಬಿಕೆಯ ಬಿಕ್ಕಟ್ಟು

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ....