ಅಂಬಾನಿಯ ಹೊಸ ಸೈಡ್‌ ಬ್ಯುಸಿನೆಸ್ ʼಒಗ್ಗರಣೆʼ: ಚಿಕ್ಕ ರಾಜ್ಯಗಳ ವಾರ್ಷಿಕ ಬಜೆಟ್‌ನ ದುಪ್ಪಟ್ಟು ಈ ʼತಡ್ಕಾʼ ಲಾಭದ ಗುರಿ!

Date:

ಅಂಬಾನಿಯ ʼತಡ್ಕಾʼ ಪ್ಲಾಟ್‌ಫಾರ್ಮ್ ಮಾತ್ರವೇ ಸುಮಾರು 28,749 ಕೋಟಿಗೂ ಅಧಿಕ ರೂಪಾಯಿಗಳ ($28.7 Billion) ವ್ಯವಹಾರ ನಡೆಸುವ ಗುರಿ ಹೊಂದಿದೆ. ಈ ಮೊತ್ತ ಭಾರತದ ಸಿಕ್ಕಿಂ (₹8,741 ಕೋಟಿ), ಮಿಜೋರಾಂ (₹17,076 ಕೋಟಿ) ನಂತಹ ರಾಜ್ಯಗಳ ಒಟ್ಟು ವಾರ್ಷಿಕ ಬಜೆಟ್‌ನ ಎರಡು ಪಟ್ಟಿಗೂ ಅಧಿಕ.

- Advertisement -

ಡಿಜಿಟಲ್ ಮನರಂಜನಾ ಲೋಕದಲ್ಲೂ ತನ್ನ ಪಾರುಪತ್ಯ ಸ್ಥಾಪಿಸಲು ಸಜ್ಜಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧಿಪತಿ ಮುಕೇಶ್ ಅಂಬಾನಿ, ಇದೀಗ ‘ತಡ್ಕಾ’ ಎಂಬ ಮೈಕ್ರೋ-ಕಂಟೆಂಟ್ ಪ್ಲಾಟ್‌ಫಾರ್ಮ್ ಮೂಲಕ ಬೃಹತ್ ಆದಾಯ ತಂದು ಕೊಡುವ ಹೊಸ ಯೋಜನೆಯೊಂದನ್ನು ರೂಪಿಸಿದ್ದಾರೆ. ಜಿಯೋ ಹಾಟ್‌ಸ್ಟಾರ್ ಅಡಿಯಲ್ಲಿ ಬರಲಿರುವ ಈ ಹೊಸ ಪ್ರಯೋಗ ಭಾರತದಲ್ಲಿ ಶರವೇಗದಲ್ಲಿ ಬೆಳೆಯುತ್ತಿರುವ ʼಶಾರ್ಟ್-ಫಾರ್ಮ್ ವೀಡಿಯೋʼ ಮಾರುಕಟ್ಟೆಯನ್ನು ತನ್ನದಾಗಿಸಿಕೊಳ್ಳುವ ಮತ್ತು ಬಿಲಿಯನ್ ಡಾಲರ್ ಆದಾಯವನ್ನು ತನ್ನತ್ತ ಸೆಳೆಯುವ ಉದ್ದೇಶ ಹೊಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಇದು ಮನರಂಜನಾ ವಿಡಿಯೋ ಮಾತ್ರವಲ್ಲ. ಇಲ್ಲಿ OpenAI (ChatGPT) ತಂತ್ರಜ್ಞಾನ ಬಳಸಿ ಧ್ವನಿ ಮೂಲಕ ಕಂಟೆಂಟ್ ಹುಡುಕುವ ಮತ್ತು ಕಥೆ ನೋಡುತ್ತಲೇ ಅದರಲ್ಲಿರುವ ವಸ್ತುಗಳನ್ನು ಖರೀದಿಸುವ (Content-to-Commerce) ಅತ್ಯಾಧುನಿಕ ವ್ಯವಸ್ಥೆ ಇರುತ್ತದೆ. IPL ಕ್ರಿಕೆಟ್‌ನ ಬೃಹತ್ ಪ್ರೇಕ್ಷಕರನ್ನು ಈ ಪ್ಲಾಟ್‌ಫಾರ್ಮ್‌ಗೆ ಸೆಳೆಯುವುದು ಕಂಪನಿಯ ಮಾಸ್ಟರ್ ಪ್ಲಾನ್. ಇಂಟರ್ನೆಟ್ ಭಾಷೆ ಬಳಸಿಕೊಂಡೇ ಯುವಕರನ್ನು ಸೆಳೆಯಲು ಸಜ್ಜಾಗಿರುವ ಈ ‘ತಡ್ಕಾ’, ಡಿಜಿಟಲ್ ಲೋಕದ ಹೊಸ ಮನಿ ಮೇಕಿಂಗ್ ಮಷಿನ್ ಆಗಲಿದೆ.

image 2026 04 11T145236.834

ರಿಲಯನ್ಸ್, ಡಿಸ್ನಿ ಸ್ಟಾರ್ ವಿಲೀನದ ಬಳಿಕ ಅಂಬಾನಿ ‘ಜಿಯೋ ಹಾಟ್‌ಸ್ಟಾರ್’ ಆ್ಯಪ್‌ನಲ್ಲಿ ಈ ʼಒಗ್ಗರಣೆ’ (ತಡ್ಕಾ)ಯನ್ನು 100ಕ್ಕೂ ಹೆಚ್ಚು ಶೀರ್ಷಿಕೆಗಳೊಂದಿಗೆ ಅದ್ಧೂರಿಯಾಗಿ ಲೋಕಾರ್ಪಣೆ ಮಾಡಿದ್ದಾರೆ. ಐಪಿಎಲ್ ಹಂಗಾಮಿನ ಬೃಹತ್ ವೀಕ್ಷಕರ ದಂಡನ್ನು ಬಳಸಿಕೊಂಡು, ಕ್ರಿಕೆಟ್ ಅನ್ನು ‘ಬಳಕೆದಾರರ ಆಕರ್ಷಣೆ’ಯನ್ನಾಗಿ (Acquisition Engine) ಮತ್ತು ಈ ಕಿರುಚಿತ್ರಗಳನ್ನು ‘ಬಳಕೆದಾರರನ್ನು ಉಳಿಸಿಕೊಳ್ಳುವ’ (Retention Layer) ತಂತ್ರವಾಗಿ ಅಂಬಾನಿ ಬಳಸುತ್ತಿದ್ದಾರೆ. ಯುವಜನತೆಯನ್ನು ಸೆಳೆಯಲು “ಲೈಫ್ moye-moye ಆಗುವುದು ಬೇಡ” ಎನ್ನುವ ಇಂಟರ್ನೆಟ್ ಸ್ಲ್ಯಾಂಗ್ ಮತ್ತು ಮೀಮ್ ಭಾಷೆಯನ್ನೇ ಬಳಸುತ್ತಿರುವ ಈ ವೇದಿಕೆ, ಮೈಕ್ರೋ-ಕಂಟೆಂಟ್ ಹೆಸರಿನಲ್ಲಿ ಬೃಹತ್ ಆರ್ಥಿಕ ಸಾಮ್ರಾಜ್ಯ ಕಟ್ಟಲು ಸಜ್ಜಾಗಿದೆ.

2030ರ ವೇಳೆಗೆ ಅಂಬಾನಿಯ ʼತಡ್ಕಾʼ ಪ್ಲಾಟ್‌ಫಾರ್ಮ್ ಮಾತ್ರವೇ ಸುಮಾರು 28,749 ಕೋಟಿ ರೂಪಾಯಿಗಳ ($28.7 Billion) ವ್ಯವಹಾರ ನಡೆಸುವ ಗುರಿ ಹೊಂದಿದೆ ಎಂದರೆ ಸಂಪನ್ಮೂಲ ಕೇಂದ್ರೀಕರಣದ ಭೀಕರತೆ ನಮಗೆ ಅರ್ಥವಾಗುತ್ತದೆ. ಈ ಮೊತ್ತವು ಭಾರತದ ಸಣ್ಣ ರಾಜ್ಯಗಳಾದ ಸಿಕ್ಕಿಂ (₹8,741 ಕೋಟಿ) ಅಥವಾ ಮಿಜೋರಾಂ (₹17,076 ಕೋಟಿ) ನಂತಹ ರಾಜ್ಯಗಳ ಒಟ್ಟು ವಾರ್ಷಿಕ ಬಜೆಟ್‌ನ ಎರಡು ಪಟ್ಟಿಗೂ ಅಧಿಕವಾಗಿದೆ. ಅಂದರೆ, ಲಕ್ಷಾಂತರ ಜನರ ಶಿಕ್ಷಣ, ಆರೋಗ್ಯ ಮತ್ತು ಬದುಕಿನ ನಿರ್ವಹಣೆಗೆ ಇಡೀ ರಾಜ್ಯ ಸರ್ಕಾರ ವ್ಯಯಿಸುವ ಹಣಕ್ಕಿಂತ ಹೆಚ್ಚಿನ ಲಾಭವನ್ನು ಈ ದೇಶದ ಒಬ್ಬ ಉದ್ಯಮಿ ಕೇವಲ ‘ಸೈಡ್ ಬಿಸಿನೆಸ್’ನಿಂದ ಗಳಿಸಲು ಹೊರಟಿದ್ದಾರೆ.

ಈ ಸಂಪತ್ತಿನ ಕ್ರೋಢೀಕರಣ ಅತ್ಯಂತ ವ್ಯವಸ್ಥಿತವಾಗಿ ಸಾಮಾನ್ಯ ಜನರ ಜೇಬಿನಿಂದಲೇ ಇಳಿದು ಸಲೀಸಾಗಿ ಉದ್ಯಮಿಗಳತ್ತ ಹರಿಯುತ್ತಿದೆ. ಜಿಯೋ ಟೆಲಿಕಾಂ ಕಂಪನಿ ಈಗಾಗಲೇ ತಿಂಗಳಿಗೆ ಕೇವಲ 28 ದಿನಗಳ ವ್ಯಾಲಿಡಿಟಿ ನೀಡಿ ದರೋಡೆ ಮಾಡುತ್ತಿದೆ. ಈ ಕಡಿಮೆ ವ್ಯಾಲಿಡಿಟಿಯಿಂದ ವರ್ಷಕ್ಕೆ 13 ಬಾರಿ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ. ಈ ‘ಹೆಚ್ಚುವರಿ ಒಂದು ತಿಂಗಳ’ ಸುಲಿಗೆಯಿಂದಲೇ ಸಾವಿರಾರು ಕೋಟಿ ರೂಪಾಯಿಗಳು ಕಾರ್ಪೊರೇಟ್ ಖಜಾನೆ ಸೇರುತ್ತಿವೆ. ಅಗ್ಗದ ಇಂಟರ್ನೆಟ್ ಕ್ರಾಂತಿಯ ಹೆಸರಿನಲ್ಲಿ ಶುರುವಾದ ಈ ಹಾದಿ, ಇಂದು ಜನಸಾಮಾನ್ಯರ ಮೇಲೆ ಹೇರಲಾದ ‘ಡಿಜಿಟಲ್ ಟ್ಯಾಕ್ಸ್’ ಆಗಿ ಮಾರ್ಪಟ್ಟಿದೆ.‌

ಇನ್ನೊಂದೆಡೆ, ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 123 ದೇಶಗಳ ಪೈಕಿ 102ನೇ ಸ್ಥಾನಕ್ಕೆ ಕುಸಿದಿದೆ. 25.8 ಅಂಕಗಳೊಂದಿಗೆ ‘ಗಂಭೀರ’ (Serious) ಹಸಿವಿನ ಮಟ್ಟ ಹೊಂದಿದ್ದು, ದೇಶದ ಆರೋಗ್ಯ ಸ್ಥಿತಿ ದಿನೇ ದಿನೇ ಆತಂಕ ಮೂಡಿಸುತ್ತಿದೆ. ದೇಶದ ಅತಿ ಶ್ರೀಮಂತ 1% ಜನಸಂಖ್ಯೆಯು ಒಟ್ಟು ರಾಷ್ಟ್ರೀಯ ಸಂಪತ್ತಿನ 40% ಭಾಗವನ್ನು ನಿಯಂತ್ರಿಸುತ್ತಿದ್ದರೆ, ಕೆಳಮಟ್ಟದ 50% ಜನಸಂಖ್ಯೆಯ ಕೈಯಲ್ಲಿ ಕೇವಲ 3% ಸಂಪತ್ತು ಮಾತ್ರ ಉಳಿದಿದೆ. ಈ ಬ್ರಹ್ಮಾಂಡ ಅಸಮಾನತೆಯ ಪರಿಣಾಮವಾಗಿ ದೇಶದ 35.5% ಮಕ್ಕಳು ಅಪೌಷ್ಟಿಕತೆಯಿಂದ (Stunting) ಬಳಲುತ್ತಿದ್ದಾರೆ ಮತ್ತು ಪ್ರತಿ ವರ್ಷ ಸುಮಾರು 4 ಸಾವಿರಕ್ಕೂ ಹೆಚ್ಚು ಹಸುಗೂಸುಗಳು ಸರಿಯಾದ ಆಹಾರವಿಲ್ಲದೆ ಸಾವನ್ನಪ್ಪುತ್ತಿವೆ. ತಾಯಂದಿರ ಮರಣಕ್ಕೆ ಲೆಕ್ಕವೇ ಇಲ್ಲ.

image 2026 04 11T145352.087

ಪ್ರಸ್ತುತ ಭಾರತವು ಅಂದಾಜು 418 ಲಕ್ಷ ಕೋಟಿ ($4.5 Trillion) ಬೃಹತ್ ಜಿಡಿಪಿಯೊಂದಿಗೆ ವಿಶ್ವದ ಐದನೇ ದೊಡ್ಡ ಆರ್ಥಿಕತೆಯಾಗಿ ಬೀಗುತ್ತಿದೆ. ಆದರೆ, ಇತ್ತೀಚಿನ ವರದಿಗಳ ಪ್ರಕಾರ, ಭಾರತದ ಪ್ರತಿ ನಾಲ್ಕು ಮಕ್ಕಳಲ್ಲಿ ಒಂದು ಮಗು ಅಪೌಷ್ಟಿಕತೆಯಿಂದ ಬಳಲುತ್ತಿದೆ. ದೇಶದ ಸುಮಾರು 35.5% ಮಕ್ಕಳು ಕುಂಠಿತ ಬೆಳವಣಿಗೆಗೆ (Stunting) ಒಳಗಾಗಿದ್ದರೆ, ಸುಮಾರು 19.3% ಮಕ್ಕಳು ತಮ್ಮ ವಯಸ್ಸಿಗೆ ಇರಬೇಕಾದ ಕನಿಷ್ಠ ತೂಕವನ್ನೂ ಹೊಂದಿಲ್ಲ (Wasting). ವಿಶ್ವಸಂಸ್ಥೆಯ (UN) ಮತ್ತು ವಿಶ್ವ ಬ್ಯಾಂಕ್‌ನ ವರದಿಗಳ ಪ್ರಕಾರ, ಭಾರತದ ಸುಮಾರು 74% ಜನಸಂಖ್ಯೆಗೆ (ಸರಿಸುಮಾರು 100 ಕೋಟಿಗೂ ಅಧಿಕ) ಪೌಷ್ಟಿಕ ಆಹಾರ ಖರೀದಿಸುವ ಶಕ್ತಿಯಿಲ್ಲ.

ಈ ಹಿಂದೆ ಸರ್ಕಾರಿ ಸ್ವಾಮ್ಯದಲ್ಲಿದ್ದ ಬಂದರುಗಳು (Ports), ವಿಮಾನ ನಿಲ್ದಾಣಗಳು, ಅನಿಲ ಸಂಪನ್ಮೂಲಗಳು (Natural Gas), ಪೆಟ್ರೋಕೆಮಿಕಲ್ಸ್ ಮತ್ತು ಟೆಲಿಕಾಂ ಸ್ಪೆಕ್ಟ್ರಮ್‌ನಂತಹ ಮೂಲಸೌಕರ್ಯ ಯೋಜನೆಗಳನ್ನು ಒಂದೊಂದಾಗಿ ಖಾಸಗೀಕರಣದ ಹೆಸರಿನಲ್ಲಿ ಅವರಿಗೆ ಹಸ್ತಾಂತರಿಸಲಾಗುತ್ತಿದೆ. ಇಡೀ ದೇಶದ ಡಿಜಿಟಲ್ ಮೂಲಸೌಕರ್ಯ ಮತ್ತು ಡೇಟಾ ಸಂಪತ್ತಿನ ಮೇಲಿನ ನಿಯಂತ್ರಣ ಈಗ ಅಂಬಾನಿಯವರ ಕೈಯಲ್ಲಿದೆ. ಭವಿಷ್ಯದಲ್ಲಿ ರಾಷ್ಟ್ರದ ಭದ್ರತೆ ಮತ್ತು ಆರ್ಥಿಕ ಸಾರ್ವಭೌಮತ್ವವೂ ಅವರ ಕೈಗೇ ಹೋದರೆ ಅಚ್ಚರಿಪಡಬೇಕಿಲ್ಲ.

image 2026 04 11T145428.980

80 ಕೋಟಿ ಜನರಿಗೆ ಉಚಿತ ರೇಷನ್ ನೀಡಲಾಗುತ್ತಿದೆಯಂತೆ, ಆದರೆ ದೇಶದ ಅರ್ಧಕ್ಕೂ ಹೆಚ್ಚು ಜನಸಂಖ್ಯೆ ಹಸಿವಿನ ಅಂಚಿನಲ್ಲಿದೆ ಎಂದು ಅಧಿಕೃತ ಅಂಕಿಅಂಶಗಳೇ ಹೇಳುತ್ತವೆ. ಒಂದು ಕಾರ್ಪೊರೇಟ್ ಸಂಸ್ಥೆಯ ಸಣ್ಣ ವಿಭಾಗದ ಟರ್ನ್ ಓವರ್ ಒಂದು ರಾಜ್ಯದ ಬಜೆಟ್ ಅನ್ನು ಮೀರಿಸುವಷ್ಟು ಬೆಳೆಯುವುದು ಮಾನವೀಯತೆಯ ದೃಷ್ಟಿಯಿಂದ ನಿಜಕ್ಕೂ ಅತಿದೊಡ್ಡ ವಿಡಂಬನೆ.

ಅಂಬಾನಿಯವರ ಈ ‘ತಡ್ಕಾ’ ಪ್ಲಾಟ್‌ಫಾರ್ಮ್ ಒಂದೇ ಸಾಕು, ಭಾರತದ ಆರ್ಥಿಕತೆ ಎತ್ತ ಸಾಗುತ್ತಿದೆ ಎಂದು ಅಂದಾಜಿಸಲು. ಒಂದು ಕಾರ್ಪೊರೇಟ್ ಸಂಸ್ಥೆಯ ಸಣ್ಣ ಉಪವಿಭಾಗದ ಕೇವಲ ಲಾಭಾಂಶವೇ ಈ ದೇಶದ ಚಿಕ್ಕ ರಾಜ್ಯಗಳ ವಾರ್ಷಿಕ ಬಜೆಟ್‌ಗಿಂತಲೂ ದುಪ್ಪಟ್ಟು ಬೆಳೆಯುತ್ತಿದೆ ಎಂದರೆ, ಈ ದೇಶದ ಸಂಪತ್ತು ಮತ್ತು ಅಧಿಕಾರ ಎಷ್ಟು ಅಪಾಯಕಾರಿ ಮಟ್ಟದಲ್ಲಿ ಕೇಂದ್ರೀಕೃತವಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಬಂದರುಗಳಿಂದ ಹಿಡಿದು ಡಿಜಿಟಲ್ ಡೇಟಾದವರೆಗೆ ರಾಷ್ಟ್ರದ ಪ್ರತಿಯೊಂದು ಆಯಕಟ್ಟಿನ ಸಂಪನ್ಮೂಲಗಳನ್ನು ಖಾಸಗೀಕರಣದ ಹೆಸರಿನಲ್ಲಿ ಧಾರೆ ಎರೆಯುತ್ತಿರುವುದು, ಸಾಮಾನ್ಯ ಜನರನ್ನು ಕೇವಲ ‘ಬಳಕೆದಾರರನ್ನಾಗಿ’ ಸೀಮಿತಗೊಳಿಸಿ ಅವರ ಬದುಕಿನ ಸಾರ್ವಭೌಮತ್ವವನ್ನು ಹರಾಜು ಹಾಕಿದಂತಿದೆ.

ಇದನ್ನೂ ಓದಿ: ಮತ್ತೊಮ್ಮೆ ಮಹಾ ದೋಖಾ: ಜಾಹೀರಾತಿಗೇ ಸೀಮಿತವಾದ ‘ಜಿ ರಾಮ್ ಜಿ’, ಹತಾಶೆಯತ್ತ ಗ್ರಾಮೀಣ ಕೂಲಿಕಾರರು

ನಿಜವಾದ ಪ್ರಗತಿ ಎಂದರೆ ದೇಶದ ಪ್ರತಿಯೊಬ್ಬ ಪ್ರಜೆಯೂ ಹಸಿವಿನಿಂದ ಮುಕ್ತನಾಗಿ, ಗೌರವಯುತವಾಗಿ ಬದುಕುವಂತಾಗುವುದು. ಆ ಹಸಿವು ಮುಕ್ತ ಭಾರತ ನಿರ್ಮಾಣವಾಗದ ಹೊರತು, ಇಂತಹ ಡಿಜಿಟಲ್ ಕ್ರಾಂತಿಗಳು, ಅತಿರಂಜಿತ ಮನರಂಜನೆಗಳು ಕೇವಲ ಬಣ್ಣದ ಗುಳ್ಳೆಗಳಷ್ಟೇ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ ಬಿದ್ದ ಸಮುದಾಯ ಭವನ

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ...

‌ಬೀದರ್‌ | ಮತದಾನ ಹಕ್ಕು ಕಸಿಯುವ ʼಎಸ್‌ಐಆರ್ʼ ಪ್ರಕ್ರಿಯೆ ವಿರೋಧಿಸಿ ಅ.12ರಂದು ಪ್ರತಿಭಟನೆ

ದೇಶಾದ್ಯಂತ ಎಸ್‌ಐಆರ್ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಕೋಟ್ಯಂತರ ಮತದಾರರನ್ನು ಕೈಬಿಡಲಾಗಿರುವುದನ್ನು ಆರೋಪಿಸಿ,...

ವಿಜಯಪುರ | ದಸಂಸ ರಾಜ್ಯ ಸಂಘಟನಾ ಸಂಚಾಲಕಿಯಾಗಿ ಪ್ರತಿಭಾ ಹೊಸಮನಿ ಆಯ್ಕೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ...

ʼವೋಟ್‌ ಚೋರಿʼ ಆರೋಪಕ್ಕೆ ಪುರಾವೆ ಅಗತ್ಯʼ: ಚುನಾವಣಾ ಆಯೋಗದ ಪರ 124 ನಿವೃತ್ತ ಅಧಿಕಾರಿಗಳ ಪತ್ರ

ಚುನಾವಣಾ ಅಕ್ರಮಗಳ ಆರೋಪಗಳಿಗೆ ವಿಶ್ವಾಸಾರ್ಹ ಪುರಾವೆಗಳು ಅಗತ್ಯ ಎಂದು ಪ್ರತಿಪಾದಿಸಿರುವ 124...