ಬಿಡದಿ-ಗ್ರೇಟರ್ ಬೆಂಗಳೂರು ಟೌನ್‌ಶಿಪ್ ರಣರಂಗ!

Date:

ಅಭಿವೃದ್ಧಿ ಬೇಕು ನಿಜ, ಆದರೆ ಆ ಅಭಿವೃದ್ಧಿಯ ಅಡಿಪಾಯದ ಕೆಳಗೆ ರೈತರ ಬದುಕು ಹೂತುಹೋಗಬಾರದು ಎನ್ನುವುದೇ ಸಾರ್ವಜನಿಕರ ಆಶಯ. ಈ ಅಭಿವೃದ್ಧಿ ಮತ್ತು ಅಸ್ತಿತ್ವದ ನಡುವಿನ ಮಹಾಸಂಗ್ರಾಮದಲ್ಲಿ ಅಂತಿಮವಾಗಿ ನ್ಯಾಯ ಸಿಗುವುದು ಯಾರಿಗೆ? ಎಂಬುದನ್ನು ಕಾಲವೇ ನಿರ್ಣಯಿಸಬೇಕಿದೆ.

ಬಿಡದಿಯಲ್ಲಿ ಬೆಂಗಳೂರಿನ ಭವಿಷ್ಯವನ್ನೇ ಬದಲಾಯಿಸಬಲ್ಲ ಹೈಟೆಕ್ ‘AI ಸಿಟಿ’ಯ ಬೃಹತ್ ಕನಸು ಒಂದು ಕಡೆಯಾದರೆ, ತಲೆಮಾರುಗಳಿಂದ ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರ ಅಸ್ತಿತ್ವದ ಹೋರಾಟ ಇನ್ನೊಂದು ಕಡೆ. ರಾಮನಗರ ಜಿಲ್ಲೆಯ ಬಿಡದಿ ಭಾಗದಲ್ಲಿ ಪ್ರಸ್ತಾಪವಾಗಿರುವ 9,600 ಎಕರೆ ವ್ಯಾಪ್ತಿಯ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್(GBIT) ಯೋಜನೆ ಈಗ ರಾಜ್ಯದ ಅತಿ ದೊಡ್ಡ ಮತ್ತು ಅತ್ಯಂತ ಉದ್ವಿಗ್ನ ಭೂಸ್ವಾಧೀನ ವಿವಾದವಾಗಿ ಮಾರ್ಪಟ್ಟಿದೆ. ಬಿಡದಿಯ ಮಂಡಲಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಘಟನೆಗಳು ಇಡೀ ರಾಜ್ಯದ ಗಮನ ಸೆಳೆದಿವೆ. ಇದು ಭವಿಷ್ಯದ ಬೆಂಗಳೂರಿನ ಅಗತ್ಯವೇ ಅಥವಾ ರೈತರ ಬದುಕೇ ಸರ್ವನಾಶವೇ?

- Advertisement -

ಬಿಡದಿ ಹೋಬಳಿಯ ಮಂಡಲಹಳ್ಳಿ ಗ್ರಾಮದಲ್ಲಿ ಸೋಮವಾರದಂದು(ಜುಲೈ 13) ಹೈಡ್ರಾಮವೇ ನಡೆದಿದೆ. ಅದೇನೆಂದರೆ, ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಜಂಟಿ ಅಳತೆ ಸರ್ವೇ(JMC) ನಡೆಸಲು ಬಿಡದಿ ಪೊಲೀಸರ ರಕ್ಷಣೆಯೊಂದಿಗೆ ಅಧಿಕಾರಿಗಳ ತಂಡ ಗ್ರಾಮಕ್ಕೆ ಆಗಮಿಸಿತ್ತು. ಆದರೆ, ಕಳೆದ 500 ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ತಾಳ್ಮೆ ಕಟ್ಟೆಯೊಡೆದಿದ್ದು, ಹಸಿರು ಶಾಲು ಹೊತ್ತ ನೂರಾರು ಮಹಿಳಾ ರೈತರು ಅಧಿಕಾರಿಗಳ ವಾಹನಗಳನ್ನು ಸುತ್ತುವರೆದು, ಕೈಯಲ್ಲಿ ಕಸದಪೊರಕೆ ಹಿಡಿದು ಜಮೀನಿನೊಳಗೆ ಬರದಂತೆ ಓಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...
WhatsApp Image 2026 07 14 at 4.36.36 PM 1

ಪ್ರತಿಭಟನೆ ತೀವ್ರ ಸ್ವರೂಪ ಪಡೆದು ಕಲ್ಲು ತೂರಾಟ ನಡೆಯಿತು. ಅಧಿಕಾರಿಗಳು ಬಂದಿದ್ದ ಇನೋವಾ ಮತ್ತು ಟಾಟಾ ಸುಮೋ ಕಾರುಗಳ ಗಾಜುಗಳು ಪುಡಿಯಾದವು. ಈ ಸಂಘರ್ಷದಲ್ಲಿ ರಾಮನಗರ ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ಮುರಳಿ, ಡಿವೈಎಸ್‌ಪಿ ಸೇರಿದಂತೆ ಮೂವರು ಪೊಲೀಸರು ಹಾಗೂ ಸರ್ವೇ ಅಧಿಕಾರಿ ಮಹೇಶ್ ಗಾಯಗೊಂಡಿದ್ದಾರೆ.

“ನಮ್ಮ ಸಮ್ಮತಿ ಇಲ್ಲದೆ, ಡೆಪ್ಯುಟಿ ಕಮಿಷನರ್ ಅವರ ಲಿಖಿತ ಅನುಮತಿ ಪತ್ರವಿಲ್ಲದೆ ನಮ್ಮ ಜಮೀನಿಗೆ ಕಾಲಿಡಲು ಬಿಡುವುದಿಲ್ಲ. ಪೊಲೀಸರು ಕೃಷ್ಣಪ್ಪ ಎಂಬ ರೈತನ ಮೇಲೆ ಹಲ್ಲೆ ಮಾಡಿದ್ದಾರೆ. ಇದು ಖಂಡನೀಯ” ಎಂದು ಕರ್ನಾಟಕ ಪ್ರಾಂತ ರೈತ ಸಂಘದ ನಾಯಕರು, ರೈತರು ಆಕ್ರೋಶ ಹೊರಹಾಕಿದರು.

ಘಟನೆಗೆ ಸಂಬಂಧಿಸಿದಂತೆ ಬಿಡದಿ ಠಾಣೆಯಲ್ಲಿ ರೈತರ ವಿರುದ್ಧವೇ ಕೊಲೆ ಯತ್ನ, ಸರ್ಕಾರಿ ಕೆಲಸಕ್ಕೆ ಅಡ್ಡಿ ಸೇರಿದಂತೆ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.

ಸರ್ಕಾರದ ಪ್ರಕಾರ, ಬಿಡದಿಯಲ್ಲಿ ನಿರ್ಮಾಣವಾಗಲಿರುವ ಈ ಟೌನ್‌ಶಿಪ್ ಕೇವಲ ಮನೆಗಳ ಬಡಾವಣೆಯಲ್ಲ. ಇದು ಭಾರತದ ಮೊದಲ “ವರ್ಕ್-ಲೈವ್-ಪ್ಲೇ” ಮಾದರಿಯ ಕೃತಕ ಬುದ್ಧಿಮತ್ತೆ ಆಧಾರಿತ ಅತ್ಯಾಧುನಿಕ ನಗರ. 9 revenue ಮತ್ತು 16 non-revenue ಹಳ್ಳಿಗಳನ್ನು ಒಳಗೊಂಡ ಒಟ್ಟು 9,600 ಎಕರೆ ಜಾಗ. ಇದರಲ್ಲಿ ಬರೋಬ್ಬರಿ 2,000 ಎಕರೆಗೂ ಹೆಚ್ಚು ಜಾಗವನ್ನು ಕೇವಲ AI ಕಂಪನಿಗಳು, ಐಟಿ, ಡೇಟಾ ಸೆಂಟರ್‌ಗಳು, ರೋಬೋಟಿಕ್ಸ್ ಮತ್ತು ಸ್ಟಾರ್ಟ್‌ಅಪ್‌ಗಳಿಗಾಗಿ ಮೀಸಲಿಡಲಾಗಿದೆ. ಟ್ರ್ಯಾಫಿಕ್, ನೀರು, ಕಸ ವಿಲೇವಾರಿ ಎಲ್ಲವನ್ನೂ AI ತಂತ್ರಜ್ಞಾನವೇ ನಿರ್ವಹಿಸಲಿದೆ.

WhatsApp Image 2026 07 14 at 4.36.01 PM

18,133 ಕೋಟಿ ರೂ. ನಿಂದ 20,000 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆ ಕೈಗೊಳ್ಳಲಾಗಿದೆ. ಇದಕ್ಕಾಗಿ HUDCO ಸಂಸ್ಥೆಯಿಂದ 9,011 ಕೋಟಿ ರೂ. ಸಾಲ, BDA ಯಿಂದ 2,950 ಕೋಟಿ ರೂ. ಮತ್ತು ಸಿವಿಕ್ ಅಮೆನಿಟಿ(CA) ಸೈಟ್‌ಗಳನ್ನು ಅಡಮಾನವಿಟ್ಟು 3,500 ಕೋಟಿ ರೂ. ಸಾಲ ಪಡೆಯಲಾಗುತ್ತಿದೆ. ಇದು ಹೊಸ ಯೋಜನೆಯಲ್ಲ. 2006ರಲ್ಲಿ ಅಂದಿನ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಬಿಜೆಪಿ ಸರ್ಕಾರ ಬೆಂಗಳೂರಿನ ದಟ್ಟಣೆ ಕಡಿಮೆ ಮಾಡಲು ಘೋಷಿಸಿದ್ದ 5 ಸ್ಯಾಟಲೈಟ್ ಟೌನ್‌ಶಿಪ್‌ಗಳಲ್ಲಿ ಇದೂ ಒಂದು. ನಂತರ DLF ಕಂಪನಿ ಹಿಂದೆ ಸರಿಯಿತು. ಈಗ ಕಾಂಗ್ರೆಸ್ ಸರ್ಕಾರ ಹೊಸದಾಗಿ GBDA (Greater Bengaluru Development Authority) ರಚಿಸಿ ಇದನ್ನು ಮತ್ತೆ ಜಾರಿಗೆ ತರುತ್ತಿದೆ.

ಕಾಗದದ ಮೇಲಿರುವ ಈ ಹೈಟೆಕ್ ನಂಬರ್‌ಗಳು ಕೇಳಲು ಚಂದ. ಆದರೆ, ವಾಸ್ತವದಲ್ಲಿ ಈ ಸಿಮೆಂಟ್ ಕಾಡಿನ ಅಡಿಯಲ್ಲಿ ಹೂತುಹೋಗುತ್ತಿರುವುದು ತಲೆಮಾರುಗಳ ರಕ್ತ-ಬೆವರಿನ ಇತಿಹಾಸ. ತೋಟಗಾರಿಕಾ ಇಲಾಖೆಯ ಆರ್‌ಟಿಐ (RTI) ವರದಿ ಬಿಚ್ಚಿಟ್ಟಿರುವ ಸತ್ಯ ಕಣ್ಣೀರು ತರಿಸುವಂತಿದೆ. 

ಈ ಯೋಜನೆಗಾಗಿ ಒಂಬತ್ತು ಹಳ್ಳಿಗಳ ವ್ಯಾಪ್ತಿಯಲ್ಲಿ ಬರೋಬ್ಬರಿ 2 ಲಕ್ಷ ಮರಗಳನ್ನು ಕಡಿಯಬೇಕಾಗುತ್ತದೆ. ಇದರಲ್ಲಿ 87,000 ಕ್ಕೂ ಹೆಚ್ಚು ತೆಂಗಿನ ಮರಗಳು, 83,000 ಕ್ಕೂ ಹೆಚ್ಚು ಅಡಿಕೆ ಮರಗಳು ಮತ್ತು 3 ಲಕ್ಷಕ್ಕೂ ಅಧಿಕ ಬಾಳೆ ಗಿಡಗಳು ನಾಶವಾಗಲಿವೆ.

ಪ್ರತಿ ವರ್ಷ 231 ಎಕರೆಗೂ ಹೆಚ್ಚು ಪ್ರದೇಶದಲ್ಲಿ ರಾಗಿ ಬೆಳೆಯುವ ಭೂಮಿ ಇದು. ಈ ಭಾಗದಲ್ಲಿ ಸುಮಾರು 50,000 ಜಾನುವಾರುಗಳಿವೆ. ಇವುಗಳಿಂದ ಪ್ರತಿ ತಿಂಗಳು ಬೆಂಗಳೂರಿಗೆ ಹರಿಯುವ 6 ಲಕ್ಷ ಲೀಟರ್ ಹಾಲು ಮತ್ತು ಸ್ಥಳೀಯ ಮಹಿಳೆಯರ ಆದಾಯದ ಮೂಲ ಸಂಪೂರ್ಣ ಕಟ್‌ ಆಗಲಿದೆ. ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮೂಲಕ ಮಹಿಳಾ ಸಬಲೀಕರಣದ ಮಾತನಾಡುವ ಸರ್ಕಾರ, ಹೈನುಗಾರಿಕೆ ಮತ್ತು ರೇಷ್ಮೆ ಕೃಷಿ ನಂಬಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ ಗ್ರಾಮೀಣ ಮಹಿಳೆಯರ ಜೀವನೋಪಾಯವನ್ನೇ ಕಸಿದುಕೊಳ್ಳುತ್ತಿದೆಯೇ ಎಂಬ ಗಂಭೀರ ಪ್ರಶ್ನೆ ಮೂಡಿದೆ.

ಸರ್ಕಾರ ಮೊದಲ ಹಂತದಲ್ಲಿ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಮತ್ತು ವಡೇರಹಳ್ಳಿ ಗ್ರಾಮಗಳ 518 ಎಕರೆಯನ್ನು ವಶಪಡಿಸಿಕೊಳ್ಳಲು ಮುಂದಾಗಿದೆ. ಭೂಮಿ ಕಳೆದುಕೊಳ್ಳುವ ರೈತರಿಗೆ ಪ್ರತಿ ಎಕರೆಗೆ 2.07 ಕೋಟಿಯಿಂದ 2.14 ಕೋಟಿ ರೂ. ವರೆಗೆ ಕನಿಷ್ಠ ಪರಿಹಾರ ಅಥವಾ ಪ್ರತಿಯಾಗಿ 9,693 ಚದರ ಅಡಿಯಷ್ಟು ಅಭಿವೃದ್ಧಿಪಡಿಸಿದ ಜಾಗ ನೀಡುವುದಾಗಿ ಸರ್ಕಾರ ಹೇಳಿದೆ. ಸುಮಾರು 200ಕ್ಕೂ ಹೆಚ್ಚು ರೈತರು ಅರ್ಜಿ ಸಲ್ಲಿಸಿದ್ದಾರೆ ಎಂದೂ ಅಧಿಕಾರಿಗಳು ಹೇಳುತ್ತಿದ್ದಾರೆ.

ಆದರೆ ಬಹುತೇಕ ರೈತರು ಈ ಆಫರ್ ತಿರಸ್ಕರಿಸಿದ್ದಾರೆ. ತಲೆಮಾರುಗಳಿಂದ ಆದಾಯ ನೀಡುತ್ತಿರುವ, ಭವಿಷ್ಯದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯ ಪಡೆಯಲಿರುವ ಭೂಮಿಗೆ ಕೇವಲ 2 ಕೋಟಿ ರೂ. ನೀಡುವುದು ಎಷ್ಟು ನ್ಯಾಯ? ಇಂದಿನ ಹೊಲದ ಮಣ್ಣಲ್ಲಿ ದುಡಿಯುವ ರೈತನ ಮಗ ನಾಳೆ ಕೌಶಲ್ಯ ತರಬೇತಿ ಪಡೆದರೂ ಈ ಹೈಟೆಕ್ AI ಸಿಟಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯವೇ? ಎಂಬುದು ರೈತರ ಆತಣಕವಾಗಿದೆ. 

WhatsApp Image 2026 07 14 at 4.36.14 PM

2013ರ ಭೂಸ್ವಾಧೀನ ಕಾಯ್ದೆಯ ಪ್ರಕಾರ ಇಂತಹ ಯೋಜನೆಗಳಿಗೆ ಶೇ. 80 ರಷ್ಟು ಭೂಮಾಲೀಕರ ಒಪ್ಪಿಗೆ(Consent) ಕಡ್ಡಾಯ. ಆದರೆ GBDA ಈ ನಿಯಮವನ್ನು ಗಾಳಿಗೆ ತೂರಿದೆ ಎಂದು ಆರೋಪಿಸಿ ಸುಮಾರು 40 ರೈತ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಲು ಸಜ್ಜಾಗಿವೆ. ಪಂಜಾಬ್ ಮತ್ತು ಉತ್ತರ ಪ್ರದೇಶದ ಮಾದರಿಯಲ್ಲಿ ಬೃಹತ್ ಹೋರಾಟದ ಎಚ್ಚರಿಕೆ ನೀಡಿವೆ.

ಈ ವಿವಾದ ಈಗ ಒಕ್ಕಲಿಗ ಕೋಟೆಯ ಇಬ್ಬರು ಪ್ರಭಾವಿ ನಾಯಕರಾದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನಡುವಿನ ಹೈವೋಲ್ಟೇಜ್ ರಾಜಕೀಯ ಕಣವಾಗಿ ಬದಲಾಗಿದೆ. “ಈ ಟೌನ್‌ಶಿಪ್ ಯೋಜನೆಯನ್ನು ಆರಂಭಿಸಿದ್ದು ನಾನಲ್ಲ, ಇದನ್ನು ಮೊದಲು ನೋಟಿಫೈ ಮಾಡಿದ್ದೇ ಮಾಜಿ ಸಿಎಂ ಕುಮಾರಸ್ವಾಮಿ ಅವರು” ಎಂದು ಡಿಕೆಶಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿದ್ದೀರಾ? ಬೆಳಗಾವಿ | ಮುಂಗಾರು ಮಳೆಯ ವೈಪರೀತ್ಯ, ಸಂಕಷ್ಟದಲ್ಲಿ ರೈತರು: ಮರು ಬಿತ್ತನೆ ಮಾಡಬೇಕಾದ ಅನಿವಾರ್ಯತೆ

“ರೈತರು 500 ದಿನಗಳಿಂದ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಾರೆ. ಸರ್ಕಾರ ಪೊಲೀಸರನ್ನು ಬಳಸಿ ದಬ್ಬಾಳಿಕೆ ನಡೆಸುತ್ತಿದೆ. ಪೊಲೀಸರು ಸರ್ಕಾರದ ಆಂಟಿ-ಫಾರ್ಮರ್ ನೀತಿಗಳಿಗೆ ಬಲಿಯಾಗಬಾರದು” ಎಂದು ಎಚ್ಚರಿಸಿದ್ದಾರೆ. ಅಲ್ಲದೆ ಮುಚ್ಚಿದ ಬಾಗಿಲಿನ ಚರ್ಚೆಯನ್ನು ನಿರಾಕರಿಸಿ, ರೈತರ ಸಮ್ಮುಖದಲ್ಲೇ ಬಹಿರಂಗ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.

ಒಂದೆಡೆ ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಭವಿಷ್ಯವನ್ನು ಉನ್ನತೀಕರಿಸುವ ‘ಸಿಲಿಕಾನ್ ವ್ಯಾಲಿ’ಯ ಮುಂದಿನ ಹಂತವಾದ AI ಸಿಟಿಯ ಕನಸು… ಇನ್ನೊಂದೆಡೆ ಅನ್ನ ಕೊಟ್ಟ ಭೂಮಿಯನ್ನು ಬಿಟ್ಟುಕೊಡಲ್ಲ ಎನ್ನುತ್ತಿರುವ ಅನ್ನದಾತರ ಆಕ್ರೋಶ ಭುಗಿಲೆದ್ದಿದೆ. ಅಭಿವೃದ್ಧಿ ಬೇಕು ನಿಜ, ಆದರೆ ಆ ಅಭಿವೃದ್ಧಿಯ ಅಡಿಪಾಯದ ಕೆಳಗೆ ರೈತರ ಬದುಕು ಹೂತುಹೋಗಬಾರದು ಎನ್ನುವುದೇ ಸಾರ್ವಜನಿಕರ ಆಶಯ. ಈ ಅಭಿವೃದ್ಧಿ ಮತ್ತು ಅಸ್ತಿತ್ವದ ನಡುವಿನ ಮಹಾಸಂಗ್ರಾಮದಲ್ಲಿ ಅಂತಿಮವಾಗಿ ನ್ಯಾಯ ಸಿಗುವುದು ಯಾರಿಗೆ? ಎಂಬುದನ್ನು ಕಾಲವೇ ನಿರ್ಣಯಿಸಬೇಕಿದೆ.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ ಎಸಿಪಿ ವಿವೇಕ್ ಭಗತ್ FIR!

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ...

ಉಡುಪಿ | ನೆಟ್‌ವರ್ಕ್ ಸಮಸ್ಯೆ ಬಗೆಹರಿಸಿ, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಿ: ಕೋಟ ಶ್ರೀನಿವಾಸ ಪೂಜಾರಿ

ಬಿ.ಎಸ್.ಎನ್.ಎಲ್. ಸಂಸ್ಥೆಯು ನೆಟ್‌ವರ್ಕ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ, ಖಾಸಗಿ ಟೆಲಿಕಾಂ ಕಂಪನಿಗಳಿಗೆ...

ಕಾರವಾರ | ಅಕ್ಟೋಬರ್ 16ರಂದು ಹಾರವಾಡದಿಂದ ಮಾಜಾಳಿವರೆಗೆ ಮೀನುಗಾರಿಕೆಗೆ ನಿರ್ಬಂಧ

ಕಾರವಾರ: ಗೌರವಾನ್ವಿತ ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರು ಅಕ್ಟೋಬರ್ 16ರಂದು ಉತ್ತರ ಕನ್ನಡ...