ದಿಮಾಗಿ ನಕ್ಸಲರು: ಒಂದು ಟಿಪ್ಪಣಿ

Date:

ಫ್ಯಾಸಿಸಂ ಯಾವಾಗಲೂ ತನ್ನ ಸ್ಥಾನವನ್ನು ಕಾಯ್ದುಕೊಳ್ಳಲು ರಾಜಕೀಯ ತತ್ತ್ವಶಾಸ್ತ್ರ ಆಧಾರಿತವಾದ ತರ್ಕಬದ್ಧ ವಿಶ್ಲೇಷಣೆಗಳನ್ನು ತಿರಸ್ಕರಿಸುತ್ತದೆ. ಕಾರಣಕ್ಕಿಂತ ನಂಬಿಕೆ, ಅನುಮಾನಕ್ಕಿಂತ ಅನುಸರಣೆ ಮತ್ತು ಚರ್ಚೆಗಿಂತ ಆಕ್ರಮಣಶೀಲತೆ ಉತ್ತಮವೆಂದು ಭಾವಿಸುವ ಪ್ರಭುತ್ವವು ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತದೆ. ತನ್ನದೇ ಜನರನ್ನು ಕತ್ತಲಲ್ಲಿ ಇರಿಸುತ್ತದೆ.

ಸನ್ಮಾನ್ಯ ಪ್ರಧಾನಿಗಳು ನಿನ್ನೆ ತಮ್ಮ ಭಾಷಣದಲ್ಲಿ ʼ ದಿಮಾಗಿ ನಕ್ಸಲರುʼ ಎಂಬ ಪದವನ್ನು ನಿರ್ದಯವಾಗಿ ಬಳಸಿ‌ ನೇರವಾಗಿ ಮೆದುಳಿಗೇ ಕೈ ಹಾಕಿದ್ದಾರೆ. ಮತ್ತು ಆ ಪದವನ್ನು ಬಳಸುತ್ತಾ ʼ ನಾವು ಸಶಸ್ತ್ರ ನಕ್ಸಲರನ್ನು ನಿರ್ಮೂಲಗೊಳಿಸಿದ್ದೇವೆ, ಈಗ ಇವರ ಬಗ್ಗೆ ಜಾಗೃತರಾಗಿರಬೇಕಾಗಿದೆʼ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಅದೂ ಸ್ವಾತಂತ್ರ್ಯೋತ್ಸವದ ದಿನದ ಭಾಷಣದಲ್ಲಿ ಈ ಎಚ್ಚರಿಕೆಯ ಪರಿಣಾಮ ಮುಂದಿನ ದಿನಗಳಲ್ಲಿ ಭೀಕರವಾದ ಪರಿಣಾಮ ಬೀರಲಿದೆ.

- Advertisement -

ಚಿಂತಕರನ್ನು, ಲೇಖಕರನ್ನು, ಕಲಾವಿದರನ್ನು ಪೂರ್ತಿಯಾಗಿ ಮಟ್ಟಹಾಕಬಯಸುವ ಮಾತುಗಳಿವು. ಪ್ರಶ್ನಿಸುವುದನ್ನು ಕಲಿಸುವ, ರಾಜಕೀಯ ವಿನ್ಯಾಸಗಳನ್ನು ವಿಶ್ಲೇಷಿಸುವ, ಮಾನವೀಯ ಸಂಬಂಧಗಳನ್ನು ಪರಿಶೋಧಿಸುವ ಪ್ರಕ್ರಿಯೆಗಳು ಅಗತ್ಯವಿಲ್ಲ ಎಂಬ ಧೋರಣೆ ಇಲ್ಲಿ ಎದ್ದು ಕಾಣುತ್ತದೆ. ಜನಗಳ ಕುರಿತಾದ ನಮ್ಮ ತಿಳಿವಳಿಕೆಗಳನ್ನು ಹೆಚ್ಚಿಸಿ, ಮುಕ್ತಚಿಂತನೆಗೆ ಮತ್ತು ವಿಮರ್ಶೆಗೆ ಪೂರ್ಣ ಅವಕಾಶ ಮಾಡಿಕೊಡುವುದು ಪ್ರಜಾಪ್ರಭುತ್ವವಾದಿ ಸರಕಾರಗಳ ಅತಿ ದೊಡ್ಡ ಜವಾಬ್ದಾರಿ ಎಂದು ನಾವೆಲ್ಲ ನಂಬಿದ್ದರೆ, ಅದರ ಅಗತ್ಯ ನಮಗಿಲ್ಲ ಎಂದು ಪ್ರಭುತ್ವ ಗಟ್ಟಿಯಾಗಿ ಹೇಳುತ್ತಿದೆ. ಪ್ರಧಾನ ಮಂತ್ರಿಗಳ ಮಾತು ಆರ್‌ಎಸ್‌ಎಸ್‌ನ ಎರಡನೇ ಸರಸಂಚಾಲಕರಾದ ಎಂ ಎಸ್ ಗೋಲ್ವಾಲ್ಕರ್ ಅವರ ಹೇಳಿಕೆಗೆ ಸಂವಾದಿಯಾಗಿದೆ. ʼ ನಾನು ಕಬಡ್ಡಿ ಆಡಬೇಕೆಂದು ಹೇಳಿದರೆ ನೀವು ಕಬಡ್ಡಿ ಆಡಲೇಬೇಕುʼ ಎಂಬುದು ಗೋಲ್ವಾಲ್ಕರ್ ಅವರ ಪ್ರಸಿದ್ಧ ಮಾತು. ಯೋಚಿಸುವ ಹಕ್ಕನ್ನು ಕಸಿದುಕೊಳ್ಳುವ ಇಂಥ ಮಾತುಗಳು ಜನರಿಂದ ಸಂಪೂರ್ಣ ವಿಧೇಯತೆಯನ್ನು ಬಯಸುತ್ತದೆ. ಜನರು ಯಾವುದೇ ಪ್ರಶ್ನೆಗಳಿಲ್ಲದೆ ಪ್ರಭುತ್ವದ ಆದೇಶಗಳನ್ನು ಪಾಲಿಸಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಇದನ್ನೂ ಓದಿ: ‘ದಿಮಾಗಿ ನಕ್ಸಲ್’ ಆಗಿರುವುದಕ್ಕೆ ಹೆಮ್ಮೆ ಇದೆ; ಮೋದಿ ವಿರುದ್ಧ ಪಿ. ಚಿದಂಬರಂ ಕಿಡಿ

ಫ್ಯಾಸಿಸಂ ಯಾವಾಗಲೂ ತನ್ನ ಸ್ಥಾನವನ್ನು ಕಾಯ್ದುಕೊಳ್ಳಲು ರಾಜಕೀಯ ತತ್ತ್ವಶಾಸ್ತ್ರ ಆಧಾರಿತವಾದ ತರ್ಕಬದ್ಧ ವಿಶ್ಲೇಷಣೆಗಳನ್ನು ತಿರಸ್ಕರಿಸುತ್ತದೆ. ಕಾರಣಕ್ಕಿಂತ ನಂಬಿಕೆ, ಅನುಮಾನಕ್ಕಿಂತ ಅನುಸರಣೆ ಮತ್ತು ಚರ್ಚೆಗಿಂತ ಆಕ್ರಮಣಶೀಲತೆ ಉತ್ತಮವೆಂದು ಭಾವಿಸುವ ಪ್ರಭುತ್ವವು ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತದೆ. ತನ್ನದೇ ಜನರನ್ನು ಕತ್ತಲಲ್ಲಿ ಇರಿಸುತ್ತದೆ.

ಫ್ಯಾಸಿಸಂ ಬೌದ್ಧಿಕತೆಯನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ. ಏಕೆಂದರೆ ಅದಕ್ಕೆ ವಿಮರ್ಶಾತ್ಮಕ ವಿಶ್ಲೇಷಣೆ, ಪುರಾವೆಗಳು ಮತ್ತು ಮುಕ್ತ ಚರ್ಚೆಗಿಂತ ಭಾವನಾತ್ಮಕ ಸಜ್ಜುಗೊಳಿಸುವಿಕೆ, ಸಂಪೂರ್ಣ ವಿಧೇಯತೆ ಮತ್ತು ಪುರಾಣಗಳ ಅವಲಂಬನೆ ಹೆಚ್ಚು ಸುಲಭ ಮತ್ತು ಇಷ್ಟ. ಅದಕ್ಕಾಗಿ ಅದು ಧರ್ಮವನ್ನು ಅಗತ್ಯಕ್ಕಿಂತ ಹೆಚ್ಚು ಅವಲಂಬಿಸುತ್ತದೆ. ಸ್ವತಂತ್ರ ಚಿಂತನೆಗಳು ಸರ್ವಾಧಿಕಾರಿ ನಿಯಂತ್ರಣಕ್ಕೆ ಬೆದರಿಕೆ ಹಾಕುತ್ತವೆ ಎಂದು ಅವರು ಭಾವಿಸುತ್ತಾರೆ.

ಸನ್ಮಾನ್ಯ ಪ್ರಧಾನಿಗಳು ತಮ್ಮ ಹೇಳಿಕೆಯನ್ನು ಪುನರ್ ವಿಮರ್ಶೆಗೆ ಒಳಪಡಿಸಬೇಕೆಂದು ನಾನು ಬಯಸುತ್ತೇನೆ.

purushottama bilimale1672368497
ಡಾ. ಪುರುಷೋತ್ತಮ ಬಿಳಿಮಲೆ
+ posts

ಜಾನಪದ ವಿದ್ವಾಂಸರು, ಲೇಖಕರು,  ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು

ಪೋಸ್ಟ್ ಹಂಚಿಕೊಳ್ಳಿ:

ಡಾ. ಪುರುಷೋತ್ತಮ ಬಿಳಿಮಲೆ
ಡಾ. ಪುರುಷೋತ್ತಮ ಬಿಳಿಮಲೆ
ಜಾನಪದ ವಿದ್ವಾಂಸರು, ಲೇಖಕರು,  ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅ.2ಕ್ಕೆ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರ ಪದಗ್ರಹಣ

ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಅಬ್ದುಲ್ ಮನ್ನಾನ್...

ಸೌಜನ್ಯ ಪ್ರಕರಣ: ತಮ್ಮನ್ನು ಎಸ್‌ಐಟಿಯಿಂದ ಕೈಬಿಡುವಂತೆ ಎಎಸ್‌ಪಿ ವೆಂಕಟೇಶ್‌ ಪ್ರಸನ್ನ ಪತ್ರ

ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಚಿಸಲಾಗಿರುವ...

ವಿಜಯಪುರ | ಸಣ್ಣಪುಟ್ಟ ವಿವಾದಗಳನ್ನು ಸೌಹಾರ್ದದಿಂದ ಬಗೆಹರಿಸಿ: ಎಸ್. ಹಾಗರಗಿ

ಪರಸ್ಪರ ಮಾತುಕತೆ, ಸಮುದಾಯ ಮಧ್ಯಸ್ಥಿಕೆಯ ಮೂಲಕ ಸಣ್ಣಪುಟ್ಟ ಸಮಸ್ಯೆಗಳನ್ನು ಗ್ರಾಮದಲ್ಲೇ ಸೌಹಾರ್ದಯುತವಾಗಿ...

ವಿಜಯಪುರ | ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ವಾರ್ಡ್ ಮಟ್ಟದ ಸಮಿತಿ ರಚನೆ

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ವಿಜಯಪುರ ಜಿಲ್ಲೆಯಲ್ಲಿ ಮುಂದುವರಿದಿದ್ದು, ಅರ್ಹ...