ರಾಹುಲ್ ಮೇಲೆ ಡಿಎಂಕೆ ಮುಖವಾಣಿಯ ಪ್ರಹಾರ; ಕಾಂಗ್ರೆಸ್ ಸಚಿವರ ತೀಕ್ಷ್ಣ ಪ್ರತ್ಯುತ್ತರ

Date:

ಡಿಎಂಕೆ ಸಖ್ಯ ತೊರೆದ ಕಾಂಗ್ರೆಸ್, ಟಿವಿಕೆ ಜೊತೆ ಸೇರಿ ಸರ್ಕಾರದ ಭಾಗವಾಗಿದೆ. ಇದು ಇಂಡಿಯಾ ಮೈತ್ರಿಕೂಟದೊಳಗೆ ದೊಡ್ಡ ತಲ್ಲಣ ಸೃಷ್ಟಿಸಿದೆ. ಇಂಡಿಯಾ ಬಣದಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸುತ್ತಿರುವ ಡಿಎಂಕೆ, ಈಗ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಗುರಿಯಾಗಿಸಿಕೊಂಡು ತೀವ್ರ ಟೀಕಾಪ್ರಹಾರ ನಡೆಸಿದೆ.

- Advertisement -

ಡಿಎಂಕೆಯ ಐಟಿ ವಿಭಾಗ ಮಾಡಿರುವ ಪೋಸ್ಟ್ ಮತ್ತು ಡಿಎಂಕೆಯ ಮುಖವಾಣಿ ‘ಮುರಸೋಲಿ’ಯಲ್ಲಿ ಬರೆಯಲಾಗಿರುವ ಸಂಪಾದಕೀಯ ಈ ಬಿರುಕಿಗೆ ಮತ್ತಷ್ಟು ತುಪ್ಪ ಸುರಿದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ದೇವರು, ಪುರಾಣ, ಕರ್ಮಕಾಂಡಗಳು ಮನುಷ್ಯನನ್ನು ಗುಲಾಮನನ್ನಾಗಿ ಮಾಡುತ್ತವೆಂದು ಹೇಳಿದ...

ಪೆರಿಯಾರ್ ದೇವರನ್ನು ವಿರೋಧಿಸಿದ್ದು ದೇವರ ಮೇಲಿನ ದ್ವೇಷಕ್ಕಲ್ಲ; ಬದಲಿಗೆ ದೇವರ ಹೆಸರಿನಲ್ಲಿ ನಡೆಯುವ ಮೋಸ, ಶೋಷಣೆಯ ವಿರುದ್ಧ. ಅವರು ಮುಖ್ಯಮಂತ್ರಿ ಸ್ಥಾನವನ್ನು ತಿರಸ್ಕರಿಸಿದರು. ಜೀವನಪೂರ್ತಿ ಯಾವುದೇ ಅಧಿಕಾರದ ಕುರ್ಚಿಯನ್ನೂ ಏರಲಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ...

ಸಾಕ್ಷ್ಯ ಚಿತ್ರಗಳಿರದ ದೇಶವು ಚರಿತ್ರೆ ಇರದ ರಾಷ್ಟ್ರದಂತೆ ಎಂದಿದ್ದ...

ಚಿಲಿ ದೇಶದ ಜನರ ಸಾಮಾಜಿಕ ಬದುಕು ಹಾಗೂ ರಾಜಕೀಯ ಬೆಳವಣಿಗೆಗಳು ಹೆಣೆದುಕೊಂಡ ಘನವಾದ ಚರಿತ್ರೆಯ ಸಂಪುಟವಾಗಿ ಕಟ್ಟಿದ ಧೀಮಂತ ಸಿನೆಮಾ ಕಲಾವಿದ ಪ್ಯಾಟ್ರಿಷಿಯೊ ಗುಜ್ಮಾನ್, ಇತ್ತೀಚಿಗೆ ಇಲ್ಲವಾದರು. ಅವರ ಸೃಜನಶೀಲತೆ, ತುಡಿತ ಮತ್ತು...

ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ" ಎಂದಿದ್ದಾರೆ ಕುಮಾರಸ್ವಾಮಿ. ಈ ಬಾರಿಯಾದರೂ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆಯೇ? ‘ಸ್ಪೋಟಕ ಹೇಳಿಕೆ’,...

“ಕಾಂಗ್ರೆಸ್ ತನ್ನ ರಾಜಕೀಯ ಉಳಿವಿಗಾಗಿ ಹೋರಾಡುತ್ತಿದ್ದಾಗ ನಾವು ಅವರನ್ನು ನಮ್ಮ ಹೆಗಲ ಮೇಲೆ ಹೊತ್ತು ಮುನ್ನಡೆಸಿದೆವು. ಆದರೆ ಅವರು ಒಂದು ಹೊಸ ಹೊಳೆಯುವ ಆಟಿಕೆಯನ್ನು ಕಂಡ ತಕ್ಷಣ, ಅದೇ ಕ್ಷಣದಲ್ಲಿ ಹಡಗಿನಿಂದ ಜಿಗಿದುಬಿಟ್ಟರು” ಎಂದು ಪೋಸ್ಟ್ ಮಾಡಿರುವ ಡಿಎಂಕೆ ಐಟಿ ವಿಭಾಗ, ರಾಹುಲ್ ಗಾಂಧಿಯವರನ್ನು “ಒಂದು ದೊಡ್ಡ ಜೋಕ್” ಎಂದು ಹೀಯಾಳಿಸಿದೆ.

ಸೋಮವಾರ ಡಿಎಂಕೆ ಮುಖವಾಣಿ ‘ಮುರಸೋಲಿ’ಯಲ್ಲಿ ಪ್ರಕಟವಾದ ಸಂಪಾದಕೀಯದಲ್ಲಿ, “ಇಂಡಿಯಾ ಮೈತ್ರಿಕೂಟದ ಒಡಕಿಗೆ, ವಿರೋಧ ಪಕ್ಷಗಳ ಭಿನ್ನಾಭಿಪ್ರಾಯಗಳಿಗೆ ಕಾಂಗ್ರೆಸ್ ನಾಯಕರೇ ಹೊಣೆಗಾರರು” ಎಂದು ದೂರಲಾಗಿದೆ.

ರಾಹುಲ್ ಗಾಂಧಿಯವರು ಒಂದೆಡೆ ವಿರೋಧ ಪಕ್ಷಗಳ ಒಗ್ಗಟ್ಟಿನ ಬಗ್ಗೆ ಭಾಷಣ ಮಾಡುತ್ತಾ, ಮತ್ತೊಂದೆಡೆ ಅದಕ್ಕೆ ತಾವೇ ತಣ್ಣೀರೆರಚುತ್ತಿದ್ದಾರೆ. “ರಾಹುಲ್ ಗಾಂಧಿ ಒಗ್ಗಟ್ಟಿನ ಬಗ್ಗೆ ನಮಗೆ ಪಾಠ ಮಾಡುತ್ತಿದ್ದಾರೆ. ಆದರೆ ವಿವಿಧ ರಾಜ್ಯಗಳಲ್ಲಿ ಆ ಒಗ್ಗಟ್ಟನ್ನು ದುರ್ಬಲಗೊಳಿಸಿದವರು ಯಾರು?” ಎಂದು ಪ್ರಶ್ನಿಸಿದೆ.

ಕೇರಳದ ಎಡಪಕ್ಷಗಳು ರಾಹುಲ್ ಗಾಂಧಿ ವಿರುದ್ಧ ಮಾಡಿದ್ದ ಟೀಕೆಗಳಿಗೆ ಸಂಪಾದಕೀಯದಲ್ಲಿ ಹೆಚ್ಚಿನ ಜಾಗ ನೀಡಲಾಗಿದೆ. ಚುನಾವಣಾ ಪ್ರಚಾರದ ಅವಧಿಯಲ್ಲಿ ರಾಹುಲ್ ಗಾಂಧಿಯವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದನ್ನು ಮತ್ತು ಎಲ್‌ಡಿಎಫ್ ಸರ್ಕಾರವು ಬಿಜೆಪಿಯೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದ್ದನ್ನು ಕಮ್ಯುನಿಸ್ಟ್ ನಾಯಕರು ತೀವ್ರವಾಗಿ ವಿರೋಧಿಸಿದ್ದನ್ನು ಪತ್ರಿಕೆ ಉಲ್ಲೇಖಿಸಿದೆ. “ಕಾಂಗ್ರೆಸ್‌ಗೆ ಬಿಜೆಪಿಯನ್ನು ಎದುರಿಸುವುದಕ್ಕಿಂತ ತನ್ನದೇ ಆದ ಮೈತ್ರಿಕೂಟದ ಪಾಲುದಾರರನ್ನು ಟಾರ್ಗೆಟ್ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಇದೆಯೇ?” ಎಂಬ ಪ್ರಶ್ನೆಗಳನ್ನು ಇಂತಹ ದಾಳಿಗಳು ಎಡಪಕ್ಷಗಳ ನಾಯಕರಲ್ಲಿ ಹುಟ್ಟುಹಾಕಿದ್ದವು ಎಂದು ಮುರಸೋಲಿ ಅಭಿಪ್ರಾಯಪಟ್ಟಿದೆ.

ವಿವಿಧ ರಾಜ್ಯಗಳಲ್ಲಿ ‘ಇಂಡಿಯಾ’ ಒಕ್ಕೂಟದ ಪಾಲುದಾರ ಪಕ್ಷಗಳು ಅಧಿಕಾರಕ್ಕೆ ಬರದಂತೆ ತಡೆಯಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪದೇ ಪದೇ ಕೆಲಸ ಮಾಡಿರುವುದಾಗಿ ಸಂಪಾದಕೀಯ ಆಪಾದಿಸಿದೆ. “ಆಯಾ ರಾಜ್ಯಗಳಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ಸ್ಥಿತಿಯಲ್ಲಿದ್ದ ಪ್ರಾದೇಶಿಕ ಪಕ್ಷಗಳ ಬೆಳವಣಿಗೆಗೂ ಕಾಂಗ್ರೆಸ್ ಅಡ್ಡಿಯಾಗಿದೆ” ಎಂದು ಆರೋಪಿಸಿದೆ.

ತಮಿಳುನಾಡು ರಾಜಕೀಯದ ಉದಾಹರಣೆ ನೀಡಿದ ಮುರಸೋಲಿ, ಕಾಂಗ್ರೆಸ್ ಮೈತ್ರಿಕೂಟದ ಬ್ಯಾನರ್ ಅಡಿಯಲ್ಲಿ ಸ್ಪರ್ಧಿಸಿ ಸ್ಥಾನಗಳನ್ನು ಗೆದ್ದಿದ್ದರೂ ಡಿಎಂಕೆಗೆ ದ್ರೋಹ ಮಾಡಿದೆ ಎಂದು ವಾದಿಸಿದೆ.

ಇತ್ತೀಚೆಗೆ ರಾಹುಲ್ ಗಾಂಧಿಯವರು ಮೈತ್ರಿ ಪಾಲುದಾರರಿಗೆ ನೀಡುತ್ತಿರುವ ಭರವಸೆಗಳನ್ನು ಲೇವಡಿ ಮಾಡಿರುವ ಪತ್ರಿಕೆ, ತಮಿಳುನಾಡಿನಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿಯನ್ನು ನೋಡಿದ ಮೇಲೆ ಅವರ ಭರವಸೆಗಳನ್ನು ಯಾರಾದರೂ ನಂಬಲು ಸಾಧ್ಯವೇ ಎಂದು ಪ್ರಶ್ನಿಸಿದೆ.

ಅಂತಿಮವಾಗಿ ತೀವ್ರ ಆಕ್ರೋಶದೊಂದಿಗೆ ಸಂಪಾದಕೀಯವನ್ನು ಮುಗಿಸಿರುವ ಮುರಸೋಲಿ, ವಿರೋಧ ಪಕ್ಷಗಳು ಈಗ ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ ಕಡೆಗೆ ತಮ್ಮ ಟೀಕೆಗಳ ಬಾಣವನ್ನು ತಿರುಗಿಸುತ್ತಿವೆ ಎಂದು ಪ್ರತಿಪಾದಿಸಿದೆ. ‘ಇಂಡಿಯಾ’ ಒಕ್ಕೂಟದೊಳಗೆ ಬೆಳೆಯುತ್ತಿರುವ ಈ ಬಿರುಕಿಗೆ ರಾಹುಲ್ ಗಾಂಧಿಯವರ “ರಾಜಕೀಯ ಅಪಕ್ವತೆ” ಮತ್ತು ಸ್ಥಿರತೆಯ ಕೊರತೆಯೇ ಕಾರಣ ಎಂದು ಟೀಕಿಸಿದೆ.

ಈ ಲೇಖನ ಓದಿದ್ದೀರಾ?: ಹಿಂದು ಧರ್ಮಕ್ಕೂ ಆರ್‌ಎಸ್‌ಎಸ್‌ ನೋಂದಣಿಗೂ ಎತ್ತಣಿಂದೆತ್ತ ಸಂಬಂಧ?’ ಭಾಗವತ್ ಬೂಟಾಟಿಕೆ ಬಯಲು!

ಮುರಸೋಲಿಯ ಟೀಕಾಪ್ರಹಾರಕ್ಕೆ ಸ್ಥಳೀಯ ಕಾಂಗ್ರೆಸ್ ನಾಯಕರು ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಟಿವಿಕೆ ಸರ್ಕಾರದಲ್ಲಿ ಸಚಿವರಾಗಿರುವ ಕಾಂಗ್ರೆಸ್‌ನ ಎಸ್. ರಾಜೇಶ್ಕುಮಾರ್ (ಪ್ರವಾಸೋದ್ಯಮ) ಮತ್ತು ಪಿ. ವಿಶ್ವನಾಥನ್ (ಉನ್ನತ ಶಿಕ್ಷಣ) ಅವರು ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

“ಕಾಂಗ್ರೆಸ್ ಗೆದ್ದಿರುವುದು ಕೇವಲ ಡಿಎಂಕೆಯಿಂದಾಗಿ ಎಂಬ ವಾದ ಎಷ್ಟು ನಿಜವೋ, ಡಿಎಂಕೆ ಗೆದ್ದಿರುವುದು ಕಾಂಗ್ರೆಸ್ನಿಂದಾಗಿ ಎಂಬುದು ಅಷ್ಟೇ ನಿಜ. ಚುನಾವಣಾ ರಾಜಕೀಯದಲ್ಲಿ ಸೋಲು ಗೆಲುವು. ಸೋಲುವ ಪಕ್ಷಗಳು ಸೋಲಿಗೆ ಕಾರಣಗಳನ್ನು ಗುರುತಿಸಿ, ಅವುಗಳನ್ನು ತಿದ್ದಿಕೊಂಡು, ಮುಂದಿನ ಚುನಾವಣೆಯಲ್ಲಿ ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡಬೇಕು” ಎಂದು ತಿವಿದಿದ್ದಾರೆ.

“ಜೋಸೆಫ್ ವಿಜಯ್ ಅವರು ಎಐಎಡಿಎಂಕೆ ಬೆಂಬಲ ಬಯಸಲಿಲ್ಲ. ಕಾಂಗ್ರೆಸ್, ವಿಸಿಕೆ, ಎಡಪಕ್ಷಗಳು ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಲು ದೃಢಸಂಕಲ್ಪ ತೋರಿದರು. ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಜಾತ್ಯತೀತತೆ ಮತ್ತು ರಾಜ್ಯದ ಹಕ್ಕುಗಳಲ್ಲಿನ ಟಿವಿಕೆಯ ಬದ್ಧತೆ ಇದರಿಂದ ಸ್ಪಷ್ಟವಾಗುತ್ತದೆ” ಎಂದು ಸಚಿವರು ತಿಳಿಸಿದ್ದಾರೆ.

“ಎಲ್ಲಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಇರುತ್ತಾರೋ, ಅಲ್ಲಿ ಬಿಜೆಪಿ ನೇರವಾಗಿಯಾಗಲಿ ಅಥವಾ ಪರೋಕ್ಷವಾಗಿಯಾಗಲಿ ಇರುವುದಿಲ್ಲ. ಅಲ್ಲಿ ಧಾರ್ಮಿಕ ಉಗ್ರವಾದಕ್ಕೆ ಜಾಗವಿರುವುದಿಲ್ಲ. ಜಾತ್ಯತೀತತೆಗೆ ಯಾವುದೇ ಧಕ್ಕೆ ಬರುವುದಿಲ್ಲ. ರಾಜ್ಯದ ಹಕ್ಕುಗಳನ್ನು ರಕ್ಷಿಸಲಾಗುತ್ತದೆ. ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಇದನ್ನು ಅರ್ಥಮಾಡಿಕೊಂಡಿದ್ದಾರೆ. ಜಾತ್ಯತೀತ ತತ್ವಗಳಿಗೆ ದೃಢವಾಗಿ ಬದ್ಧವಾಗಿರುವ ಟಿವಿಕೆ ಜೊತೆ ನಿಲ್ಲುವುದು ಕಾಂಗ್ರೆಸ್ ಪಕ್ಷದ ಕರ್ತವ್ಯವಾಗಿದೆ” ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಡಿಎಂಕೆ ಯಾವಾಗಲೂ ಕಾಂಗ್ರೆಸ್ ಬೆಂಬಲವನ್ನೇ ಅವಲಂಬಿಸಿದೆ ಎಂದು ಪ್ರತಿಪಾದಿಸಿರುವ ಸಚಿವದ್ವಯರು, ಇತಿಹಾಸವನ್ನು ಉಲ್ಲೇಖಿಸಿದ್ದಾರೆ. ಡಿಎಂಕೆ ಪಕ್ಷವು 1967 ರಲ್ಲಿ ಕಾಂಗ್ರೆಸ್ ತೊರೆದ ನಂತರ ರಾಜಾಜಿಯವರ ಸ್ವತಂತ್ರ ಪಕ್ಷದೊಂದಿಗೆ, 1971 ರಲ್ಲಿ ಇಂದಿರಾ ಗಾಂಧಿಯವರ ಕಾಂಗ್ರೆಸ್ನೊಂದಿಗೆ, 1996 ರಲ್ಲಿ ಕಾಂಗ್ರೆಸ್ ತೊರೆದು ಜಿ.ಕೆ. ಮೂಪನಾರ್ ಸ್ಥಾಪಿಸಿದ ತಮಿಳು ಮಾನಿಲ ಕಾಂಗ್ರೆಸ್ನೊಂದಿಗೆ, 2006 ಮತ್ತು 2021 ರಲ್ಲಿ ಕಾಂಗ್ರೆಸ್ ಪಕ್ಷದೊಂದಿಗೇ ಮೈತ್ರಿ ಮಾಡಿಕೊಂಡಿದ್ದನ್ನು ಅವರು ಪ್ರಸ್ತಾಪಿಸಿದ್ದಾರೆ.

“ಡಿಎಂಕೆ ಪಕ್ಷವು ಮೈತ್ರಿಕೂಟವಿಲ್ಲದೆ ಎಂದಿಗೂ ಚುನಾವಣೆಯಲ್ಲಿ ಗೆದ್ದಿಲ್ಲ, ಆದರೂ ಅದು ತನ್ನ ಮೈತ್ರಿ ಪಾಲುದಾರರೊಂದಿಗೆ ಒಂದೇ ಒಂದು ಬಾರಿಯೂ ಅಧಿಕಾರವನ್ನು ಹಂಚಿಕೊಂಡಿಲ್ಲ. 2006 ರಲ್ಲಿ, ಡಿಎಂಕೆ 100 ಸ್ಥಾನಗಳ ಗಡಿಯನ್ನೂ ದಾಟಿರಲಿಲ್ಲ. ಆಗ ಕಾಂಗ್ರೆಸ್ ಬೆಂಬಲದಿಂದ ಸರ್ಕಾರ ರಚಿಸಿತು, ಆದರೂ ಕಾಂಗ್ರೆಸ್ಗೆ ಸಚಿವ ಸ್ಥಾನ ನೀಡುವ ಮನಸ್ಸಿರಲಿಲ್ಲ. ಮೈತ್ರಿ ಪಾಲುದಾರರ ಬೆಂಬಲದೊಂದಿಗೆ ಗೆದ್ದು ಸರ್ಕಾರಗಳನ್ನು ರಚಿಸುವ ಹಾಗೂ ಪಾಲುದಾರರೊಂದಿಗೆ ಅಧಿಕಾರ ಹಂಚಿಕೊಳ್ಳಲು ನಿರಾಕರಿಸುವ ಪಕ್ಷವೊಂದು ಈಗ ಒಕ್ಕೂಟ ವ್ಯವಸ್ಥೆಯ (ಫೆಡರಲಿಸಂ) ಬಗ್ಗೆ ಮಾತನಾಡುತ್ತಿರುವುದು ಆಶ್ಚರ್ಯ ತರುತ್ತದೆ” ಎಂದು ಕುಟುಕಿದ್ದಾರೆ.

“ಈಗ 108 ಸ್ಥಾನಗಳನ್ನು ಗೆದ್ದಿರುವ ಟಿವಿಕೆ, ಕೇವಲ ಐದು ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಎರಡು ಸಚಿವ ಸ್ಥಾನಗಳನ್ನು ನೀಡಿದೆ. ತಲಾ ಇಬ್ಬರು ಶಾಸಕರನ್ನು ಹೊಂದಿರುವ ವಿಸಿಕೆ ಮತ್ತು ಐಯುಎಂಎಲ್ ಪಕ್ಷಗಳಿಗೂ ತಲಾ ಒಂದು ಸಚಿವ ಸ್ಥಾನವನ್ನು ನೀಡಿದೆ. ಒಂದು ವೇಳೆ ಕಮ್ಯುನಿಸ್ಟ್ ಪಕ್ಷಗಳು ಸಚಿವ ಸಂಪುಟ ಸೇರಲು ಬಯಸಿದ್ದರೆ, ಅವುಗಳು ಕೂಡ ತಲಾ ಒಂದು ಸಚಿವ ಸ್ಥಾನವನ್ನು ಪಡೆಯುತ್ತಿದ್ದವು. ಸರ್ಕಾರ ರಚಿಸಲು ಸಹಾಯ ಮಾಡಿದ ಪಕ್ಷಗಳೊಂದಿಗೆ ಆಡಳಿತ ಅಧಿಕಾರವನ್ನು ಹಂಚಿಕೊಳ್ಳುವುದೇ ನಿಜವಾದ ಒಕ್ಕೂಟ (ಮೈತ್ರಿ) ಆಡಳಿತ. ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಇದನ್ನು ಕ್ರಿಯೆಯ ಮೂಲಕ ಪ್ರದರ್ಶಿಸಿದ್ದಾರೆ” ಎಂದು ಶ್ಲಾಘಿಸಿದ್ದಾರೆ.

“ಜನರ ತೀರ್ಪನ್ನು ಡಿಎಂಕೆ ಒಪ್ಪಿಕೊಳ್ಳಬೇಕು, ಜವಾಬ್ದಾರಿಯುತ ವಿರೋಧ ಪಕ್ಷವಾಗಿ ತನ್ನ ಕೆಲಸವನ್ನು ಮುಂದುವರಿಸಬೇಕು. ಇಲ್ಲದಿದ್ದರೆ, ಅದು ಭವಿಷ್ಯದಲ್ಲಿ ಕನಿಷ್ಠ ವಿರೋಧ ಪಕ್ಷದ ಸ್ಥಾನಮಾನವನ್ನೂ ಪಡೆಯದೇ ಹೋಗಬಹುದು” ಎಂದು ಎಚ್ಚರಿಸಿದ್ದಾರೆ.

ಮುಂದೇನಾಗಬಹುದು?

ಇತ್ತೀಚೆಗೆ ನಡೆದ ಇಂಡಿಯಾ ಒಕ್ಕೂಟದ ಸಭೆಯಿಂದ ಡಿಎಂಕೆ ಹೊರಗುಳಿದಿತ್ತು. ಇತರೆ ಪಕ್ಷಗಳೊಂದಿಗೆ ಇದ್ದರೂ ಕಾಂಗ್ರೆಸ್ ನಾಯಕತ್ವವನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಡಿಎಂಕೆ ರವಾನಿಸಿತ್ತು.

ಇಂಡಿಯಾ ಬಣದ ಬಲ ಕುಗ್ಗಿಸಲು ಯತ್ನಿಸುತ್ತಿರುವ ಬಿಜೆಪಿ, ಈ ಒಡಕಿನ ಲಾಭ ಪಡೆಯಲು ನೋಡುತ್ತಿದೆ. ಆದರೆ ಡಿಎಂಕೆ ದ್ರಾವಿಡ ಸಿದ್ಧಾಂತವನ್ನು ನಂಬಿರುವ ಪಕ್ಷ. ಬಿಜೆಪಿಯ ಜೊತೆ ಹೋದರೆ ತಮಿಳುನಾಡಿನ ಜನತೆಯ ವಿಶ್ವಾಸವನ್ನು ಕಳೆದುಕೊಳ್ಳುವ ಅಪಾಯವಿದೆ. ವಾಜಪೇಯಿ ಅವರ ಅವಧಿಯಲ್ಲಿ ಬಿಜೆಪಿ ಸರ್ಕಾರಕ್ಕೆ ಡಿಎಂಕೆ ಬೆಂಬಲ ಕೊಟ್ಟಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿವೆ. ಆಗ ತಮಿಳುನಾಡಿನಲ್ಲಿ ಇದ್ದದ್ದು ದ್ರಾವಿಡ ರಾಜಕಾರಣವನ್ನೇ ಮುಖ್ಯವಾಗಿಟ್ಟುಕೊಂಡಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ಎರಡು ಶಕ್ತಿಗಳಷ್ಟೇ. ಈಗ ವಿಜಯ್ ಅವರ ಟಿವಿಕೆ ಭಾರೀ ಜನಬೆಂಬಲ ಪಡೆದು ಸರ್ಕಾರವನ್ನೂ ರಚಿಸಿದೆ. ಎಐಎಡಿಎಂ ಈಗಾಗಲೇ ಬಿಜೆಪಿ ಜೊತೆ ಹೋಗಿ ಹೆಣಗಾಡುತ್ತಿದೆ. ಈಗ ಬಿಜೆಪಿ ವಿರೋಧಿ ಪಾಳೆಯದಲ್ಲಿರುವುದೇ ಡಿಎಂಕೆಗೆ ಸೇಫ್ ಎಂದು ವಿಶ್ಲೇಷಿಸಲಾಗುತ್ತಿದೆ. ಡಿಎಂಕೆ ಏನಾದರೂ ಎನ್‌ಡಿಎ ಜೊತೆ ಗುರುತಿಸಿಕೊಂಡರೆ, ಅದರ ದೊಡ್ಡ ಮಟ್ಟದ ಲಾಭ ಟಿವಿಕೆ ಆಗಲಿದೆ ಎಂದೇ ನಂಬಲಾಗಿದೆ. ಹೀಗಾಗಿ ಕಾಂಗ್ರೆಸ್ ಮತ್ತು ಡಿಎಂಕೆ ಕಿತ್ತಾಟ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ಅಂದಾಜಿಸುವುದು ಕಷ್ಟವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಖರೀದಿ ಮೇಲೆ ತೆರಿಗೆ, ಖರೀದಿ ಹಣಕ್ಕೆ ಶುಲ್ಕ… ಇದು ಮೋದಿ ಡಿಜಿಟಲ್ ದರೋಡೆ!

ನಾವು ಒಂದು ವಸ್ತುವನ್ನು ಯುಪಿಐ ಮೂಲಕ ಖರೀದಿಸಿದರೆ, ಅದಕ್ಕೆ ತೆರಿಗೆ ತೆರಬೇಕು....

ಬಿಹಾರದಲ್ಲಿ 14,500 ಮಕ್ಕಳು ನಾಪತ್ತೆ: ಎಫ್‌ಐಆರ್ ವಿಳಂಬಕ್ಕೆ ಪೊಲೀಸರ ವಿರುದ್ಧ ಹೈಕೋರ್ಟ್‌ ಗರಂ

ನಳಂದಾ ಜಿಲ್ಲೆಯ ಆಸ್ಪತ್ರೆಯೊಂದರಿಂದ ನವಜಾತ ಶಿಶು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್...

ಇಸ್ಲಾಂಗೆ ಯುವಕ ಮತಾಂತರ; ‘ಬ್ರೇನ್‌ವಾಶ್’ ಆರೋಪ: ಇಷ್ಟದ ಧರ್ಮ ಅನುಸರಿಸುವ ಸ್ವಾತಂತ್ರ್ಯವಿದೆ ಎಂದ ಹೈಕೋರ್ಟ್

ವಯಸ್ಕನಾದ ವ್ಯಕ್ತಿಗೆ ತನ್ನಿಷ್ಟದ ಧರ್ಮವನ್ನು ಅನುಸರಿಸುವ ಹಾಗೂ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ...

ಧಾರವಾಡ | ಲೋಕಾಯುಕ್ತ ದಾಳಿ; 50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಕ್ಕಿಬಿದ್ದ ತಹಶೀಲ್ದಾರ್ ಸಚ್ಚಿದಾನಂದ

ಭೂ ದಾಖಲೆಗಳ ತಿದ್ದುಪಡಿ ಮತ್ತು 'ಖರಾಬು' ಜಮೀನಿನ ಮಾರ್ಪಾಟು ಮಾಡಿಕೊಡಲು ಬರೋಬ್ಬರಿ...