ಸ್ಕಾರ್ಸೆಸಿ ಚಿತ್ರರಂಗವನ್ನು ಕೃತಕ ಬುದ್ಧಿಮತ್ತೆಗೆ (Artificial Intelligence) ಒತ್ತೆ ಇಡುತ್ತಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. ತಮ್ಮ ಕಥಾ ಚಿತ್ರಗಳಿಗಾಗಿ AI ಆಧರಿತ ಕಥಾ ದೃಶ್ಯ ಫಲಕಗಳಿಗೆ (AI Story Board) ಬಳಸುತ್ತಿದ್ದಾರೆ ಎಂದು ಇಲ್ಲಿನ New York Times ವರದಿ ಮಾಡಿ, ಸ್ಕಾರ್ಸೆಸಿಯನ್ನು ಕಟುವಾಗಿ ಟೀಕಿಸಿದೆ. ತಮ್ಮ ಕಥಾ ಚಿತ್ರಗಳಿಗಾಗಿ AI ಆಧರಿತ ಕಥಾ ಫಲಕಗಳಿಗೆ (AI Story Board) ಬಳಸುತ್ತಿದ್ದಾರೆ ಎಂದು ಇಲ್ಲಿನ New York Times ವರದಿ ಮಾಡಿ, ಸ್ಕಾರ್ಸೆಸಿಯನ್ನು ಕಟುವಾಗಿ ಟೀಕಿಸಿದೆ.
ಕ್ಷಯಿಸುತ್ತಿರುವ ಕಲಾತ್ಮಕ ಚಲಿಸುವ ದೃಶ್ಯ ಮಾಧ್ಯಮವನ್ನು ಉಳಿಸುವ ಧರ್ಮಪ್ರಚಾರಕರಂಥ ಉತ್ಸಾಹದಿಂದ ದುಡಿಯುತ್ತ, ಸಿನಿಮಾ ಸಂಸ್ಕೃತಿ ಪರಂಪರೆಗೆ ಬೆಲೆ ಕಟ್ಟಲಾಗದಂಥ ಕೊಡುಗೆ ನೀಡಿರುವ ಮಾರ್ಟಿನ್ ಸ್ಕಾರ್ಸೆಸಿ. ಇದ್ದಕ್ಕಿದ್ದಂತೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಸ್ಕಾರ್ಸೆಸಿ ಈಗ ಚಿತ್ರಂಗವನ್ನು ಕೃತಕ ಬುದ್ಧಿಮತ್ತೆಗೆ (Artificial Intelligence) ಒತ್ತೆ ಇಡುತ್ತಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. ಈ ವಿವಾದದಿಂದಾಗಿ ಹಾಲಿವುಡ್ ಪರ-ವಿರೋಧ ಚರ್ಚೆಗಳಿಂದ ಈಗ ಇಬ್ಭಾಗವಾಗಿದೆ. ಆದರೆ ಸ್ಕಾರ್ಸೆಸಿ ಈ ಹೆಜ್ಜೆ ಇಡಬಾರದಿತ್ತು ಎಂಬ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿದೆ.
ಕ್ಷೀಣಿಸುತ್ತಿರುವ ಕಲಾತ್ಮಕ ದೃಶ್ಯ ಮಾಧ್ಯಮವನ್ನು ಅಳಿವು-ಉಳಿವಿನ ಪ್ರಶ್ನೆ ಎದುರಾಗಿರುವ ಇಂದಿನ ಸಂದರ್ಭದಲ್ಲಿ ದೃಶ್ಯ ಪರಂಪರೆಯನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ವರ್ಗಾಯಿಸುವ ಧರ್ಮಪ್ರಚಾರಕರಂಥ (religious missionary zeal) ಉತ್ಸಾಹದಿಂದ ದುಡಿಯುತ್ತ ಸಿನಿಮಾ ಸಂಸ್ಕೃತಿ ಪರಂಪರೆಗೆ ಬೆಲೆಕಟ್ಟಲಾಗದಂಥ ಕೊಡುಗೆ ನೀಡಿರುವ ಮಾರ್ಟಿನ್ ಸ್ಕಾರ್ಸೆಸಿ. ಇದ್ದಕ್ಕಿದ್ದಂತೆ ವಿವಾದದ ಸುಳಿಗೆ ಸಿಲುಕಿದ್ದಾರೆ.
ವಿವಾದದ ಸುಳಿಯಲ್ಲಿ ಸ್ಕಾರ್ಸೆಸಿ
ಸ್ಕಾರ್ಸೆಸಿ ಚಿತ್ರಂಗವನ್ನು ಕೃತಕ ಬುದ್ಧಿಮತ್ತೆಗೆ (Artificial Intelligence) ಒತ್ತೆ ಇಡುತ್ತಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. ತಮ್ಮ ಕಥಾ ಚಿತ್ರಗಳಿಗಾಗಿ AI ಆಧರಿತ ಕಥಾ ದೃಶ್ಯ ಫಲಕಗಳಿಗೆ (AI Story Board) ಬಳಸುತ್ತಿದ್ದಾರೆ ಎಂದು ಇಲ್ಲಿನ New York Times ವರದಿ ಮಾಡಿ, ಸ್ಕಾರ್ಸೆಸಿಯನ್ನು ಕಟುವಾಗಿ ಟೀಕಿಸಿದೆ. ತಮ್ಮ ಕಥಾ ಚಿತ್ರಗಳಿಗಾಗಿ AI ಆಧರಿತ ಕಥಾ ಫಲಕಗಳಿಗೆ (AI Story Board) ಬಳಸುತ್ತಿದ್ದಾರೆ ಎಂದು ಇಲ್ಲಿನ New York Times ವರದಿ ಮಾಡಿ, ಸ್ಕಾರ್ಸೆಸಿಯನ್ನು ಕಟುವಾಗಿ ಟೀಕಿಸಿದೆ. ಇದಕ್ಕೆ ಉತ್ತರಿಸಿರುವ ಸ್ಕಾರ್ಸೆಸಿ ಇಂದಿನ ಕಾಲಕ್ಕೆ AI ಅಗತ್ಯ ಮತ್ತು ಬಂಡವಾಳ ಹೂಡಿಕೆಯನ್ನು ಕಡಿತಗೊಳಿಸುವ ಕಾರಣವನ್ನೂ ನೀಡಿದ್ದಾರೆ. ಸ್ಕಾರ್ಸೆಸಿ ಇದನ್ನು (Creatively freeing) ನಡೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಈ ಅವರ ನಡೆ ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನು ಎತ್ತುವಂತೆ ಮಾಡಿದೆ. ಸ್ಕಾರ್ಸೆಸಿ ಇದನ್ನು (Creatively freeing) ನಡೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಸೃಜನಶೀಲತೆ AI ಒತ್ತೆ ಇಟ್ಟರೆ ಸ್ಕಾರ್ಸೆಸಿ
ಸದ್ದಿಲ್ಲದಂತೆ ಸ್ಕಾರ್ಸೆಸಿ ಜರ್ಮನಿ ನೆಲದ AI Start Up Black Forest Labs ಜೊತೆ ಕೈಜೋಡಿಸಿದ್ದಾರೆ ಎಂದು New York Times ವರದಿ ಮಾಡಿದೆ. ಈ Black Forest Labs ಚಿತ್ರ ಸೃಷ್ಟಿಕರ್ತರ (Creators of popular Flux Image generators) ಕೆಲಸವನ್ನು ಮಾಡುವಲ್ಲಿ ನಿರತವಾದ ಸಂಸ್ಥೆ ̤ ಈ ಸಂಸ್ಥೆಯು ಕ್ಷಣಮಾತ್ರದಲ್ಲಿ ದೃಶ್ಯದ ಚಿತ್ರಪಟಲ, ಅಥವಾ ಚಿತ್ರ ಫಲಕವನ್ನು ಸಿದ್ಧಗೊಳಿಸಿಕೊಡುತ್ತದೆ. ಇದನ್ನು ಸ್ಕಾರ್ಸೆಸಿ ಸಮರ್ಥಿಸಿಕೊಂಡಿರುವ ರೀತಿ ಕೂಡ ಆಶ್ಚರ್ಯ ಹುಟ್ಟಿಸುತ್ತದೆ. ಸುಮಾರು 70 ವರ್ಷಗಳಿಂದ ಕೈಗಳಿಂದ ರಚಿಸಿದ ಚಿತ್ರ ಫಲಕಗಳನ್ನು ಚಿತ್ರ ತಂಡಕ್ಕೆ ಅತಿ ಕಡಿಮೆ ಕಾಲಾವಧಿಯಲ್ಲಿ ಒದಗಿಸುತ್ತದೆ. AI ಬಳಕೆಯಿಂದ Creative Freeing ಪ್ರಕ್ರಿಯೆಗೆ ಚಾಲನೆ ಸಿಕ್ಕುತ್ತದೆ. ಸಿನಿಮಾ ಇನ್ನುಮುಂದೆ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವುದು ಅನಿವಾರ್ಯ ಏಕೆಂದರೆ ನಿರ್ಮಾಣ ಪೂರ್ವದಲ್ಲಿ ಕಾಲ ಮತ್ತು ಹಣ ಎರಡೂ ಸಮಸಮ ಎಂದು ಭಾವಿಸಬೇಕಾದ ಕಾಲವಿದು ಎಂದು ಗಟ್ಟಿಯಾಗಿ ಅವರು ಸಮರ್ಥಿಸಿಕೊಂಡಿದ್ದಾರೆ. ಸ್ಕಾರ್ಸೆಸಿ. ಇದನ್ನೇ ಹಾಲಿವುಡ್ ನ ಕಲಾವಿದರ, ತಂತ್ರಜ್ಞರ ಕಾರ್ಮಿಕ ಸಂಘಟನೆಗಳು ವರ್ಷಗಳ ಕಾಲ ಪ್ರತಿಭಟಿಸಿ ಚಳವಳಿ ನಡೆಸಿದ್ದು ಎಂಬುದನ್ನು ಸ್ಕಾರ್ಸೆಸಿ ಮರೆತರೆ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ತೀವ್ರವಾಗಿ ಕಾಡುತ್ತಿದೆ.
“To be great means is to be greatly misunderstood”
– Ralf Waldo Emerson
ಈ ಮಾತುಗಳು ಚಿತ್ರ ಜಗತ್ತಿನ ಜೀವಂತ ಕಥೆಯಾಗಿ ಇನ್ನೂ ನಮ್ಮೊಂದಿಗಿರುವ ಚಿತ್ರ ನಿರ್ದೇಶಕ ಮಾರ್ಟಿನ್ ಸ್ಕಾರ್ಸೆಸೆಗೆ ಹೆಚ್ಚಾಗಿಯಾ ಅನ್ಯಯವಾಗುತ್ತದೆ ಎಂದು ನನ್ನ ಅನಿಸಿಕೆ. ಹಾಗಾದರೆ ಯಾರು ಮಾರ್ಟಿನ್ ಸ್ಕಾರ್ಸೆಸಿ ? ಕೆಲವು ಚಲನಚಿತ್ರ ಇತಿಹಾಸಕಾರರು, ಸ್ಕಾರ್ಸೆಸಿ ನಶಿಸುವ ಅಂಚಿನಲ್ಲಿರುವ ವಿಶ್ವದ ಅತ್ಯಮೂಲ್ಯ ಚಿತ್ರಗಳನ್ನು ಸಂಗ್ರಹಿಸಿ, ಉಳಿಸಿ, ಪುನಶ್ಚೇತನಗೊಳಿಸಿರುವ ಧ್ಯಾನಸ್ಥ ಕಾರ್ಯ, ಆತ ಅತ್ಯುತ್ತಮ ಚಿತ್ರಗಳನ್ನು ನಿರ್ದೇಶಿಸಿದ್ದಕ್ಕಿಂತ ಮುಖ್ಯವಾದುದು ಎಂದು ಹೇಳುವುದರಲ್ಲಿಯೂ ಅಪಾರವಾದ ಆರ್ಥವಿದೆ. ಸುಮಾರು ನಲವತ್ತು ವರ್ಷಗಳ ಕಾಲ ಈ ಸ್ಕಾರ್ಸೆಸಿ ಚಿತ್ರಗಳನ್ನು ನಿರ್ಮಸಿ, ನಿರ್ದೆಶಿಸಿದರೂ, ಅತ ಕ್ಷಯಿಸುತ್ತಿರುವ ಕಲಾತ್ಮಕ ದೃಶ್ಯ ಮಾಧ್ಯಮವನ್ನು ಉಳಿಸುವ ಧರ್ಮಪ್ರಚಾರಕರಂಥ ಉತ್ಸಾಹ ಬೆಲೆಕಟ್ಟಲಾಗದಂಥದ್ದು ಎಂಬ ಸಂಗತಿಯನ್ನು ಮಾತ್ರ ಯಾರೂ ನಿರಾಕರಿಸಲಾರರು.
ಸ್ಕಾರ್ಸೆಸಿ ಕಂಡುಕೊಂಡ ಸತ್ಯ

1970 ಮತ್ತು 1980 ನಡುವೆ ಸ್ಕಾರ್ಸೆಸಿಗೆ ಒಂದು ಕಾಲದ ಫಿಲಂ ನೆಗೆಟೀವ್ ಗಳು ನಾಶವಾಗುತ್ತಿವೆ ಎಂಬ ಸಂಗತಿಯನ್ನು ಅರ್ಥಮಾಡಿಕೊಂಡರಲ್ಲದೆ, ವಿಶ್ವದ ದೃಶ್ಯ ಸಂಸ್ಕೃತಿಗೆ ಒದಗಿರುವ ಆಪತ್ತನ್ನು ಮನಗಂಡರು. ಈ ವೇಳೆಗೆ ಸಾಕಷ್ಟು ಮೂಕಿ ಚಿತ್ರಗಳ ಮತ್ತೆಂದೂ ದಕ್ಕಲಾರದಂತೆ ನೆಗೆಟೀವ್ ಗಳು ಕಾಣೆಯಾಗಿದ್ದವು. ಅದೇ ರೀತಿ ವರ್ಣ ಚಿತ್ರಗಳ ನೆಗೆಟೀವ್ ಕೂಡ ಇದೇ ಸ್ಥಿತಿ ತಲುಪಿತ್ತು. ಇವುಗಳನ್ನು ರಕ್ಷಿಸದೇ ಹೋದರೆ, ಮುಂದಿನ ಜನಾಂಗಕ್ಕೆ ವಿಶ್ವದ ಚಿತ್ರ ಸಂಸ್ಕೃತಿಯ ಕುರುಹು ಕೂಡ ಉಳಿಯಲಾರದು ಎಂಬ ಸತ್ಯ ಅವರಿಗೆ ಮನವರಿಕೆಯಾಯಿತು. ಈ ಹೊತ್ತಿನಲ್ಲಿ ಸ್ಕಾರ್ಸೆಸಿ ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡತೊಡಗಿದರು, ಅಷ್ಟೇ ಅಲ್ಲ ಇವುಗಳನ್ನು ರಕ್ಷಿಸುವ, ಪುನಶ್ಚೇತನಗೊಳಿಸುವ ಬಗ್ಗೆ ವಿಶ್ವ ಚಿತ್ರರಂಗಕ್ಕೆ ಅರಿವು ಮೂಡಿಸತೊಡಗಿದರು. ಜಗತ್ತಿನ ಅತಿದೊಡ್ಡ ಸ್ಟುಡಿಯೋಗಳು, ಚಿತ್ರ ಭಂಡಾರಗಳು, ಚಿತ್ರಕರ್ತರಿಗೆ ದೃಶ್ಯ ಪರಂಪರೆಯ ಸಾಂಸ್ಕೃತಿಕ ಮೌಲ್ಯದ ಬಗ್ಗೆ ಅರಿವು ಮೂಡಿಸಲಾರಂಭಿಸಿದರು. ಅವುಗಳನ್ನು ವಾಣಿಜ್ಯೋದ್ದೇಶದ ವಸ್ತುಗಳಂತೆ ನೋಡಬಾರದೆಂಬ ಕಿವಿಮಾತನ್ನೂ ಹೇಳಿದರು.
ಸ್ಕಾರ್ಸೆಸಿಯ The Film Foundation
ಇನ್ನೊಬ್ಬರಿಗೆ ಹೇಳಿ ಅರಿವು ಮೂಡಿಸುವ ಮೊದಲು ತಾವೇ ಏನಾದರೂ ಮಾಡಬೇಕೆಂದು ಯೋಚಿಸಿದರು, ತಮ್ಮ ಗೆಳೆಯರಾದ ಸ್ಟೀವೆನ್ ಸ್ಪೀಲ್ಬರ್ಗ, ಫ್ರಾನ್ಸಿಸ್ ಡಿ ಕಪ್ಪೋಲ, ಜಾರ್ಜ್ ಲೂಕಾಸ್, ರಾಬರ್ಟ್ ರೆಡ್ಫೋರ್ಡ್ ಇನ್ನಿತರರ ನೆರವಿನಿಂದ ಫಿಲಂ ಪ್ರತಿಷ್ಠಾನ (The Film Foundation) ಹುಟ್ಟುಹಾಕಿದರು. ಇದರ ಉದ್ದೇಶ; ಸಿನಿಮಾಗಳನ್ನು ಅದು ಕಥಾ ಚಿತ್ರವಿರಲಿ, ಸಾಕ್ಷ್ಯ ಚಿತ್ರವಿರಲಿ, ಕಿರು ಚಿತ್ರವಿರಲಿ ಅವುಗಳನ್ನು ರಕ್ಷಿಸುವುದು. ಚಿತ್ರಕ್ಕೆ ಸಂಬಂಧಿಸಿದ ಯಾವುದೇ ಕಾಗದ ಪತ್ರ, ಚಿತ್ರ ಸಿಕ್ಕರೂ, ಅದನ್ನು ಕಾಪಾಡುವುದು, ಅವುಗಳು ನಾಶದ ಅಂಚಿನಲ್ಲಿದ್ದರೆ, ಅವುಗಳನ್ನು ಪುನಶ್ಚೇತನಗೊಳಿಸುವುದು. ಅಂಥ Classic ಚಿತ್ರಗಳನ್ನು ವೈಜ್ಞಾನಿಕ ಮಾದರಿಯಲ್ಲಿ ಮುಂದಿನ ತಲೆಮಾರಿಗೆ ದಾಟಿಸುವುದು ರಕ್ಷಿಸಿಡುವುದು ಅದರ ಮುಖ್ಯ ಆಶಯವಾಗಿತ್ತು.
ಉಳಿಸುವುದೆಂದರೆ ಕೇವಲ ಡಿಜಟೀಲೀಕರಣವಲ್ಲ
ಈ ಚಿತ್ರಗಳನ್ನು ಉಳಿಸುವುದೆಂದರೆ ಕೇವಲ ಅದರ ಡಿಜಲೀಕರಣವಲ್ಲ. ಉಳಿಸುವ ಕ್ರಿಯೆ ಸಾಮಾನ್ಯವಾದುದೂ ಅಲ್ಲ. ಅದೊಂದು ವೈಜ್ಞಾನಿಕವಾದ ಜೊತೆಗೆ ಸಾಮಾಜಿಕ ಹೊಂದಾಣಿಕೆಯ ಸಮಸ್ಯೆ. ಮೊದಲಿಗೆ ಮಾಡಬೇಕಿರುವುದು ಮೂಲ ಕ್ಯಾಮರಾ ನೆಗೆಟೀವ್ ಹಾಗೂ ಉಳಿದಿರುವ ಅದರ ಪ್ರಿಂಟ್ ಗಳು ಯಾರ ಹತ್ತಿರ ಇವೆ. ಯಾವ ಸ್ಟೂಡಿಯೋದಲ್ಲಿದೆ ಪತ್ತೆ ಮಾಡಬೇಕು. ಇದರಷ್ಟು ಕಷ್ಟದ ಕೆಲಸ ಮತ್ತೊಂದಿಲ್ಲ. ನೆಗೆಟೀವ್ ಮತ್ತು ಪ್ರಿಂಟ್ ಗಳಿಂದ ಯಾವುದೇ ಲಾಭವಿಲ್ಲವೆಂದು ಕೊಂಡಿರುವ ನಿರ್ದೇಶಕರು, ಸ್ಟೂಡಿಯೋದವರು ಅವುಗಳನ್ನು ರದ್ದಿಗೆ ಹಾಕಿರುವ ಸಾಧ್ಯತೆಗಳೇ ಹೆಚ್ಚು. ಹಾಗೆ ದಕ್ಕಿದ ನೆಗೆಟೀವ್ ಮತ್ತು ಪ್ರಿಂಟ್ ಗಳನ್ನು ಫ್ರೇಮ್ ನಿಂದ ಫ್ರೇಮ್ ಗೆ ತಿದ್ದಬೇಕು. ಕಳೆದುಕೊಂಡಿರುವ ಅದರ ಬಣ್ಣವನ್ನು ಪುನಃ ಸರಿಪಡಿಸಬೇಕು. ಅದರ ಮೇಲಿರುವ ಗೆರೆ-ಗೀಚುಗಳನ್ನು ಧೂಳನ್ನು ಅದರ ಅಂಚುಗಳನ್ನು ಸ್ವಚ್ಛಗೊಳಿಸಬೇಕು. ಅದರಲ್ಲಿ ಕಾಣೆಯಾಗಿರುವ footage ಗಳನ್ನು ಇತರ ಮೂಲಗಳಿಂದ ಪುನರ್ ರಚಿಸಬೇಕು. ಹೀಗೆ ಮಾಡುವಾಗ ಅದರ ಮೂಲ sound track ಗೆ ಯಾವುದೇ ರೀತಿಯಲ್ಲಿಯೂ ಧಕ್ಕೆಯಾಗದಂತೆ ಕಾಪಾಡಬೇಕು. ಇವೆಲ್ಲವನ್ನೂ ಮಾಡುವ ತಂತ್ರಜ್ಞರಿಗೆ ತಿಳಿವಳಿಕೆ, ಜ್ಞಾನ ಹಂಚಬೇಕು. ಯಾಕೆ ಇಷ್ಟೆಲ್ಲ ವಿವರಗಳನ್ನು ಹೇಳುತ್ತಿದ್ದೇನೆ ಎಂದರೆ, ಪುಣೆಯಲ್ಲಿರುವ ಚಲನಚಿತ್ರ ಭಂಡಾರ (National Film Archives of India – NFAI) ಕಳೆದ 52 ವರ್ಷಗಳಿಂದ ಇದನ್ನೇ ಧ್ಯಾನದಂತೆ ಮಾಡುತ್ತಿದ್ದರೂ, ನಾವು ಉಳಿಸಿಕೊಂಡಿರುವುದು ತೀರಾ ಕಡಿಮೆ. ಐದು ದಶಕದ ಸಂಸ್ಥೆಯ ಸ್ಥಿತಿಯೇ ಹೀಗಿರಬೇಕಾದರೆ, ಇಷ್ಟು ವರ್ಷವಾದರೂ ಅಸ್ತಿತ್ವಕ್ಕೆ ಬಾರದ ಕರ್ನಾಟಕ ಚಲನಚಿತ್ರ ಭಂಡಾರ 93 ವರ್ಷದ ನಮ್ಮ ಚಿತ್ರ ಪರಂಪರೆಯನ್ನು ಎಷ್ಟರ ಮಟ್ಟಿಗೆ ಉಳಿಸಲು ಸಾಧ್ಯ ಎಂಬುದು ಎಲ್ಲರೂ ಯೋಚಿಸಬೇಕಾದಂಥ ಸಂಗತಿ.

ಸ್ಕಾರ್ಸೆಸಿಯ ವಿಶ್ವ ಸಿನಿಮಾ ಯೋಜನೆ
ಸ್ಕಾರ್ಸೆಸಿ ವಿಶ್ವ ಸಿನಿಮಾಕ್ಕೆ ನೀಡಿದ ಮಹತ್ವದ ಕೊಡುಗೆ 2007ರಲ್ಲಿ ಹುಟ್ಟುಹಾಕಿದ ʼವಿಶ್ವ ಸಿನಿಮಾ ಯೋಜನೆ (World Cinema Project). ಇದರ ಉದ್ದೇಶ ಆರ್ಥಿಕ ಮತ್ತು ತಾಂತ್ರಿಕ ಸಂಪನ್ಮೂಲಗಳ ಕೊರತೆಯಿಂದ ಬಳಲುತ್ತಿರುವ ಜಗತ್ತಿನ ಸರ್ವ ಶ್ರೇಷ್ಠ ಚಿತ್ರಗಳನ್ನು ಉಳಿಸುವುದು, ಸಿನಿಮಾ ಪರಂಪರೆಯನ್ನು ಕಾಪಾಡುವುದು ಮತ್ತು ಅವುಗಳನ್ನು ಮುಂದಿನ ತಲೆಮಾರಿಗಾಗಿ ವರ್ಗಾಯಿಸುವುದು. ಸ್ಕಾರ್ಸೆಸಿ ತನ್ನ ಯೋಜನೆಯನ್ನು ಕೇವಲ ಹಾಲಿವುಡ್ ಮತ್ತು ಯೂರೋಪಿಯನ್ನ ರಾಷ್ಟ್ರಗಳಿಗೆ ಮಾತ್ರ ಸೀಮಿತಗೊಳಿಸಲಿಲ್ಲ. ಏಷಿಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಾ, ಮಧ್ಯ ಪ್ರಾಚ್ಯ ಹಾಗೂ ಹೆಸರೇ ಕೇಳದಂಥ ದೇಶಗಳ ಅತ್ಯುತ್ತಮ classic ಚಿತ್ರಗಳ ರಕ್ಷಣೆಗೂ ಅದನ್ನು ವಿಸ್ತರಿಸಿದ್ದು ಅವರ ಹಿರಿತನ. ಈ ಸ್ಕಾರ್ಸೆಸಿ ಇದುವರೆಗೆ 30 ರಾಷ್ಟ್ರಗಳ ಸುಮಾರು 70ಕ್ಕೂ ಹೆಚ್ಚು ಚಿತ್ರಗಳನ್ನು ರಕ್ಷಿಸಿ, ಉಳಿಸಿ ವಿಶ್ವ ಚಲನಚಿತ್ರ ಜಗತ್ತಿಗೆ ತನ್ನ ಮಹತ್ವದ ಕೊಡುಗೆ ನೀಡಿದ್ದಾರೆ. ಈ ಚಿತ್ರಗಳು ಈಗೀಗ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ಆ ಕಾಲದ ದೃಶ್ಯ ಚಿಂತನೆಯ ತಿಳಿವಳಿಕೆಯನ್ನು ಈ ಕಾಲದ ಚಿತ್ರಕರ್ತರಿಗೆ ಚಿತ್ರಪ್ರಿಯರಿಗೆ, ವಿಮರ್ಶಕರಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ ಒಂದು ವಿಶ್ವವಿದ್ಯಾಲಯದಂಥ ವಾತಾವರಣ ಕಲ್ಪಿಸಿದೆ ಎಂದರೆ ಅತಿಶಯೋಕ್ತಿ ಏನಲ್ಲ.
AI ವಿವಾದದ ಸುಳಿಯಲ್ಲಿ ಸ್ಕಾರ್ಸೆಸಿ
ಇಷ್ಟೆಲ್ಲ ಮಾಡಿರುವ ಸ್ಕಾರ್ಸೆಸಿ ಇದ್ದಕ್ಕಿದ್ದಂತೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಸ್ಕಾರ್ಸೆಸಿ ಚಿತ್ರಂಗವನ್ನು ಕೃತಕ ಬುದ್ಧಿಮತ್ತೆಗೆ(Artificial Intelligence) ಒತ್ತೆ ಇಡುತ್ತಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. ತಮ್ಮ ಕಥಾ ಚಿತ್ರಗಳಿಗಾಗಿ AI ಆಧರಿತ ಕಥಾ ಫಲಕಗಳಿಗೆ (AI Story Board) ಬಳಸುತ್ತಿದ್ದಾರೆ ಎಂದು ಇಲ್ಲಿನ New York Times ವರದಿ ಮಾಡಿ, ಸ್ಕಾರ್ಸೆಸಿಯನ್ನು ಕಟುವಾಗಿ ಟೀಕಿಸಿದೆ. ಇದಕ್ಕೆ ಉತ್ತರಿಸಿರುವ ಸ್ಕಾರ್ಸೆಸಿ ಇಂದಿನ ಕಾಲಕ್ಕೆ AI ಅಗತ್ಯ ಮತ್ತು ಬಂಡವಾಳ ಹೂಡಿಕೆಯನ್ನು ಕಡಿತಗೊಳಿಸುವ ಕಾರಣವನ್ನೂ ನೀಡಿದ್ದಾರೆ. ಸ್ಕಾರ್ಸೆಸಿ ಇದನ್ನು (Creatively freeing) ನಡೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಈ ಅವರ ನಡೆ ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನು ಎತ್ತುವಂತೆ ಮಾಡಿದೆ. ಸ್ಕಾರ್ಸೆಸಿ ಇದನ್ನು (Creatively freeing) ನಡೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಸದ್ದಿಲ್ಲದಂತೆ ಸ್ಕಾರ್ಸೆಸಿ ಜರ್ಮನಿಯ AI Start Up Black Forest Labs ಜೊತೆ ಕೈಜೋಡಿಸಿದ್ದಾರೆ ಎಂದು New York Times ವರದಿ ಮಾಡಿದೆ. ಈ Black Forest Labs ಚಿತ್ರ ಸೃಷ್ಟಿಕರ್ತರ (Creators of popular Flux Image generators) ಕೆಲಸವನ್ನು ಮಾಡುವಲ್ಲಿ ನಿರತವಾದ ಸಂಸ್ಥೆ ̤ ಈ ಸಂಸ್ಥೆಯು ಕ್ಷಣಮಾತ್ರದಲ್ಲಿ ದೃಶ್ಯದ ಚಿತ್ರಪಟಲ, ಅಥವಾ ಚಿತ್ರ ಫಲಕವನ್ನು ಸಿದ್ಧಗೊಳಿಸಿಕೊಡುತ್ತದೆ. ಇದನ್ನು ಸ್ಕಾರ್ಸೆಸಿ ಸಮರ್ಥಿಸಿಕೊಂಡಿರುವ ರೀತಿ ಕೂಡ ಆಶ್ಚರ್ಯ ಹುಟ್ಟಿಸುತ್ತದೆ. ಸುಮಾರು 70 ವರ್ಷಗಳಿಂದ ಕೈಗಳಿಂದ ರಚಿಸಿದ ಚಿತ್ರ ಫಲಕಗಳನ್ನು ಚಿತ್ರ ತಂಡಕ್ಕೆ ಅತಿ ಕಡಿಮೆ ಕಾಲಾವಧಿಯಲ್ಲಿ ಒದಗಿಸುತ್ತದೆ. AI ಬಳಕೆಯಿಂದ Creative Freeing ಪ್ರಕ್ರಿಯೆಗೆ ಚಾಲನೆ ಸಿಕ್ಕುತ್ತದೆ. ಸಿನಿಮಾ ಇನ್ನುಮುಂದೆ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವುದು ಅನಿವಾರ್ಯ ಏಕೆಂದರೆ ನಿರ್ಮಾಣ ಪೂರ್ವದಲ್ಲಿ ಕಾಲ ಮತ್ತು ಹಣ ಎರಡೂ ಸಮಸಮ ಎಂದು ಭಾವಿಸಬೇಕಾದ ಕಾಲವಿದು ಎಂದು ಗಟ್ಟಿಯಾಗಿ ಅವರು ಸಮರ್ಥಿಸಿಕೊಂಡಿದ್ದಾರೆ. ಸ್ಕಾರ್ಸೆಸಿ. ಇದನ್ನೇ ಹಾಲಿವುಡ್ ನ ಕಲಾವಿದರ, ತಂತ್ರಜ್ಞರ ಕಾರ್ಮಿಕ ಸಂಘಟನೆಗಳು ವರ್ಷಗಳ ಕಾಲ ಪ್ರತಿಭಟಿಸಿ ಚಳವಳಿ ನಡೆಸಿದ್ದು ಎಂಬುದನ್ನು ಸ್ಕಾರ್ಸೆಸಿ ಮರೆತರೆ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ತೀವ್ರವಾಗಿ ಕಾಡುತ್ತಿದೆ.
ಸ್ಕಾರ್ಸೆಸಿ ನಡೆ, ಚಿತ್ರೋದ್ಯಮದ ಆಕ್ರೋಶ
ಸ್ಕಾರ್ಸೆಸಿಯ ಈ ನಡೆಗೆ ಇಡೀ ಮನೋರಂಜನಾ ಉದ್ಯಮ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದೆ. ಸ್ಕಾರ್ಸೆಸಿಯ ಈ ನಡೆ ಸೃಜನಶೀಲ ಸಮುದಾಯಕ್ಕೆ ಮಾಡುತ್ತಿರುವ ತೀವ್ರತರ ದ್ರೋಹ ಎಂದು ಪ್ರತಿಕ್ರಿಯಿಸಿದೆ. 2023ರಲ್ಲಿ ನಡೆದ ಹಾಲಿವುಡ್ ಕಾರ್ಮಿಕರ ಮಹಾನ್ ಚಳವಳಿ AI ಆಗಮನದಿಂದ ಅಗುವ ಪರಿಣಾಮಳ ಬಗ್ಗೆ ಸಾಕಷ್ಟು ಮನವರಿಕೆ ಮಾಡಿಕೊಟ್ಟಿತ್ತು. ಅದರಲ್ಲಿ AI ನ ಪರಿಣಾಮವಾಗಿ ಚಿತ್ರೋದ್ಯಮ ಮತ್ತು streaming platforms ಮೇಲೆ ಆಗಬಹುದಾದ ಪರಿಣಾಮ ಮತ್ತು ಕಾರ್ಮಿಕರ ವರ್ಗದ ಮೇಲಾಗುವ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ಎಚ್ಚರಿಸಿತು. ಮೊದಲು ತಮ್ಮ ಭಯವನ್ನು ಬಿಚ್ಚಿಟ್ಟವರು ಚಿತ್ರಕತೆಗಳ ಬರಹಗಾರರು. AI ಸ್ವತಃ ಚಿತ್ರಕಥೆಗಳನ್ನು ರಚಿಸುವುದಾದರೆ, ಸೃಜನಶೀಲತೆಗೇನು ಬೆಲೆ? ಎಂಬ ಪ್ರಶ್ನೆಯನ್ನು ಎತ್ತಿದರು. Members of the Writers Guild of America (WGA) ಇನ್ನು ಮುಂದೆ ತಾವು ಸೃಷ್ಟಿಸುವ ಕಥೆಗಳ ಬಗ್ಗೆ ರಕ್ಷಣೆ ಕೇಳಿದ್ದರು. ಹಾಗಾಗಿ ಬರಹಗಾರರ ಮತ್ತು ಲೇಖಕರು ತಾವು ಸೃಜಿಸಿದ ಕಥೆ, ಚಿತ್ರಕಥೆಗಳಿಗೆ ರಕ್ಷಣೆ ಕೇಳಿದ್ದಲ್ಲದೆ. AI ಸೃಷ್ಟಿಸಿದ ಕಥೆ ಚಿತ್ರಕಥೆಗಳಿಗೆ ತಮ್ಮ ಹೆಸರು ಹಾಕಿಕೊಳ್ಳುವಂತಿಲ್ಲ. ಹಾಗೆಯೇ ಕಲಾವಿದರು ತಮ್ಮ ಹಕ್ಕುಗಳ ಬಗ್ಗೆ ವಾದ ಮಂಡಿಸಿದರು. ತಮ್ಮನ್ನು ಹೋಲುವ ಚಿತ್ರಗಳನ್ನು ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೆ ಬಳಸಿಕೊಳ್ಳುವಂತಿಲ್ಲ ಎಂಬ ಷರತ್ತು ವಿಧಿಸಿದರು. SAG (Screen Actors Guild) ಮತ್ತು AFRA (American Federation of Radio and Television Artists ) ಎಂಬ ಕಾರ್ಮಿಕರ ಮತ್ತು ಕಲಾವಿದರ ಸಂಘಟನೆಗಳು ಈ ಪರವಾಗಿವಾದಿಸಿ ನ್ಯಾಯಕ್ಕಾಗಿ ಹೋರಾಟ ನಡೆಸಿದವು. ಈ ಹೋರಾಟದಲ್ಲಿ ಸುಮಾರು 1,70,000 ಕಲಾವಿದರು, ಕಾರ್ಮಿಕರು ಭಾಗವಹಿಸಿ, ಹಾಲಿವುಡ್ ನ ಚಿತ್ರ ನಿರ್ಮಾಣವನ್ನು ಕೆಲವು ತಿಂಗಳುಗಳ ಕಾಲ ತಡೆಹಿಡಿದರು. ಹಲವು ತಿಂಗಳ ಕಾಲದ ಮಾತುಕತೆಯ ನಂತರ ಹಾಲಿವುಡ್ ನ ನಿರ್ಮಾಪಕರು, ಈ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆ ಅವರ ಚಳವಳಿ ನಿಂತಿತು. ಇದರಿಂದ ಯಾವ ಪರಿಣಾಮವಾಯಿತೋ ಇಲ್ಲವೋ ಗೊತ್ತಿಲ್ಲ. ಆದರೆ, ಇದರಿಂದ AI ನಿಂದ ಬರಹಗಾರರಿಗೆ ಮತ್ತು ಕಲಾವಿದರ ಮೇಲೆ ಪರಿಣಾಮದ ಮೇಲೆ ಸ್ವಲ್ಪ ಮಟ್ಟಿಗೆ ನಿಯಂತ್ರಣ ದೊರಕಿತು.
AI ಜಾರಿಗೆ ತರಲು ಸಮರ್ಥನೆಗಳು
ಆದರೆ, ಒಂದು ವರದಿಯ ಪ್ರಕಾರ ಅವರಿಗೆ ಇದುವರೆಗೆ ದಕ್ಕುತ್ತಿದ್ದ ಅವಕಾಶಗಳು ಕಡಿಮೆಯಾಗಿರುವುದಂತೂ ಸತ್ಯ. ಮುಂದೆ ಇದರ ಪರಿಣಾಮ ನಿಧಾನವಾಗಿ ಮನೋರಂಜನಾ ಜಗತ್ತನ್ನು ನಿಧಾನವಾಗಿ ಆಪೋಷನ ತೆಗೆದುಕೊಳ್ಳುವುದನ್ನು ತಡೆಯುವುದು ಕಷ್ಟ ಎಂದು ಕೆಲವು ಸ್ವಯಂ ಸೇವಾ ಸಂಸ್ಥೆಗಳು ಮಾಡಿರುವ ಅಧ್ಯಯನದಿಂದ ತಿಳಿದುಬರುತ್ತದೆ. ಆದರೆ ಈ ಬಗ್ಗೆ ಯಾರೂ ಇದರ ಬಗ್ಗೆ ತಲೆಕೆಡೆಸಿಕೊಂಡಿರುವಂತೆ ಕಾಣಿಸುವುದಿಲ್ಲ. ಈಗ ಸ್ಕಾರ್ಸೆಸಿ ಮಾಡಿಕೊಂಡಿರುವ ಒಪ್ಪಂದದಿಂದ ವಿಶ್ವದ ಮನರಂಜನಾ ಜಗತ್ತು ಮತ್ತೊಮ್ಮೆ ಮುನಿದೇಳುವಂತೆ ಮಾಡಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಪರಿಕಲ್ಪನೆ ಕಲಾವಿದ ಕಾರ್ಲಾ ಓರತಿಜ್ ದೃಶ್ಯ ಫಲಕಗಳನ್ನು ಸಿದ್ಧಪಡಿಸುವ ಕಲಾವಿದರು ಸ್ಕಾರ್ಸೆಸಿಯ ಈ ʼಸಾಹಸʼದಿಂದಾಗಿ ನಿರುದ್ಯೋಗಿಗಳಾಗುತ್ತಾರೆ ನೆಟ್ ಫ್ಲಿಕ್ಸ್ ನ ನಿರ್ದೇಶಕ ಸ್ಯಾಮ್ಯುಯಲ್ ದಿಯತ್ AI ಕೆಲವು ಕ್ಷಣಗಳಲ್ಲಿ ಕರಡು ದೃಶ್ಯ ಫಲಕಗಳನ್ನು ಸಿದ್ಧಪಡಿಸುವುದರಿಂದ ಕ್ರಿಯಾಶೀಲ ಕುಶಲತೆ ಮಾಯವಾಗುತ್ತದೆ ಎನ್ನುತ್ತಾರೆ. ಹಾಗಾಗಿ ಕದ್ದ ಕಲೆಯಿಂದ AI ಸಿದ್ಧಪಡಿಸುವ ದೃಶ್ಯಫಲಕಗಳು ಅರ್ಥಹೀನವಾಗುತ್ತವೆ. ಸ್ಕಾರ್ಸೆಸಿ ಆರ್ಥಿಕ ಕಾರಣಕ್ಕಾಗಿ ತಾನು ಇದುವರೆಗೆ ನಂಬಿದ್ದ ಮೌಲ್ಯಗಳಿಗೆ ತಿಲಾಂಜಲಿ ಇತ್ತಿದ್ದಾರೆ ಎಂದು ಸ್ವತಂತ್ರ ಚಿತ್ರಕರ್ತ ಬೂಟ್ಸ್ ರೈಲೇ ಕಟುವಾಗಿ ಟೀಕಿಸಿದ್ದಾರೆ. ಈ ವಿವಾದದಿಂದಾಗಿ ಹಾಲಿವುಡ್ ಈಗ ಇಬ್ಭಾಗವಾಗಿದೆ.
ಆದರೆ ಸ್ಕಾರ್ಸೆಸಿ AI ದೃಶ್ಯ ಫಲಕಗಳನ್ನು ಚಿತ್ರದಲ್ಲಿ ಬಳಸುತ್ತಾರೋ ಇಲ್ಲವೋ ಎಂಬುದನ್ನು ಅವರು ಖಚಿತಪಡಿಸುತ್ತಿಲ್ಲ. “ಸದ್ಯಕ್ಕೆ ನಾನು AI ದೃಶ್ಯ ಫಲಕಗಳನ್ನು ಪ್ರಯೋಗಾತ್ಮವಾಗಿ ಬಳಸುತ್ತಿದ್ದೇನೆ. ಅದರಿಂದ ಸಮಯ ಉಳಿತಾಯವಾಗುವುದಂತೂ ಖಚಿತ. ಆದರೆ ಅದರ ಸೃಜನಶೀಲ ಶಕ್ತಿಗೂ, ಮಾನವನ ಸೃಜನಶೀಲ ಶಕ್ತಿಗೆ ಸವಾಲಾಗುವುದೇ? ಇಲ್ಲವೇ? ಎಂಬುದನ್ನು ಖಚಿತಪಡಿಸಿಕೊಳ್ಳಲು ನನಗೂ ಕಾಲಾವಕಾಶ ಬೇಕು ಎಂದಿದ್ದಾರೆ. ಆದರೆ ಇದೆಲ್ಲ ಒಂದು ನೆವ. AI ಅನ್ನು ಜಾರಿಗೆ ತರಲು ನಡೆಸುತ್ತಿರುವ ತಂತ್ರಗಳಿಗೆ ಸಮರ್ಥನೆ ಎಂದು ಕೆಲವು ತಜ್ಞರು ಟೀಕಿಸಿದ್ದಾರೆ.
ಯಾರು ಏನೇ ಹೇಳಿದರೂ, ಯಾರು ಯಾವುದೇ ರೀತಿಯಲ್ಲಿ ಸಮರ್ಥನೆ ಮಾಡಿಕೊಂಡರೂ, ಸ್ಕಾರ್ಸೆಸಿಯಿಂದ ಈ ನಡೆಯನ್ನು ಜಗತ್ತು ನಿರೀಕ್ಷಿಸಿರಲಿಲ್ಲ. ಇದೊಂದು ರೀತಿಯಲ್ಲಿ, ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಿಂದ ಕಿತ್ತುಕೊಳ್ಳುವ ಬಂಡವಾಳಶಾಹಿ ಚಾಣಕ್ಷತೆ ಎನ್ನದೆ ಬೇರೆ ದಾರಿಯೇ ಇಲ್ಲ. ಹೀಗಾದರೆ, ಮುಂದೆ ಭಾರತದಂಥ ತೃತೀಯ ರಾಷ್ಟ್ರಗಳಲ್ಲಿನ ಸಿನಿಮಾದ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಯೋಚಿಸಿದರೆ ಆತಂಕವಾಗುವುದಂತೂ ಖಚಿತ.

ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.




