ಹಾಸನ ಮಣ್ಣಿನ ಹೆಣ್ಣು ದನಿಗಳು | ಜಿಲ್ಲೆಯ ಗಮಕ ಲೋಕದ ತಾರೆಯರು

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

ಶ್ರಾವಣ ಬಂತೆಂದರೆ ಸಾಕು ಹಬ್ಬ, ಸಂಭ್ರಮ. ಅಜ್ಜಿಯ ಜೊತೆ ದೇವಸ್ಥಾನಗಳಲ್ಲಿ ಸಂಗೀತ, ಹರಿಕಥೆ ಹಾಗೂ ಅನೇಕ ಭಕ್ತಿರಸದ ಕಾರ್ಯಕ್ರಮಗಳನ್ನು ಆಸ್ವಾದಿಸುವುದು. ‘ನಾಳೆ ಮತ್ತೇನು ಕಾರ್ಯಕ್ರಮ’ ಎಂದು ಅಜ್ಜಿಯನ್ನು ಕೇಳುವುದು, ಬೇಗ ಬೇಗ ಶಾಲೆಯಲ್ಲಿ ಕೊಟ್ಟ ಹೋಂವರ್ಕ್ ಮುಗಿಸಿ ಅಜ್ಜಿಗೆ ‘ನಾನೂ ಬರ್ತೀನಿ’ ಎಂದು ದಂಬಾಲು ಬೀಳುವುದು. ನನಗೆ ಗಮಕ ಎಂಬ ಕಲೆಯ ಬಗ್ಗೆ ಅರಿವು ಬಂದಿದ್ದು ಬಾಲ್ಯದ ಈ ಶ್ರಾವಣ ಸಂಭ್ರಮದ ದಿನಗಳಲ್ಲಿಯೇ. ‘ಅಜ್ಜಿ ನಾಳೆ ಚೆನ್ನಕೇಶವನ ದೇವಸ್ಥಾನದಲ್ಲಿ ಏನು ಕಾರ್ಯಕ್ರಮ’ ಅಂತ ಕೇಳುವಾಗ ಅಜ್ಜಿ ಹೇಳಿದ್ದು- ‘ಗಮಕ ವಾಚನ ಇದೆ ಪುಟ್ಟಿ. ಪಟ್ಟಾಭಿಶಾಸ್ತ್ರಿಗಳು ಕುಮಾರವ್ಯಾಸನ ಕಾವ್ಯವನ್ನು ವಾಚಿಸಿ ಅರ್ಥ ಹೇಳ್ತಾರೆ’ ಅಂತ. ‘ನಾನಂತೂ ಆ ಹಳೆಗನ್ನಡ ಪದ್ಯಗಳನ್ನ ಕೇಳೋಕೆ ಬರಲ್ಲಪ್ಪ’ ಅಂತ ತಂಗಿ ಮೊದಲೇ ಘೋಷಿಸಿಬಿಟ್ಟಳು. ನನಗೋ ಹಳೆಗನ್ನಡ ಕಬ್ಬಿಣದ ಕಡಲೆ ಎನ್ನಿಸುವ ಹೈಸ್ಕೂಲ್ ದಿನಗಳವು, ನಾನು ಹೋಗಲೇಬೇಕು, ಹೀಗಾದರೂ ಹಳೆಗನ್ನಡ ಸುಲಭವಾಗಿಸಿಕೊಳ್ಳುವ ಎಂಬ ಚಿಕ್ಕ ಆಸೆ. ಪಟ್ಟಾಭಿಶಾಸ್ತ್ರಿಗಳು ಕುಮಾರವ್ಯಾಸನ ಕಾವ್ಯವನ್ನು ರಾಗಬದ್ಧವಾಗಿ ಹಾಡಿ ವಿವರಿಸಿದಾಗ ನನಗನಿಸಿದ್ದು ನಮ್ಮ ಹಳೆಗನ್ನಡದ ಸಾಹಿತ್ಯ ಎಷ್ಟು ಶ್ರೀಮಂತ ಹಾಗೂ ಆಗಿನ ಕವಿಗಳು ಅದ್ಭುತ ಪ್ರತಿಭಾವಂತರು ಎಂದು.

- Advertisement -

ಗಮಕ ಎಂದರೆ ಪದ್ಯ ಮತ್ತು ಚಂಪೂ ಕಾವ್ಯಗಳನ್ನು ರಾಗಬದ್ಧವಾಗಿ, ಭಾವ ಮತ್ತು ಅರ್ಥಕ್ಕೆ ಒತ್ತುಕೊಟ್ಟು ಹಾಡುವ ಒಂದು ವಿಶಿಷ್ಟ ಕಲಾ ಪ್ರಕಾರ. ಇದರಲ್ಲಿ ಸಂಗೀತದ ರಾಗಗಳನ್ನು ಬಳಸಿದರೂ ಕಾವ್ಯದ ಭಾವ, ನವರಸಗಳು ಮತ್ತು ಛಂದಸ್ಸು ಕೆಡದಂತೆ ಕಾವ್ಯವಚನ ನಡೆಯುತ್ತದೆ. ಇದನ್ನು ‘ಗಮಕ ಕಲೆ’ ಅಥವಾ ‘ಕಾವ್ಯ ವಾಚನ’ ಎಂದೂ ಕರೆಯುತ್ತಾರೆ. ಗಮಕದ ಮುಖ್ಯ ಅಂಶಗಳೆಂದರೆ ರಾಗಬದ್ಧತೆ, ಸಾಹಿತ್ಯದ ಹಾಗೂ ಕಾವ್ಯರಸದ ಅನುಭೂತಿ ಮತ್ತು ಕಾವ್ಯಕ್ಕೆ ಸೂಕ್ತವಾದ ರಾಗಗಳನ್ನು ಅನ್ವಯಿಸಿ ಹಾಡಲಾಗುತ್ತದೆ. ಆದರೆ ಸಂಗೀತಕ್ಕಿಂತ ಕಾವ್ಯಕ್ಕೆ ಪ್ರಾಧಾನ್ಯತೆ. ಕವಿ ರಚಿಸಿರುವ ಸಾಹಿತ್ಯದ ಭಾವ ಮತ್ತು ನವರಸಗಳು ಪ್ರೇಕ್ಷಕರಿಗೆ ತಲುಪುವಂತೆ ವಾಚನ ಮಾಡಲಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಇದನ್ನು ಓದಿದ್ದೀರಾ?: ಹಲವು ಮೊದಲುಗಳ ಅನನ್ಯ ರಂಗ ಭರವಸೆ- ಶ್ವೇತಾ ಎಚ್.ಕೆ.

ಸೂಕ್ತವಾದ ರಾಗಬದ್ಧ ಸಂಗೀತದ ಮೂಲಕ ಕವಿ ನಿಗದಿಪಡಿಸಿದ ಕಾಯದ ಛಂದಸ್ಸನ್ನು ಗಾಯಕರು ಪ್ರಸ್ತುತಪಡಿಸುತ್ತಾರೆ. ಕಾವ್ಯದ ವ್ಯಾಖ್ಯಾನ, ಗಮಕ ಕಲೆಯ ಪ್ರಧಾನ ಅಂಶ. ಗಮಕದ ಜೊತೆಗೆ, ಕಾವ್ಯದ ಅರ್ಥವನ್ನು ವಿವರಿಸುವ ‘ವ್ಯಾಖ್ಯಾನ’ವೂ ಇರುತ್ತದೆ. ಗಮಕವನ್ನು ಹಾಡಿ ವ್ಯಾಖ್ಯಾನದ ಮೂಲಕ ಕವಿಯ ಸಾಹಿತ್ಯವನ್ನು ಶೋತೃಗಳಿಗೆ ಅರ್ಥೈಸಿ ಹೇಳುವ ಕಲಾವಿದರನ್ನು ‘ಗಮಕಿ’ ಎನ್ನುತ್ತಾರೆ. ಸರಳವಾಗಿ ಹೇಳುವುದಾದರೆ, ಕಾವ್ಯಗಳನ್ನು ಸುಂದರವಾದ ಧಾಟಿಯಲ್ಲಿ, ಅರ್ಥಪೂರ್ಣವಾಗಿ ಹೇಳುವ ಕರ್ನಾಟಕದ ಅನನ್ಯ ಕಲೆ. ಹಳೆಗನ್ನಡದ ರಸಭರಿತ ಕಾವ್ಯಗಳು ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವುದು ಕಷ್ಟ. ಅಂತಹವರಿಗೆ ಗಮಕ ಕಲೆಯು ಪ್ರಾಚೀನ ಸಾಹಿತ್ಯ, ಹಳೆಗನ್ನಡದ ಅನೇಕ ಕಾವ್ಯಗಳನ್ನು ಆಸ್ವಾದಿಸುವ, ಸುಲಭವಾಗಿ ಅರ್ಥ ಮಾಡಿಕೊಳ್ಳಲು ಒಂದು ಅದ್ಭುತ ಮಾಧ್ಯಮ ಅಂತಲೇ ಹೇಳಬಹುದು. ಎಲ್ಲಾ ಕಲಾ ಕ್ಷೇತ್ರಗಳಂತೆ ಮೊದಲಿನಲ್ಲಿ ಗಮಕ ಕಲಾವಿದರಲ್ಲಿ ಪುರುಷರದೇ ಪ್ರಾಧಾನ್ಯತೆ ಇತ್ತು. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಸಾಕಷ್ಟು ಸಂಖೆಯಲ್ಲಿ ಗಮಕ ಕಲಾ ಸಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗಮಕ ಕ್ಷೇತ್ರದಲ್ಲಿ ಅನೇಕ ನವೀನ ಪ್ರಯೋಗಗಳ ಮೂಲಕ ಹೆಸರನ್ನು ಸಹ ಗಳಿಸಿದ್ದಾರೆ.

ಗಮಕ ಕಲೆಗೆ ಹಾಸನ ಜಿಲ್ಲೆ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದೆ. ಅದರಲ್ಲಿ ಹಳೆಯ ಬೇರುಗಳೆಂದರೆ- ಎಂ.ಎಸ್.ಜಯಲಕ್ಷ್ಮಮ್ಮ, ಹಾ.ಸು.ಗೋಪಾಲಕೃಷ್ಣ, ಇಂದಿರಾ ವೆಂಕಟೇಶ್, ಕೆ.ಜಯಮ್ಮ, ಆರ್.ಎಸ್.ಜಯಲಕ್ಷ್ಮಮ್ಮ, ಶಾರದಮ್ಮ, ಬಾಳಗಂಚಿಯ ನಂಜುಂಡಯ್ಯ, ಬಸವಾಪಟ್ಟಣದ ಬಿ.ಎಸ್.ಎಸ್.ಕೌಶಿಕ್, ಅಗ್ರಹಾರದ ಗೌರಮ್ಮ ನಾಗರಾಜ್, ಕಣಕಟ್ಟೆಯ ಗಂಗಮ್ಮ ಕೇಶವಮೂರ್ತಿ, ಸೀತಾಲಕ್ಷ್ಮಿ, ಎ.ಎನ್.ಶಾಂತಾ, ಎಚ್.ಕೆ.ನಾಗಮ್ಮ, ಬಿ.ಆರ್.ಸಾವಿತ್ರಮ್ಮ, ಚನ್ನರಾಯಪಟ್ಟಣದ ಶ್ರೀ ವೀರಭದ್ರಶೆಟ್ಟಿ, ಜಾವಗಲ್ ಜೆ.ಕೆ ನರಸಿಂಹಸ್ವಾಮಿ, ಕಣಕಟ್ಟೆಯ ಕೆ.ಎಲ್.ನಾರಾಯಣಸ್ವಾಮಿ, ಬಾಣಾವರದ ಲಲಿತಾ ನಂಜುಂಡಯ್ಯ, ಬೇಲೂರಿನ ಶ್ರೀಮತಿ ವನಮಾಲಾ, ಹೊಳೆನರಸೀಪುರದ ಪ್ರಿಯದರ್ಶಿನಿ ಅಯ್ಯಂಗಾರ್, ನಾಗಮಣಿ ವೆಂಕಟೇಶಮೂರ್ತಿ, ಎಚ್.ಪಿ.ಜಯಲಕ್ಷ್ಮಿ, ಎಚ್.ಎ.ವಿಜಯಲಕ್ಷ್ಮಿ, ಹಾಸನದ ರುಕ್ಮಿಣಿ ನಾಗೇಂದ್ರ, ವಸಂತಲಕ್ಷ್ಮಿ… ಮುಂತಾದವರು. ಇದರಲ್ಲಿ ಜಿಲ್ಲೆಯಾದ್ಯಂತ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುತ್ತಾ ಬಂದಿರುವುದು ಆಶಾದಾಯಕವಾದ ಅಂಶ. ಹಾಗೂ ಇತ್ತೀಚಿನವರಲ್ಲಿ ಗಮಕ ಕಲಾಶ್ರೀ ಎಂದು ಕರ್ನಾಟಕ ಸರ್ಕಾರದಿಂದ ಬಿರುದು ಪಡೆದಿರುವ ಗಣೇಶ ಉಡುಪ ಪ್ರಮುಖರು. ಇವರಲ್ಲದೆ ನೂರಾರು ಗಮಕಿಗಳು ಹಾಸನ ಜಿಲ್ಲೆಯಲ್ಲಿ ಇದ್ದಾರೆ. ಇವರಲ್ಲಿ ಕೆಲವರು ವಯಸ್ಸು ಮಾಗಿ ಕಾಲಗರ್ಭ ಸೇರಿದ್ದಾರೆ.

ಇದನ್ನು ಓದಿದ್ದೀರಾ?: ಜಿಲ್ಲಾ ಲೇಖಕಿಯರ ಬಳಗ ನಡೆದು ಬಂದ ಹಾದಿ

ಪ್ರತಿ ಕಲಾ ಪ್ರಕಾರದಲ್ಲಿಯೂ ನಾವೀನ್ಯತೆ, ಪ್ರಯೋಗಶೀಲತೆ ಆ ಕಲೆಯನ್ನು ಜೀವಂತವಾಗಿರಿಸುವಲ್ಲಿ ಹಾಗೂ ಆ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗಮಕ ಕ್ಷೇತ್ರವು ಸಹ ಅನೇಕ ನವೀನ ಪ್ರಯೋಗಗಳನ್ನು ಮಾಡುವುದರ ಮೂಲಕ ಗಮಕ ಕಲೆಯನ್ನು ಮತ್ತಷ್ಟು ಆಕರ್ಷಕಗೊಳಿಸಿ ಜನಸಾಮಾನ್ಯರಿಗೆ ಮತ್ತಷ್ಟು ಸನಿಹ ಬಂದಿದೆ. ಆದಿಯಲ್ಲಿ ಗಮಕ ಗಾಯಕರು ಕಾವ್ಯವನ್ನು ರಾಗಬದ್ಧವಾಗಿ ಸಂಗೀತದ ಮೂಲಕ ಪ್ರಸ್ತುತ ಪಡಿಸಿದರೆ, ಮತ್ತೋರ್ವರು ಅದರ ವಿವರಣೆ ನೀಡುತ್ತಿದ್ದರು. ಈ ಪ್ರಕಾರ ಕೆಲವೊಮ್ಮೆ ಸಾಮಾನ್ಯರಲ್ಲಿ ಏಕತಾನತೆ ಕಾಡಿ ಕೊಂಚ ಬೇಸರ ಮೂಡಿಸುವ ಹಾಗೆ ಆಗುತ್ತಿತ್ತು.

ಈಗ ಗಮಕ ಕಲಾಕ್ಷೇತ್ರದಲ್ಲಿ ಅನೇಕ ಪ್ರಯೋಗಗಳು ಗಮಕ ಕಲೆಯನ್ನು ನಾವೀನ್ಯಗೊಳಿಸಿವೆ ಹಾಗೂ ಕಾರ್ಯಕ್ರಮವನ್ನು ವೈಶಿಷ್ಟ್ಯಗೊಳಿಸುವಲ್ಲಿ ಯಶಸ್ವಿಯಾಗಿವೆ. ಗಮಕ ಕಲೆ ಈಗ ಬರಿ ಕಾವ್ಯ ವಾಚನಕಷ್ಟೇ ಸೀಮಿತವಾಗದೆ ಗಮಕ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ನೃತ್ಯದ ಮೂಲಕ ಗಮಕವನ್ನು ಪ್ರಸ್ತುತ ಪಡಿಸುವಿಕೆ, ಅಭಿನಯದ ಮೂಲಕ ಕಾವ್ಯದಲ್ಲಿ ಬರುವ ಸನ್ನಿವೇಶವನ್ನು ಕಟ್ಟಿಕೊಡುವುದು, ಅಷ್ಟೇ ಅಲ್ಲದೆ ರಂಗಕಲಾವಿದರ ಕಾವ್ಯಾಭಿನಯದ ಪ್ರಯೋಗಗಳು ಗಮಕ ಕಲೆಯ ಯಶಸ್ವಿ ಪ್ರಯೋಗಗಳಾಗಿವೆ. ಹಾಗೂ ಗಮಕ ಕಲೆಯನ್ನು ಮತ್ತಷ್ಟು ಆಕರ್ಷಕಗೊಳಿಸಿ, ಯಶಸ್ವಿಗೊಳಿಸಿವೆ.

ಇದನ್ನು ಓದಿದ್ದೀರಾ?: ಜಿಲ್ಲೆಯ ಸಂಗೀತ ಲೋಕದ ಮಿಂಚುಗಳು

ಹಾಸನದ ಮಹಿಳಾ ಗಮಕಿಗಳಲ್ಲಿ ಮೊದಲ ಹೆಸರು ಹಾಗೂ ಗೌರವ ಸಲ್ಲುವುದು ಹಾಸನದ, ಕಣಕಟ್ಟೆಯ ವಿದುಷಿ ಗಂಗಮ್ಮ ಕೇಶವಮೂರ್ತಿ ಅವರಿಗೆ. ಇವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದವರು. ಎರಡು ಬಾರಿ ಕರ್ನಾಟಕ ಗಮಕ ಪರಿಷತ್ತಿಗೆ ಅಧ್ಯಕ್ಷರು ಸಹ ಆಗಿದ್ದರು. ಹಾಗೂ ಅಖಿಲ ಕರ್ನಾಟಕ ಗಮಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಾಗೇ ಗಮಕ ಕ್ಷೇತ್ರದ ಸಾಹಿತ್ಯಕ್ಕೆ ಹಾಸನ ಜಿಲ್ಲೆಯಿಂದ ಕೊಡುಗೆ ನೀಡಿದಂತಹ ಪ್ರಮುಖ ಮಹಿಳೆಯರು ನೀಲಾವತಿ, ಕಮಲಮ್ಮ, ಶ್ವೇತಾ ಮೋಹನ್ ಹಾಗೂ ಜಯಶ್ರೀ ಅವರು. ಗಮಕ ಕ್ಷೇತ್ರಕ್ಕೆ ಸಾಹಿತ್ಯದ ಕೊಡುಗೆ ನೀಡಿದ ಪ್ರಮುಖ ಗಮಕ ಕಲಾವಿದೆಯರೆಂದರೆ ರುಕ್ಮಿಣಿ ನಾಗೇಂದ್ರ, ಸುಮಿತ್ರ ಕೆ.ವಿ, ವಸಂತಲಕ್ಷ್ಮಿ, ನಾಗಶ್ರೀ ನಾಗೇಶ್, ಇಂದಿರಾ ಶಾಸ್ತ್ರಿ, ನವರತ್ನ.ಎಸ್, ಪ್ರೊ. ಜಿ.ಎನ್.ಅನಸೂಯ ಹಾಗೂ ಎಚ್.ಎಂ.ನೇತ್ರ… ಮುಂತಾದವರು. ಗಮಕ ಕಲೆಗೆ ನಾಟ್ಯದ ಮೂಲಕ ನಾವಿನ್ಯತೆಯನ್ನು ತಂದಂತಹ ಹಾಸನದ ಪ್ರಮುಖ ಮಹಿಳೆಯರು ಎಂದರೆ ವಿದುಷಿ ಅಂಬಳೆ ರಾಜೇಶ್ವರಿ, ವಿದುಷಿ ಭಾನುಪ್ರಭಾ ಚಿದಾನಂದ, ವಿದುಷಿ ವಾಣಿಶ್ರೀ, ಡಾ.ಸೌಮ್ಯ ಸಿ.ಎಸ್, ವಿದುಷಿ ಹಂಸ ನಟರಾಜ್, ಶೈಲಜಾ ಮಹೇಶ್… ಮೊದಲಾದವರು.

ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಗಮಕ ಕಲೆಯಲ್ಲೂ ವೈಶಿಷ್ಟ್ಯಪೂರ್ಣ ಪ್ರಯೋಗಗಳನ್ನು ಮಾಡಿದ ಹಾಸನದ ಮಹಿಳೆಯರೆಂದರೆ- ವಿದುಷಿ ಹೇಮ ಗಣೇಶ್, ವಿದುಷಿ ಸುಧಾ ನಟರಾಜ್, ವಿದುಷಿ ಶಶಿ ಚಂದ್ರಿಕಾ, ವಿದುಷಿ ನಾಗಶ್ರೀ ವಿನಯ್, ವಿದುಷಿ ಪದ್ಮಶ್ರೀ ಪ್ರಸಾದ್, ವಿದುಷಿ ಗಂಗಾ ಸುಬ್ಬಣ್ಣ… ಮುಂತಾದವರು. ರಂಗಭೂಮಿಯ ಕಲಾವಿದೆಯರು ಸಹ ಗಮಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿ ಗಮಕ ಕಲೆಯನ್ನು ವೈಶಿಷ್ಟ್ಯಪೂರ್ಣವಾಗಿಸಿದ್ದಾರೆ. ಅಂತಹವರಲ್ಲಿ ಹಾಸನದ ಪೂಜಾ ರಘುನಂದನ್, ವೇದ ಶಿವಕುಮಾರ್, ಶ್ವೇತಾ ಮೋಹನ್, ವೇದಾವತಿ ಶಿವಣ್ಣ ಹಾಗೂ ರಾಣಿ ಮುಂತಾದವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಇದನ್ನು ಓದಿದ್ದೀರಾ?: ಸಮಾಜ ಸ್ಪಂದನಶೀಲೆ- ಸೌಭಾಗ್ಯ ಸಿ. 

ಹೀಗೆ ಕನ್ನಡ ಸಾಹಿತ್ಯದ ಆಳವನ್ನು ಹಾಗೂ ಅದರ ರಸಾಸ್ವಾದವನ್ನು ಸಾಮಾನ್ಯರಿಗೆ ಉಣ ಬಡಿಸುತ್ತಿರುವ ಗಮಕ ಕಲೆಯು ಎಲ್ಲಾ ಸಾಮಾನ್ಯರನ್ನು ತನ್ನ ನಾವಿನ್ಯತೆಯಿಂದ ವೈಶಿಷ್ಟ್ಯಪೂರ್ಣವಾದ ಪ್ರಯೋಗಗಳಿಂದ ತಲುಪಲು ಹಾಸನದ ಮಹಿಳಾ ಗಮಕಿಗಳ ಕೊಡುಗೆ ಅನನ್ಯವಾದುದು. ಈ ಹಾಸನದ ಮಣ್ಣಿನಲ್ಲಿ ಆಳ ಬೇರುಗಳನ್ನಿಳಿಸಿ ಅವರು ತಾವೂ ಬೆಳೆಯುತ್ತಾ ಇತರರನ್ನೂ ಅವಿರತ ಬೆಳೆಸುತ್ತಿದ್ದಾರೆ. ಈ ಗಮಕ ಕಲೆ ಮತ್ತಷ್ಟು ಬೆಳೆಯಲು, ಹರಡಲು ಅವರೆಲ್ಲರೂ ಹೆಚ್ಚಿನ ಸಾಧನೆ ಮಾಡಲೆಂಬುದೇ ಹಾರೈಕೆ.

-ಪ್ರೊ. ಭವಾನಿ ಬಿ.ಎಸ್.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | SIR ರದ್ದತಿ ಆಗ್ರಹಿಸಿ ಸಿಪಿಐ(ಎಂ)ನಿಂದ ಮೇಣದಬತ್ತಿ ಪ್ರತಿಭಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ...

ಸಿದ್ದರಾಮಯ್ಯ ‘ಸ್ಟಿಂಗ್’ ವಿವಾದದ ಅಸಲಿ ವೃತ್ತಾಂತವೇನು? ‘ಸತ್ಯಕ್ಕೇ ಜಯ’ ಎಂದು ಮಾಜಿ ಸಿಎಂ ಹೇಳಿದ್ದೇಕೆ?

ಕರ್ನಾಟಕ ರಾಜಕಾರಣದಲ್ಲಿ ಇದೀಗ ‘ಸ್ಟಿಂಗ್ ಆಪರೇಷನ್’ ಹೆಸರಿನಲ್ಲಿ ಹೊಸ ವಿವಾದ ಭುಗಿಲೆದ್ದಿದೆ....

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...