ಪಿಣರಾಯಿ ವಿಜಯನ್ ಸ್ವಂತ ಕ್ಷೇತ್ರದಲ್ಲಿ ಸಿಪಿಐಎಂ ಸೋಲಿಗೆ ಕಾರ್ಯಕರ್ತರ ಬಂಡಾಯ ಕಾರಣವೇ?

Date:

ಧರ್ಮಡಂನಿಂದ ಮೂರನೇ ಬಾರಿಗೆ ನಿರ್ಗಮಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆಲುವೇನೋ ಕಂಡಿದ್ದಾರೆ. ಆದರೆ ಅವರ ಗೆಲುವಿನ ಅಂತರದಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಕಣ್ಣೂರಿನಲ್ಲಿ ಸಿಪಿಐಎಂ 2021ರಲ್ಲಿ ಒಟ್ಟು 11 ಕ್ಷೇತ್ರಗಳ ಪೈಕಿ 9ರಲ್ಲಿ ಗೆಲುವು ಕಂಡಿತ್ತು. ಆದರೆ ಈ ಬಾರಿ ತೀವ್ರ ಹಿನ್ನಡೆ ಕಂಡಿದೆ, 11ರಲ್ಲಿ ಆರು ಸ್ಥಾನಗಳನ್ನು ಸಿಪಿಐಎಂ ಕಳೆದುಕೊಂಡಿದೆ.

ಕೇರಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಯುಡಿಎಫ್ ಗೆದ್ದು, ಗದ್ದುಗೆ ಏರಲು ಸಜ್ಜಾಗುತ್ತಿದೆ. ಎಲ್‌ಡಿಎಫ್ ಸತತ ಮೂರನೇ ಬಾರಿಗೆ ಅಧಿಕಾರ ಪಡೆಯುವಲ್ಲಿ ವಿಫಲವಾಗಿದೆ. ಅದಕ್ಕೂ ಮುಖ್ಯವಾಗಿ ನಿರ್ಗಮಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕ್ಷೇತ್ರದಲ್ಲಿ ಸಿಪಿಐಎಂ ಅಭ್ಯರ್ಥಿಗಳ ಸೋಲು ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಕೇರಳದಲ್ಲಿ ಸಿಪಿಐಎಂನ ಸಾಂಪ್ರದಾಯಿಕ ಭದ್ರಕೋಟೆಯಾದ ಕಣ್ಣೂರು ಜಿಲ್ಲೆಯಲ್ಲಿ ಕಾರ್ಯಕರ್ತರು ಮತ್ತು ಬೆಂಬಲಿಗರು ಬಂಡಾಯ ಎದ್ದಿರುವುದೇ ಈ ಸೋಲಿಗೆ ಕಾರಣವೇ ಎಂಬ ಪ್ರಶ್ನೆ ಈಗ ಹುಟ್ಟಿದೆ.

- Advertisement -

ಕಣ್ಣೂರಿನಲ್ಲಿ ಸಿಪಿಐಎಂ 2021ರಲ್ಲಿ ಒಟ್ಟು 11 ಕ್ಷೇತ್ರಗಳ ಪೈಕಿ 9ರಲ್ಲಿ ಗೆಲುವು ಕಂಡಿತ್ತು. ಆದರೆ, ಈ ಬಾರಿ ತೀವ್ರ ಹಿನ್ನಡೆ ಕಂಡಿದೆ, 11ರಲ್ಲಿ ಆರು ಸ್ಥಾನಗಳನ್ನು ಸಿಪಿಐಎಂ ಕಳೆದುಕೊಂಡಿದೆ. ಈ ಕ್ಷೇತ್ರಗಳಲ್ಲಿ ಮಾರ್ಚ್‌ನಲ್ಲಿ ಸಿಪಿಐಎಂ ತೊರೆದು ಬಂಡಾಯವೆದ್ದ ನಾಯಕರು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಬೆಂಬಲದೊಂದಿಗೆ ಗೆಲುವು ಕಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಇದನ್ನು ಓದಿದ್ದೀರಾ? ವಿವಾದಗಳ ಗೊಚ್ಚೆಯಲ್ಲಿ ಸಿಲುಕಿರುವ ಕೇರಳ ಬಿಜೆಪಿ: ಮತ ಬ್ಯಾಂಕ್‌ಗಾಗಿ ತೊಳಲಾಟ

ಸಿಪಿಐಎಂನ ಬಂಡಾಯ ನಾಯಕರಾದ ವಿ. ಕುಂಞಿಕೃಷ್ಣನ್ ಮತ್ತು ಟಿ.ಕೆ. ಗೋವಿಂದನ್ ಕ್ರಮವಾಗಿ ಪಯ್ಯನ್ನೂರು ಮತ್ತು ತಳಿಪರಂಬದಲ್ಲಿ ಸ್ಪರ್ಧಿಸಿದ್ದಾರೆ. ಎಲ್‌ಡಿಎಫ್ ಅಭ್ಯರ್ಥಿಗಳಿಗಿಂತ ಹೆಚ್ಚಿನ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಎಲ್‌ಡಿಎಫ್ ಅವಿರೋಧವಾಗಿ ಆಯ್ಕೆಗೊಂಡಿರುವ ಹಲವು ಪಂಚಾಯತ್‌ಗಳಿವೆ. ಆದರೆ ವಿಧಾನಸಭೆಯಲ್ಲಿ ಎಲ್‌ಡಿಎಫ್ ಅಭ್ಯರ್ಥಿಗಳು ಮಾತ್ರ ಗೆಲ್ಲುವಲ್ಲಿ ವಿಫಲಗೊಂಡಿದ್ದಾರೆ.

ಇತರೆ ಕ್ಷೇತ್ರಗಳಲ್ಲಿಯೂ ಸಿಪಿಐಎಂ ತನ್ನ ಕಾರ್ಯಕರ್ತರಲ್ಲಿ ಕುದಿಯುತ್ತಿರುವ ಅಸಮಾಧಾನದ ಹೊರೆಯನ್ನು ಹೊತ್ತುಕೊಳ್ಳುವಂತಾಗಿದೆ. ಧರ್ಮಡಂನಿಂದ ಮೂರನೇ ಬಾರಿಗೆ ನಿರ್ಗಮಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆಲುವೇನೋ ಕಂಡಿದ್ದಾರೆ. ಆದರೆ ಅವರ ಗೆಲುವಿನ ಅಂತರದಲ್ಲಿ ತೀವ್ರ ಕುಸಿತ ಕಂಡುಬಂದಿದೆ. 2021ರಲ್ಲಿ 50,123 ಮತಗಳ ಅಂತರದಲ್ಲಿ ಗೆದ್ದಿದ್ದ ವಿಜಯನ್ ಈ ಬಾರಿ 19,247 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ರಾಜಕೀಯವಾಗಿ ಹೆಚ್ಚು ಅನುಭವವಿಲ್ಲದ ಯುವ ಕಾಂಗ್ರೆಸ್ ನಾಯಕ ವಿ.ಪಿ. ರಶೀದ್ ಕಮ್ಯುನಿಸ್ಟ್ ಭದ್ರಕೋಟೆಯನ್ನು ಪ್ರವೇಶಿಸಿ ಸಿಪಿಐಎಂನ ದಿಗ್ಗಜ ಪಿಣರಾಯಿಗೆ ತೀವ್ರ ಪೈಪೋಟಿ ಒಡ್ಡಿದ್ದಾರೆ.

ಧರ್ಮಡಂನಲ್ಲಿ ವಿಜಯನ್ ಗೆಲುವಿನ ಅಂತರ ಕಡಿಮೆಯಾಗಲು, ಕೇಡರ್‌ಗಳ ಮತಗಳ ಸಂಖ್ಯೆ ಕಡಿಮೆಯಾಗಿರುವುದು, ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಅಲ್ಪಸಂಖ್ಯಾತರು ಮತ ಹಾಕಿರುವುದೇ ಕಾರಣ ಎಂದು ಹೇಳಲಾಗಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ರಶೀದ್ ಮಾತ್ರ ಈ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. “ಇದು ಶೇ.80ರಷ್ಟು ಹಿಂದೂಗಳನ್ನು ಹೊಂದಿರುವ ಕ್ಷೇತ್ರ. ಅದರಲ್ಲೂ ಒಂದು ಪಂಚಾಯತ್‌ನಲ್ಲಿ ಪ್ರಬಲವಾಗಿರುವ ಬಲಪಂಥೀಯ ಎಸ್‌ಡಿಪಿಐ ಬಹಿರಂಗವಾಗಿ ಸಿಪಿಐಎಂಗೆ ಬೆಂಬಲ ನೀಡಿದೆ. ಅದಕ್ಕಾಗಿ ಅಭ್ಯರ್ಥಿಯನ್ನೂ ಕಣಕ್ಕಿಳಿಸಿಲ್ಲ. ಹಿಂದೂಗಳಲ್ಲಿ, ವಿಜಯನ್ ಅವರ ಈಳವ ಸಮುದಾಯವು ಪ್ರಬಲವಾಗಿದೆ” ಎಂದು ಹೇಳಿಕೊಂಡಿದ್ದಾರೆ.

ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಸಮೀಕ್ಷೆಯ ಫಲಿತಾಂಶಗಳನ್ನು ಪರಿಶೀಲಿಸಿದ ನಂತರ ತಮ್ಮ ಮಾಧ್ಯಮ ಸಭೆಯಲ್ಲಿ, “ಕೇರಳದಲ್ಲಿ ಎಲ್‌ಡಿಎಫ್‌ನ ಸೋಲು ಅನಿರೀಕ್ಷಿತವಾಗಿತ್ತು. ಮುಂದಿನ ಎರಡು ತಿಂಗಳಲ್ಲಿ ಪಕ್ಷದ ಎಲ್ಲ ಬಣಗಳನ್ನು ಕರೆಯಲಾಗುವುದು. ಕಾರ್ಯಕರ್ತರಿಗೆ ತಮ್ಮ ಅಭಿಪ್ರಾಯಗಳನ್ನು ಭಯವಿಲ್ಲದೆ ಮತ್ತು ಸ್ವತಂತ್ರ ರೀತಿಯಲ್ಲಿ ವ್ಯಕ್ತಪಡಿಸಲು ಅವಕಾಶ ನೀಡಲಾಗುವುದು” ಎಂದಿದ್ದಾರೆ.

2021ರಲ್ಲಿ ಧರ್ಮಡಂನಲ್ಲಿ ವಿಜಯನ್ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದರೆ, 2024ರ ಲೋಕಸಭೆ ಚುನಾವಣೆ ವೇಳೆಗೆ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ ಎಲ್‌ಡಿಎಫ್ ಅಭ್ಯರ್ಥಿ ಎಂ ವಿ ಜಯರಾಜನ್ ಕೇವಲ 2,700 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ 2025ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ, ಸಿಪಿಐಎಂ ಕ್ಷೇತ್ರದ ಎಂಟು ಪಂಚಾಯತ್‌ಗಳಲ್ಲಿ 16,500ರಷ್ಟು ಅಂತರದಲ್ಲಿ ಜಯ ಗಳಿಸಿದೆ.

2021ರಲ್ಲಿ ಹಿರಿಯ ಸಿಪಿಐಎಂ ನಾಯಕಿ ಕೆ ಕೆ ಶೈಲಜಾ ಅವರನ್ನು 60,963 ಮತಗಳಿಂದ ಆಯ್ಕೆ ಮಾಡಿದ್ದ ಮಟ್ಟನ್ನೂರಿನಲ್ಲಿಯೂ ಮತಗಳ ಕುಸಿತ ಸ್ಪಷ್ಟವಾಗಿ ಕಂಡುಬಂದಿದೆ. ಈ ಬಾರಿ, ಯುವ ನಾಯಕಿ ವಿ ಕೆ ಸನೋಜ್ ಗೆಲುವಿನ ಅಂತರ 14,168ಕ್ಕೆ ಇಳಿದಿದೆ.

ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಪ್ರಧಾನಿ ಮೋದಿ, ವಿಜಯನ್ ‘ದುರಹಂಕಾರಿಗಳು’ ಎಂದ ರಾಹುಲ್ ಗಾಂಧಿ

ಕಣ್ಣೂರಿನಲ್ಲಿ ಕಮ್ಯುನಿಸ್ಟ್ ಮತ್ತು ಸಮಾಜವಾದಿ ಚಳವಳಿಗಳ ಸಾಂಪ್ರದಾಯಿಕ ಭದ್ರಕೋಟೆಯಾದ ಕೂತುಪರಂಬದಲ್ಲಿ, ಆರ್‌ಜೆಡಿ ಅಭ್ಯರ್ಥಿ ಪಿ ಕೆ ಪ್ರವೀಣ್ ಐಯುಎಂಎಲ್‌ನ ಜಯಂತಿ ರಾಜನ್ ವಿರುದ್ಧ 1,286 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಈ ಹಿಂದೆ ಸಿಪಿಐಎಂ ಮತ್ತು ಸಂಘ ಪರಿವಾರದ ನಡುವಿನ ರಾಜಕೀಯ ಹಿಂಸಾಚಾರಕ್ಕೆ ಬಲಿಯಾದ ಈ ಕ್ಷೇತ್ರವು ಕ್ರಮೇಣ ಐಯುಎಂಎಲ್‌ಗೆ ಬಲವಾದ ನೆಲೆಯಾಗಿ ಹೊರಹೊಮ್ಮುತ್ತಿದೆ. ಮತಗಳ ಅಂತರ ಕಡಿಮೆಯಾಗುತ್ತಿದೆ.

ಟಿ ಕೆ ಗೋವಿಂದನ್ ಮತ್ತು ಕುಂಞಿಕೃಷ್ಣನ್ ಸಿಪಿಐಎಂ ತೊರೆದಾಗ ಪಕ್ಷಕ್ಕೆ ಅಧಿಕ ಹಾನಿಯಾಗದು ಎಂಬ ಲೆಕ್ಕಾಚಾರ ಎಲ್‌ಡಿಎಫ್‌ ನಾಯಕರದ್ದು ಆಗಿತ್ತು. ಯಾಕೆಂದರೆ ಸಮಾನ ಮನಸ್ಕ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಅಥವಾ ಸ್ಥಳೀಯ ಸಂಘಟನೆಯನ್ನು ಸ್ಥಾಪಿಸಲು ಅವರಿಗೆ ಸಮಯವಿರಲಿಲ್ಲ ಎಂಬ ಅಭಿಪ್ರಾಯವಿತ್ತು. ಪೊಲೀಸ್ ರಕ್ಷಣೆಯಲ್ಲಿ ಮತ ಚಲಾಯಿಸಲು ಬಂದ ಟಿ ಕೆ ಗೋವಿಂದನ್ ಅವರನ್ನು ಸಾರ್ವಜನಿಕವಾಗಿ ನಿಂದಿಸಲಾಗಿತ್ತು. ಇಂತಹ ಘಟನೆಗಳು ಸಿಪಿಐಎಂ ನಾಯಕತ್ವಕ್ಕೆ ಬಂಡಾಯ ನಾಯಕರಿಂದ ಸಿಪಿಐಎಂಗೆ ಹಾನಿಯಾಗದು ಎಂಬ ವಿಶ್ವಾಸ ನಾಯಕರುಗಳಲ್ಲಿ ಹುಟ್ಟುವಂತೆ ಮಾಡಿತು. ಆದರೆ ವಾಸ್ತವದಲ್ಲಿ ನಡೆದಿದ್ದು ಬೇರೆಯೇ.

2021ರಲ್ಲಿ ಎಂ ವಿ ಗೋವಿಂದನ್ 22,689 ಅಂತರದಲ್ಲಿ ಗೆದ್ದಿದ್ದ ಕ್ಷೇತ್ರದಲ್ಲಿ ಟಿ ಕೆ ಗೋವಿಂದನ್ 12,568 ಮತಗಳ ಅಂತರದಿಂದ ಗೆದ್ದರು. ಈ ಬಾರಿ, ಎಂ ವಿ ಗೋವಿಂದನ್ ಅವರ ಪತ್ನಿ ಪಿ ಕೆ ಶ್ಯಾಮಲಾ ಸಿಪಿಐಎಂ ಅಭ್ಯರ್ಥಿಯಾಗಿದ್ದರು. ಪಯ್ಯನ್ನೂರಿನಲ್ಲಿ ಬಂಡಾಯ ಅಭ್ಯರ್ಥಿ ಪಯ್ಯನ್ನೂರಿನಲ್ಲಿ, ಬಂಡುಕೋರ ಕುಂಞಿಕೃಷ್ಣನ್ ಸಿಪಿಐಎಂನ ಹಾಲಿ ಶಾಸಕ ಟಿ ಐ ಮಧುಸೂದನನ್ ಅವರನ್ನು 7,487 ಮತಗಳಿಂದ ಸೋಲಿಸಿದರು. 2021ರಲ್ಲಿ ಮಧುಸೂದನನ್ ಅವರು ದಾಖಲೆಯ 49,780 ಮತಗಳ ಅಂತರದಿಂದ ಈ ಸ್ಥಾನವನ್ನು ಗೆದ್ದಿದ್ದರು. ಹೀಗೆ ಎಲ್‌ಡಿಎಫ್ ನಾಯಕರು ಅಂದುಕೊಂಡಿದ್ದು ಒಂದು ಆಗಿದ್ದು ಇನ್ನೊಂದು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ದಸಂಸ ರಾಜ್ಯ ಸಂಘಟನಾ ಸಂಚಾಲಕಿಯಾಗಿ ಪ್ರತಿಭಾ ಹೊಸಮನಿ ಆಯ್ಕೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ...

ʼವೋಟ್‌ ಚೋರಿʼ ಆರೋಪಕ್ಕೆ ಪುರಾವೆ ಅಗತ್ಯʼ: ಚುನಾವಣಾ ಆಯೋಗದ ಪರ 124 ನಿವೃತ್ತ ಅಧಿಕಾರಿಗಳ ಪತ್ರ

ಚುನಾವಣಾ ಅಕ್ರಮಗಳ ಆರೋಪಗಳಿಗೆ ವಿಶ್ವಾಸಾರ್ಹ ಪುರಾವೆಗಳು ಅಗತ್ಯ ಎಂದು ಪ್ರತಿಪಾದಿಸಿರುವ 124...

ಮುದ್ದೇಬಿಹಾಳ | ದೆಹಲಿ ಸಭೆಗೂ ಮುನ್ನ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹ

ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹8,500 ಕನಿಷ್ಠ ಬೆಲೆ ಹಾಗೂ ಹೆಚ್ಚುವರಿಯಾಗಿ...

ಅಘೋಷಿತ ತುರ್ತು ಪರಿಸ್ಥಿತಿ: ಪ್ರತಿಭಟನಾಕಾರರ ಬಿಡುಗಡೆ ಮಾಡದಿದ್ದರೆ ಉಪವಾಸ; ವಾಂಗ್‌ಚುಕ್ ಎಚ್ಚರಿಕೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವಿವಿಧ ನಾಯಕರು...