ವಿವಾದಗಳ ಗೊಚ್ಚೆಯಲ್ಲಿ ಸಿಲುಕಿರುವ ಕೇರಳ ಬಿಜೆಪಿ: ಮತ ಬ್ಯಾಂಕ್‌ಗಾಗಿ ತೊಳಲಾಟ

Date:

ತನ್ನ ವಿವಾದವನ್ನು ಮುಚ್ಚಿಹಾಕುವುದರಲ್ಲೇ ಬಿಜೆಪಿ ಸಮಯ ಕಳೆದುಹೋಗುತ್ತಿದೆ. ಬಿಜೆಪಿ ತನ್ನ ವಿರೋಧಿಗಳೊಂದಿಗೆ ಹೋರಾಡುತ್ತಿದೆಯೇ ಅಥವಾ ತನ್ನದೇ ಆದ ತಪ್ಪು ಹೆಜ್ಜೆಗಳ ವಿರುದ್ಧ ಹೋರಾಡುತ್ತಿದೆಯೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಇನ್ನು ಕೆಲವೇ ದಿನಗಳಲ್ಲಿ ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಯುಡಿಎಫ್‌, ಎಲ್‌ಡಿಎಫ್‌ ಭರ್ಜರಿಯಾಗಿ ಪ್ರಚಾರ ನಡೆಸುತ್ತಿದೆ. ಈ ಬಾರಿ ಸ್ಪರ್ಧೆಯಲ್ಲಿ ಹೊಸದಾಗಿ ಮೂರನೇ ಶಕ್ತಿಯಾಗಿ ತನ್ನನ್ನು ತಾನು ಗುರುತಿಸಿಕೊಂಡಿರುವ ಬಿಜೆಪಿ, ಇತರೆ ರಾಜ್ಯಗಳಂತೆ ಕೇರಳದಲ್ಲಿಯೂ ಕೋಮುದ್ವೇಷದ ಆಧಾರದಲ್ಲಿ ಪ್ರಚಾರವನ್ನು ನಡೆಸುತ್ತಿದೆ. ಆದರೆ ಕೇರಳ ಕೊಂಚ ಭಿನ್ನ. ಇಲ್ಲಿ ಕೋಮುದ್ವೇಷ ಅಷ್ಟೊಂದು ನಡೆಯದು. ಕ್ರೈಸ್ತ ಸಮುದಾಯದ ಓಲೈಕೆಯೂ ಬಿಜೆಪಿಗೆ ಮುಖ್ಯ. ಈ ವಿಚಾರದಲ್ಲಿ ಬಿಜೆಪಿ ಕೇರಳದಲ್ಲಿ ಚುನಾವಣೆಗೂ ಮುನ್ನ ಕೊಂಚ ಎಡವಿದೆ. ಹಲವು ವಿವಾದಗಳನ್ನು ಸೃಷ್ಟಿಸಿಕೊಂಡು ವಿವಾದಗಳ ಗೊಚ್ಚೆಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಮತ ಬ್ಯಾಂಕ್‌ಗಾಗಿ ತೊಳಲಾಟ ನಡೆಸುತ್ತಿದೆ.

- Advertisement -

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದು ತನ್ನ ಬಲ ಪ್ರದರ್ಶಿಸಿದ್ದೇವೆ ಎಂದುಕೊಂಡ ಬಿಜೆಪಿ ವಿಧಾನಸಭೆ ಚುನಾವಣೆ ವೇಳೆಗೆ ಕೊಂಚ ಅಧಿಕ ಪ್ರಮಾದ ಮಾಡಿಕೊಂಡಿದೆ. ಇವೆಲ್ಲವುದರನ್ನು ಸರಿದೂಗಿಸಲು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಕೇಂದ್ರ, ರಾಜ್ಯ ಮತ್ತು ಸ್ಥಳೀಯ ನಾಯಕರು ಪ್ರಚಾರಕ್ಕೆ ಇಳಿದಿದ್ದಾರೆ. ವಿವಾದಗಳನ್ನು ಮುಚ್ಚಿ ಹಾಕಲು ಒದ್ದಾಡುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಇದನ್ನು ಓದಿದ್ದೀರಾ? ಕೇರಳದಲ್ಲಿ ಬೇರೂರುವ ಬಿಜೆಪಿ ಕನಸಿಗೆ ಕುತ್ತು ತಂದ ವಿದೇಶಿ ದೇಣಿಗೆ ತಿದ್ದುಪಡಿ ಮಸೂದೆ

ತನಗಿದ್ದ ಸಣ್ಣ ಸ್ಥಾನವನ್ನೂ ಕಳೆದುಕೊಂಡ ಪ್ರಚಾರ

ಈ ಹಿಂದಿಗಿಂತ ಕೊಂಚ ಹೆಚ್ಚು ನಿರೀಕ್ಷೆಯೊಂದಿಗೆ 2026ರ ಕೇರಳ ವಿಧಾನಸಭೆ ಚುನಾವಣೆಯ ಕಣಕ್ಕೆ ಬಿಜೆಪಿ ಇಳಿದಿದೆ. ಪಕ್ಷದ ಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ಮತ ಬ್ಯಾಂಕ್ ವಿಸ್ತರಿಸಲು, ಕೇರಳ ಕ್ರೈಸ್ತರ ಓಲೈಸಲು, ಹಿಂದೂ ಮತಗಳನ್ನು ಕ್ರೋಢಿಕರಿಸಲು ಯತ್ನಿಸುತ್ತಿದೆ. ಈವರೆಗೆ ಯುಡಿಎಫ್ ಬಿಟ್ಟರೆ ಎಲ್‌ಡಿಎಫ್, ಎಲ್‌ಡಿಎಫ್ ಬಿಟ್ಟರೆ ಯುಡಿಎಫ್ ಎಂದು ಬಿಂಬಿತವಾಗಿರುವ ರಾಜ್ಯದಲ್ಲಿ ತಾನು ಮೂರನೇ ಶಕ್ತಿ ಎಂದು ಕರೆಸಿಕೊಳ್ಳಲು ಸತತ ಯತ್ನ ನಡೆಸುತ್ತಿದೆ.

ನೇಮಮ್‌ನಲ್ಲಿ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರನ್ನು ಕಣಕ್ಕಿಳಿಸುವುದು ಕೇವಲ ಚುನಾವಣಾ ತಂತ್ರವಾಗಿರಲಿಲ್ಲ. ಬಿಜೆಪಿ ಕೇರಳದ ವಿಚಾರದಲ್ಲಿ ಗಂಭಿರವಾಗಿದೆ ಎಂಬುದನ್ನು ಸೂಚಿಸುವ ಯತ್ನವಾಗಿತ್ತು. ಆದರೆ ಪ್ರಚಾರದ ಆರಂಭಿಕ ಹಂತದಲ್ಲೇ ಬಿಜೆಪಿ ದಿಕ್ಕು ತಪ್ಪಿತು. ಮೊದಲು ರಾಜೀವ್ ಚಂದ್ರಶೇಖರ್ ಅವರ ಅಫಿಡವಿಟ್ ವಿವಾದ ಆರಂಭವಾಯಿತು. ಬೆಂಗಳೂರಿನ ಕೋರಮಂಗಲದಲ್ಲಿರುವ ಬೆಲೆಬಾಳುವ ಆಸ್ತಿ ಮತ್ತು ಜುಪಿಟರ್ ಕ್ಯಾಪಿಟಲ್‌ನಂತಹ ದೊಡ್ಡ ಕಂಪನಿಗಳಲ್ಲಿನ ಹೂಡಿಕೆಯನ್ನು ರಾಜೀವ್ ಮರೆಮಾಚಿರುವುದು ತೀವ್ರ ವಿವಾದಕ್ಕೆ ಕಾರಣವಾಯಿತು. ಅಷ್ಟು ಮಾತ್ರವಲ್ಲದೆ ರಾಜೀವ್ ಬಳಿ ಯಾವುದೇ ಕಾರು ಇಲ್ಲ, ಕೇವಲ 1942ರ ಮಾಡೆಲ್‌ನ ಒಂದು ಹಳೆಯ ಬೈಕ್ (ಇಂಡಿಯನ್ ಸ್ಕೌಟ್) ಮಾತ್ರ ಇದೆ ಎಂದು ಉಲ್ಲೇಖಿಸಿರುವುದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿತು.

ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಕ್ರೈಸ್ತ ಸಮುದಾಯದ ಮತಗಳು ‘ಗೇಮ್‌ ಚೇಂಜರ್’ ಆಗಬಹುದೇ?

ಆದರೆ ಇದಕ್ಕೆ ದಾಖಲೆ ಸಹಿತ ಸ್ಪಷ್ಟನೆ ನೀಡಲಾಗದ ರಾಜೀವ್, “ಇದು ಆಧಾರರಹಿತ ಆರೋಪ. ಸಂಪೂರ್ಣವಾಗಿ ಕಟ್ಟುಕಥೆ. ಕಾನೂನಿನಲ್ಲಿ ಅಗತ್ಯವಿರುವ ಪ್ರತಿಯೊಂದು ವಿವರವನ್ನು ಬಹಿರಂಗಪಡಿಸಲಾಗಿದೆ. ಇದು ಮತದಾರರ ಗಮನವನ್ನು ಬೇರೆಡೆ ಸೆಳೆಯುವ ಹತಾಶ ಪ್ರಯತ್ನವಲ್ಲದೆ ಬೇರೇನೂ ಅಲ್ಲ” ಎಂದು ಹೇಳಿಕೊಂಡಿದ್ದಾರೆ. ಆದರೂ ಈ ಪ್ರಸಂಗ ಹಾಗೆಯೇ ಉಳಿದಿದೆ. ಈ ಅಫಿಡವಿಟ್ ಅನ್ನು ಮುಂದಿಟ್ಟುಕೊಂಡೆ ಯುಡಿಎಫ್, ಎಲ್‌ಡಿಎಫ್ ಬಿಜೆಪಿ ವಿರುದ್ಧ ಪ್ರಚಾರ ನಡೆಸುತ್ತಿದೆ. ಈ ವಿವಾದ ಮರೆಯಾಗುವುದಕ್ಕೂ ಮುನ್ನವೇ ಗುರುವಾಯೂರಿನಲ್ಲಿ ಮತ್ತೊಂದು ವಿವಾದವನ್ನು ಬಿಜೆಪಿ ಸೃಷ್ಟಿಸಿತು.

ಕೋಮುದ್ವೇಷ ಹೇಳಿಕೆ ವಿವಾದ

ದಶಕಗಳಿಂದ ಕ್ಷೇತ್ರದಲ್ಲಿ ‘ಹಿಂದೂ ಶಾಸಕ’ ಇಲ್ಲ ಎಂಬ ಬಿಜೆಪಿ ನಾಯಕ ಮತ್ತು ಗುರುವಾಯೂರು ಕ್ಷೇತ್ರದ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಅವರ ಹೇಳಿಕೆ ಕೋಮು ಸೌಹಾರ್ದ ನೆಲೆಯಾದ ಕೇರಳದಲ್ಲಿ ಕೊಂಚ ತಾಪತ್ರಯ ಸೃಷ್ಟಿಸಿತು. ದೂರುಗಳು ದಾಖಲಾದವು. ಈ ಪ್ರಕರಣವು ಕೇರಳ ಹೈಕೋರ್ಟ್ ಮೆಟ್ಟಿಲೇರಿತು. ಚುನಾವಣಾ ಆಯೋಗ ಮಧ್ಯಪ್ರವೇಶಿಸಿತು. ಆದರೆ ಗೋಪಾಲಕೃಷ್ಣನ್ ತಮ್ಮ ನಿಲುವು ಬದಲಾಯಿಸಿಲ್ಲ. ದೂರುಗಳು ದಾಖಲಾದರೂ ಮತ್ತೆ ಅದೇ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಬಿಜೆಪಿಯಲ್ಲಿಯೇ ಗೋಪಾಲಕೃಷ್ಣನ್ ಹೇಳಿಕೆಯ ಬಗ್ಗೆ ಅಸಮಾಧಾನವಿದೆ.

ವಿದೇಶಿ ದೇಣಿಗೆ ತಿದ್ದುಪಡಿ ಮಸೂದೆ ಸುತ್ತ

ಬಹುಶಃ ಕೇರಳದಲ್ಲಿ ಬಿಜೆಪಿ ನೆಲೆಯೂರುವ ಕನಸಿಗೆ ಅಧಿಕ ಕುತ್ತು ತಂದಿದ್ದು ವಿದೇಶಿ ದೇಣಿಗೆ ತಿದ್ದುಪಡಿ ಮಸೂದೆ ಅಂದರೆ FCRA. ಕೇರಳದಲ್ಲಿ ಬಿಜೆಪಿ ಮೂರನೇ ಪ್ರಬಲ ಶಕ್ತಿಯಾಗಿ ಹೊರಹೊಮ್ಮಬೇಕಾದರೆ ಕ್ರೈಸ್ತರ ಬೆಂಬಲ ಅಗತ್ಯ. ಆದರೆ ಈ ಎಫ್‌ಸಿಆರ್‌ಎ ತಿದ್ದುಪಡಿಯು ಕೇರಳದಲ್ಲಿ ಕ್ರೈಸ್ತ ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರವು ಈ ಮಸೂದೆ ಮೂಲಕ ಅಲ್ಪಸಂಖ್ಯಾತ, ಅದರಲ್ಲೂ ಕ್ರೈಸ್ತ ಸಮುದಾಯ ನಡೆಸುತ್ತಿರುವ ಅನಾಥಾಶ್ರಮಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳನ್ನು ಗುರಿಯಾಗಿಸಿದೆ ಎಂಬ ಆರೋಪ ಸದ್ಯ ಕೇಳಿಬರುತ್ತಿದೆ. ಕಾಂಜಿರಪ್ಪಳ್ಳಿಯಿಂದ ಸ್ಪರ್ಧಿಸುತ್ತಿರುವ ಕೇಂದ್ರ ಸಚಿವ ಜಾರ್ಜ್ ಕುರಿಯನ್ ಮತದಾರರ ಮನವೊಲಿಸಲು ಪ್ರಯತ್ನಿಸಿದರೂ ಅದು ಸಫಲವಾಗಿಲ್ಲ. ಸಿರೋ-ಮಲಬಾರ್ ಚರ್ಚ್ ಮತ್ತು ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್‌ನಂತಹ ಪ್ರಬಲ ಧಾರ್ಮಿಕ ಸಂಸ್ಥೆಗಳ ಬಿಷಪ್‌ಗಳು ಈ ಮಸೂದೆಯನ್ನು ಬಹಿರಂಗವಾಗಿ ಟೀಕಿಸಿದ್ದಾರೆ.

ಸ್ಥಳೀಯವಾಗಿಯೂ ಬಿಜೆಪಿಗಿದೆ ಬಿಕ್ಕಟ್ಟು

ಬಿಜೆಪಿ ನಾಯಕರ ಹೇಳಿಕೆಗಳು, ದಾಖಲೆಗಳು ಸ್ಥಳೀಯವಾಗಿಯೂ ಬಿಜೆಪಿಯನ್ನು ಬಿಕ್ಕಟ್ಟಿನಲ್ಲಿ ಸಿಲುಕಿಸಿದೆ. ವಡಕಂತರದಲ್ಲಿ ಪ್ರಚಾರ ಮಾಡುವಾಗ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಪಿಶಾರೋಡಿ ಅವರನ್ನು ತಡೆದ ಘಟನೆಯು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬಿಜೆಪಿ ಕೌನ್ಸಿಲರ್ ಸಿಂಧು ರಾಜನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಅಡ್ಡಿಪಡಿಸಿದ ಆರೋಪ ಹೊರಿಸಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ವಿಚಾರದಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ. “ಅಭ್ಯರ್ಥಿಯನ್ನು ಪ್ರಚಾರ ಮಾಡದಂತೆ ತಡೆಯುವುದು ರಾಜಕೀಯವಲ್ಲ. ಇದು ಪ್ರಜಾಪ್ರಭುತ್ವ ಹಕ್ಕುಗಳ ಉಲ್ಲಂಘನೆ” ಎಂದು ಸಾರ್ವಜನಿಕ ಸಭೆಯಲ್ಲಿ ಹೇಳಿದರು.

ಬಿಜೆಪಿ ಎಲ್ಲ ವಿವಾದಗಳನ್ನು ನಿಯಂತ್ರಿಸಬಹುದಿತ್ತು. ಆದರೆ ನಿಯಂತ್ರಿಸುವಲ್ಲಿ ಎಡವಿದ್ದು ಈಗ ಬಿಜೆಪಿಯ ಉದ್ದೇಶವನ್ನೇ ಬುಡಮೇಳು ಮಾಡುವಂತಿದೆ. ಅಷ್ಟಕ್ಕೂ ಬಿಜೆಪಿಗೆ ಕೇರಳದ ಎಲ್‌ಡಿಎಫ್ ಸರ್ಕಾರದ ವಿರುದ್ಧ ಪ್ರಚಾರಕ್ಕೆ ಹೆಚ್ಚು ವಿಷಯವಸ್ತುಗಳಿಲ್ಲ. ಯುಡಿಎಫ್ ವಿರುದ್ಧವೂ ಅದೇ ಸಂಗತಿ. ಹೀಗಿರುವಾಗ ತನ್ನ ವಿವಾದವನ್ನು ಮುಚ್ಚಿಹಾಕುವುದರಲ್ಲೇ ಬಿಜೆಪಿ ಸಮಯ ಕಳೆದುಹೋಗುತ್ತಿದೆ. ಬಿಜೆಪಿ ತನ್ನ ವಿರೋಧಿಗಳೊಂದಿಗೆ ಹೋರಾಡುತ್ತಿದೆಯೇ ಅಥವಾ ತನ್ನದೇ ಆದ ತಪ್ಪು ಹೆಜ್ಜೆಗಳ ವಿರುದ್ಧ ಹೋರಾಡುತ್ತಿದೆಯೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಗ್ಯಾನೇಶ್ ರಕ್ಷಣೆಗಾಗಿ ಯುವತಿಯರನ್ನು ಪೀಡಿಸುವ ಕೀಚಕರಾಗುತ್ತಿದ್ದಾರೆಯೇ ದೆಹಲಿ ಪೊಲೀಸರು?

ರಕ್ಷಕರೇ ಭಕ್ಷಕರಾಗುವ ಅದೇ ಹಳೆಯ ನಿರಾಶಾಜನಕ ಕತೆಯಿದು. ದೆಹಲಿ ಪ್ರತಿಭಟನೆಯಲ್ಲಿ ಪೊಲೀಸರ...

ಭದ್ರಾವತಿಯ VISL ಎಜಿಎಂ ಗೋವಿಂದರಾಜು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, VISL ಸಂಸ್ಥೆಯಲ್ಲಿ ಎಜಿಎಂ...

ಸುಪ್ರೀಂ ಕೋರ್ಟ್’ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ: ಕಾರಾಗೃಹ ಡಿಐಜಿ ಸೋಮಶೇಖರ್ ಬಂಧನ

ನಕಲಿ ಸುಪ್ರೀಂ ಕೋರ್ಟ್ ಆದೇಶವನ್ನು ಬಳಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬನನ್ನು...

ಬೀದರ್‌ | ಅ.7ರಂದು ಆಣದೂರ ಆರೋಗ್ಯ ಕೇಂದ್ರದಲ್ಲಿ ಸಾಮೂಹಿಕ ರಕ್ತದಾನ ಶಿಬಿರ

ಬೀದರ್‌ ತಾಲೂಕಿನ ಆಣದೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಅ.7ರಂದು ಬೆಳಿಗ್ಗೆ...