ಈ ದಿನ ಕವಿತೆ | ಸೀರೆ- ಸುಬೋಧ್‌ ಸರ್ಕಾರ್

Date:

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಇಂದು ಸುಬೋಧ್ ಸರ್ಕಾರ್ ಅವರ ಬಾಂಗ್ಲಾ ಮೂಲದ ʼಸೀರೆʼ ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ ಹೆಚ್‌ ಭಾಗ್ಯ.

- Advertisement -

ಹುಡುಗಿಗೆ ಮದುವೆಯಲಿ ಐವತ್ತೊಂದು ಸೀರೆಗಳು ದೊರೆತವು.
ಮೊದಲ ಸಲ ತವರಿಗೆ ಹೋದಾಗ ಮತ್ತೆ ಆರು ಸೀರೆಗಳು.
ಅವಳೆಂದೂ ಇಷ್ಟೊಂದು ಸೀರೆ ಕಂಡಿರಲೇ ಇಲ್ಲ.
ಕಪಾಟಿನ ಮೊದಲ ಗೂಡಿನಲಿ ನೀಲಿ ಸೀರೆಗಳ ಜೋಡಿಸಿದಳು.
ತಿಳಿನೀಲಿ ಬಣ್ಣದ ಸೀರೆಯನು ತಬ್ಬಿಕೊಂಡು’ ನೀನು ನನ್ನ ಆಕಾಶ’ ಎಂದಳು.
ಎರಡನೇ ಗೂಡಿನಲಿ ಗುಲಾಬಿ ಬಣ್ಣದ ಸೀರೆಗಳ ಜೋಡಿಸಿದಳು.
ಒಂದು ಗುಲಾಬಿ ಸೀರೆಯನು ತಬ್ಬಿಕೊಂಡು ‘ ವಾವ್,ನೀನು ನನ್ನ ಹೆಮ್ಮೆ ‘ ಎಂದಳು.
ಮೂರನೇ ಗೂಡಿನಲಿ ಮೂರು ನವಿಲುಗಳು
ಮೂರು ದಿಕ್ಕಿನಿಂದ ನುಗ್ಗುತ್ತಿವೆಯೋ ಎನ್ನುವಂತೆ.
ಬಿರಿಯಾನಿ ಎಲೆ ಬಣ್ಣದ ಸೀರೆಯನ್ನು ಅವಳು ದುಃಖ ಎಂದಳು.
ವರ್ಷವಿಡೀ ಅವಳಿಗೆ ಸೀರೆಗಳೋ ಸೀರೆಗಳು ಸಿಕ್ಕವು.
ಇರುವ ಒಂದು ಜನ್ಮದಲಿ ಎಲ್ಲವನ್ನೂ ಉಡುವುದಾದರೂ ಹೇಗೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ಆದರೆ,ಒಂದು ವರ್ಷದ ನಂತರವೋ ಏನೋ ಹೀಗಾಯಿತು.
ಅವಳು ಗಂಡನ ಜೊತೆ ಚೈನೀಸ್ ತಿನಿಸು ತಿನ್ನಲು ಹೋದಳು.
ಮುಖ ಮುಚ್ಚಿಕೊಂಡಿದ್ದ ಮೂವರು ಪುಂಡರು ಧುತ್ತನೆರಗಿ ಗಂಡನ ಹೊಟ್ಟೆಯನ್ನು ಸೀಳಿದರು
ತಿಂದ ಆಹಾರ ಇನ್ನೂ ಹಾಗೇ ಇತ್ತು.
ಚಿಲ್ಲಿ ಚಿಕನ್ ಇನ್ನೂ ಹೊಗೆಯಾಡುತಿತ್ತು.
ಅಕ್ಕ ಪಕ್ಕದವರು ,ಇದು ರಾಜಕೀಯ ಎಂದರು.

ಹುಡುಗಿಗೆ ಮದುವೆಯಲಿ ಐವತ್ತೊಂದು ಸೀರೆಗಳು ದೊರೆತಿದ್ದವು.
ತವರಿಗೆ ಮೊದಲು ಬಂದಾಗ ಮತ್ತೆ ಆರು.

ಒಂದು ಮಧ್ಯಾಹ್ನ ಅವಳ ಅತ್ತೆ ಮಲಗಿರುವಾಗ
ಅವಳು ತನ್ನೆಲ್ಲಾ ಸೀರೆಗಳನ್ನು ಆರನೇ ಮಹಡಿಯಿಂದ ಕೆಳಗೆಸೆದಳು.
ಅವಳ ಅತ್ತೆಯು ಅವಳಿಗೆ ಬಿಳಿ ಸೀರೆ ಉಡಲು ನೆರವಾದಳು.
ಹತ್ತೊಂಬತ್ತರ ಹುಡುಗಿ ಒಬ್ಬಂಟಿ.
ಆ ಸೀರೆಯನ್ನೂ ಬೀದಿಯಲಿ ಬರುವಾಗ ಪುಂಡರು ಸೆಳೆದರು.
ಒಬ್ಬಳು ಬೆತ್ತಲೆ ವಿಧವೆ ಹುಡುಗಿ ನೆರವಿಗಾಗಿ ಆರ್ತನಾದ ಮಾಡುತ್ತಾ ಓಡುತ್ತಿದ್ದಳು.
ಆ ಮೂವರು ಅದೊಂದು ತಮಾಷೆ ಎನ್ನುವಂತೆ ಅವಳ ಬೆಂಬತ್ತಿದರು‌
ನೆರೆಹೊರೆಯವರು ಮೂಕರಂತಿದ್ದರು.

ಹುಡುಗಿಗೆ ಮದುವೆಯಲಿ ಐವತ್ತೊಂದು ಸೀರೆಗಳು ದೊರೆತಿದ್ದವು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19 ಸೀಟು ಹಾಗೂ ನೆತನ್ಯಾಹು ಭವಿಷ್ಯ…

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ...

ನ್ಯಾಯಾಂಗದ ವಿರುದ್ಧ ಹೇಳಿಕೆ ಆರೋಪ; ಸಿಜೆಪಿ ನಾಯಕ ಸೌರವ್‌ ದಾಸ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್

ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ CJP ವಕ್ತಾರ...

ಶಿಕಾರಿಪುರ | ಖಾಸಗಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಶಿಕಾರಿಪುರ ಪಟ್ಟಣದ ಗಬ್ಬೂರು ಸಮೀಪ ಗುರುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ...

ಶಿವಮೊಗ್ಗ | ಸಾಮೂಹಿಕ ನಕಲಿಗೆ ಅವಕಾಶ! KSOU ಪ್ರಾದೇಶಿಕ ನಿರ್ದೇಶಕ ಬಿ.ಎಂ ಸ್ವಾಮಿ ವಿರುದ್ಧ ದೂರು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಶಿವಮೊಗ್ಗ ಪ್ರಾದೇಶಿಕ ಕೇಂದ್ರದಲ್ಲಿ ನಡೆದ...