ಮಧ್ಯಪ್ರದೇಶ | ಕಾಡಿಗೆ ಕಂಟಕವಾದ ಜೀರುಂಡೆ ಹಿಡಿದು ₹42 ಲಕ್ಷ ಗಳಿಸಿದ ಆದಿವಾಸಿಗಳು

Date:

ಮಧ್ಯಪ್ರದೇಶದ ಡಿಂಡೋರಿ ಜಿಲ್ಲೆಯ ಆದಿವಾಸಿ ಸಮುದಾಯಗಳು ಸಾಲ್‌ ಕಾಡುಗಳನ್ನು ರಕ್ಷಿಸುವ ಅರಣ್ಯ ಇಲಾಖೆಯ ವಿಶೇಷ ಅಭಿಯಾನದಲ್ಲಿ ಭಾಗವಹಿಸಿ ಕೇವಲ ಎರಡು ತಿಂಗಳಲ್ಲಿ ಸುಮಾರು ₹42 ಲಕ್ಷ ಆದಾಯ ಗಳಿಸಿವೆ.

- Advertisement -

ಜೂನ್‌ನಿಂದ ಜುಲೈ 30ರವರೆಗೆ ನಡೆದ ಅಭಿಯಾನದಲ್ಲಿ 400ರಿಂದ 500ಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳು ಪಾಲ್ಗೊಂಡಿದ್ದು, 21 ಲಕ್ಷಕ್ಕೂ ಹೆಚ್ಚು ಸಾಲ್‌ ಬೋರರ್‌ ಜೀರುಂಡೆಗಳನ್ನು (Sal Borer Beetles) ಸಂಗ್ರಹಿಸಿ ಅರಣ್ಯ ಇಲಾಖೆಗೆ ಒಪ್ಪಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ಅರಣ್ಯ ಇಲಾಖೆಯ ‘ಟ್ರ್ಯಾಪ್ ಟ್ರೀ ಆಪರೇಷನ್’ ಅಡಿಯಲ್ಲಿ ಗ್ರಾಮಸ್ಥರಿಗೆ ಹಿಡಿದ ಪ್ರತಿ ಜೀರುಂಡೆಗೆ ₹2 ನೀಡಲಾಗುತ್ತಿದೆ. ಜೀರುಂಡೆಗಳ ಸಂಖ್ಯೆ ಹೆಚ್ಚಾಗಿ ಸಾಲ್‌ ಕಾಡುಗಳಿಗೆ ವ್ಯಾಪಕ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ, ಅವುಗಳ ಸಂತಾನೋತ್ಪತ್ತಿ ನಿಯಂತ್ರಿಸುವ ಉದ್ದೇಶದಿಂದ ಈ ಅಭಿಯಾನ ಕೈಗೊಳ್ಳಲಾಗಿದೆ.

ಸಾಲ್‌ ಬೋರರ್‌ (Sal Borer Beetle) ಎಂಬುದು ಸಾಲ್‌ ಮರಗಳಿಗೆ ತೀವ್ರ ಹಾನಿ ಉಂಟುಮಾಡುವ ಕೀಟ. ಇದು ಮರದ ತೊಗಟೆಯೊಳಗೆ ನುಗ್ಗಿ ಮೊಟ್ಟೆ ಇಟ್ಟು, ಮರದ ಒಳಭಾಗವನ್ನು ತಿನ್ನುತ್ತಾ ಕ್ರಮೇಣ ಒಣಗುವಂತೆ ಮಾಡುತ್ತದೆ. ನಿಯಂತ್ರಿಸದಿದ್ದರೆ ಸಾವಿರಾರು ಮರಗಳು ನಾಶವಾಗುವ ಅಪಾಯವಿದೆ.

WhatsApp Image 2026 07 31 at 4.21.12 PM 1

ಡಿಂಡೋರಿ ಜಿಲ್ಲೆಯ ಪೂರ್ವ ಕರಂಜಿಯಾ, ಪಶ್ಚಿಮ ಕರಂಜಿಯಾ, ದಕ್ಷಿಣ ಸಮ್ನಾಪುರ ಮತ್ತು ಬಾಜಾಗ್ ಅರಣ್ಯ ವಲಯಗಳಲ್ಲಿ ಸುಮಾರು 30 ಸಾವಿರ ಹೆಕ್ಟೇರ್ ವ್ಯಾಪ್ತಿಯಲ್ಲಿರುವ 1.47 ಲಕ್ಷಕ್ಕೂ ಹೆಚ್ಚು ಸಾಲ್‌ ಮರಗಳು ಈ ಕೀಟದ ಬಾಧೆಗೆ ಒಳಗಾಗಿವೆ. ಕೆಲವು ಮರಗಳು ತೀವ್ರವಾಗಿ ಹಾನಿಗೊಳಗಾಗಿದ್ದು, ಮರುಜೀವ ಪಡೆಯುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮಸ್ಥರು ವಿಶೇಷವಾಗಿ ಸಿದ್ಧಪಡಿಸಿದ ‘ಟ್ರ್ಯಾಪ್ ಟ್ರೀ’ಗಳಿಂದ ಜೀರುಂಡೆಗಳನ್ನು ಸಂಗ್ರಹಿಸಿ ಅರಣ್ಯ ಇಲಾಖೆಗೆ ಒಪ್ಪಿಸುತ್ತಿದ್ದಾರೆ. ಕೆಲವರು ಅವುಗಳನ್ನು ಹಾರದ ರೂಪದಲ್ಲಿ ಹೆಣೆದು ತರುವ ದೃಶ್ಯಗಳು ಕಂಡುಬಂದಿವೆ. ಸಂಗ್ರಹಿಸಲಾದ ಎಲ್ಲಾ ಜೀರುಂಡೆಗಳನ್ನು ನಂತರ ತಜ್ಞರ ಮೇಲ್ವಿಚಾರಣೆಯಲ್ಲಿ ವೈಜ್ಞಾನಿಕ ವಿಧಾನದಲ್ಲಿ ನಾಶಪಡಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಅರಣ್ಯ ಇಲಾಖೆ ಕೆಲವು ಆಯ್ದ ಮರಗಳನ್ನು ‘ಟ್ರ್ಯಾಪ್ ಟ್ರೀ’ಗಳಾಗಿ ಬಳಸುತ್ತದೆ. ಈ ಮರಗಳತ್ತ ಜೀರುಂಡೆಗಳು ಹೆಚ್ಚು ಆಕರ್ಷಿತವಾಗುವುದರಿಂದ ಅವುಗಳನ್ನು ಸುಲಭವಾಗಿ ಸಂಗ್ರಹಿಸಿ ನಾಶಪಡಿಸಲಾಗುತ್ತದೆ. ಇದರಿಂದ ಕೀಟಗಳ ಸಂತಾನೋತ್ಪತ್ತಿ ನಿಯಂತ್ರಣಕ್ಕೆ ಬರುತ್ತದೆ.

ಕೀಟದ ಹಾವಳಿ ನಿಯಂತ್ರಿಸಲು ಸೋಂಕಿತ 1.47 ಲಕ್ಷಕ್ಕೂ ಹೆಚ್ಚು ಸಾಲ್‌ ಮರಗಳನ್ನು ಕಡಿದು ತೆರವುಗೊಳಿಸಲು ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅನುಮತಿ ಕೋರಲಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (PCCF) ಶುಭ್ರಾಂಜನ ಸೇನ್ ತಿಳಿಸಿದ್ದಾರೆ.

WhatsApp Image 2026 07 31 at 4.21.19 PM

“ಈ ಮರಗಳು ಜಿಲ್ಲೆಯ ಒಟ್ಟು ಸಾಲ್‌ ಕಾಡಿನ ಶೇ.15ರಷ್ಟಿವೆ. ಸೋಂಕಿತ ಮರಗಳನ್ನು ತೆರವುಗೊಳಿಸಿದರೆ ಜೀರುಂಡೆಗಳ ಸಂತಾನೋತ್ಪತ್ತಿ ತಾಣಗಳು ಕಡಿಮೆಯಾಗಲಿದ್ದು, ಕೀಟದ ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಾಗಲಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಂಗಾಳ | ಆದಿನಾ ಮಸೀದಿಗೆ ಹಿಂದೂ ಸಂಘಟನೆ ಲಗ್ಗೆ; ದಾವೆ ತಳ್ಳಿಹಾಕಿದ ಇತಿಹಾಸಕಾರರು

ತಜ್ಞರ ಪ್ರಕಾರ, ಸುಮಾರು ಮೂರು ದಶಕಗಳ ಬಳಿಕ ಸಾಲ್‌ ಬೋರರ್‌ ಕೀಟದ ಹಾವಳಿ ಮತ್ತೆ ಕಾಣಿಸಿಕೊಂಡಿದೆ. 1996ರಿಂದ 2001ರ ಅವಧಿಯಲ್ಲಿ ಈ ಕೀಟವು ಮೂರು ಜಿಲ್ಲೆಗಳಲ್ಲಿ ಸುಮಾರು 3.5 ಲಕ್ಷ ಸಾಲ್‌ ಮರಗಳನ್ನು ನಾಶಪಡಿಸಿತ್ತು.

ಪ್ರಸ್ತುತ ಹಾವಳಿಯನ್ನು ಕಳೆದ ಡಿಸೆಂಬರ್‌ನಲ್ಲಿ ಅರಣ್ಯ ಇಲಾಖೆ ಪತ್ತೆಹಚ್ಚಿತ್ತು. ಕಳೆದ ವರ್ಷ ಸುರಿದ ಭಾರೀ ಮಳೆಯಿಂದ ಡಿಂಡೋರಿ-ಅಮರಕಂಟಕ ಪ್ರದೇಶದಲ್ಲಿ ತೇವಾಂಶ ಶೇ.90ರಷ್ಟು ಹೆಚ್ಚಾಗಿದ್ದು, ಕೀಟಗಳ ಹರಡುವಿಕೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂದು ಜಬಲ್ಪುರದ ಉಷ್ಣವಲಯ ಅರಣ್ಯ ಸಂಶೋಧನಾ ಸಂಸ್ಥೆ (TFRI)ಯ ಹಿರಿಯ ವಿಜ್ಞಾನಿ ಡಾ. ಸಿ. ಮೋಹನ್ ತಿಳಿಸಿದ್ದಾರೆ.

ಸಾಲ್‌ (Shorea robusta) ಮಧ್ಯ ಮತ್ತು ಪೂರ್ವ ಭಾರತದ ಪ್ರಮುಖ ಅರಣ್ಯ ಮರಗಳಲ್ಲಿ ಒಂದಾಗಿದೆ. ಇದರ ಮರದ ದಿಮ್ಮಿ ಕಟ್ಟಡ ನಿರ್ಮಾಣಕ್ಕೆ ಬಳಸಲಾಗುತ್ತದೆ. ಎಲೆಗಳನ್ನು ತಟ್ಟೆ ತಯಾರಿಕೆಗೆ ಬಳಸಲಾಗುತ್ತದೆ. ಅಲ್ಲದೆ, ಅನೇಕ ಕಾಡುಜೀವಿಗಳ ಆವಾಸಸ್ಥಾನವಾಗಿರುವುದರಿಂದ ಸಾಲ್‌ ಕಾಡುಗಳು ಜೀವವೈವಿಧ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿವೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯಾಂಗದ ವಿರುದ್ಧ ಹೇಳಿಕೆ ಆರೋಪ; ಸಿಜೆಪಿ ನಾಯಕ ಸೌರವ್‌ ದಾಸ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್

ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ CJP ವಕ್ತಾರ...

ಶಿಕಾರಿಪುರ | ಖಾಸಗಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಶಿಕಾರಿಪುರ ಪಟ್ಟಣದ ಗಬ್ಬೂರು ಸಮೀಪ ಗುರುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ...

ದೆಹಲಿ | ‘ಫಾರ್ಮ್ 7’ ಅಸ್ತ್ರ ಬಳಸಿ ಮುಸ್ಲಿಂ ಮತದಾರರ ಹೆಸರು ಡಿಲೀಟ್ ಮಾಡಿಸಿದ ಬಿಜೆಪಿ BLAಗಳು! 

ದೆಹಲಿಯಲ್ಲಿ ಸುದೀರ್ಘ ಕಾಲದಿಂದ ವಾಸಿಸುತ್ತಿರುವ ಮುಸ್ಲಿಂ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಶಿವಮೊಗ್ಗ | ಸಾಮೂಹಿಕ ನಕಲಿಗೆ ಅವಕಾಶ! KSOU ಪ್ರಾದೇಶಿಕ ನಿರ್ದೇಶಕ ಬಿ.ಎಂ ಸ್ವಾಮಿ ವಿರುದ್ಧ ದೂರು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಶಿವಮೊಗ್ಗ ಪ್ರಾದೇಶಿಕ ಕೇಂದ್ರದಲ್ಲಿ ನಡೆದ...