ಈ ದಿನ ಕವಿತೆ |‌ ಪೇಪರ್- ಜಯಂತ್‌ ಪರ್‌ಮಾರ್

Date:

ಗುಜರಾತಿನ ಅಹಮದಾಬಾದಿನವರಾದ ಜಯಂತ್ ಪರ್ ಮಾರ್ ಗುಜರಾತಿ ಹಾಗೂ ಉರ್ದು ಎರಡೂ ಭಾಷೆಗಳಲ್ಲಿ ಮಹತ್ವದ ಕವಿತೆಗಳನ್ನು ರಚಿಸಿದ್ದಾರೆ. ಜಯಂತ್ ಶ್ರೇಷ್ಠ ಕಲಾವಿದರೂ ಹೌದು. ಅವರ ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಸಿ ಎಚ್‌ ಭಾಗ್ಯ

- Advertisement -

ಪೇಪರ್-೧
ಪುರಾತನ ಕಾಲದಲ್ಲಿ
ಅವರು ತಾಳೆಗರಿಯ ಮೇಲೆ ಬರೆಯುತ್ತಿದ್ದರು,
ಮರದ ತೊಗಟೆಯ ಮೇಲೆ,
ಕಲ್ಲಿನ ಮೇಲೆ
ತಾಮ್ರದ ಹಾಳೆಯ ಮೇಲೆ.
ನಾಲ್ಕು ವೇದಗಳನ್ನು
ತಾಳೆಗರಿಯ ಮೇಲೆ
ಬರೆಯಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದೆಹಲಿಯ ಬಂಧನಗಳು ಮತ್ತು ಮಹಾತ್ಮ ಗಾಂಧಿ

ವ್ಯವಸ್ಥೆಗಳು ದುರ್ಬಲವಾಗುತ್ತಿರುವ ಇಂದಿನ ಕಾಲದಲ್ಲಿ, ಕೋಪಗೊಂಡ ಯುವಕರ ಬೀದಿ ಪ್ರತಿಭಟನೆಗಳೇ ಒಂದು ಹೊಸ ನಿಯಂತ್ರಣ ವ್ಯವಸ್ಥೆಯಾಗಿ ನಿಲ್ಲುತ್ತಿವೆ ಎಂದೆನಿಸುತ್ತದೆ. ಜನರಿಗೆ ಮತದಾನದ ಹಕ್ಕನ್ನು ಮತ್ತೆ ದೊರಕಿಸಿಕೊಡುವುದಕ್ಕೂ ಇಂತಹ ಹೋರಾಟಗಳತ್ತ ಮುಖ ಮಾಡಬೇಕಾಗಿದೆ. ಸಾರ್ವಜನಿಕರು...

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಆದರೆ, ದಮನದ ಕರಾಳ ಕೃತ್ಯಗಳನ್ನು
ನನ್ನ ಶರೀರದ ಮೇಲೆ ಕೆತ್ತಲಾಗಿದೆ
ಇಂದಿಗೂ…!

ಪೇಪರ್ -೨
ಒಂದು ದಿನ
ಇಂಕು ನನ್ನನ್ನು ಪತ್ತೆ ಮಾಡಿತು
ಈ ಭೂಮಿಯ ಮನೆಮನೆಯ
ಎಳೆಯ ಕೈಗಳನ್ನು ತಲುಪಿದೆ
ಗಾಳಿಪಟವಾದೆ
ಮೋಡಗಳು, ಚುಕ್ಕಿ, ಚಂದ್ರರ ಜೊತೆ ಮಾತಾಡಲು.

ಪೆನ್ನಿನ ನಾಲಿಗೆಯು
ನನ್ನ ಕೈಗಳಿಗೆ ಮುತ್ತಿಟ್ಟಾಗ
ರಂಧ್ರ ರಂಧ್ರವೂ ಸಂತೂರ್ ನುಡಿಸಿದವು
ಕುಂಚದ ಸ್ಪರ್ಶವು
ನನ್ನ ಶರೀರದೊಡನೆ
ಬಣ್ಣದ ಹೋಲಿ ಆಡಿತು.
ನನ್ನ ನರನಾಡಿಗಳಲ್ಲಿನ
ಕಾಮನ ಬಿಲ್ಲು
ಮೈ ಮುರಿದು ಎಚ್ಚತ್ತಿತು.
ಪುಟ್ಟ ಮಗುವಿನ ಎಳೆಯ ಬೆರಳುಗಳು
ನನ್ನ ಶರೀರದ ಮೇಲೆ ರಂಗುರಂಗಿನ ಕನಸುಗಳನ್ನು ಬರೆದವು
ಸೂರ್ಯ, ಚಿಟ್ಟೆ, ಕೆಂಗುಲಾಬಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ ನಂಬಿಕೆಯ ಬಿಕ್ಕಟ್ಟು

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ....

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ನವಿ ಪಿಳ್ಳೈಗೆ ಒಲಿದ ಶಾಂತಿ ಪುರಸ್ಕಾರ

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ ಅಪರೂಪದ ಕಲಾವಿದ

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ ಪಿಳ್ಳೈ ಮುಡಿಗೇರಿದ ನೊಬೆಲ್ ಶಾಂತಿ ಪುರಸ್ಕಾರ!

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ...