‘ಕಾಕ್ರೋಚ್‌ ಪಾರ್ಟಿ’ ಹವಾ: ಪ್ರತಿಪಕ್ಷಗಳಿಗೆ ಕೊಟ್ಟ ಎಚ್ಚರಿಕೆ ಏನು?

Date:

ಈ ʼಕಾಕ್ರೋಚ್‌ ಪಾರ್ಟಿʼಯ ವಿದ್ಯಮಾನ ಮತ್ತು ಅದಕ್ಕೆ ಸಿಗುತ್ತಿರುವ ಅಭೂತಪೂರ್ವ ಜನಬೆಂಬಲವು ಕೇಂದ್ರದ ಮೋದಿ ಸರ್ಕಾರದ ಕುರಿತು ದೇಶದ ಯುವಜನತೆಯಲ್ಲಿ ಉಂಟಾಗಿರುವ ತೀವ್ರ ಆಶಾಭಂಗವನ್ನು ಸ್ಪಷ್ಟವಾಗಿ ತೋರಿಸುತ್ತಿದೆ.

- Advertisement -

ಇತ್ತೀಚೆಗೆ ಒಂದು ಮೀಮ್‌ ಪೇಜ್‌ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇಂದು ದೇಶದ ಸಾಂಪ್ರದಾಯಿಕ ರಾಜಕೀಯ ಪಕ್ಷಗಳನ್ನೂ ಮೀರಿ ಲಕ್ಷಾಂತರ ಅನುಯಾಯಿಗಳನ್ನು ತನ್ನತ್ತ ಸೆಳೆಯುತ್ತಿದೆ. ಈ ವಿದ್ಯಮಾನ ಭಾರತದ ಯುವಜನತೆಯ ಅಂತರಾಳದ ಬೇಗುದಿಯ ಪ್ರತಿಬಿಂಬವಾಗಿ ಹೊರಹೊಮ್ಮಿದಂತೆ ಗೋಚರಿಸುತ್ತಿದೆ. ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಈ ಬಗ್ಗೆ ವಿಶ್ಲೇಷಣೆ ನೀಡುತ್ತಾ, ಇದು ಯುವಜನತೆಯಲ್ಲಿರುವ ಹತಾಶೆ ಮತ್ತು ಅಸಮಾಧಾನವನ್ನು ವ್ಯಕ್ತಪಡಿಸಲು ಸಿಕ್ಕಿರುವ ಒಂದು ಪ್ರಬಲ ವೇದಿಕೆ ಎಂದು ಸಂದರ್ಶನವೊಂದರಲ್ಲಿ ಬಣ್ಣಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಈ ಸಿಜೆಪಿ ವಿದ್ಯಮಾನ ಮತ್ತು ಅದಕ್ಕೆ ಸಿಗುತ್ತಿರುವ ಅಭೂತಪೂರ್ವ ಜನಬೆಂಬಲವು ಕೇಂದ್ರದ ಮೋದಿ ಸರ್ಕಾರದ ಕುರಿತು ದೇಶದ ಯುವಜನತೆಯಲ್ಲಿ ಉಂಟಾಗಿರುವ ತೀವ್ರ ಆಶಾಭಂಗವನ್ನು ಸ್ಪಷ್ಟವಾಗಿ ತೋರಿಸುತ್ತಿದೆ.

ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿನ ಗದ್ದಲದಲ್ಲಿ ತಮ್ಮ ದನಿಯೇ ಕೇಳುತ್ತಿಲ್ಲ ಎಂದು ಭಾವಿಸಿರುವ ಯುವ ವರ್ಗ, ವ್ಯಂಗ್ಯ ಮತ್ತು ಹಾಸ್ಯದ ಮೂಲಕವೇ ಗಂಭೀರ ಪ್ರಶ್ನೆಗಳನ್ನೆತ್ತಲು ಈ ವೇದಿಕೆಯನ್ನು ಬಳಸಿಕೊಳ್ಳುತ್ತಿದೆ.

ಯುವಜನತೆ ಇಂತಹ ವೇದಿಕೆಗಳತ್ತ ವಾಲುತ್ತಿರುವುದಕ್ಕೆ ಪ್ರಮುಖ ಕಾರಣ ಅವರಲ್ಲಿರುವ ವ್ಯವಸ್ಥೆಯ ಮೇಲಿನ ತೀವ್ರ ಅಸಮಾಧಾನ ಮತ್ತು ಆಕ್ರೋಶ. ಉದ್ಯೋಗ ಸೃಷ್ಟಿಯ ಹುಸಿ ಭರವಸೆಗಳು, ಗಗನಕ್ಕೇರುತ್ತಿರುವ ಹಣದುಬ್ಬರ ಮತ್ತು ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಅಲುಗಾಡಿಸಿದ ನೀಟ್ (NEET) ಪರೀಕ್ಷೆಯ ಸರಣಿ ಅಕ್ರಮಗಳು ದೇಶದ ಕೋಟ್ಯಂತರ ಯುವಕರ ತಾಳ್ಮೆಯ ಕಟ್ಟೆಯನ್ನು ಒಡೆದುಹಾಕಿವೆ. ವರ್ಷಗಟ್ಟಲೆ ಹಗಲಿರುಳು ಶ್ರಮಿಸಿ ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪೇಪರ್ ಸೋರಿಕೆಯ ಸುದ್ದಿ ಆಘಾತ ತಂದಿದ್ದು, ಕೆಲವರನ್ನು ಆತ್ಮಹತ್ಯೆಯಂತಹ ಕಠಿಣ ನಿರ್ಧಾರಗಳತ್ತಲೂ ತಳ್ಳಿದೆ.

ತರೂರ್ ಅವರ ಪ್ರಕಾರ, ಇಂತಹ ವೇದಿಕೆಗಳನ್ನು ಮತ್ತು ಅವರ ಧ್ವನಿಯನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿಯಾಗಿದ್ದು, ಜನರು ತಮ್ಮ ಹತಾಶೆಯನ್ನು ಹೊರಹಾಕಲು ಮುಕ್ತ ಮಾರ್ಗಗಳ ಅಗತ್ಯವಿದೆ. CJP ಯಂತಹ ವೇದಿಕೆಗಳು ತಮಾಷೆಗಾಗಿ ಸೃಷ್ಟಿಯಾದದ್ದಲ್ಲ; ಇವು ವ್ಯವಸ್ಥೆಯ ವೈಫಲ್ಯಗಳ ವಿರುದ್ಧ ಯುವಜನತೆ ತೋರುತ್ತಿರುವ ಅಸಹನೆ ಹಾಗೂ ಪ್ರತಿಭಟನೆಯ ಮಾರ್ಗಗಳಾಗಿವೆ.

ಇದೇ ವೇಳೆ ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ತಮಿಳುನಾಡಿನಲ್ಲಿ ನಟ ವಿಜಯ್ ಅವರ TVK ಪಕ್ಷದ ಉದಯ ಮತ್ತು ಇತ್ತೀಚಿನ ಚುನಾವಣಾ ಸಂಚಲನಗಳನ್ನು ಗಮನಿಸಿದರೆ, ದೇಶಾದ್ಯಂತ ಯುವ ಸಮುದಾಯವು ಹೊಸ ಪರ್ಯಾಯ ಮಾರ್ಗಗಳ ಕಡೆ ಮುಖ ಮಾಡುತ್ತಿರುವುದು ಅರ್ಥವಾಗುತ್ತದೆ. ಇಂದಿನ ‘ಜೆನ್-ಜಿ’ (Gen-Z) ಮತ್ತು ಮಿಲೇನಿಯಲ್ಸ್ ತಲೆಮಾರು ಡೋಂಗಿ ಭಾಷಣಗಳನ್ನು ನಂಬುವ ಸ್ಥಿತಿಯಲ್ಲಿಲ್ಲ. ಅವರು ಹಳೆಯ ಜಾತಿ-ಧರ್ಮದ ರಾಜಕಾರಣಕ್ಕಿಂತ ಹೆಚ್ಚಾಗಿ ತಮ್ಮ ದೈನಂದಿನ ಬದುಕು, ಶಿಕ್ಷಣ ಮತ್ತು ಉದ್ಯೋಗದ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ, ಸಿಜೆಪಿ ಮತ್ತು ಇತರ ಪ್ರಾದೇಶಿಕ ಹೊಸ ಪಕ್ಷಗಳ ಬೆಳವಣಿಗೆ ವಿರೋಧ ಪಕ್ಷಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ವಿರೋಧ ಪಕ್ಷಗಳು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುವುದರ ಜತೆಗೆ, ಈ ಯುವಶಕ್ತಿಯನ್ನು ಚುನಾವಣಾ ರಾಜಕೀಯದೊಂದಿಗೆ ಹೇಗೆ ಜೋಡಿಸಿಕೊಳ್ಳಬೇಕು ಎಂಬುದನ್ನು ಗಂಭೀರವಾಗಿ ಆಲೋಚಿಸಬೇಕಿದೆ ಎಂದು ತರೂರ್‌ ಅಭಿಪ್ರಾಯಿಸಿದ್ದಾರೆ.

ಯುವ ಸಮುದಾಯ ಸೃಷ್ಟಿಸುತ್ತಿರುವ ಡಿಜಿಟಲ್ ಅಲೆಗೆ ನಿರ್ಬಂಧ ಹೇರಿರುವುದು ಕೇಂದ್ರ ಸರ್ಕಾರದ ಅಪ್ರಬುದ್ಧತೆಯನ್ನು ತೋರಿಸುತ್ತದೆ. ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಅಥವಾ ವೆಬ್‌ಸೈಟ್‌ಗಳನ್ನು ಬಂದ್ ಮಾಡಿಸುವುದರಿಂದ ಜನರ ಮನಸ್ಸಿನಲ್ಲಿರುವ ಆಕ್ರೋಶವನ್ನು ತಣಿಸಲು ಸಾಧ್ಯವಿಲ್ಲ. ಸಿಜೆಪಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಕೆಲವು ಪ್ರಸ್ತಾವನೆಗಳು ಮತ್ತು ಪ್ರಣಾಳಿಕೆಯ ಅಂಶಗಳು ಇಂದಿನ ಯುವಕರ ಅಗತ್ಯತೆಗಳೇ ಆಗಿವೆ. ಇಂತಹ ಸಂದರ್ಭದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಈ ಬೇಡಿಕೆಗಳನ್ನು ಮುಕ್ತವಾಗಿ ಚರ್ಚಿಸಿ, ಶಾಸನಸಭೆಗಳಲ್ಲಿ ಇವುಗಳಿಗೆ ಧ್ವನಿಯಾಗಬೇಕಿದೆ. ಡಿಜಿಟಲ್ ಕ್ರಾಂತಿಯ ಹೊತ್ತಿನಲ್ಲಿ ಸಾಂಪ್ರದಾಯಿಕ ರಾಜಕೀಯ ಶೈಲಿಯನ್ನೇ ಹಿಡಿದು ಜೋತಾಡುತ್ತಿದ್ದರೆ, ಯುವ ಸಮುದಾಯ ಈ ಇಡೀ ಹೊಲಸು ವ್ಯವಸ್ಥೆಯಿಂದಲೇ ದೂರ ಸರಿಯುವ ಅಪಾಯವಿದೆ.

ಇದನ್ನೂ ಓದಿ: ಲಿವಿಂಗ್ ರೂಮಿನಲ್ಲಿ ಗೂಢಚಾರ, ಗ್ಯಾರೇಜಿನಲ್ಲಿ ಡೇಟಾ ಕಳ್ಳ: ಯಾರೀ ʼಡಿಜಿಟಲ್‌ ಸ್ಪೈʼಗಳು?

ಕಾಕ್ರೋಚ್‌ ಪಾರ್ಟಿಯು, ದೇಶದ ರಾಜಕೀಯ ವ್ಯವಸ್ಥೆಯು ಸದ್ಯ ಜನರ ಮನಸ್ಸಿನಲ್ಲಿ ಯಾವ ಸ್ಥಾನದಲ್ಲಿದೆ ಎಂದು ತೋರಿಸುವ ಕನ್ನಡಿಯಂತೆ ಕಾಣುತ್ತಿದೆ. ಅದು ಸೃಷ್ಟಿಸಿರುವ ಹವಾ ಪ್ರತಿಪಕ್ಷಗಳಿಗೆ ಎಚ್ಚರಿಕೆ. ಇಂದಿನ ಯುವಕರಿಗೆ ಬಿಟ್ಟಿ ಸಲಹೆ, ಡೋಂಗಿ ಭಾಷಣ, ಹುಸಿ ಭರವಸೆಗಳ ರಾಜಕಾರಣ ಬೇಕಾಗಿಲ್ಲ, ಅವರ ಬದುಕಿಗೊಂದು ಭದ್ರ ಭವಿಷ್ಯದ ʼಗ್ಯಾರಂಟಿʼ ಬೇಕಾಗಿದೆ. ಈ ಆಕ್ರೋಶದ ಹಿಂದೆ ಕಾಯುತ್ತಿರುವ ರಾಜಕೀಯ ಅವಕಾಶವನ್ನು ಪ್ರತಿಪಕ್ಷಗಳು ಹೇಗೆ ಬಳಸಿಕೊಳ್ಳಲಿವೆ ಮತ್ತು ಅದನ್ನು ಚುನಾವಣಾ ಯಶಸ್ಸಾಗಿ ಹೇಗೆ ಪರಿವರ್ತಿಸಲಿವೆ ಎಂಬುದರ ಮೇಲೆ ಮುಂದಿನ ದೇಶದ ರಾಜಕೀಯ ದಿಕ್ಸೂಚಿ ನಿರ್ಧಾರವಾಗಲಿದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...