ನೈಸ್ ರಸ್ತೆಯ ಟಾಕ್ಸಿಕ್ ಮನರಂಜನೆ

Date:

ಸದ್ಯ ಚಿತ್ರರಂಗದಲ್ಲಿ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಪರ-ವಿರೋಧ ಚರ್ಚೆಗಳು ಜೋರಾಗಿವೆ. ಇದೇ ಹೊತ್ತಿನಲ್ಲಿ, ಕರ್ನಾಟಕದ ರಾಜಕೀಯವೂ ಕೂಡ ತನ್ನದೇ ಆದ ಟಾಕ್ಸಿಕ್ ಸಿನಿಮಾವನ್ನು ಕಂಡುಕೊಂಡಿದೆ. ನೈಸ್ ರಸ್ತೆಯಲ್ಲಿ ರಾಜಕಾರಣಿಗಳೇ ಮಹಾನಟರು ಮತ್ತು ಜನರೇ ಮುಗ್ಧ ಪ್ರೇಕ್ಷಕರು. ಒಂದೇ ವ್ಯತ್ಯಾಸವೆಂದರೆ ಈ ಚಲನಚಿತ್ರವು ಮೂರು ದಶಕಗಳಿಂದ ನಡೆಯುತ್ತಿದೆ. ಮತ್ತು ಅದು ಯಾವಾಗ ಕೊನೆಗೊಳ್ಳುತ್ತದೆ ಎಂದು ಯಾರಿಗೂ ತಿಳಿದಿಲ್ಲ.

- Advertisement -

ಟಾಕ್ಸಿಕ್ ಚಿತ್ರವು ಹಿಂಸಾಚರ ಮತ್ತು ಅಶ್ಲೀಲ ದೃಶ್ಯಗಳಿಂದ ಕೂಡಿದೆ. ನೈಸ್ ರಸ್ತೆಯ ವಿಚಾರದಲ್ಲಿ ನಮ್ಮ ರಾಜಕಾರಣಿಗಳ ಹಿಂಸೆ  ಮಾತಿನ ರೂಪದಲ್ಲಿದೆ. ಎಚ್. ಡಿ. ದೇವೇಗೌಡರು ನೈಸ್ ರೋಡನ್ನು “ಲೂಟಿ ಪ್ರಾಜೆಕ್ಟ್” ಮತ್ತು ಅದರ ಮಾಲೀಕ ಅಶೋಕ್ ಖೇಣಿಯನ್ನು  “ಲ್ಯಾಂಡ್ ಮಾಫಿಯಾ” ಎಂದು ಕರೆದರು. ಮತ್ತು ಕೋಪದಲ್ಲಿ ಅಂದಿನ ಮುಖ್ಯಮಂತ್ರಿ ಆಗಿದ್ದ ಬಿ.ಎಸ್.ಯಡಿಯೂರಪ್ಪ ರವರನ್ನು “bloody bastard” ಎಂದರು. ಮತ್ತೆ ಅದಕ್ಕೆ ಪ್ರತಿಕ್ರಿಸಿದ ಬಿ.ಎಸ್. ಯಡಿಯೂರಪ್ಪ ಅವರು “ಕಾನೂನು ಹೇಳಿದಂತೆ ನಾವು ನಡೆಯುತ್ತೇವೆ” ಎಂದು ಹೇಳಿದರು.  ವರ್ಷಗಳ ನಂತರ ಎಚ್. ಡಿ. ಕುಮಾರಸ್ವಾಮಿ ಯವರು ಟೋಲ್ ಮೂಲಕ ಜನರನ್ನು ಲೂಟಿ ಮಾಡುತ್ತಿದ್ದಾರೆ ಮತ್ತು ಜನರು ಇಷ್ಟೊತ್ತಿಗೆ ಟೋಲ್ ಕೊಡದೆ ನುಗ್ಗಬೇಕಿತ್ತು ಎಂದು  ಪ್ರಚೋದಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಡಿ.ಕೆ. ಶಿವಕುಮಾರ್ ಪ್ರತಿಯಾಗಿ, “ನೈಸ್ ಯೋಜನೆಯನ್ನು ರೂಪಿಸಿದ್ದು ಯಾರು? ಅವರೇ. ಆ ರಸ್ತೆ ನಿರ್ಮಾಣವಾದ ಕಾರಣವೇ ಇಂದು ಬೆಂಗಳೂರು ಉಳಿದುಕೊಂಡಿದೆ” ಎಂದು ಹೇಳಿದರು. ಟಾಕ್ಸಿಕ್ನಲ್ಲಿ ಬಂದೂಕುಗಳು ಸಂಭಾಷಣೆಯನ್ನು ಮುಚ್ಚಿಹಾಕುತ್ತವೆ.  ನೈಸ್ ರಸ್ತೆಯ ರಾಜಕೀಯದಲ್ಲಿ ಸಂಭಾಷಣೆಯೇ ಗುಂಡಿನ ಸದ್ದಾಗಿದೆ.

ಟಾಕ್ಸಿಕ್ ಸಿನಿಮಾ ಮೂರು ಗಂಟೆಗೂ ಹೆಚ್ಚು ಅವಧಿಯದ್ದಾಗಿದ್ದು, ಸರಳ ಕಥೆಯನ್ನು ಅಗತ್ಯಕ್ಕಿಂತ ಹೆಚ್ಚು ಎಳೆದಿದ್ದಾರೆ. ನೈಸ್ ರಸ್ತೆಯು ಸುಮಾರು ಮೂರು ದಶಕಗಳಿಂದ ನಡೆಯುತ್ತಿದೆ. ಸರ್ಕಾರಗಳು ಬದಲಾಗಿವೆ, ರಾಜಕೀಯ ಮೈತ್ರಿಗಳು ಬದಲಾಗಿವೆ, ನ್ಯಾಯಾಲಯದ ವಿಚಾರಣೆಗಳು ಮುಂದುವರಿದಿವೆ,ಆದರೆ ವಿವಾದ  ಮತ್ತು ಮೋಸ ಜನಸಾಮಾನ್ಯರಿಗೆ ಎಡೆಬಿಡದೆ ನಡೆಯುತ್ತಿದೆ. ಟಾಕ್ಸಿಕ್ ಸಿನಿಮಾವು ತುಂಬಾ ಉದ್ದವಾಗಿದೆ . ನೈಸ್ ರಸ್ತೆಗೆ ಅದರ ಬಗ್ಗೆ ಚಿಂತೆಯೇ ಇಲ್ಲ: ಅದು ಮೂರು ಗಂಟೆಯ ಗಡಿಯನ್ನು ಮೂರು ದಶಕಗಳ ಹಿಂದೆಯೇ ದಾಟಿದೆ.

ಟಾಕ್ಸಿಕ್ ನಲ್ಲಿ ಪಾತ್ರಗಳು ಹೆಚ್ಚು, ಮಾಹಿತಿ ಚದುರಿದ್ದು, ಕಥೆಯನ್ನು ಅನುಸರಿಸುವುದು ಕಷ್ಟ.  ನೈಸ್ ರಸ್ತೆಗೂ  ತನ್ನದೇ ಆದ ದೊಡ್ಡ ಪಾತ್ರವರ್ಗವಿದೆ.

ದೇವೇಗೌಡರು, ಬಿ. ಎಸ್. ಯಡಿಯೂರಪ್ಪ, ಕುಮಾರಸ್ವಾಮಿ,  ಡಿ. ಕೆ. ಶಿವಕುಮಾರ್, ಟಿ. ಬಿ. ಜಯಚಂದ್ರ ಸಮಿತಿ ವರದಿ, ಅಶೋಕ್ ಖೇಣಿ,ವಿವಿಧ ಸರ್ಕಾರಗಳು, ರೈತರು, ಟೋಲ್, ನ್ಯಾಯಾಲಯಗಳು, ಭೂಸ್ವಾಧೀನ, ರಿಯಲ್ ಎಸ್ಟೇಟ್ ಮತ್ತು ಪರಸ್ಪರ ವಿರುದ್ಧದ ರಾಜಕೀಯ ಹೇಳಿಕೆಗಳು ನೈಸ್ ರಸ್ತೆಯ ಈ ಚಿತ್ರಕಥೆಯಲ್ಲಿ ಇಷ್ಟೊಂದು ಪಾತ್ರಗಳಿವೆ ಎಂದರೆ, ಯಾರು ನಾಯಕನ ಪಾತ್ರದಲ್ಲಿದ್ದಾರೆ ? ಎಂಬುದನ್ನು ನೆನಪಿಸಿಕೊಳ್ಳಲು ರಸ್ತೆಯೇ ಒಂದು ಸೂಚನಾ ಫಲಕವನ್ನು ಕೇಳಬೇಕಾದ ಪರಿಸ್ಥಿತಿ ಇದೆ.

ಟಾಕ್ಸಿಕ್‌ ನಲ್ಲಿ ಕಥೆಗಿಂತ ಯಶ್ ಅವರ ಸ್ಟೈಲ್‌ಗೆ ಹೆಚ್ಚು ಒತ್ತು ನೀಡಿದೆ. ನೈಸ್ ರಸ್ತೆಯ ಚರ್ಚೆಯಲ್ಲೂ ಅದೇ ಸಮಸ್ಯೆ ಕಾಣುತ್ತದೆ. ತಮ್ಮ  ಸ್ವಾರ್ಥ ರಾಜಕೀಯಕ್ಕೆ ಅಗತ್ಯವಾದ ಮೈಲೇಜ್ ಪಡೆಯಲು ಅದ್ದೂರಿ ಆರೋಪಗಳು, ಪತ್ರಿಕಾಗೋಷ್ಠಿಗಳು ಮತ್ತು ರಾಜಕೀಯ ಹೇಳಿಕೆಗಳು ನಡೆಯುತ್ತಿವೆ.

ಈ ಲೇಖನ ಓದಿದ್ದೀರಾ?: ನಾಗೇಂದ್ರ ಪ್ರಕರಣ | ಬಿಜೆಪಿ-ಕಾಂಗ್ರೆಸ್‌ ರಾಜಕೀಯ ಲೆಕ್ಕಾಚಾರವೇನು? ಒಂದೇ ಏಟಿಗೆ ಎರಡು ಹಕ್ಕಿ ಹೊಡೆವುದೇ

ಆದರೆ  ನ್ಯಾಯಾಲಯಕ್ಕೆ ಬೇಕಾದದ್ದು ಒಪ್ಪಂದದ ವಿವರಗಳು, ಭೂಸ್ವಾಧೀನ ಮತ್ತು  ಅದರ ಬಳಕೆಯ ಬಗ್ಗೆ ಸ್ಪಷ್ಟ ವಿವರಣೆ, ಟೋಲ್ ಲೆಕ್ಕಾಚಾರ ಹಾಗೂ  ಇತರೆ  ಪ್ರಶ್ನೆಗಳಿಗೆ ಸಂಪೂರ್ಣ  ಮಾಹಿತಿ.

  ಜೊತೆಗೆ  ನೈಸ್ ಸಂಸ್ಥೆಯ ಪ್ರಮುಖ ಲೋಪಗಳಾದ ಹೆಚ್ಚುವರಿ ಭೂಸ್ವಾಧೀನ, ಅಕ್ರಮ ಗಣಿಗಾರಿಕೆ,  ರಿಯಲ್ ಎಸ್ಟೇಟ್ ಮತ್ತು  ಒಪ್ಪಂದ ಉಲ್ಲಂಘನೆಗಳ ಮೇಲಿನ ಸರ್ಕಾರದ ಕ್ರಮಕ್ಕಾಗಿ ಜನ ಕಾಯುತ್ತಿದ್ದಾರೆ.

ಮೂರು ದಶಕಗಳ ನಂತರ, ನೈಸ್ ರಸ್ತೆ ಕಥೆಯ ಅತ್ಯಂತ ಭಾವನಾತ್ಮಕ ಪಾತ್ರ ರಾಜಕಾರಣಿಯಲ್ಲ,ಅದು ನಾಗರೀಕ. ಹೆಚ್ಚುತ್ತಿರುವ ಟೋಲ್ ದರವನ್ನು  ಕೊಟ್ಟು ಸಂಚರಿಸುತ್ತಾ, ಟಾಕ್ಸಿಕ್ ಸಿನಿಮಾವನ್ನು ದುಬಾರಿ ಶುಲ್ಕ ಕೊಟ್ಟು ನೋಡಿ  ಈ ಸಿನಿಮಾ ಕೊನೆಗೂ ಯಾವಾಗ ಮುಗಿಯುತ್ತದೆ ಎಂದು ತಲೆಕೆರೆದುಕೊಳ್ಳುವಂತಾಗಿದೆ ಮೂಕ ನಾಗರಿಕನ ಪರಿಸ್ಥಿತಿ……..

ಪೋಸ್ಟ್ ಹಂಚಿಕೊಳ್ಳಿ:

ಡಾ. ನಿಶ್ಚಿತ್ ಕೆ.ಆರ್
ಡಾ. ನಿಶ್ಚಿತ್ ಕೆ.ಆರ್
ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರು, ಬೆಂಗಳೂರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಬಾಗಲಕೋಟೆ | ನಿಲ್ದಾಣಗಳಿದ್ದರೂ ರಸ್ತೆಯಲ್ಲೇ ಬಸ್‌ ನಿಲುಗಡೆ; ಟ್ರಾಫಿಕ್ ಕಿರಿಕಿರಿಗೆ ಪ್ರಯಾಣಿಕರು ಹೈರಾಣ

ಬಾಗಲಕೋಟೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಬಿಸಿಲು,...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...