‘ಇರಾನ್ ವಿಚಾರದಲ್ಲಿ ಟ್ರಂಪ್‌ಗೆ ಸ್ಪಷ್ಟತೆ ಇಲ್ಲ’ ಲ್ಯಾರಿ ಜಾನ್ಸನ್ ಕೊಟ್ಟ ಕಾರಣಗಳೇನು? ಇಲ್ಲಿವೆ ನೋಡಿ…

Date:

ಲ್ಯಾರಿ ಸಿ. ಜಾನ್ಸನ್ ಅವರು ಸಿಐಎ (CIA) ಮಾಜಿ ಅಧಿಕಾರಿ ಮತ್ತು ಗುಪ್ತಚರ ವಿಶ್ಲೇಷಕ. ಅವರು ಅಮೆರಿಕದ ವಿದೇಶಾಂಗ ಇಲಾಖೆಯ ಭಯೋತ್ಪಾದನಾ ನಿರೋಧಕ ಕಚೇರಿಯಲ್ಲಿ ಮಾಜಿ ಯೋಜಕರು ಮತ್ತು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಸದ್ಯದ ಇಸ್ರೇಲ್-ಅಮೆರಿಕ-ಇರಾನ್ ಯುದ್ಧವನ್ನು ವಿಶ್ಲೇಷಿಸಿದ್ದಾರೆ...

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏನು ಮಾಡಲಿದ್ದಾರೆ ಎಂಬುದು ನನಗೆ ನಿಜವಾಗಿಯೂ ತಿಳಿದಿಲ್ಲ. ನನಗೆ ಬಂದ ಮಾಹಿತಿಯನ್ನು ಮಾತ್ರ ನಾನು ನಿಮಗೆ ಹೇಳಬಲ್ಲೆ. ಯುಎಇ(UAE)ಯಲ್ಲಿರುವ ನನ್ನ ಸ್ನೇಹಿತರೊಬ್ಬರು ನಿನ್ನೆ ತಡರಾತ್ರಿ ನನ್ನನ್ನು ಸಂಪರ್ಕಿಸಿ, ಅಲ್ಲಿನ ರಕ್ಷಣಾ ವಲಯದೊಂದಿಗೆ ನಿಕಟ ಸಂಬಂಧ ಹೊಂದಿರುವ ಎಮಿರೇಟಿ ಅಧಿಕಾರಿಯೊಬ್ಬರಿಂದ ಬಂದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆ ಅಧಿಕಾರಿಯ ಪ್ರಕಾರ, ಅಮೆರಿಕಾ ಮೇ 7ರಂದು ಅಂದರೆ ಗುರುವಾರ ಇರಾನ್ ಮೇಲೆ ದಾಳಿ ಮಾಡಲಿದೆ.

- Advertisement -

ಮಾಹಿತಿ ನೀಡಿದ ಮೂಲವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಸುದ್ದಿ ನಂಬಲರ್ಹವಾಗಿದೆ ಎಂದು ನನಗೆ ಅನ್ನಿಸುತ್ತದೆ. ಆದರೆ, ಆ ತಕ್ಷಣವೇ ಟ್ರಂಪ್ ಈ ಕೆಳಗಿನ ಪೋಸ್ಟ್ ಬಿಡುಗಡೆ ಮಾಡಿದರು:

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...
59d71c89 6bff 4afa ad73 050cfe20a343

ಟ್ರಂಪ್ ಅವರ ‘ಟ್ರೂತ್’ (Truth) ಪೋಸ್ಟ್ ಬೆನ್ನಲ್ಲೇ, ಯುರೋಪ್ ಮತ್ತು ಪಶ್ಚಿಮ ಏಷ್ಯಾದ ಮೇಲೆ ಅಮೆರಿಕದ ವಾಯುಪಡೆ ವಿಚಿತ್ರವಾಗಿ ಶಾಂತ ನಿಲುವು ತಳೆಯಿತು. ಕಳೆದ 24 ಗಂಟೆಗಳಲ್ಲಿ ಈ ಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ಅಮೆರಿಕದ ಮಿಲಿಟರಿ ವಿಮಾನಗಳ ಸಂಖ್ಯೆ ಗಣನೀಯವಾಗಿ ಕುಸಿಯಿತು. ನಿನ್ನೆ 27ಕ್ಕಿಂತ ಹೆಚ್ಚಿದ್ದ ವಿಮಾನಗಳು ಈಗ ಕೇವಲ 7ಕ್ಕೆ ಇಳಿಯಿತು. ವಿಶೇಷವೆಂದರೆ, ಇವೆಲ್ಲವೂ ಲಾಜಿಸ್ಟಿಕ್ಸ್ ಮತ್ತು ಟ್ಯಾಂಕರ್ ವಿಮಾನಗಳು: ರಾಮ್‌ಸ್ಟೈನ್, ಸ್ಪಾಂಗ್‌ಡಾಹ್ಲೆಮ್, ಟೆಲ್ ಅವಿವ್, ಅಬುಧಾಬಿ ಮತ್ತು ಅಲ್ ಉದೈದ್ ನಡುವೆ ಸಂಚರಿಸುತ್ತಿರುವ C-17 ಗ್ಲೋಬ್‌ಮಾಸ್ಟರ್‌ಗಳು, C-5M ಸೂಪರ್ ಗ್ಯಾಲಕ್ಸಿ ಮತ್ತು KC-135 ಸ್ಟ್ರಾಟೋಟ್ಯಾಂಕರ್‌ಗಳು ಮಾತ್ರ ಇಲ್ಲಿವೆ. ಯಾವುದೇ ಯುದ್ಧ ವಿಮಾನಗಳಿಲ್ಲ. ಯಾವುದೇ ಆಕ್ರಮಣಕಾರಿ ಸನ್ನದ್ಧತೆಯೂ ಕಾಣಿಸುತ್ತಿಲ್ಲ.

ದೃಢೀಕರಿಸದ ಮತ್ತೊಂದು ಮೂಲದ ಪ್ರಕಾರ, ಟ್ರಂಪ್ ಅವರ ಈ ದಿಢೀರ್ ಬದಲಾವಣೆಗೆ ಅವರ ಮುಂಬರುವ ಚೀನಾ ಪ್ರವಾಸ ಕಾರಣವಿರಬಹುದು. ಇರಾನ್ ವಿರುದ್ಧ ಅಮೆರಿಕಾ ಮತ್ತಷ್ಟು ಸಂಘರ್ಷಕ್ಕಿಳಿದರೆ, ಟ್ರಂಪ್ ಮತ್ತು ಕ್ಸಿ ಜಿನ್‌ಪಿಂಗ್ ಅವರ ಭೇಟಿಯನ್ನು ರದ್ದುಗೊಳಿಸುವುದಾಗಿ ಬೀಜಿಂಗ್ ಪರೋಕ್ಷ ಎಚ್ಚರಿಕೆ ನೀಡಿದೆ.

ಟ್ರಂಪ್ ಅವರು ‘ಆಪರೇಷನ್ ಪ್ರಾಜೆಕ್ಟ್ ಫ್ರೀಡಂ'(Operation Project Freedom) ಅನ್ನು ಸ್ಥಗಿತಗೊಳಿಸುತ್ತಿರುವುದಾಗಿ ಘೋಷಿಸಿದ ಸಮಯದಲ್ಲಿಯೇ, ಯುಎಇ ಮೇಲೆ ನಾವು ಯಾವುದೇ ಕ್ಷಿಪಣಿ ಅಥವಾ ಡ್ರೋನ್ ದಾಳಿ ಮಾಡಿಲ್ಲ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC) ಹೇಳಿತು. ಹಾಗಾದರೆ, ನಿನ್ನೆ ಮತ್ತು ಇಂದು ನಡೆದ ದಾಳಿಗಳು ಇರಾನ್ ಮೇಲೆ ಮತ್ತೆ ಯುದ್ಧ ಘೋಷಿಸುವಂತೆ ಪ್ರಚೋದಿಸಲು ಇಸ್ರೇಲ್ ಮಾಡಿದ ಸಂಚು ಇರಬಹುದೇ? ಹೌದು, ಸಂಚು ಇರಬಹುದು.

ಇದನ್ನು ಓದಿದ್ದೀರಾ?: ‘ಅಣ್ವಸ್ತ್ರ ತ್ಯಜಿಸಿದರೆ ಮಾತ್ರ ರಾಜಿ’ ಎಂದ ಟ್ರಂಪ್‌ಗೆ ಇರಾನ್‌ ತಿರುಗೇಟು

ಇನ್ನೊಂದೆಡೆ, ತಾತ್ಕಾಲಿಕವಾಗಿ ಶ್ವೇತಭವನದ ವಕ್ತಾರರಾಗಿ ಜವಾಬ್ದಾರಿ ವಹಿಸಿಕೊಂಡಿರುವ ಮಾರ್ಕೊ ರೂಬಿಯೊ ಅವರು ‘ಪ್ರಾಜೆಕ್ಟ್ ಫ್ರೀಡಂ’ ಬಗ್ಗೆ ಮಾತನಾಡಿದ್ದಾರೆ. ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳಿಗೆ ಮಾರ್ಗದರ್ಶನ ನೀಡುವ ಈ ಕಾರ್ಯಾಚರಣೆಯು ಸಂಪೂರ್ಣವಾಗಿ ರಕ್ಷಣಾತ್ಮಕವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ಇರಾನ್ ವಿಧಿಸಿರುವ ದಿಗ್ಬಂಧನವು ಕೇವಲ ಸುಂಕ ವಸೂಲಿ ಮಾಡುವ ಪ್ರಯತ್ನ ಎಂದು ಅವರು ಬಣ್ಣಿಸಿದ್ದಾರೆ. ಫೆಬ್ರವರಿ 28ರಂದು ಇರಾನ್ ಮೇಲೆ ನಡೆಸಲಾದ ‘ಆಪರೇಷನ್ ಎಪಿಕ್ ಫ್ಯೂರಿ’ಯ ಎಲ್ಲಾ ಗುರಿಗಳನ್ನು ಯಶಸ್ವಿಯಾಗಿ ತಲುಪಲಾಗಿದ್ದು, ಅದು ಈಗ ಮುಕ್ತಾಯಗೊಂಡಿದೆ ಎಂದು ತಿಳಿಸಿದ್ದಾರೆ. ಆದರೆ ಒಟ್ಟಾರೆ ಸಂಘರ್ಷ ಕೊನೆಗೊಂಡಿದೆ ಎಂದಾಗಲಿ ಅಥವಾ ಮುಂದೆ ದಾಳಿ ಮಾಡುವುದಿಲ್ಲ ಎಂದಾಗಲಿ ಅವರು ಸ್ಪಷ್ಟಪಡಿಸಿಲ್ಲ.

ರಕ್ಷಣಾತ್ಮಕ ನಿಲುವಿನ ಬಗ್ಗೆ ರೂಬಿಯೊ, “ನಮ್ಮ ಮೇಲೆ ದಾಳಿಯಾಗದ ಹೊರತು ನಾವು ಗುಂಡು ಹಾರಿಸುವುದಿಲ್ಲ. ನಾವು ಅವರ ಮೇಲೆ ದಾಳಿ ಮಾಡುತ್ತಿಲ್ಲ. ನಮ್ಮ ಪಡೆಗಳಿಗೆ ಬೆದರಿಕೆಯಿದ್ದರೆ ಮಾತ್ರ ನಾವು ಡ್ರೋನ್‌ಗಳನ್ನು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸುತ್ತೇವೆ. ಇದು ಕೇವಲ ರಕ್ಷಣಾತ್ಮಕವಾದುದು” ಎಂದು ನೇರವಾಗಿಯೇ ತಿಳಿಸಿದ್ದಾರೆ. ಹಾಗೆಯೇ ಇರಾನ್ ವಿಚಾರದಲ್ಲಿ, ‘ಅಣ್ವಸ್ತ್ರಗಳನ್ನು ತಯಾರಿಸುವ ಇಚ್ಛೆಯಿಲ್ಲ ಎಂಬ ಇರಾನ್‌ನ ಹೇಳಿಕೆಗಳು ಅವರ ನಡವಳಿಕೆಗೆ ವಿರುದ್ಧವಾಗಿವೆ’ ಎಂದು ಅವರು ಹೇಳಿದ್ದಾರೆ. ಅದಕ್ಕೆ ಪೂರಕವಾಗಿ, ಇರಾನ್‌ನ ಸೆಂಟ್ರಿಫ್ಯೂಜ್ ತಂತ್ರಜ್ಞಾನ ಮತ್ತು ಯುರೇನಿಯಂ ಪುಷ್ಟೀಕರಣದ ಕಡೆಗೆ ಅವರು ಬೆರಳು ಮಾಡಿ ತೋರಿದ್ದಾರೆ. ಅಷ್ಟೇ ಅಲ್ಲ, ಇರಾನ್ ಯುದ್ಧ ಮತ್ತು ಶಾಂತಿಯ ನಡುವೆ ಒಂದನ್ನು ಆರಿಸಿಕೊಳ್ಳಬೇಕು ಎಂದು ಕೂಡ ಎಚ್ಚರಿಸಿದ್ದಾರೆ.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರ ಚೀನಾ ಭೇಟಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೂಬಿಯೊ, ಜಲಸಂಧಿಯಲ್ಲಿ ನಿಮ್ಮ ನಡವಳಿಕೆಯಿಂದ ನೀವು ಜಾಗತಿಕವಾಗಿ ಒಂಟಿಯಾಗುತ್ತಿದ್ದೀರಿ ಎಂದು ಚೀನಾ ಅವರಿಗೆ ತಿಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಈ ವಿಚಾರದಲ್ಲಿ ಇರಾನ್ ತಪ್ಪು ಮಾಡುತ್ತಿದೆ ಎಂದರು. ಚೀನಾದ ರಫ್ತು ಆಧಾರಿತ ಆರ್ಥಿಕತೆಯು ಹಾರ್ಮುಜ್ ಜಲಸಂಧಿಯ ಮೇಲೆ ಅವಲಂಬಿತವಾಗಿರುವುದರಿಂದ, ಅಮೆರಿಕಕ್ಕಿಂತ ಹೆಚ್ಚಾಗಿ ಚೀನಾ ಈ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದೆ ಎಂದು ಅವರು ವಾದಿಸಿದರು.

Larry Johnson Donald Trump
ಲ್ಯಾರಿ ಜಾನ್ಸನ್ ಮತ್ತು ಡೊನಾಲ್ಡ್ ಟ್ರಂಪ್

ನನಗೆ ಅತ್ಯಂತ ಆತಂಕಕಾರಿ ವಿಷಯವೇನೆಂದರೆ, ಇರಾನ್‌ನ ಆರ್ಥಿಕತೆ ಕುಸಿಯುತ್ತಿದೆ ಮತ್ತು ಒಪ್ಪಂದಕ್ಕಾಗಿ ಇರಾನ್ ಸರ್ಕಾರ ಹಪಹಪಿಸುತ್ತಿದೆ ಎಂದು ಟ್ರಂಪ್ ಆಡಳಿತ ನಂಬಿದಂತಿದೆ. ಆದರೆ ಇದು ಸತ್ಯವಲ್ಲ. ಲೆಬನಾನ್, ಪಶ್ಚಿಮ ದಂಡೆ ಮತ್ತು ಗಾಜಾ ಮೇಲಿನ ಇಸ್ರೇಲ್ ದಾಳಿಯನ್ನು ಕೊನೆಗೊಳಿಸುವುದೂ ಸೇರಿದಂತೆ ತನ್ನ 14 ಅಂಶಗಳ ಶಾಂತಿ ಯೋಜನೆಯಿಂದ ಇರಾನ್ ಹಿಂದೆ ಸರಿಯುವ ಲಕ್ಷಣಗಳಿಲ್ಲ. ಅದೇ ರೀತಿ, ಟ್ರಂಪ್ ತಂಡವು ಈ ಬೇಡಿಕೆಗಳಿಗೆ ಒಪ್ಪಿಕೊಳ್ಳುತ್ತದೆ ಎಂದೂ ನನಗೆ ಅನಿಸುವುದಿಲ್ಲ. ಅಂದರೆ ಪರಿಸ್ಥಿತಿ ಈಗ ಸ್ಥಗಿತಗೊಂಡಿದೆ ಅಥವಾ ಇನ್ನಷ್ಟು ಜಟಿಲಗೊಂಡಿದೆ.

ಏತನ್ಮಧ್ಯೆ ಇರಾನ್‌ನ ‘ಫಾರ್ಸ್’ ಸುದ್ದಿ ಸಂಸ್ಥೆಯು ಟ್ರಂಪ್ ಅವರ ಪೋಸ್ಟ್‌ಗೆ ಈ ರೀತಿ ಪ್ರತಿಕ್ರಿಯಿಸಿದೆ: “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಕಠಿಣ ಎಚ್ಚರಿಕೆಯ ಹಿನ್ನೆಲೆಯಲ್ಲಿ, ಅಮೆರಿಕದ ಅಧ್ಯಕ್ಷರು ಹಾರ್ಮುಜ್ ಜಲಸಂಧಿಯಲ್ಲಿನ ಮಿಲಿಟರಿ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಬುಧವಾರ ಮುಂಜಾನೆ ಘೋಷಿಸಿದ್ದಾರೆ.”

ಇರಾನ್‌ನ ದೃಷ್ಟಿಕೋನದಲ್ಲಿ ಅವರ ಬಳಿ ಇನ್ನೂ ಪ್ರಬಲ ಅವಕಾಶಗಳಿವೆ. ಆದರೆ ಡೊನಾಲ್ಡ್ ಟ್ರಂಪ್ ಅವರ ಮೇಲೆ, ಇರಾನ್ ಅನ್ನು ಮಿಲಿಟರಿ ಮೂಲಕ ಸಂಪೂರ್ಣವಾಗಿ ಹತ್ತಿಕ್ಕುವಂತೆ ಕಟ್ಟಾ ಝಿಯಾನಿಸ್ಟ್‌ಗಳಿಂದ ಒತ್ತಡ ಹೆಚ್ಚುತ್ತಿದೆ. ಟ್ರಂಪ್ ಯಾವ ಹಾದಿಯನ್ನು ಆರಿಸಿಕೊಳ್ಳಲಿದ್ದಾರೆ ಎಂಬುದು ನಮಗೆ ಶುಕ್ರವಾರದ ವೇಳೆಗೆ ತಿಳಿಯಲಿದೆ.

d585912473e420d2221a382999b3d17151c9d34c1167873bf1c03b2068dd6f56?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...