ಇರಾನ್ ವಿರುದ್ಧ ಯುದ್ದ ಸಾರಿದ ಆರು ತಿಂಗಳಲ್ಲೇ ಭಾರಿ ಮುಖಭಂಗ ಎದುರಿಸುತ್ತಿರುವ ಅಮೆರಿಕ

Date:

ಆರು ತಿಂಗಳ ನಂತರ, ಅಮೆರಿಕವು ತನ್ನನ್ನು ತಾನು ಊಹಿಸಿಕ್ಕೊಳ್ಳದ ಪರಿಸ್ಥಿತಿಯಲ್ಲಿ ಸಿಲುಕಿದೆ. ರಾಜಕೀಯವಾಗಿ ಛಿದ್ರಗೊಂಡ, ಆರ್ಥಿಕವಾಗಿ ಬಳಲಿದ, ಮತ್ತು ಕಾರ್ಯತಂತ್ರಿಕವಾಗಿ ಸೋಲಿಸಲ್ಪಟ್ಟ “ಭಾರೀ ನೌಕಾಪಡೆ” ಹಿಂದೆ ಸರಿದಿದೆ, ಬೇಡಿಕೆಗಳು ಮರೆತುಹೋಗಿವೆ.

2026ರ ಜನವರಿ ಕೊನೆಯಲ್ಲಿ, ಅಮೆರಿಕವು ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಬಲವಾದ ನೌಕಾಪಡೆ, ಆರ್ಥಿಕ ಒತ್ತಡ ಮತ್ತು ಎಚ್ಚರಿಕೆಗಳನ್ನು ನೀಡುವ ಮೂಲಕ ಇರಾನ್‌ ಅನ್ನು ತನ್ನ ದಾರಿಗೆ ತರುವುದು ಅಮೆರಿಕದ ಉದ್ದೇಶವಾಗಿತ್ತು. ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಕು, ಇಲ್ಲವೇ ಪರಿಣಾಮ ಎದುರಿಸಬೇಕು ಎಂದು ಅಮೆರಿಕ ಇರಾನ್‌ಗೆ ಎಚ್ಚರಿಸಿತ್ತು.

- Advertisement -

2026ರ ಫೆಬ್ರವರಿ ಅಂತ್ಯದಲ್ಲಿ, ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್‌ನ ಮೇಲೆ ಬೃಹತ್ ವೈಮಾನಿಕ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದವು. ಈ ದಾಳಿಯನ್ನು ಇರಾನ್‌ ಯಾವುದೇ ನೇರ ಪ್ರಚೋದನೆ ನೀಡದಿದ್ದರೂ, ಅದರ ಪರಮಾಣು ಯೋಜನೆಯನ್ನು ತಡೆಯುವ ಮತ್ತು ಆಡಳಿತ ಬದಲಾವಣೆಯ ಉದ್ದೇಶದಿಂದ ನಡೆಸಲಾಯಿತು ಎಂಬ ಕಾರಣವನ್ನು ನೀಡಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್...

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಆದರೆ, ಇದಕ್ಕೆ ಸ್ಪಂದಿಸಬೇಕಾದ ಮೋದಿ ಸರ್ಕಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಜಾಗತಿಕ ವೇದಿಕೆಗಳಲ್ಲಿ ವಿದೇಶಿ ಯುದ್ಧಗಳತ್ತ...

ಇದನ್ನೂ ಓದಿ: ‘ಡ್ರೋನ್ ವ್ಯೂಹ’ಕ್ಕೆ ದೊಡ್ಡಣ್ಣನ ಪ್ರತಿಷ್ಠೆ ಧೂಳೀಪಟ: ಅಮೆರಿಕದ ಕೊಬ್ಬು ಇಳಿಸಿದ ಇರಾನ್

  • ಅಯತೊಲ್ಲಾ ಅಲಿ ಖಮೇನಿ ಹತ್ಯೆ: ಫೆಬ್ರವರಿ 26, 2026 ರಂದು ಟೆಹ್ರಾನ್‌ನಲ್ಲಿರುವ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ವಸತಿ ಸಂಕೀರ್ಣದ ಮೇಲೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಖಮೇನಿ ಕೊಲ್ಲಲ್ಪಟ್ಟರು. ಈ ದಾಳಿಯಲ್ಲಿ ಅವರ ಕುಟುಂಬದ ಕೆಲವು ಸದಸ್ಯರು ಹಾಗೂ ನಿಕಟವರ್ತಿಗಳು ಸಹ ಪ್ರಾಣ ಕಳೆದುಕೊಂಡರು.
  • ಸೈನಿಕ ಮತ್ತು ರಾಜಕೀಯ ನಾಯಕರ ಸಾವು: ಆರಂಭಿಕ ದಿನದ ದಾಳಿಯಲ್ಲಿ ಇರಾನ್‌ನ ರಕ್ಷಣಾ ಸಚಿವ ಅಜೀಜ್ ನಾಸಿರ್ಜಾದೆ, ಕ್ರಾಂತಿಕಾರಿ ಗಾರ್ಡ್ಸ್ (IRGC) ಕಮಾಂಡರ್ ಮೊಹಮ್ಮದ್ ಪಾಕ್ಪೂರ್ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಹಿರಿಯ ಮಿಲಿಟರಿ ಮತ್ತು ಭದ್ರತಾ ಅಧಿಕಾರಿಗಳು ಮೃತರಾದರು.
  • ಸಾಮಾನ್ಯ ನಾಗರಿಕರ ನಷ್ಟ: ಇರಾನ್‌ನ ಪ್ರಮುಖ ನಗರಗಳಾದ ತಹ್ರಾನ್, ಇಸ್ಫಹಾನ್ ಮತ್ತು ಪರಮಾಣು ಮೂಲಸೌಕರ್ಯಗಳ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಮಿಲಿಟರಿ ಸಿಬ್ಬಂದಿ ಮಾತ್ರವಲ್ಲದೆ, ನೂರಾರು ಸಾಮಾನ್ಯ ನಾಗರಿಕರು ಮತ್ತು ತಾಂತ್ರಿಕ ಸಿಬ್ಬಂದಿ ಪ್ರಾಣ ಕಳೆದುಕೊಂಡರು.
  • ದಿಢೀರ್ ದಾಳಿಗಳು: ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿರುವಾಗಲೇ ಅಮೆರಿಕ ಹಲವಾರು ಭಾರಿ ದಿಢೀರನೇ ದಾಳಿ ನಡೆಸಲಾಯಿತು.

ಆದರೆ, ಆರು ತಿಂಗಳ ನಂತರ ಪರಿಸ್ಥಿತಿ ಬದಲಾಗಿದೆ. ಅಮೆರಿಕ ತನ್ನ ಸೇನೆಯನ್ನು ಹಿಂಪಡೆಯುತ್ತಿದೆ, ತನ್ನ ಕಠಿಣ ಬೇಡಿಕೆಗಳನ್ನು ಕೈಬಿಟ್ಟಿದೆ. ರಾಜಕೀಯ ಮತ್ತು ಆರ್ಥಿಕವಾಗಿ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ಅಮೆರಿಕ ಈಗ ಹೆಣಗಾಡುತ್ತಿದೆ. ದೊಡ್ಡ ಮಟ್ಟದ ಶಕ್ತಿ ಪ್ರದರ್ಶನವಾಗಿ ಆರಂಭವಾದದ್ದು, ಈಗ ಅಮೆರಿಕದ ತಪ್ಪಾದ ಅಂದಾಜು ಮತ್ತು ಅತಿಯಾದ ಆತ್ಮವಿಶ್ವಾಸಕ್ಕೆ “ಜಟ್ಟಿ ನೆಲಕ್ಕೆ ಬಿದ್ದರೋ ಮಿಸೆ ಮಣ್ಣಾಗಲಿಲ್ಲ” ಎಂಬ ತೋರಿಕೆಯ ಶಕ್ತಿ ಪ್ರದರ್ಶನದ ಮಾತುಗಳನ್ನು ಆಡುತ್ತಿದೆ.

ಆರಂಭಿಕ ಬೇಡಿಕೆಗಳು

ಜನವರಿ 26, 2026 ರಂದು ಅಮೆರಿಕವು ತನ್ನ ಪ್ರಮುಖ ವಿಮಾನ ವಾಹಕ ನೌಕೆ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಸೇರಿದಂತೆ ಹಲವು ಯುದ್ಧನೌಕೆಗಳು ಮತ್ತು ಯುದ್ಧ ವಿಮಾನಗಳನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಿಕೊಟ್ಟಿತು. ಅಮೆರಿಕದ ಪ್ರಮುಖ ಬೇಡಿಕೆಗಳು ಹೀಗಿದ್ದವು:

  • ಯುರೇನಿಯಂ ಸಮೃದ್ಧೀಕರಣವನ್ನು ಸಂಪೂರ್ಣವಾಗಿ ನಿಲ್ಲಿಸುವುದು.
  • ಕ್ಷಿಪಣಿಗಳ ವ್ಯಾಪ್ತಿ ಮತ್ತು ಸಂಖ್ಯೆಯ ಮೇಲೆ ಕಠಿಣ ಮಿತಿಗಳನ್ನು ಹೇರುವುದು.
  • ಹಮಾಸ್, ಹೆಜ್ಬೊಲ್ಲಾ ಮತ್ತು ಹೂತಿಗಳಂತಹ ಸಂಘಟನೆಗಳಿಗೆ ನೀಡುತ್ತಿರುವ ಬೆಂಬಲವನ್ನು ತಕ್ಷಣವೇ ಕೊನೆಗೊಳಿಸುವುದು.

ಅಮೆರಿಕ ಅಧ್ಯಕ್ಷ ಟ್ರಂಪ್ ಅವರು “ಬೃಹತ್ ನೌಕಾಪಡೆ”ಯ ಬೆದರಿಕೆ ಹಾಕಿ, ಇರಾನ್‌ಗೆ ಮಾತುಕತೆಗೆ ಯಾವುದೇ ಅವಕಾಶ ನೀಡಲಿಲ್ಲ. ಆದರೆ ಇರಾನ್ ಈ ಬೇಡಿಕೆಗಳಿಗೆ ಬಗ್ಗಲಿಲ್ಲ.

ಇರಾನ್ ನೀಡಿದ ತಿರುಗೇಟು

ಶರಣಾಗುವ ಬದಲು, ಇರಾನ್ ತೀವ್ರವಾಗಿ ತಿರುಗೇಟು ನೀಡಿತು.

ಬೃಹತ್ ಕ್ಷಿಪಣಿ ಮತ್ತು ಡ್ರೋನ್ ದಾಳಿ: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಆರಂಭಿಕ ದಾಳಿಗಳಿಗೆ ಪ್ರತಿಯಾಗಿ, ಇರಾನ್ ನೂರಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಆತ್ಮಘಾತುಕ ಲೆಥಲ್ ಡ್ರೋನ್‌ಗಳನ್ನು ಬಳಸಿ ಪ್ರತಿಪ್ರಹಾರ ನಡೆಸಿತು.

ಅಮೆರಿಕದ ಮಿಲಿಟರಿ ನೆಲೆಗಳೇ ಮುಖ್ಯ ಗುರಿ: ಬಹ್ರೇನ್‌ನಲ್ಲಿರುವ ಅಮೆರಿಕದ ೫ನೇ ನೌಕಾಪಡೆ ನೆಲೆ, ಕತಾರ್‌ನ ಅಲ್ ಉದೈದ್ ವಾಯು ನೆಲೆ, ಕುವೈತ್‌ನ ಅಲಿ ಅಲ್ ಸಾಲೇಮ್ ನೆಲೆ ಹಾಗೂ ಜೋರ್ಡಾನ್ ಮತ್ತು ಇರಾಕ್‌ನಲ್ಲಿರುವ ಅಮೆರಿಕನ್ ಸೈನಿಕ ನೆಲೆಗಳನ್ನು ಇರಾನ್ ಗುರಿಯಾಗಿಸಿತು.

ಗಲ್ಫ್ ರಾಷ್ಟ್ರಗಳಿಗೆ ಎಚ್ಚರಿಕೆ ಹಾಗೂ ಹಾನಿ: ಅಮೆರಿಕದ ಪಡೆಗಳಿಗೆ ಆಶ್ರಯ ಅಥವಾ ನೆರವು ನೀಡುವ ಗಲ್ಫ್ ದೇಶಗಳನ್ನೂ ಶತ್ರುಗಳೆಂದೇ ಪರಿಗಣಿಸುವುದಾಗಿ ಇರಾನ್ ಎಚ್ಚರಿಸಿತು. ಇದರ ಪರಿಣಾಮವಾಗಿ ಕತಾರ್, ಕುವೈತ್, ಯುಎಇ, ಸೌದಿ ಅರೇಬಿಯಾ ಮತ್ತು ಓಮನ್‌ನಲ್ಲಿರುವ ಮಿಲಿಟರಿ ಮೂಲಸೌಕರ್ಯಗಳ ಮೇಲೆ ದಾಳಿಗಳು ನಡೆದವು.

ರಕ್ಷಣಾ ವ್ಯವಸ್ಥೆಗೆ ಧಕ್ಕೆ: ಈ ತೀವ್ರತರದ ದಾಳಿಗಳಿಂದಾಗಿ ಅಮೆರಿಕದ ರೇಡಾರ್ ವ್ಯವಸ್ಥೆಗಳು, ಡ್ರೋನ್ ಕಾರ್ಯಾಚರಣೆ ಕೇಂದ್ರಗಳು ಮತ್ತು ಪೇಟ್ರಿಯಾಟ್ (Patriot) ವೈಮಾನಿಕ ರಕ್ಷಣಾ ಕ್ಷಿಪಣಿ ಬ್ಯಾಟರಿಗಳಿಗೆ ತೀವ್ರ ಹಾನಿಯುಂಟಾಯಿತು.

ಹೊರ್ಮುಜ್ ಜಲಸಂಧಿ ಬಂದ್: ಕ್ಷಿಪಣಿ ದಾಳಿಗಳ ಜೊತೆಗೆ ಜಾಗತಿಕ ತೈಲ ಸಾರಿಗೆಗೆ ಅತ್ಯಂತ ಪ್ರಮುಖವಾದ ‘ಹೊರ್ಮುಜ್ ಜಲಸಂಧಿ’ (Strait of Hormuz) ಯನ್ನು ಇರಾನ್ ತಡೆದು, ವಾಣಿಜ್ಯ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸಿತು. ಇದು ಜಾಗತಿಕ ಮಟ್ಟದಲ್ಲಿ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿತು.

ಯುದ್ಧ ಆರಂಭವಾದ ಮೊದಲ ದಿನವೇ ಇರಾನ್, ಬಹ್ರೇನ್‌ನಲ್ಲಿರುವ ಅಮೆರಿಕದ ನೌಕಾಪಡೆಯ ಪ್ರಮುಖ ನೆಲೆಯ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿತು. ಈ ದಾಳಿಗಳು ಅಮೆರಿಕದ ಪೂರೈಕೆ ಜಾಲವನ್ನು ತೀವ್ರವಾಗಿ ಹಾನಿಗೊಳಿಸಿತು. ಅಬ್ರಹಾಂ ಲಿಂಕನ್ ನೌಕೆಯಲ್ಲಿದ್ದ ಸುಮಾರು 5,000 ಸೈನಿಕರಿಗೆ ಅಗತ್ಯ ವಸ್ತುಗಳ ಕೊರತೆ ಉಂಟಾಯಿತು. ಆಗಸ್ಟ್ 2026ರ ವೇಳೆಗೆ, ಅಮೆರಿಕವು ಈ ನೌಕೆಯನ್ನು ಆ ಪ್ರದೇಶದಿಂದ ಹಿಂಪಡೆಯಬೇಕಾಯಿತು.

ಇದನ್ನೂ ಓದಿ: US-Israel war on Iran | ಇರಾನ್-ರಷ್ಯಾ ಸಂಬಂಧವೇನು; ಪರಸ್ಪರ ಬೆಂಬಲ ಯಾಕೆ ಮುಖ್ಯ?

ಬದಲಾದ ಗುರಿ ಮತ್ತು ಆರ್ಥಿಕ ಸವಾಲು

ಮಿಲಿಟರಿ ಹಿನ್ನಡೆಯಷ್ಟೇ ಅಲ್ಲದೆ, ಅಮೆರಿಕಕ್ಕೆ ಆರ್ಥಿಕವಾಗಿಯೂ ದೊಡ್ಡ ಹೊಡೆತ ಬಿದ್ದಿದೆ. ಆರಂಭದಲ್ಲಿದ್ದ ಕಠಿಣ ಬೇಡಿಕೆಗಳ ಬಗ್ಗೆ ಅಮೆರಿಕ ಈಗ ಮಾತನಾಡುತ್ತಿಲ್ಲ. ಬದಲಿಗೆ, ದೇಶದಲ್ಲಿ ಗ್ಯಾಸೋಲಿನ್ ಮತ್ತು ಪೆಟ್ರೋಲ್ ಬೆಲೆಗಳನ್ನು ನಿಯಂತ್ರಿಸುವುದೇ ಅಮೆರಿಕದ ಪ್ರಮುಖ ಆದ್ಯತೆಯಾಗಿದೆ.

ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರು, “ತೈಲ ಬೆಲೆಗಳನ್ನು ಕಡಿಮೆಯಿಡುವುದೇ ಈಗ ನಮ್ಮ ಮೊದಲ ಗುರಿ” ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಆರ್ಥಿಕ ಸೂಚ್ಯಂಕಜನವರಿ 2026ಆಗಸ್ಟ್ 2026ವ್ಯತ್ಯಾಸ
ಬ್ರೆಂಟ್ ಕಚ್ಚಾ ತೈಲ (ಬ್ಯಾರೆಲ್‌ಗೆ)$60$87 ಗಿಂತ ಹೆಚ್ಚು45% ಹೆಚ್ಚಳ
ಅಮೆರಿಕದಲ್ಲಿ ಗ್ಯಾಸೋಲಿನ್ (ಗ್ಯಾಲನ್‌ಗೆ)$3 ಗಿಂತ ಕಡಿಮೆ$4 ಗಿಂತ ಹೆಚ್ಚು33% ಗಿಂತ ಹೆಚ್ಚು

ಇರಾನ್ ಅನ್ನು ಮಣಿಸಲು ಹೋದ ಅಮೆರಿಕ, ಈಗ ತನ್ನ ದೇಶದ ಜನರಿಗೆ ಉಂಟಾಗಿರುವ ಬೆಲೆ ಏರಿಕೆಯ ಬಿಸಿಯನ್ನು ಎದುರಿಸುತ್ತಿದೆ.

ಮುಂದಿನ ಪರಿಣಾಮಗಳು

ಈ ಅಭಿಯಾನ ಆರಂಭವಾದ ಆರು ತಿಂಗಳ ನಂತರ, ಅಮೆರಿಕವು ತನ್ನನ್ನು ತಾನು ಊಹಿಸಿಕ್ಕೊಳ್ಳದ ಪರಿಸ್ಥಿತಿಯಲ್ಲಿ ಸಿಲುಕಿದೆ. ರಾಜಕೀಯವಾಗಿ ಛಿದ್ರಗೊಂಡ, ಆರ್ಥಿಕವಾಗಿ ಬಳಲಿದ, ಮತ್ತು ಕಾರ್ಯತಂತ್ರಿಕವಾಗಿ ಸೋಲಿಸಲ್ಪಟ್ಟ “ಭಾರೀ ನೌಕಾಪಡೆ” ಹಿಂದೆ ಸರಿದಿದೆ, ಬೇಡಿಕೆಗಳು ಮರೆತುಹೋಗಿವೆ, ಮತ್ತು ಏಕೈಕ ಸ್ಥಿರವಾದ ವಿಷಯವೆಂದರೆ ವಿಫಲತೆಯ ಏರುತ್ತಿರುವ ಬೆಲೆ.

ಟೆಹ್ರಾನ್, ಬೀಜಿಂಗ್, ಮಾಸ್ಕೋ ಮತ್ತು ಜಾಗತಿಕ ದಕ್ಷಿಣದ ರಾಜಧಾನಿಗಳಲ್ಲಿ, ಈ ಸಂದೇಶವನ್ನು ಆಸಕ್ತಿಯಿಂದ ಗಮನಿಸಲಾಗುತ್ತಿದೆ. ಈ ಯುದ್ಧವು ಕೇವಲ ಮಧ್ಯಪ್ರಾಚ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ದೊಡ್ಡ ಮಿಲಿಟರಿ ಶಕ್ತಿಯನ್ನು ಹೊಂದಿರುವ ದೇಶವನ್ನು ಸಹ ಹೇಗೆ ಎದುರಿಸಬಹುದು ಎಂಬುದನ್ನು ಇರಾನ್ ತೋರಿಸಿಕೊಟ್ಟಿದೆ. ಅಮೆರಿಕದ ಸೈನ್ಯವನ್ನು ತಡೆಯಲು ಮತ್ತು ಅದರ ಯೋಜನೆಗಳನ್ನು ವಿಫಲಗೊಳಿಸಲು ಇರಾನ್ ಕೈಗೊಂಡ ತಂತ್ರಗಳು ಜಗತ್ತಿನ ಗಮನ ಸೆಳೆದಿವೆ.

ಇರಾನ್ ವಿರುದ್ಧದ ಯುದ್ಧವು ಮುಗಿದಿಲ್ಲದಿರಬಹುದು, ಆದರೆ ಮೊದಲ ಅಧ್ಯಾಯವು ಈಗಾಗಲೇ ಬರೆಯಲ್ಪಟ್ಟಿದೆ—ಮತ್ತು ಅದು ಅಚ್ಚರಿಯ ಅಮೆರಿಕದ ಸೋಲು.

d585912473e420d2221a382999b3d17151c9d34c1167873bf1c03b2068dd6f56?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

KPSC ನೇಮಕಾತಿ ಹಗರಣ: SIT ರಚನೆಗೆ ಸುಪ್ರೀಂ ತಡೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಗೆ...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರು, ಗೋವಾ, ಕೋಲ್ಕತ್ತದಲ್ಲಿ ಸಿಜೆಪಿ ‘ಮೋರ್ಚಾ’

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌: ಯಾಕೀ ವಿವಾದ?

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ....

ನಾಳೆ ‘ಕೊಂದವರು ಯಾರು?’ ರಾಷ್ಟ್ರೀಯ ವಿಚಾರ ಸಂಕಿರಣ: ಪಿತೃಪ್ರಧಾನತೆ, ಹೊಣೆಗಾರಿಕೆ ಕುರಿತು ಚರ್ಚೆಗೆ ವೇದಿಕೆ

ಕರ್ನಾಟಕದ ‘ನಾವೆದ್ದು ನಿಲ್ಲದಿದ್ದರೆ' ಸಂಘಟನೆಯು ಆರಂಭಿಸಿರುವ 'ಕೊಂದವರು ಯಾರು? Who Killed...